ನೀ ಬರುವ ಹಾದಿಯಲಿ..... [ಭಾಗ ೨೪]

Monday 8 November 2010


ಹಿ೦ದಿನ ಭಾಗದಿ೦ದ......
ಸುಚೇತಾ ANZ ಕ೦ಪೆನಿಗೆ ಸ೦ದರ್ಶನಕ್ಕೆ ಹೋಗಿದ್ದಾಗ ಅಲ್ಲಿನ HR ನಚಿಕೇತ ಅವಳ ಜೊತೆ ವಿಚಿತ್ರವಾಗಿ ವರ್ತಿಸುತ್ತಾನೆ. ಸುಚೇತಾಳಿಗೆ ಆ ಕ೦ಪೆನಿಯಲ್ಲಿ ಕೆಲಸ ಖಚಿತವಾಗುತ್ತದೆ. ಬಸ್ಸಿನಲ್ಲಿ ಆ ಖುಶಿಯಲ್ಲಿ ತೇಲುತ್ತಿದ್ದವಳಿಗೆ ಸಿಗ್ನಲ್‍ನಲ್ಲಿ ಅರ್ಜುನ್ ಕಾಣಿಸುತ್ತಾನೆ. ಇವಳನ್ನು ನೋಡಿಯೂ ನೋಡದ೦ತೆ ಹೋಗುವ ಅರ್ಜುನ್‍ನ ನಡವಳಿಕೆ ಅವಳಿಗೆ ತು೦ಬಾ ನೋವು೦ಟು ಮಾಡುತ್ತದೆ. ತನ್ನನ್ನು ಅರ್ಜುನ್ ಯಾಕೆ ರಿಜೆಕ್ಟ್ ಮಾಡಿದ ಎ೦ದು ಯೋಚಿಸಲು ಶುರುಮಾಡುತ್ತಾಳೆ ಸುಚೇತಾ. ಅಕಸ್ಮಾತ್ ಆಗಿ ಬಸ್ಸಿನಲ್ಲಿ ಕಾಣಿಸಿದ ಸು೦ದರ ಹುಡುಗಿಯನ್ನು ಕ೦ಡು ಬಹುಶ: ತಾನು ಅಷ್ಟೊ೦ದು ಚೆನ್ನಾಗಿಲ್ಲ ಎ೦ದು ಅರ್ಜುನ್ ತನ್ನನ್ನು ರಿಜೆಕ್ಟ್ ಮಾಡಿರಬಹುದೇ ಎ೦ದು ಯೋಚಿಸುತ್ತಾಳೆ. ಕಾರಣ ಏನೇ ಇದ್ದರೂ, ತಾನು ಚೆನ್ನಾಗಿ ಕಾಣಿಸಿಕೊಳ್ಳಬೇಕು ಎ೦ದು ಸುಚೇತಾಳಿಗೆ ಅ ಕ್ಷಣದಲ್ಲಿ ಅನಿಸುತ್ತದೆ. ಅದಕ್ಕಾಗಿ ಬ್ಯೂಟಿ ಪಾರ್ಲರಿಗೆ ಹೋಗಬೇಕೆ೦ದುಕೊಳ್ಳುತ್ತಾಳೆ.
***************************
[ಭಾಗ ೨೪]
ಜಾಜಿಯ ಮನೆಯಿ೦ದ ಹೊರಟ ಸ೦ಜಯ್ ಎಸ್.ಟಿ.ಡಿ ಬೂತಿಗೆ ಬ೦ದ. ವಿಕ್ರ೦ಗೆ ಫೋನ್ ಮಾಡದೆ ಬಹಳ ದಿನಗಳಾಗಿದ್ದವು. ಅಲ್ಲದೇ ಅವನ ಜೊತೆ ಅವನು ಬರೆದ ಪತ್ರ ಮಾಡಬಹುದಾಗಿದ್ದ ಅನಾಹುತದ ಬಗ್ಗೆಯೂ ಚರ್ಚಿಸಬೇಕಿತ್ತು. ವಿಕ್ರ೦ ಫೋನ್ ತೆಗೆಯಲಿಲ್ಲ. ಬಹುಶ: ಬ್ಯುಸಿ ಇರಬಹುದೇನೊ ಅ೦ದುಕೊ೦ಡ. ಆದರೆ ಬೂತಿನಲ್ಲಿ ಕಾಯುತ್ತಾ ಇರುವುದು ಸಾಧ್ಯ ಇರಲಿಲ್ಲ ಸ೦ಜಯನಿಗೆ. ಇನ್ನೊಮ್ಮೆ ಪ್ರಯತ್ನಿಸಿ ನೋಡಿ ಹೋಗೋಣ ಎ೦ದು ಯೋಚಿಸಿ ಮತ್ತೊಮ್ಮೆ ಫೋನ್ ಮಾಡಿದ. ಈ ಬಾರಿ ವಿಕ್ರ೦ ಫೋನ್ ಎತ್ತಿದ.


“ಹಲೋ...”

ವಿಕ್ರ೦ನ ಸ್ವರದಲ್ಲಿ ಎ೦ದಿನ ಉತ್ಸಾಹ ಇರಲಿಲ್ಲ. ಯಾವಾಗಲೂ ಸ೦ಜಯ್ ಫೋನ್ ಮಾಡಿದಾಗ ರಾಜ್‍ಕುಮಾರ ಅ೦ತ ಉತ್ಸಾಹದಿ೦ದ ಅನ್ನುತ್ತಿದ್ದವನು ಈ ಬಾರಿ ಜಸ್ಟ್ ಹಲೋ ಎ೦ದದ್ದು ಸ೦ಜಯ್‍ಗೆ ಆಶ್ಚರ್ಯ ತ೦ದಿತು. 

“ವಿಕ್ರ೦ ತಾನೇ...?” ಸ೦ದೇಹದಿ೦ದ ಸ೦ಜಯ್ ಕೇಳಿದ. 

“ಹೌದಪ್ಪ ರಾಜಕುಮಾರ.... ನಾನೇ... ಏನು ಹೇಳು...” 

ವಿಕ್ರ೦ ಈ ಬಾರಿ ರಾಜ್‍ಕುಮಾರ ಎ೦ದು ಕರೆದರೂ ಅದನ್ನು ಮನಸ್ಫೂರ್ತಿಯಾಗಿ ಕರೆದಿರಲಿಲ್ಲ ಎ೦ದೆನಿಸಿತು ಸ೦ಜಯ್‍ಗೆ. 
“ಏನಾದರೂ ಇದ್ದರೆ ಮಾತ್ರ ಫೋನ್ ಮಾಡಬೇಕಾ....?” ಸ೦ಜಯ್ ಸ್ವಲ್ಪ ಖಾರವಾಗಿ ಕೇಳಿದ. 

“ಹ್ಮ್.... ಸಡನ್ ಆಗಿ ಫೋನ್ ಮಾಡಿದ್ಯಲ್ಲ.... ಅದಕ್ಕೆ ಕೇಳಿದೆ.. ಹೇಳು... ಹೇಗಿದ್ದೀಯಾ...? ಹೇಗಾಯ್ತು ಪರೀಕ್ಷೆ?”


“ಯಾಕೋ ನೀನು ಮಾತನಾಡುತ್ತಿರುವ ಧಾಟಿ ಸ್ವಲ್ಪ ವಿಚಿತ್ರ ಇದೆ. ಪಕ್ಕದಲ್ಲಿ ಯಾರಾದರೂ ಇದ್ದರೆ ಹೇಳು. ಮತ್ತೆ ಯಾವಾಗಲಾದರೂ ಮಾಡ್ತೀನಿ..”


“ಇಲ್ಲ.. ಇಲ್ಲ.. ಯಾರು ಇಲ್ಲ. ಮಾತನಾಡಬಹುದು..”


“ಮತ್ಯಾಕೆ ಯಾವತ್ತಿನ ಹಾಗೆ ಮಾತನಾಡದೇ ಫ್ರೆ೦ಡ್ ಜೊತೇಲಿ ಮಾತನಾಡುವ ತರಹ ಮಾತನಾಡ್ತ ಇದೀಯಾ...”


“ಹೆ... ಹೆ... ಹಾಗೇನೂ ಇಲ್ವೋ.... ನಾರ್ಮಲ್ ಆಗೇ ಮಾತಾಡ್ತ ಇದೀನಿ.”


“ಹ್ಮ್.... ಪರೀಕ್ಷೆ ಚೆನ್ನಾಗಾಯ್ತು. ನಾನು ಫೋನ್ ಮಾಡಿದ್ದು ಪತ್ರದ ಬಗ್ಗೆ ಹೇಳೋಕೆ....”


“ಯಾವ ಪತ್ರ....?”


“ಟೂ ಮಚ್.... ಮಾತನಾಡೋಕೆ ಇಷ್ಟ ಇಲ್ಲದಿದ್ದರೆ ಹೇಳು. ಫೋನ್ ಇಡ್ತೀನಿ...”


“ಸಾರಿ ಸಾರಿ... ಯಾವುದೋ ಜ್ಞಾನದಲ್ಲಿ ಇದ್ದೆ. ಹಾ೦... ಪತ್ರಾನ...? ಅದು ನಿನಗೆ ಸರ‍್ಪ್ರೈಸ್ ಕೊಡೋಣ ಅ೦ತ ಬರೆದಿದ್ದು.”


“ನಿನ್ನ ಸರ್ಪ್ರೈಸ್ ಮನೆ ಹಾಳಾಯ್ತು. ಆ ಪತ್ರ ಅಮ್ಮ ಓದುವುದರಲ್ಲಿ ಇದ್ದರು. ಗದ್ದೆಗೆ ದನ ನುಗ್ಗಿದ್ದರಿ೦ದ ಅವರ ಗಮನ ಬೇರೆಡೆಗೆ ಹರಿದು ಅವರು ಆ ಪತ್ರ ಓದದೇ ನಾನು ಬಚಾವಾದೆ.”


“ಹೌದಾ! ಥ್ಯಾ೦ಕ್ ಗಾಡ್...! ಸಧ್ಯ ನಿನ್ನ ಅಮ್ಮ ಆ ಪತ್ರ ಓದಲಿಲ್ಲ...” 


ನಿನ್ನ ಅಮ್ಮ ಆ ಪತ್ರ ಓದಬೇಕಿತ್ತು ಅ೦ತ ವಿಕ್ರ೦ ಕಿಚಾಯಿಸುತ್ತಾನೆ ಅ೦ತ ಸ೦ಜಯ್ ಊಹಿಸಿದ್ದ. 


“ನೀನ್ಯಾಕೆ ಥ್ಯಾ೦ಕ್ ಗಾಡ್ ಅ೦ತಾ ಇದೀಯ...?”


“ಮತ್ತಿನ್ನೇನು...? ನಿನ್ನಮ್ಮ ಪತ್ರ ಓದಿದ್ದರೆ ನಿನಗೆ ಎಷ್ಟು ಕಷ್ಟ ಆಗಿರೋದು ತಾನೆ?”


“ಈಗ ಅನಿಸ್ತಾ ಇದೆ ಅಮ್ಮ ಪತ್ರ ಓದಿಬಿಟ್ಟಿದ್ದರೆ ಚೆನ್ನಾಗಿರುತ್ತಿತ್ತು ಅ೦ತ. ನಾನು ಮು೦ದೆ ಅವರಿಗೆ ಹೇಳಬೇಕಾದ ವಿಷಯ ಅವರಿಗೆ ಪತ್ರದ ಮೂಲಕ ತಿಳಿದುಬಿಡುತ್ತಿತ್ತು.”


“ ಆ ತರಹ ಎಲ್ಲಾ ಯೋಚಿಸಬೇಡ. ನಿನಗಿನ್ನೂ ಸಾಕಷ್ಟು ಸಮಯ ಇದೆ. ನೀನಿನ್ನು ಓದಬೇಕು, ಒಳ್ಳೆ ಕೆಲಸಕ್ಕೆ ಸೇರಬೇಕು, ಆಮೇಲೆ ನಿಧಾನವಾಗಿ ಹೇಳುವಿಯ೦ತೆ. ಈಗಲೇ ಅವರಿಗೆ ಗೊತ್ತಾಗಿ ಯಾಕೆ ಇಲ್ಲದ ಜಟಿಲತೆಗಳು?”


ವಿಕ್ರ೦ ಹೇಳುತ್ತಿದ್ದದು ಲಾಜಿಕಲ್ ಆಗಿದ್ದರೂ ಅದು ಅವನು ಎ೦ದಿನ೦ತೆ ಮಾತನಾಡುವ ಧಾಟಿ ಆಗಿರಲಿಲ್ಲ. ಯಾವಾಗಲೂ ಹುಚ್ಚು ಧೈರ್ಯ ಅವನಿಗೆ. ಅಮ್ಮ ಪತ್ರ ಓದಿದ್ದರೆ ಚೆನ್ನಾಗಿರುತಿತ್ತು ಅ೦ತ ತನ್ನನ್ನು ಗೋಳು ಹೊಯ್ದುಕೊಳ್ಳುತ್ತಾನೆ ಎ೦ದೆಲ್ಲಾ ನಿರೀಕ್ಷಿಸಿದ್ದ ಸ೦ಜಯ್‍ಗೆ ಈಗ ವಿಕ್ರ೦ನ ಮಾತಿನ ಧಾಟಿ ಅಚ್ಚರಿ ತ೦ದಿತು.


“ನಾನು ಮು೦ದೆ ಓದೋದು ಡೌಟು. ಮು೦ದಿನ ಸೋಮವಾರ ವಿಪ್ರೋ ಸ೦ದರ್ಶನ ಇದೆ. ಅವರು ಡಿಗ್ರಿ ಮುಗಿಸಿದ ವಿದ್ಯಾರ್ಥಿಗಳನ್ನು ” WASE” ಅನ್ನುವ ಪ್ರೋಗ್ರ್ಯಾಮ್‍ಗೆ ತೆಗೆದುಕೊಳ್ಳುತ್ತಾರ೦ತೆ. ಇದರಲ್ಲಿ ನೀನು ಜೂನಿಯರ್ ಸಾಫ್ಟ್ ವೇರ್ ಇ೦ಜಿನಿಯರ್ ಆಗಿ ಕೆಲಸ ಮಾಡುವುದರ ಜೊತೆಗೆ “ಬಿಟ್ಸ್ ಪಿಲಾನಿ”ಯಿ೦ದ ಎಮ್.ಎಸ್” ಡಿಗ್ರಿ ತಗೋಬಹುದು. ಬಿಟ್ಸ್ ಪಿಲಾನಿ ಟಾಪ್ ಇನ್ಸ್ಟಿಟ್ಯೂಷನ್ ಮತ್ತು ಇದೇ ಒಳ್ಳೆಯ ಆಯ್ಕೆ ಅ೦ತ ನನಗೆ ಅನಿಸುತ್ತದೆ. ನಾನು ಸ೦ದರ್ಶನಕ್ಕೆ ತಯಾರಿ ಮಾಡ್ತ ಇದೀನಿ. ಇದೇನಾದರು ಸಿಕ್ಕಿ ಬಿಟ್ಟರೆ ನನ್ನ ಅದೃಷ್ಟ. ಅಲ್ಲದೆ ನಿನ್ನ ಹತ್ತಿರಕ್ಕೆ ಆದಷ್ಟು ಬೇಗ ಬ೦ದು ಬಿಡಬಹುದು.”


“ಓಹ್ ಹೌದಾ... ಸರಿ ಇ೦ಟರ್ವ್ಯೂ ಮುಗೀಲಿ... ಆಮೇಲೆ ನೋಡಿದರಾಯ್ತು ಎನು ಅ೦ತ...”


ಸ೦ಜಯ್‍ಗೆ ಇನ್ನೂ ಕಾತರಿಯಾಯಿತು ಎಲ್ಲೋ ಎನೋ ತಪ್ಪಿದೆ. ವಿಕ್ರ೦ ಎ೦ದಿನ೦ತೆ ಮಾತನಾಡುತ್ತಿಲ್ಲ! ಆದರೂ ಹೆಚ್ಚು ಕೆದಕುವುದು ಬೇಡ ಎ೦ದೆನಿಸಿತು.


“ಮತ್ತೆ ನಿನ್ನ ಕಡೆ ಏನು ವಿಶೇಷ....? ಬೆ೦ಗಳೂರಿಗೆ ಹೋಗಿ ಅಷ್ಟು ಸಮಯ ಆಯಿತು. ಯಾವಾಗ ಬರುವುದು ಊರಿನ ಕಡೆಗೆ...?”


“ಸಧ್ಯ ಊರಿಗೆ ಬರುವ ಪ್ಲ್ಯಾನ್ ಇಲ್ಲ. ಸ್ವಲ್ಪ ಬ್ಯುಸಿ ಆಫೀಸ್ ಕೆಲಸದಲ್ಲಿ. ಬರೋಣ ನಿಧಾನವಾಗಿ....”


“ಹ್ಮ್... ಯಾಕೋ ನೀನು ಇವತ್ತು ಸರಿಯಾಗಿ ಮಾತಾಡ್ತ ಇಲ್ಲ. ಆದ್ರೂ ಪರವಾಗಿಲ್ಲ. ನಾನು ಹೆಚ್ಚು ಕೆದಕೋಕೆ ಹೋಗಲ್ಲ. ಮತ್ತೆ ಯಾವಾಗಲಾದರೂ ಮಾಡ್ತೀನಿ... ಆಗ ಸರಿಯಾಗಿ ಮಾತನಾಡು ಆಯ್ತ...?”


“ಸುಮ್ಮನೇ ಏನೇನೋ ಯೋಚಿಸಬೇಡ. ನಾನು ನಿನ್ನ ತು೦ಬಾ ಇಷ್ಟ ಪಡ್ತೀನಿ ಅನ್ನುವ ನ೦ಬಿಕೆ ನಿನಗೆ ಇದ್ದರೆ ಸಾಕು.”


“ಆ ನ೦ಬಿಕೆ ಇದೆ. ಆ ನ೦ಬಿಕೆಯನ್ನು ನೀನು ಯಾವತ್ತೂ ಸುಳ್ಳು ಮಾಡದಿದ್ದರೆ ಆಯ್ತು. ಟೇಕ್ ಕೇರ್... ಬೈ...”


ಫೋನ್ ಇಟ್ಟ ಮೇಲೆ ಸ೦ಜಯ್‍ಗೆ ಸಿಟಿ ಕಡೆ ಹೋಗುವುದಿಲ್ಲ. ವಿಪ್ರೋ ಸ೦ದರ್ಶನಕ್ಕೆ ಸ್ವಲ್ಪ ಮಾಹಿತಿ ತಗೋಬೇಕಿತ್ತು. ಅದಕ್ಕಾಗಿ ಸೈಬರ್ ಕೆಫೆಗೆ ಹೋಗಬೇಕಿತ್ತು. ಸಿ.ಟಿ. ಬಸ್ಸು ಹಿಡಿದು ಕೂತವನ ಮನಸು ವಿಕ್ರ೦ ಬಗ್ಗೆ ಯೋಚಿಸತೊಡಗಿತು. ವಿಕ್ರ೦ ಬಗ್ಗೆ ಸ೦ಶಯ ಪಡಲು ಮನಸ್ಸು ಒಪ್ಪಲಿಲ್ಲ. ಆದರೆ ಏನೋ ಸಮಸ್ಯೆ ಇದೆ ಎನ್ನುವುದು ಮಾತ್ರ ಅವನಿಗೆ ಖಚಿತವಾಗಿತ್ತು. ಮು೦ದಿನ ಬಾರಿ ವಿಕ್ರ೦ ಬಳಿ ವಿಚಾರಿಸಬೇಕು ಎ೦ದುಕೊ೦ಡು ಬಸ್ಸಿನಿ೦ದ ಹೊರಗೆ ನೋಡಿದ. ತನ್ನ ದೃಷ್ಟಿಯನ್ನು ತಿರುಗಿಸುವುದರಲ್ಲಿದ್ದವ ಕಣ್ಣುಗಳು ತಾನು ನೋಡುತ್ತಿದ್ದಲ್ಲಿಗೆ ಥಟ್ ಎ೦ದು ಮತ್ತೊಮ್ಮೆ ತಿರುಗಿತು. ಅಲ್ಲೊ೦ದು ಕಾರು ಚಲಿಸುತ್ತಿತ್ತು. ಅದರೊಳಗಿರುವ ವ್ಯಕ್ತಿಯನ್ನು ಸ೦ಜಯ್ ಒ೦ದರೆಗಳಿಗೆ ನೋಡಿದ್ದಾದರೂ ಆ ವ್ಯಕ್ತಿ ಯಾರೆ೦ದು ಅವನು ಗುರುತಿಸಬಲ್ಲವನಾಗಿದ್ದ. 


ಕಾರಿನೊಳಗೆ ವಿಕ್ರ೦ ಕೂತಿದ್ದ.....!
********* 
ಸುಚೇತಾ ನಿದ್ರೆಯಿ೦ದ ಏಳುವಾಗ ಆರೂವರೆ ಆಗಿತ್ತು. ಸ೦ದರ್ಶನ ಮುಗಿಸಿ ಬ೦ದವಳು ಊಟ ಮಾಡಿ ಹಾಗೇ ಮಲಗಿ ಬಿಟ್ಟಿದ್ದಳು. ಅವಳು ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಮಲಗುವವಳಲ್ಲ. 


ಅಬ್ಬಾ.... ನಾಲ್ಕು ಗ೦ಟೆಗಳ ತನಕ ಮಲಗಿ ಬಿಟ್ಟೆ....! 


ಎದ್ದು ಬ೦ದು ಕನ್ನಡಿಯ ಮು೦ದೆ ನಿ೦ತವಳ ಮುಖದಲ್ಲಿ ಆಯಾಸದ ಕಳೆ ಇರಲಿಲ್ಲ. ಚೆನ್ನಾಗಿ ನಿದ್ರೆ ಮಾಡಿದ್ದುದರಿ೦ದ ಮನಸು ಫ್ರೆಷ್ ಆಗಿತ್ತು. ಮುಖದಲ್ಲಿ ಒ೦ದು ರೀತಿಯ ಶಾ೦ತಭಾವ ನೆಲೆಸಿತ್ತು. ನಿದ್ದೆ ಮಾಡಿ ಕೆ೦ಪಗಾದ ಕಣ್ಣುಗಳು ಇನ್ನೂ ನಿದ್ದೆಯ ಅಮಲಿನಲ್ಲಿದ್ದವು,


ಮುಖ ತೊಳೆಯಲು ತಣ್ಣೀರನ್ನು ಎರಚಿದಾಗ ಹಾಯೆನಿಸಿತು. ಮುಖ ತೊಳೆದು ಬ೦ದವಳು ಕೆದರಿದ ಕೂದಲನ್ನು ಬಾಚಿ, ಒತ್ತಿ ಜಡೆ ಹೆಣೆದಳು. ಜಡೆ ಹೆಣೆದ ಮೇಲೆ ಆ ತರಹ ಒತ್ತಿ ಜಡೆ ಹೆಣೆಯುವುದು ಓಲ್ಡ್ ಸ್ಟೈಲ್ ಅನಿಸಿತು. ಅವಳಮ್ಮ ಯಾವಾಗಲೂ ಕೂದಲನ್ನು ಒತ್ತಿ ಬಿಗಿದು ಜಡೆ ಹೆಣೆಯುತ್ತಿದ್ದರು. ಅವಳು ಅದನ್ನೇ ಇಲ್ಲಿಯೂ ಮು೦ದುವರಿಸಿದ್ದಳು. ಯಾರಾದರೂ ಆ ಬಗ್ಗೆ ಕೇಳಿದರೆ, “ಸರಳವಾಗಿ ಕಾಣುವುದು ನನಗಿಷ್ಟ..” ಅ೦ತ ಕ್ಲುಪ್ತವಾಗಿ ಉತ್ತರಿಸುತ್ತಿದ್ದಳು. 


ಎಷ್ಟು ಬದಲಾಯಿಸಬೇಕಿದೆ ನಾನು. ಸರಳತೆ ಎ೦ದುಕೊ೦ಡು ಔಟ್ ಆಫ್ ಫ್ಯಾಶನ್ ಆಗಿ ಉಳಿದುಬಿಟ್ಟೆನಲ್ಲ.... ಸರಳತೆ ನಡತೆಯಲ್ಲಿ ಇರಬೇಕು ನಿಜ. ಕಾಣಿಸಿಕೊಳ್ಳುವುದರಲ್ಲಿ ಸರಳತೆ ಇರಲೇ ಬೇಕಾಗಿಲ್ಲ. ಸೌ೦ದರ್ಯ ಪ್ರಜ್ಞೆ ಇರಬೇಕು ಹೆಣ್ಣಿನಲ್ಲಿ. ಇನ್ನು ಇವೆಲ್ಲವೂ ಬದಲಾಗುತ್ತದೆ.


ಮುಖಕ್ಕೆ ಫೇರ್ ಆ೦ಡ್ ಲವ್ಲಿ ಲೇಪಿಸಿ ತೆಳುವಾಗಿ ಪಾ೦ಡ್ಸ್ ಪೌಡರ್ ಹಚ್ಚಿದಳು.


ಅದೇ ಫೇರ್ ಆ೦ಡ್ ಲವ್ಲಿ..... ಅದೇ ಪಾ೦ಡ್ಸ್ ಪೌಡರ್..... ಹದಿನೈದು ವರುಷದಿ೦ದ ಅದನ್ನೇ ಉಪಯೋಗಿಸುತ್ತಿದ್ದೇನಲ್ಲಾ... ಹೊಸದಕ್ಕೆ ಯಾಕೆ ಪ್ರಯತ್ನ ಮಾಡಲೇ ಇಲ್ಲ ನಾನು?
 
ಅವಳಿಗೆ ಒ೦ದು ಕ್ಷಣ ನಗು ಬ೦ತು ತನ್ನ ಬಗ್ಗೆ. ಅಲ೦ಕಾರ ಮುಗಿಸಿ ಕನ್ನಡಿಯ ಮು೦ದೆ ನಿ೦ತವಳಿಗೆ ತಾನು ಲಕ್ಷಣವಾಗಿದ್ದೇನೆ ಅನಿಸಿತು. ಇನ್ನೂ ಚೆನ್ನಾಗಿ ಕಾಣಿಸುವ ಅವಕಾಶಗಳು ಬಹಳಷ್ಟಿವೆ ಅ೦ತಲೂ ಅನಿಸಿತು. ಗ೦ಟೆ ಏಳು ಆಗಿತ್ತು.


ನಿಶಾ ಬರುವುದಕ್ಕೆ ಇನ್ನೂ ಮೂರು ಗ೦ಟೆ ಇದೆ. ಅಲ್ಲಿಯವರೆಗೆ ಸುಮ್ಮನೆ ಇರುವ ಬದಲು ನಾನೇ ಬ್ಯೂಟಿ ಪಾರ್ಲರಿಗೆ ಹೋಗಿ ಬ೦ದರೆ ಹೇಗೆ? 


ಆ ಯೋಚನೆ ಬ೦ದಿದ್ದೇ ತಡ ಪರ್ಸು ಎತ್ತಿಕೊ೦ಡು ಹತ್ತಿರದಲ್ಲಿದ “ವೀನಸ್” ಬ್ಯೂಟಿಪಾರ್ಲರಿಗೆ ನಡೆದಳು.
ಪಾರ್ಲರಿನಲ್ಲಿ ಅಷ್ಟೊ೦ದು ಜನರು ಇರಲಿಲ್ಲ. ಒಳಗೆ ಬ೦ದವಳಿಗೆ ಎ.ಸಿ.ಯಿ೦ದ ಸಣ್ಣಗೆ ಚಳಿಯೆನಿಸಿತು. ಒಳಗೆ ಕನ್ನಡಿಯ ಮು೦ದೆ ಇದ್ದ ಖುರ್ಚಿಗಳಲ್ಲಿ ಹುಡುಗಿಯರು, ಹೆ೦ಗಸರು ಮೇಕಪ್ ಮಾಡಿಸಿಕೊಳ್ಳುತ್ತಿದ್ದರು. ಒಬ್ಬಳು ತನ್ನ ಕೂದಲಿಗೆ ಏನೋ ಮಾಡಿಸಿಕೊಳ್ಳುತ್ತಿದ್ದರೆ, ಇನ್ನೊಬ್ಬಾಕೆ ಬಹುಶ: ಪಿ೦ಪಲ್ ಟ್ರೀಟ್‍ಮೆ೦ಟ್ ತೆಗೆದುಕೊಳ್ಳುತ್ತಿದ್ದಿರಬೇಕು. ಇನ್ನೊಬ್ಬ ಮಧ್ಯ ವಯಸ್ಸಿನ ಹೆ೦ಗಸಿನ ಮುಖಕ್ಕೆ ಪೇಸ್ಟ್ ತರದ್ದೇನೋ ಹಚ್ಚಿದ್ದರು. ಅದನ್ನು ಕ೦ಡು ಸುಚೇತಾಳಿಗೆ ನಗು ಬ೦ತು. 


ಬ೦ದಾಗಿನಿ೦ದ ಸುಮ್ಮನೆ ನಿ೦ತು ಒಳಗೆ ಗಮನಸಿಸುತ್ತಿದ್ದ ಅವಳನ್ನು ಕ೦ಡು ಖುರ್ಚಿಯಲ್ಲಿ ಕೂತಿದ್ದ ಒಬ್ಬಳು ಹುಡುಗಿ “ಎಸ್... ಕ್ಯಾನ್ ಐ ಹೆಲ್ಪ್ ಯು” ಎ೦ದು ಕೇಳಿದಳು.


ಸುಚೇತಾಳಿಗೆ ಒ೦ದು ಸಲ ಗಲಿಬಿಲಿಯಾಯಿತು, ಉತ್ಸಾಹದಿ೦ದೇನೋ ಬ೦ದಿದ್ದಳು ಬ್ಯೂಟಿ ಪಾರ್ಲರಿಗೆ. ಆದರೆ ಅವರಲ್ಲಿ ತನಗೆ ಏನು ಬೇಕು ಎ೦ದು ಹೇಳುವುದೆ೦ದು ತಿಳಿಯಲಿಲ್ಲ ಅವಳಿಗೆ. ನಿಶಾಳ ಜೊತೆಗೇ ಬ೦ದಿದ್ದರೆ ಚೆನ್ನಾಗಿತ್ತು ಅ೦ತ ಅನಿಸಿತು ಅವಳಿಗೆ ಆ ಕ್ಷಣ. 


ಸರಿ, ಬ೦ದಾಗಿದೆ. ಹಿ೦ದೆ ಹೋಗುವ ಹಾಗಿಲ್ಲ. ಮ್ಯಾನೇಜ್ ಮಾಡೋಣ.


“ಶ್ಯೂರ್... “ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಾ ಸುಚೇತಾ ಅ೦ದಳು “ನಾನು ಇದು ಮೊದಲನೇ ಬಾರಿಗೆ ಬ್ಯೂಟಿ ಪಾರ್ಲರಿಗೆ ಬರುತ್ತಿರುವುದು. ನನಗೆ ಖಚಿತವಾಗಿ ಏನು ಬೇಕು ಎ೦ದು ಗೊತ್ತಿಲ್ಲ. ನನ್ನ ಲುಕ್ ಅನ್ನು ಬದಲಾಯಿಸಿಕೊಳ್ಳಬೇಕು. ಅದಕ್ಕೆ ನಿಮ್ಮ ಸಲಹೆ ಬೇಕು.”


ಈಗ ಆ ಹುಡುಗಿಗೆ ಒ೦ದು ಸಲ ಗಲಿಬಿಲಿ ಆಯಿತು. ಅಲ್ಲಿಗೆ ಬರುತ್ತಿದ್ದವರೆಲ್ಲಾ ಫೇಶಿಯಲ್, ಐ ಬ್ರೋ ಅ೦ತ ತಮಗೆ ಏನು ಬೇಕು ಅದನ್ನು ಹೇಳುತ್ತಿದ್ದರು. ಸುಚೇತಾಳ ಕೇಸ್ ವಿಚಿತ್ರವಾಗಿತ್ತು ಅವಳಿಗೆ. ಆದರೂ ಅವಳು ಸಾವರಿಸಿಕೊ೦ಡು, ಮುಖದ ತು೦ಬಾ ನಗು ತು೦ಬಿಕೊ೦ಡು “ಖ೦ಡಿತಾ, ನಾನು ನಿಮಗೆ ಸಲಹೆ ಕೊಡಬಲ್ಲೆ. ನಿಮ್ಮ ಲುಕ್‍ನಲ್ಲಿ ಯಾವ ತರಹದ ಬದಲಾವಣೆ ಬಯಸ್ತೀರಿ...?”


ಈಗ ಸುಚೇತಾಳಿಗೆ ಏನು ಹೇಳಬೇಕೆ೦ದು ಗೊತ್ತಾಯಿತು. “ನನಗೆ ಮೊದಲನೆಯದಾಗಿ ನನ್ನ ಹೇರ್ ಸ್ಟೈಲ್ ಬದಲಾಯಿಸಬೇಕು. ನನ್ನ ಮುಖಕ್ಕೆ ಹೊ೦ದುವ೦ತ ಚೆನ್ನಾಗಿರುವ೦ತ ಹೇರ್ ಸ್ಟೈಲ್ ಮಾಡಿಸಬೇಕು. ಮತ್ತೆ ಮುಖದಲ್ಲಿರುವ ಡಾರ್ಕ್ ಸರ್ಕಲ್ ಮತ್ತು ಮೊಡವೆಯಿ೦ದಾಗಿರುವ ಕಲೆಗಳನ್ನು ತೆಗಿಸಬೇಕು. ಇವಿಷ್ಟು ನನಗೆ ಅನಿಸಿದ್ದು. ನೀವು ಏನಾದರೂ ಸಲಹೆ ಮಾಡಬಹುದು.”


“ನಾನೂ ಕೂಡ ಅದನ್ನೇ ಸಜೆಸ್ಟ್ ಮಾಡೋಣ ಅ೦ತಿದ್ದೆ. ನನಗನಿಸುತ್ತದೆ ನಿಮಗೆ ಕರ್ಲಿ ಹೇರ್ ತು೦ಬಾ ಚೆನ್ನಾಗಿ ಕಾಣಿಸಬಹುದು. ಮುಖಕ್ಕೆ ಫೇಶಿಯಲ್ ಮಾಡಿಸೋಣ. ಅದನ್ನು ಕನಿಷ್ಟ ಮೂರು ಸಲ ಆದರೂ ಮಾಡಿಸಬೇಕು. ಅಲ್ಲದೇ ನಾನು ನಿಮಗೆ ಐ ಬ್ರೋ ಮಾಡಲು ಕೂಡ ಸಜೆಸ್ಟ್ ಮಾಡ್ತೀನಿ. ಇವತ್ತು ಐ ಬ್ರೋ ಮತ್ತು ಫೇಶಿಯಲ್ ಮಾಡೋಣ. ನೆಕ್ಸ್ಟ್ ಟೈಮ್ ಫೇಶಿಯಲ್ ಮಾಡಿಸಲು ಬ೦ದಾಗ ನಿಮ್ಮ ಹೇರ್ ಸ್ಟೈಲ್ ಬದಲಾಯಿಸೋಣ. ಅಲ್ಲಿಯವರೆಗೆ ನೀವು ನಿರ್ಧರಿಸಬಹುದು ಕರ್ಲಿ ಹೇರ್ ಬಗ್ಗೆ. ಅದು ಬೇಡ ಅ೦ದ್ರೆ ಹೇರ್ ಸ್ಟ್ರೈಟನಿ೦ಗ್ ಮಾಡಿಸಿ ನಿಮ್ಮ ಹೇರ್ ಸ್ಟೈಲ್ ಬದಲಾಯಿಸಬಹುದು.”


“ಸರಿ. ಹಾಗೇ ಆಗಲಿ... ಥ್ಯಾ೦ಕ್ಸ್ ಸಲಹೆ ನೀಡಿದ್ದಕ್ಕೆ...”


ಒ೦ದು ಗ೦ಟೆಯ ನ೦ತರ ಸುಚೇತಾ ಪಾರ್ಲರಿನಿ೦ದ ಹೊರಟಾಗ ಮನಸಿಗೆ ಒ೦ದು ರೀತಿಯ ಖುಷಿ ಆಯಿತು. ಎಲ್ಲರೂ ತನ್ನನ್ನು ಗಮನಿಸುತ್ತಾರೆ ಅ೦ತನಿಸಿ ಮುಜುಗರ ಎನಿಸಿತು.


ಇದು ಪ್ರಾರ೦ಭ ಅಷ್ಟೆ. ಹ೦ತ ಹ೦ತವಾಗಿ ನನ್ನನ್ನು ಬದಲಾಯಿಸಬೇಕು. ಅರ್ಜುನ್.... ನೋಡ್ತಾ ಇರು. ಈ ಸುಚೇತಾ ಹೇಗೆ ಬದಲಾಯಿಸುತ್ತಾಳೆ ಎ೦ದು. ನೀನೆ ಆಶ್ಚರ್ಯ ಪಡಬೇಕು. 
ಥೂ... ಮತ್ತೆ ಅವನ ಯೋಚನೆ. ಅರ್ಜುನ್ ಇಷ್ಟ ಪಡಲಿ, ಪಡದೇ ಇರಲಿ. ಈ ಬದಲಾವಣೆ ನನ್ನಲ್ಲಿ ಆತ್ಮ ವಿಶ್ವಾಸ ತು೦ಬಬೇಕು ಮತ್ತು ನನ್ನ ವ್ಯಕ್ತಿತ್ವವನ್ನು ಆಕರ್ಷಕವಾಗಿಸಬೇಕು.


ಐ ಬ್ರೋ ಮಾಡುತ್ತಾ ಆ ಹುಡುಗಿ ಅ೦ದಿದ್ದಳು. 


“ನಿಮ್ಮ ಕಲರ್ ಚೆನ್ನಾಗಿದೆ. ಸ್ವಲ್ಪ ಸ್ಕಿನ್ ಬಗ್ಗೆ ಕಾಳಜಿ ತಗೊಳ್ಳಿ. ಸಿಟ್ರಿಕ್ ಅ೦ಶ ಇರುವ ಜ್ಯೂಸ್ ಹೆಚ್ಚು ಕುಡಿಯಿರಿ. ಅದು ಮೊಡವೆಯನ್ನು ಕ೦ಟ್ರೋಲ್ ಮಾಡುತ್ತೆ. ಕನಿಷ್ಟ ಮೂರು ಲೀಟರ್ ನೀರು ಕುಡಿಯಿರಿ. ನೀರು ನ್ಯಾಚುರಲ್ ಮೋಯಿಸ್ಚರೈಸರ್. ಹಾಗೇ ಚೆನ್ನಾಗಿ ನಿದ್ರೆ ಕೂಡ ಅಗತ್ಯ. ಸ್ವಲ್ಪ ಪ್ರಯತ್ನ ಪಟ್ಟರೆ ನೀವು ತು೦ಬಾ ಚೆನ್ನಾಗಿ ಕಾಣಿಸ್ತೀರ. ಬೆಸ್ಟ್ ಆಫ್ ಲಕ್...” ಹುಡುಗಿ ತು೦ಬಾ ಫ್ರೆ೦ಡ್ಲಿಯಾಗಿ ಇದ್ದಾಳೆ ಅನಿಸಿತು ಸುಚೇತಾಳಿಗೆ. 


ಹತ್ತಿರದಲ್ಲಿ ಒ೦ದು ಜ್ಯೂಸ್ ಸೆ೦ಟರ್ ಕಾಣಿಸಿದ್ದುದರಿ೦ದ ಹೋಗಿ ನಿ೦ಬೆ ಜ್ಯೂಸ್ ಆರ್ಡರ್ ಮಾಡಿದಳು. ಅಷ್ಟರಲ್ಲಿ ಅವಳಿಗೆ ಫೋನ್ ಬ೦ತು. ಅದು ಹೊಸ ನ೦ಬರಿನಿ೦ದ ಬ೦ದಿತ್ತು. 


“ಹಲೋ...”


“ಹಲೋ.... ಸುಚೇತಾ ಅವರಾ?”


“ಹೌದು .... ತಾವ್ಯಾರು?”


“ನಾನು ಪ್ರಶಾ೦ತ್ ಅ೦ತ ANZ ಕ೦ಪೆನಿಯಿ೦ದ ಫೋನ್ ಮಾಡ್ತಾ ಇದೀನಿ. ನಾನು ನಚಿಕೇತನ ಕಲೀಗ್. ನಚಿಕೇತನಿಗೆ ವೈಯುಕ್ತಿಕ ತೊ೦ದರೆಗಳಿರುವುದರಿ೦ದ ಅವನು ಊರಿಗೆ ಹೋಗಬೇಕಾಗಿ ಬ೦ತು. ಹಾಗಾಗಿ ನಿಮ್ಮ ಜಾಯಿನಿ೦ಗ್ ಫಾರ್ಮಾಲಿಟೀಸ್ ಅನ್ನು ನನಗೆ ವಹಿಸಿದ್ದಾನೆ. ನಾನು ನಿಮ್ಮ ಮೇಲ್ ಐ.ಡಿ.ಗೆ ಕೆಲವು ಫಾರ್ಮ್ಸ್ ಕಳಿಸಿದ್ದೀನಿ. ಅದು ನೀವು ನಮ್ಮಲ್ಲಿ ಜಾಯಿನ್ ಆಗುವ ಮು೦ಚೆ ಪೂರ್ಣಗೊಳಿಸಿ ಕಳಿಸಬೇಕು. ನಿಮ್ಮ ಆಫರ್ ಲೆಟರ್ ಅನ್ನು ಇನ್ನು ಒ೦ದೆರಡು ದಿನದಲ್ಲಿ ಕಳಿಸ್ತೀನಿ. ಫಾರ್ಮ್ಸ್ ಪೂರ್ಣಗೊಳಿಸುವಾಗ ಏನಾದರೂ ಸ೦ಶಯ ಬ೦ದರೆ ನನಗೆ ಫೋನ್ ಮಾಡಿ.”


“ಶ್ಯೂರ್... ತು೦ಬಾ ಥ್ಯಾ೦ಕ್ಸ್. ಪ್ರಶಾ೦ತ್, ಒ೦ದು ಪ್ರಶ್ನೆ. ನಾನು ಈಗ ಕೆಲಸ ಮಾಡುತ್ತಿರುವ ಕ೦ಪೆನಿಯಲ್ಲಿ ರೆಸಿಗ್ನೇಷನ್ ಕೊಡಬಹುದಾ ಅಥವಾ ಆಫರ್ ಲೆಟರ್ ಬರುವವರೆಗೆ ಕಾಯಬೇಕಾ?”


“ಖ೦ಡಿತ ನೀವು ರೆಸಿಗ್ನೇಷನ್ ಕೊಡಬಹುದು. ನೀವು ಕೇಳಿರುವ CTC ಗೆ ಅಪ್ರೂವಲ್ ತಗೊ೦ಡಿದ್ದಾರೆ ನಚಿಕೇತ. ಆದ್ದರಿ೦ದ ಏನೂ ಪ್ರಾಬ್ಲಮ್ ಇಲ್ಲ.”


ಹ್ಮ್... ನಚಿಕೇತ ಎಷ್ಟು ಬೇಗ ಪ್ರೋಸೆಸ್ ಮಾಡಿದ್ದಾನೆ ನನ್ನ ಆಫರ್ ಲೆಟರ್ ಅನ್ನು. ತು೦ಬಾ ಖುಷಿ ಆಯಿತು ಅವಳಿಗೆ. ಅವನಿಗೇನೋ ವೈಯುಕ್ತಿಕ ತೊ೦ದರೆ ಅ೦ದನಲ್ಲಾ ಇವನು. ಏನಾದರೂ ಸೀರಿಯಸ್ ಇರಬಹುದೇ!


“ತು೦ಬಾ ಥ್ಯಾ೦ಕ್ಸ್ ಪ್ರಶಾ೦ತ್. ”


“ವೆಲ್‍ಕಮ್.... ನಚಿಕೇತ ಮು೦ದಿನ ವಾರ ಬರ್ತಾರೆ. ನಾನು ಅಥವಾ ಅವರು ಯಾರಾದರೂ ನಿಮಗೆ ಆಫರ್ ಲೆಟರ್ ಕಳಿಸ್ತೀವಿ ಮು೦ದಿನವಾರ. ಬೈ... ಟೇಕ್ ಕೇರ್...”

ಪ್ರಶಾ೦ತ್ ಫಾರ್ಮ್ಸ್ ಬಗ್ಗೆ ಹೇಳಿದ್ದು ನೆನಪಾಗಿ ಸೈಬರ್ ಕಡೆಗೆ ಹೋದಳು. ಅದು ಅವಳು ಯಾವಾಗಲೂ ಹೋಗುವ ಸೈಬರ್. ಅಲ್ಲಿ ಕೆಲಸ ಮಾಡುವ ಹುಡುಗನಿಗೆ ಸುಚೇತಾ ಚೆನ್ನಾಗಿ ಪರಿಚಯವಿದ್ದಾಳೆ. ಇವತ್ತು ಸುಚೇತಾ ಒಳ ಬ೦ದಾಗ ಅವನು ಸ್ವಲ್ಪ ಆಶ್ಚರ್ಯದಿ೦ದ ನೋಡಿದ. ಅವನ ಕಣ್ಣುಗಳಲ್ಲಿ ಮೆಚ್ಚುಗೆ ಇತ್ತು.

ಪರವಾಗಿಲ್ಲ. ಬ್ಯೂಟಿ ಪಾರ್ಲರ್ ಎಫೆಕ್ಟ್ ಕೆಲಸ ಮಾಡ್ತ ಇದೆ. ಸುಚೇತಾ ಮನಸಿನಲ್ಲಿಯೇ ಅ೦ದುಕೊ೦ಡಳು.
ಪ್ರಶಾ೦ತ್ ಹೇಳಿದ ಫಾರ್ಮ್ಸ್ ಅನ್ನು ಪ್ರಿ೦ಟ್ ತೆಗೆದುಕೊ೦ಡಳು. ತು೦ಬಾ ಫಾರ್ಮ್ಸ್‍ ಇದ್ದುದರಿ೦ದ ಮನೆಯಲ್ಲಿ ನಿಧಾನವಾಗಿ ನೋಡಿ ಫಿಲ್ ಮಾಡೋಣವೆ೦ದುಕೊ೦ಡಳು. ಲಾಗ್ ಔಟ್ ಮಾಡುವ ಮೊದಲು ತನ್ನ ಆರ್ಕುಟ್ ಪ್ರೋಫೈಲ್ ನೋಡಿದವಳಿಗೆ ಆಶ್ಚರ್ಯ ಕಾದಿತ್ತು. ತನ್ನ ಪ್ರೊಫೈಲ್ ವಿಸಿಟರ್ ಲಿಸ್ಟಿನಲ್ಲಿ ನಚಿಕೇತ ಇದ್ದ! ಆ ಫ್ರೊಫೈಲ್‍ಗೆ ಹೋಗಿ ನೋಡಿದವಳಿಗೆ ಅದು ನಚಿಕೇತನೇ ಎ೦ದು ಖಚಿತವಾಯಿತು!


ಇವನ್ಯಾಕೆ ನನ್ನ ಪ್ರೊಫೈಲ್ ನೋಡಿದ್ದಾನೆ! ಸಧ್ಯ... ಫ್ರೆ೦ಡ್ ರಿಕ್ವೆಸ್ಟ್ ಕಳಿಸಿಲ್ಲ.  ಎ೦ದುಕೊಳ್ಳುತ್ತಾ ಲಾಗ್ ಔಟ್ ಮಾಡಿದಳು.
**************

25 comments:

ಮನಸು said...

chennagide... munduvarisi....

ಮನಸಿನ ಮಾತುಗಳು said...

hmmm.... :-) ;-)

ತೇಜಸ್ವಿನಿ ಹೆಗಡೆ said...

ಅಬ್ಬಾ! ಬ್ಯೂಟಿ ಪಾರ್ಲರ್ ನಲ್ಲಿ ನಡೆಯೋ ವರ್ಕ್‌ಗಳ ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿದ್ದೀರಲ್ಲಾ!! ತುಂಬಾ ಮಾಹಿತಿ ಗೊತ್ತಿರುವಂತಿದೆ ನಿಮಗೆ!! ಹ್ಮ್ಂ... ನನ್ನ ಕೆಲವು ಕವನಗಳು ಬೇಕೆಂದಿದ್ದಿರಿ. ಅದು ಯಾಕೆಂದು ಗೊತ್ತಾಗ್ತಾ ಇದೆ ಈಗ..:-P :D ತುಂಬಾ ಚೆನ್ನಾಗಿ ಬಂದಿದೆ ಈ ಭಾಗ. ಹೆಚ್ಚು ಕಾಯಿಸದೇ ಕುತೂಹಲಕ್ಕೆ ಅಂತ್ಯ ಹಾಡಿ. ಮುಂದಿನ ಭಾಗ ಬೇಗ ಬರಲಿ...

shravana said...

Oh.. quick update.
Nice part Sudhesh.. :)

Was very curious to know how you will be taking the make over part.. coming up good.. :)
Continue malple.

Veni said...

What twists and turns boss, really nice episode. I am waiting anxiously to read what happens next on Vikram's part, that is also failed relation like Suchetha is it.

shivu.k said...

ಸುಧೇಶ್,

ಬ್ಯೂಟಿ ಪಾರ್ಲರಿನಲ್ಲಿ ನಡೆಯುವ ವಿವರಗಳೆಲ್ಲ ನಿಮಗೆ ಹೇಗೆ ಗೊತ್ತಾಯಿತು? ನಾನು ನನ್ನ ಶ್ರೀಮತಿಯ ಜೊತೆಗೋಗಿ ನೋಡೋಣವೆಂದರೆ ಒಳಗೆ ಬಿಡುವುದಿಲ್ಲವಲ್ಲ. ಇರಲಿ ಎಲ್ಲವನ್ನು ಓದಿ ಸಕತ್ ಖುಷಿಯಾಯ್ತು...ನೀವು ಎಲ್ಲ ವಿಚಾರಗಳನ್ನು ಎಡತಾಕುತ್ತಿರುವುದು ನಿಮ್ಮ ಪ್ರತಿಭೆಗೆ ಬರಹಕ್ಕೆ ಹದಬರುವಂತೆ ಅಲ್ಲವೇ...ಮುಂದುವರಿಯಲಿ..

Ittigecement said...

ಇವತ್ತು ಮತ್ತೊಮ್ಮೆ ಎಲ್ಲ ಕಂತುಗಳನ್ನು ಓದಿದೆ...

ನಿಮ್ಮ ಶೈಲಿ, ಪಾತ್ರಗಲ ಪೋಷಣೆ ನುರಿತ ಕಾದಂಬರಿಕಾರರ ಹಾಗೆ ಇದೆ..

ಅದು ನಿಮ್ಮ ಧನಾತ್ಮಕ ಅಂಶ...

ಕಥೆಯ ಮೇಲಿನ ಹಿಡಿತ ಚೆನ್ನಾಗಿದೆ... ಮುಂದುವರೆಸಿ...

ಜೈ ಹೋ ಭಯ್ಯಾ...

Unknown said...

Chennaagide.. Munduvaresi..

Karthik Kamanna said...

enta marare neevu??? pratee bhaagadalloo surprice ittirtri!! :)

chenda untu.. munduvareyali!

ಜಲನಯನ said...

ಸುಧೇಶ್ ನಿಮ್ಮ ಕಥೆಯನ್ನು ಓದಿಸಿಕೊಂಡು ಹೋಗುವ ಶೈಲಿ ನಾನು ಅಂದೇ ಹೇಳಿದ್ದೆ..ನನಗೆ ಇಷ್ಟವಾಗುತ್ತೆ...ಹೌದು ಕಥೆ ಬರೆಯೋ ಉತ್ಸಾಹದಲ್ಲಿ ಹೆಚ್ಚು ಎಳೆಯದೇ ಎಷ್ಟು ಬೇಕೋ ಅಷ್ಟು ವಿವರಣೆ..ಕಥೆಯನ್ನ ಹುರಿ-ಹುರಿ ಗರಿ-ಗರಿ ಮಾಡುತ್ತೆ..ಇನ್ನೊಂದು ಅಂಶ ಕಥೆಯ ಚೌಕಟ್ಟಿನಲ್ಲೇ ಮಾಹಿತಿಯನ್ನು ನೀಡುವುದು ಒಂದು ಒಳ್ಳೆಯ ಕಥೆಗಾರನ ಲಕ್ಷಣ..ಅಥವಾ ಬರಹದ ಹೆಚ್ಚುಗಾರಿಕೆ ಎನ್ನಲೇ...ಬ್ಯೂಟಿ ಪಾರ್ಲರ್ ಸನ್ನಿವೇಶದಲ್ಲಿ ಅದನ್ನು ಹೆಣೆದಿದ್ದೀರಿ...ಚನ್ನಾಗಿದೆ ಮುಂದುವರೀಲಿ...ಶುಭಾಷಯ

ಚಿತ್ರಾ said...

ಎಲ್ಲರೂ ಕೇಳಿದ ಪ್ರಶ್ನೆ ನನ್ನದೂ ಕೂಡ .... ಹೆಂಗಸರ ಬ್ಯೂಟಿ ಪಾರ್ಲರ್ ವಿಷಯ ಚೆನ್ನಾಗೇ ಸ್ಟಡೀ ಮಾಡಿದೀರಾ ! ಥಾಣೆ ಲಿ ಯಾವುದಾದರು Unisex ಪಾರ್ಲರ್ ಗೆ ಹೋಗ್ತೀರಾ ಅಂತ ! ಹಿ ಹಿ ಹಿ . ಕುತೂಹಲ ಜಾಸ್ತಿ ಆಗ್ತಾ ಇದೆ. ಬೇಗ ಬರಲಿ ಮುಂದಿನ ಭಾಗ !

ಸುಧೇಶ್ ಶೆಟ್ಟಿ said...

ಮನಸು, ದಿವ್ಯಾ ಅವರೇ...

:)

ಸುಧೇಶ್ ಶೆಟ್ಟಿ said...

ತೇಜಕ್ಕ...

ಏನಿಲ್ಲ... ನನ್ನ ತ೦ಗಿ, ಕಲೀಗ್ಸ್ ಹತ್ರ ಕೇಳಿದ್ದೆ ಬ್ಯೂಟಿ ಪಾರ್ಲರಿನಲ್ಲಿ ಏನು ಮಾಡುತ್ತಾರೆ. ಉಳಿದದ್ದು ಊಹೆ :)

ಆ ಕವನಕ್ಕೂ ಇದಕ್ಕೂ ಏನು ಸ೦ಬ೦ಧ :P

ಸುಧೇಶ್ ಶೆಟ್ಟಿ said...

Shravana...

Thanks for staying connected with the novel :)

Hope I was able to live up to your expectation with respect to make over episode :)

ಸುಧೇಶ್ ಶೆಟ್ಟಿ said...

Veni...

You need to wait to know that :)

Spl thanks to you... :) You know why ;)

ಸುಧೇಶ್ ಶೆಟ್ಟಿ said...

ಶಿವಣ್ಣ...

ನಿಮ್ಮ ಕಮೆ೦ಟು ಓದಿ ತು೦ಬಾ ಖುಶಿ ಆಯಿತು.... :)

ನನಗೂ ಒಳಗೆ ಹೋಗಿ ನೋಡೋಣ ಎ೦ಬ ಕುತೂಹಲ ಇತ್ತು... ಆದರೆ ಬಿಡುವುದಿಲ್ಲವಲ್ಲ... ಅವರಿವರ ಬಳಿ ಕೇಳಿ, ಅದಕ್ಕೆ ಸ್ವಲ್ಪ ಊಹೆ ಸೇರಿಸಿ ಬರೆದಿದ್ದು ಇದನ್ನು :)

ಸುಧೇಶ್ ಶೆಟ್ಟಿ said...

ಪ್ರಕಾಶಣ್ಣ....

ನಿಮ್ಮ ಕಮೆ೦ಟು ಓದಿ ನಾನಾಗಲೇ ಅಟ್ಟ ಏರಿ ಆಗಿದೆ... ನಾನಿನ್ನು ಮರಿ ಬರಹಗಾರ ಅ೦ತಲೇ ಅನಿಸುತ್ತದೆ ನನಗೆ :)

ತು೦ಬಾ ಥ್ಯಾ೦ಕ್ಸ್ ನಿಮ್ಮ ಪ್ರೋತ್ಸಾಹದ ನುಡಿಗಳಿಗೆ. :)

ಸುಧೇಶ್ ಶೆಟ್ಟಿ said...

ರವಿ...

ಥ್ಯಾ೦ಕ್ಸ್ :)

ಸುಧೇಶ್ ಶೆಟ್ಟಿ said...

ಕಾರ್ತಿಕ್....

ನಾನು ಸರ್ಪ್ರೈಸ್ ಇಟ್ಟಿಲ್ಲ ಅ೦ದ್ರೆ ನೀನು ಮು೦ದಿನ ಭಾಗ ಓದೋಕೆ ಎಲ್ಲಿ ಬರ್ತೀಯ? :)

ಸುಧೇಶ್ ಶೆಟ್ಟಿ said...

ಜಲನಯನ ಸರ್....

ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ತು೦ಬಾ ಧನ್ಯವಾದಗಳು. ಈ ಮಾತುಗಳೇ ನಾನು ಇನ್ನುಷ್ಟು ಚೆನ್ನಾಗಿ ಬರೆಯಲು ಪ್ರೇರಪಿಸುವುದು.... ತು೦ಬಾ ಥ್ಯಾ೦ಕ್ಸ್... ಬರ್ತಾ ಇರಿ, ಹೀಗೆ ಪ್ರೋತ್ಸಾಹ ನೀಡುತ್ತಾ ಇರಿ :)

ಸುಧೇಶ್ ಶೆಟ್ಟಿ said...

ಚಿತ್ರಾ ಅವರೇ...

ನಿಮ್ಮ ಪ್ರಶ್ನೆಗೆ ಮೇಲಿನ ಕಮೆ೦ಟುಗಳಲ್ಲಿ ಉತ್ತರ ಇದೆ. ದಯವಿಟ್ಟು ಓದಿಕೊಳ್ಳುವುದು :)

ಥ್ಯಾ೦ಕ್ಸ್ :)

ರಜನಿ ಹತ್ವಾರ್ said...

ಸೂಪರ್ ಸುಧೇಶ್. ಈ ಕಂತು ತುಂಬಾ interesting ಆಗಿ ಬಂದಿದೆ. ಏನ್ರಿ ಅಕ್ಕ, ತಮ್ಮ ಎಲ್ಲರದೂ ಟ್ರಾಜಿಡಿನೇನಾ?
ಸಂಜಯ್ ಕಥೆ ಏನಾಗ್ಬೋದು ಅನ್ನೋ ಕಾತುರ ಹೆಚ್ಚಾಗ್ತಾ ಇದೆ. ತುಂಬಾ ಸೂಕ್ಷ್ಮ ವಿಷ್ಯನ ಆಯ್ದು ಕೊಂಡಿದೀರಿ, ನಿಭಾವಣೆ ಬಗ್ಗೆ ಭಾರಿ ಕುತೂಹಲ ಇದೆ.
ಸಂಜಯ್ ಗೆ ಏನಂತ ಹಾರೈಸಬೇಕು ಅನ್ನೋದೇ ತಿಳೀತಿಲ್ಲ!
ಅವ್ನ ಸೃಷ್ಟಿಕರ್ತನಿಗೆ ಹೇಳಿಬಿಡ್ತೀನಿ 'all the best' :-)

ಮನಮುಕ್ತಾ said...

ಸುಧೇಶ್,
ಕಥೆ ಕುತೂಹಲಕಾರಿಯಾಗಿ ಎಲ್ಲಿಯೂ ಬೇಸರ ತರಿಸದೆ ತು೦ಬಾ ಚೆನ್ನಾಗಿ ಬರುತ್ತಿದೆ. ಮು೦ದುವರೆಸಿ..

ಸುಧೇಶ್ ಶೆಟ್ಟಿ said...

ರಜನಿ ಅವರೇ....

ತು೦ಬಾ ದಿನಗಳಾಯಿತು ನೀವು ಕಮೆ೦ಟು ಹಾಕದೆ. ನೀವು ಕಮೆ೦ಟಿಸದಿದ್ದರೂ, ಕಾದ೦ಬರಿ ಓದುತ್ತಾ ಇರುತ್ತೀರಿ ಅ೦ತ ಅ೦ದುಕೊ೦ಡಿದೀನಿ... :)

ಅಕ್ಕ ತಮ್ಮ ಇಬ್ಬರ ಕಥೆ ಟ್ರಾಜೆಡಿನಾ ಅನ್ನೋದಕ್ಕೆ ಕಾದುನೋಡಿ :) ನಿಭಾವಣೆಯಾ ನನಗೂ ಸ್ವಲ್ಪ ಹಿ೦ಜರಿಕೆ ಇದೆ. ಆದರೆ ಸಲಹೆ ಕೊಡಲು ನೀವುಗಳು ಇದ್ದೀರೆ೦ಬ ಭರವಸೆ ಇದೆ :)

ಸುಧೇಶ್ ಶೆಟ್ಟಿ said...

ತು೦ಬಾ ಥ್ಯಾಂಕ್ಸ್ ಮನಮುಕ್ತಾ ಅವರೇ ಕಥೆಯನ್ನು ಟ್ರ್ಯಾಕ್ ಮಾಡುತ್ತಿರುವುದಕ್ಕೆ :)

Post a Comment