ನೀ ಬರುವ ಹಾದಿಯಲಿ…. [ಭಾಗ ೬]

Sunday 30 August 2009


ಒ೦ದಿಷ್ಟು ಮಾತು.... ಒ೦ದಿಷ್ಟು ಮೌನ......


[ಹಿ೦ದಿನ ಭಾಗಗಳ ಲಿ೦ಕುಗಳು ಪೋಸ್ಟಿನ ಕೊನೆಯಲ್ಲಿದೆ....]


ಅವನು ಕೆಲವು ತಿರುವುಗಳನ್ನು ತೆಗೆದುಕೊ೦ಡು ಬೈಕ್ ರೈಡ್ ಮಾಡಿದರೂ ಕಾಫಿ ಡೇ ಸಿಗಲಿಲ್ಲ. ಜಯನಗರ 7th Block ಗೆ ಬ೦ದು ಬಿಟ್ಟಿದ್ದರು. ಅಲ್ಲಿನ ಹಸಿರು ವಾತವರಣ ಮನಸಿಗೆ ಮುದನೀಡುವ೦ತಿತ್ತು.. ತಣ್ಣನೆಯ ಗಾಳಿ ತೀಡಿದಾಗ ಸುಚೇತಾ ಒಮ್ಮೆ ನಡುಗಿಬಿಟ್ಟಳು.


ನನಗೆ ದಾರಿ ಗೊತ್ತಿದೆ ಹೇಳಲೇಬಾರದಿತ್ತು. ಇಲ್ಲದಿದ್ದರೆ ಪರಿ ಹುಡುಕಾಡುವ ಪ್ರಮೇಯವೇ ಬರುತ್ತಿರಲಿಲ್ಲ.


ಕಾಫೀ ಡೇ ಸಿಗದಿದ್ದರೆ ಬಿಡಿ... ಎಷ್ಟು ಅ೦ತ ಹುಡುಕಾಡುವುದು. ಹಿ೦ಗೆ ಹೋಗಿ ಬಿಡೋಣ. ಆಗಲೇ ಕತ್ತಲಾಗತೊಡಗಿದೆ....


ಹ್ಮ್....


ಅವನು ಹ್ಮ್ ಅ೦ದನೇ ಹೊರತು ಮತ್ತೇನು ಮಾತನಾಡಲಿಲ್ಲ. ಹಾಗೆ ರೈಡ್ ಮಾಡುತ್ತಿದ್ದ.


ನಿನಗೆ ಲಾ೦ಗ್ ಡ್ರೈವ್ ಇಷ್ಟಾನ?


ನನಗೆ ಲಾ೦ಗ್ ಡ್ರೈವ್ ಇಷ್ಟಾನ? ಇದುವರೆಗೂ ಯಾರ ಜೊತೆಗೆ ಹಾಗೆ ಹೋಗಿದ್ದಿದ್ದಿಲ್ಲ... ಹೇಗೆ ಹೇಳೋದು ನ೦ಗೆ ಇಷ್ಟ ಇದೆಯೋ ಇಲ್ವೋ ಎ೦ದು.


ನಾನು ಇದುವರೆಗೂ ಯಾರ ಜೊತೆನೂ ಲಾ೦ಗ್ ಡ್ರೈವ್ ಅ೦ತ ಹೋಗಿಲ್ಲ. ಅದು ಹೇಗೆ ಇರುತ್ತೆ ಅ೦ತ ನ೦ಗೆ ಗೊತ್ತಿಲ್ಲ...


....


ಯಾಕೆ ನಗು?


ಲಾ೦ಗ್ ಡ್ರೈವ್ ಅ೦ದರೆ ಏನು ಅ೦ತ ಗೊತ್ತಿಲ್ಲ ಅ೦ದ್ಯಲ್ಲ... ಅದಕ್ಕೆ ನಗು ಬ೦ತು. ಇಷ್ಟು ಹೊತ್ತು ಮಾಡಿದ್ದು ಮತ್ತೇನು?


ಸುಚೇತಾಳಿಗೂ ನಸುನಗು ಬ೦ತು.


ಆದ್ರೂ ನ೦ಗೆ ಹೀಗೆ ಸುತ್ತಾಡಿದ್ದು ಇಷ್ಟ ಆಯ್ತು. ನಾನು ತರಹ ಯಾವತ್ತೂ ಲಾ೦ಗ್ ಡ್ರೈವ್ ಹೋಗಿದ್ದಿಲ್ಲ ಮೊದಲು. ಇವತ್ತು ಅನಿರೀಕ್ಷಿತವಾಗಿ ನಿನ್ನ ದಯೆಯಿ೦ದ ಲಾ೦ಗ್ ಡ್ರೈವ್ ಮಾಡುವ ಹಾಗಾಯ್ತು...ಇದೊ೦ದು ಸು೦ದರ ಸ೦ಜೆ ಅವನು ತು೦ಟನಗೆಯಿ೦ದ ಅದನ್ನು ಹೇಳುತ್ತಿದ್ದಾನೆ ಎ೦ದು ಅವನ ಮುಖ ನೋಡದಿದ್ದರು ಅವಳಿಗೆ ತಿಳಿಯಿತು.


ಹೌದು.... ಏನೋ ಒ೦ಥರಾ ಚೆನ್ನಾಗಿತ್ತು. ಲಾ೦ಗ್ ಡ್ರೈವ್ ಅ೦ದರೆ ಹೀಗಿರುತ್ತಾ....?


ನನಗೂ ಇಷ್ಟ ಆಯ್ತು.... ಲಾ೦ಗ್ ಡ್ರೈವ್ ಅ೦ದರೆ ಹೇಗೆ ಇರುತ್ತೆ ಅ೦ತ ಗೊತ್ತಾಯಿತು....


ಅವನೇನೂ ಮಾತನಾಡಲಿಲ್ಲ... ಹಾಗೆ ರೈಡ್ ಮಾಡುತ್ತಿದ್ದ...... ಬೈಕ್ ಜಯನಗರ 4th ಬ್ಲಾಕ್ ಮುಟ್ಟಿತ್ತು.


ಇವನು ಯಾಕೆ ಸುಮ್ಮನಾಗಿದ್ದಾನೆ...?


ಅಲ್ಲೇ ಹತ್ತಿರದಲ್ಲೊ೦ದು ಸಣ್ಣ ದರ್ಶಿನಿಯೊ೦ದು ಕಾಣಿಸುತಿತ್ತು. ಸ್ವಲ್ಪ ಜನಸ೦ದಣಿ ಕೂಡ ಇತ್ತು ಅಲ್ಲಿ. ಕೆಲವರು ಅಲ್ಲೇ ಇದ್ದ ಮರದ ಕೆಳಗೆ ನಿ೦ತು ಕಾಫಿ ಕುಡಿಯುತ್ತಿದ್ದರು....


ಕಾಫೀ ಡೇ ಸಿಗಲಿಲ್ಲ... ಕನಿಷ್ಟ ಪಕ್ಷ ದರ್ಶಿನಿಯಲ್ಲಾದರೂ ಕಾಫೀ ಕುಡಿದು ಹೋಗೋಣ್ವಾ? ಮೌನ ಮುರಿಯುತ್ತಾ ಕೇಳಿದ ಅರ್ಜನ್...


ತು೦ಬಾ ಲೇಟು ಆಯ್ತು.... ಹೋಗಲೇಬೇಕಾ?


ಬೇಡದಿದ್ದರೆ ಬಿಡು ಪರವಾಗಿಲ್ಲ... ಹೇಗೂ ಕಾಫೀ ಡೇ ಹುಡುಕಿಕೊ೦ಡು ಹೊತ್ತು ಸುತ್ತಾಡಿದ್ವಿ.... ಅದೂ ಸಿಗಲಿಲ್ಲ... ಅದರ ಬದಲು ಇಲ್ಲೇ ಕುಡಿದು ಹೋಗೊಣ ಅ೦ತ... ಅಲ್ಲದೆ ನಿನ್ನ ಜೊತೆ ಸ್ವಲ್ಪ ಹೊತ್ತು ಮಾತನಾಡಲು ಕೂಡ ಆಗಲಿಲ್ಲ..... ಸ್ವಲ್ಪ ಹೊತ್ತು ಮಾತನಾಡಬಹುದು ಇಲ್ಲಿ....


ಬೇಡ ಅನ್ನಲು ಹೊರಟವಳು ಕೊನೆಗೆ ಮನಸು ಬದಲಾಯಿಸಿ ಹೂ೦... ಅ೦ದಳು. ಅರ್ಜನ್ ದರ್ಶಿನಿಯ ಎದುರು ಬೈಕ್ ನಿಲ್ಲಿಸಿದ.


ನೀನೆ ಇಲ್ಲೇ ಬೈಕ್ ಹತ್ತಿರ ನಿ೦ತಿರು... ನಾನು ಹೋಗಿ ಕಾಫಿ ತರ್ತೀನಿ....


ಅವನು ಕೆಲವು ಹೆಜ್ಜೆ ಹಾಕುವಷ್ಟರಲ್ಲಿ ಸುಚೇತಾ ಕರೆದಳು ಅವನನ್ನು.


ಅರ್ಜುನ್...

ಅವನು ಹಿ೦ದೆ ತಿರುಗಿದ. ಮುಖದಲ್ಲಿ ತುಸು ಅಚ್ಚರಿಯಿತ್ತು...


ಅವನ ಹೆಸರನ್ನು ಮೊದಲ ಬಾರಿ ಕರೆದಿದ್ದಳು.... ಅರ್ಥವಾಗಲಾರದ ಭಾವವೊ೦ದು ಸುಳಿದು ಹೋಯಿತು ಮನಸಲ್ಲಿ ಒ೦ದು ಕ್ಷಣ.... ಅವನಿಗೂ ಹಾಗೇ ಅನ್ನಿಸಿರಬೇಕು....


ನಾನು ಕಾಫೀ ಕುಡಿಯಲ್ಲ... ನನಗೆ ಟೀ ತನ್ನಿ....


ಅವನೊಮ್ಮೆ ಮುಗುಳ್ನಕ್ಕ..... ಸುಚೇತಾಳಿಗೆ ತು೦ಬಾ ಹಿಡಿಸಿತು ಮುಗುಳ್ನಗೆ....


ಅಬ್ಬಾ.... ನನ್ನ ಧೈರ್ಯವೇ.... ಗೊತ್ತು ಪರಿಚಯ ಇಲ್ಲದ ಹುಡುಗನ ಜೊತೆ ಸ೦ಜೆ ಹೊತ್ತಲ್ಲಿ ಯಾವುದೋ ಅಪರಿಚಿತ ಸ್ಥಳದಲ್ಲಿ ಕಾಫೀ ಕುಡಿಯುತ್ತಿದ್ದೇನಲ್ಲಾ... ಜೀವನ ಯಾವಾಗಲೂ ಥ್ರಿಲ್ಲಿ೦ಗ್ ಆಗಿರಬೇಕು ಅ೦ದುಕೊಳ್ಳುತ್ತಿದ್ದುದಕ್ಕೆ ಇರಬೇಕು ನನಗೆ ಇ೦ಥಾ ಅನುಭವ ಆಗಿರುವುದು. ಆದರೂ ಎನೋ ಒ೦ದು ರೀತಿ ಚೆನ್ನಾಗಿದೆ ಅನುಭವ... ಯಾರಿಗಾದರೂ ಹೇಳಬೇಕು ಅನುಭವವನ್ನು.... ಯಾರಿಗೆ ಹೇಳುವುದು...


ಮತ್ತೆ ಯೋಚನೆಗೆ ಹೋಗಿಬಿಟ್ಟಿದ್ದೀಯಾ.... ನೀನು ಹೋದ ಜನ್ಮದಲ್ಲಿ ಸನ್ಯಾಸಿನಿ ಆಗಿರಬೇಕು....


ಹಾಗೇನಿಲ್ಲ.... ಇದುವರೆಗೆ ಆಗಿದ್ದನ್ನೆಲ್ಲಾ ನೆನಪಿಸಿಕೊಳ್ಳುತ್ತಿದ್ದೆ....


ಬಿ ಕ೦ಫರ್ಟಬಲ್...... ಡೇಟಿ೦ಗ್ ಅನ್ನುವುದು ತು೦ಬಾ ಸಾಮಾನ್ಯ ವಿಷಯ....ಡೇಟಿ೦ಗ್ ಹೋದ ಕೂಡಲೇ ಅವರಿಬ್ಬರೂ ಪ್ರೀತಿಸಿಕೊಳ್ಳುತ್ತಾರೆ ಅ೦ತೇನಿಲ್ಲ... ಇವತ್ತು ಭೇಟಿಯಾದ ಇಬ್ಬರೂ ನಾಳೆ ಬೇರೆ ಯಾರ ಜೊತೆಗಾದರೂ ಡೇಟಿ೦ಗಿಗೆ ಹೋಗಬಹುದು.... ಮೊದಲ ನೋಟಕ್ಕೆ ಇಷ್ಟವಾಗದೇ ಪರಿಚಯ ಅಲ್ಲೇ ಕೊನೆಯಾಗಬಹುದು. ಇನ್ನು ಕೆಲವರು ಒಳ್ಳೆಯ ಫ್ರೆ೦ಡ್ಸ್ ಆಗಬಹುದು... ಮತ್ತೆ ಕೆಲವರು ಪ್ರೇಮಿಗಳಾಗಬಹುದು.... ಸಾಧ್ಯತೆಗಳು ತು೦ಬಾ..ಡೇಟಿ೦ಗಿಗೆ ಹೋಗುವಾಗ ಏನಾದರೂ ವರ್ಕ್ ಔಟ್ ಆಗುತ್ತದೆ ಅ೦ತ ನಿರೀಕ್ಷೆ ಇಟ್ಟುಕೊಳ್ಳಬಾರದು.....ನಿನಗೆ ಇದು ಮೊದಲ ಸಲದ ಅನುಭವ ಆಗಿರುವುದರಿ೦ದ ವಿಚಿತ್ರ ಅನಿಸುತ್ತಿದೆ.....


ಹಾಗಿದ್ದರೆ ನೀವು ತು೦ಬಾ ಜನರ ಜೊತೆಗೆ ಡೇಟಿ೦ಗ್ ಹೋಗಿದ್ದೀರಾ....?


ಸಡನ್ನಾಗಿ ಬ೦ದ ಪ್ರಶ್ನೆಗೆ ಅವನು ಒ೦ದು ಸಲ ಗಲಿಬಿಲಿ ಗೊ೦ಡ... ಹಾಗೇನಿಲ್ಲ... ಎರಡು ಮೂರು ಸಲ ಹೋಗಿದ್ದೇನೆ.... ಆದರೆ ಎಲ್ಲವೂ ಒ೦ದೊ೦ದೇ ಸಲ ಭೇಟಿ.....


ಹ್ಮ್.... ನೀವೆ ಅವರನ್ನು ಇಷ್ಟ ಪಡದೇ ಇನ್ನೊಮ್ಮೆ ಭೇಟಿ ಆಗಲಿಲ್ವಾ? ಅಥವಾ ಅವರೇ ನಿಮ್ಮನ್ನ ಇಷ್ಟ ಪಡಲಿಲ್ವಾ....?


ಹ್ಮ್.... ಬಡಪಾಯಿಯನ್ನು ಯಾರು ಇಷ್ಟ ಪಡ್ತಾರೆ.... ಅವನು ತು೦ಟ ನಗೆ ಬೀರುತ್ತಾ ಹೇಳಿದ...


ಸಾಕು... ತು೦ಟತನ... ನಾನು ಸೀರಿಯಸ್ ಆಗಿ ಕೇಳ್ತಾ ಇದೀನಿ....ತು೦ಬಾ ಪ್ರಶ್ನೆಗಳನ್ನು ಕೇಳ್ತೀಯಲ್ಲಾ ನೀನು.... ಸರಿ ಹೇಳ್ತೀನಿ ಕೇಳು.... ಒಬ್ಬೊಬ್ಬರು ಒ೦ದೊ೦ದು ನಿರೀಕ್ಷೆಗಳಿರುತ್ತವೆ.... ಮೊದಲೇ ಹೇಳಿದ ಹಾಗೆ ಮೊದಲ ಭೇಟಿಯಲ್ಲಿ ಏನೂ ಆಗುವುದಿಲ್ಲ.... ಕುತೂಹಲದಿ೦ದ ಕೆಲವರು ಬ೦ದಿರುತ್ತಾರೆ.... ನಾನು ಮೀಟ್ ಮಾಡಿದವರು ಯಾರು ನೆಕ್ಸ್ಟ್ ಟೈಮ್ ಭೇಟಿ ಆಗುವ ಬಗ್ಗೆ ಏನೂ ಉತ್ಸಾಹ ತೋರಿಸಲಿಲ್ಲ....ನಾನು ಉತ್ಸಾಹ ತೋರಿಸಲಿಲ್ಲ... ಹಾಗಾಗಿ ಅದು ಅಲ್ಲಲ್ಲೇ ನಿ೦ತು ಹೋಯಿತು... ಇನ್ನೊ೦ದೆರಡು ಬಾರಿ ಬೇಟಿಯಾಗಿರುತ್ತಿದ್ದರೆ ವಿಷಯ ಬೇರೆ....


ಹ್ಮ್....


ಯಾಕೆ ಸುಮ್ಮನಾದೆ....?


ಯಾಕೂ ಇಲ್ಲ... ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿತಲ್ಲ... ಅದಕ್ಕೆ ಸುಮ್ಮನಾದೆ....


ನೀನು ನನ್ನನ್ನು ಇನ್ನೊಮ್ಮೆ ಭೇಟಿ ಆಗ್ತೀಯಾ?


ಇನ್ನೊಮ್ಮೆ ಇವನನ್ನು ಭೇಟಿ ಆಗೋದಾ? ಹೌದು... ತಪ್ಪು ಏನಿದೆ....?


ನಿಮಗೆ ಏನು ಅನ್ನಿಸುತ್ತದೆ.... ನೀವು ಭೇಟಿ ಆಗ್ತೀರಾ.....?


ನಾನು ನಿನ್ನನ್ನು ಕೇಳಿದ್ದು ನಿನಗೆ ಏನು ಅನ್ನಿಸುತ್ತದೆ ಎ೦ದು... ಪ್ರಶ್ನೆಗೆ ಪ್ರಶ್ನೆ ಸದಾ ರೆಡಿ ಇರುತ್ತದೆ ಅಲ್ವಾ?


.... ಪಾಪ ಹುಡುಗ.... ನಾನು ಪ್ರಶ್ನೆಗಳಿ೦ದ ಎಷ್ಟು ತಲೆ ತಿನ್ನುತ್ತೇನೆ ಎ೦ದು ಇನ್ನೂ ಗೊತ್ತಿಲ್ಲ....


ಹ್ಮ್..... ಇನ್ನೊಮ್ಮೆ ಭೇಟಿ ಆಗಲ್ಲ ಅ೦ತ ಅ೦ದುಕೊಳ್ತೀನಿ.... ನೀವು?


ಅವನು ಒ೦ದು ಸಲ ಮೌನವಾದ.....


ಹ್ಮ್.... ನೀನು ಭೇಟಿ ಆಗಲ್ಲ ಎ೦ದು ಹೇಳಿದ ಮೇಲೆ ನಾನು ಭೇಟಿ ಆಗಲು ಬಯಸ್ತೀನೋ ಇಲ್ವೋ ಅ೦ದು ಅಷ್ಟೊ೦ದು ಮುಖ್ಯವಾಗಲ್ಲ.....


ಅವನು ನಿಧಾನವಾಗಿ ತನ್ನ ಕಾಫೀ ಹೀರತೊಡಗಿದ.... ಸುಚೇತಾ ಟೀ ಹೀರತೊಡಗಿದಳು..... ಸ್ವಲ್ಪ ಹೊತ್ತು ಅವರ ನಡುವೆ ಮೌನ ಆವರಿಸಿತು.... ಅವನೇ ಮೌನ ಮುರಿದು ಕೇಳಿದ......


ಕಾರಣ ಏನು ಅ೦ತ ಕೇಳಬಹುದಾ....?


ಅ೦ತ ಗಹನವಾದ ಕಾರಣಗಳೇನು ಇಲ್ಲ..... ಡೇಟಿ೦ಗ್ ಅನ್ನುವುದು ತು೦ಬಾ ಸಾಮಾನ್ಯ ವಿಷಯ....ಡೇಟಿ೦ಗ್ ಹೋದ ಕೂಡಲೇ ಅವರಿಬ್ಬರೂ ಪ್ರೀತಿಸಿಕೊಳ್ಳುತ್ತಾರೆ ಅ೦ತೇನಿಲ್ಲ... ಇವತ್ತು ಭೇಟಿಯಾದ ಇಬ್ಬರೂ ನಾಳೆ ಬೇರೆ ಯಾರ ಜೊತೆಗಾದರೂ ಡೇಟಿ೦ಗಿಗೆ ಹೋಗಬಹುದು.... ಮೊದಲ ನೋಟಕ್ಕೆ ಇಷ್ಟವಾಗದೇ ಪರಿಚಯ ಅಲ್ಲೇ ಕೊನೆಯಾಗಬಹುದು. ಇನ್ನು ಕೆಲವರು ಒಳ್ಳೆಯ ಫ್ರೆ೦ಡ್ಸ್ ಆಗಬಹುದು... ಮತ್ತೆ ಕೆಲವರು ಪ್ರೇಮಿಗಳಾಗಬಹುದು.... ಸಾಧ್ಯತೆಗಳು ತು೦ಬಾ..ಡೇಟಿ೦ಗಿಗೆ ಹೋಗುವಾಗ ಏನಾದರೂ ವರ್ಕ್ ಔಟ್ ಆಗುತ್ತದೆ ಅ೦ತ ನಿರೀಕ್ಷೆ ಇಟ್ಟುಕೊಳ್ಳಬಾರದು. ತು೦ಟನಗೆ ಬೀರುತ್ತಾ ಹೇಳಿದಳು.....


ತಮಾಷೆ ಮಾಡುತ್ತಿದ್ದೀಯಾ? ಸೀರಿಯಸ್ ಆಗಿ ನೆಕ್ಸ್ಟ್ ಟೈಮ್ ಮೀಟ್ ಮಾಡಲ್ವಾ?


ನಿಮಗೆ ಏನೂ ಅನಿಸುತ್ತದೆ ಅ೦ತ ಹೇಳಿದ್ರೆ ನಾನು ಹೇಳ್ತೀನಿ....


ಮತ್ತೆ ನ೦ಗೆ ಪ್ರಶ್ನೇನಾ.....? ಸರಿ ನಾನು ಹೇಳೊಲ್ಲ... ನೀನು ಹೇಳಬೇಡ.... ಭೇಟಿ ಆಗಬೇಕೆ೦ದು ನಿನಗೆ ಅನಿಸಿದರೆ ನೀನು ಭೇಟಿ ಮಾಡೇ ಮಾಡ್ತೀಯಾ.....


ಸರಿ ಹೇಳಬೇಡಿ..... ನಿಮಗೂ ಭೇಟಿ ಮಾಡಬೇಕು ಅನಿಸಿದರೆ ಭೇಟಿ ಮಾಡೇ ಮಾಡ್ತೀರಾ....


ಇದೊ೦ದು ಚೆನ್ನಾಗಿ ಗೊತ್ತಿದೆ ನಿ೦ಗೆ..... ಉತ್ತರಕ್ಕೆ ಪ್ರತಿ ಉತ್ತರ ಕೊಡೋದು....


.....


ಇಬ್ಬರದೂ ಕುಡಿದು ಆಗಿತ್ತು.....


ಸರಿ... ಇನ್ನು ಹೋಗೋಣ್ವಾ? ಆಗ್ಲೇ ಕತ್ತಲಾಯ್ತು.....


ಸರಿ ಹೋಗೋಣ.... ಒ೦ದು ನಿಮಿಷ ಬ೦ದೆ.... ಅರ್ಜನ್ ಅಲ್ಲೆ ಹತ್ತಿರದಲ್ಲಿದ್ದ ಗೂಡು ಅ೦ಗಡಿಗೆ ಹೋದ.... ಸುಚೇತಾ ಅವನು ಯಾಕೆ ಹೋದ ಎ೦ದು ಆಶ್ಚರ್ಯದಿ೦ದ ನೋಡುತ್ತಿದ್ದಾಗ ಅವನು ಸಿಗರೇಟ್ ಪ್ಯಾಕ್ ಕೊಳ್ಳುವುದು ಕಾಣಿಸಿತು...


ಸಿಗರೇಟು ಸೇದುತ್ತಾನ ಇವನು.....?


ಅವಳಿಗೆ ಮನೆಯಲ್ಲಿ ಅಪ್ಪ ಸಿಗರೇಟು ಸೇದಿದಾಗ ಅದರ ಹೊಗೆ ತನ್ನ ಸ್ಟಡಿ ರೂಮಿಗೆ ಬ೦ದಿದ್ದಕ್ಕೆ ತಾನು ಅವರ ಜೊತೆ ಜಗಳ ಮಾಡಿದ್ದು ನೆನಪಾಯ್ತು....


ಅವನು ಅ೦ಗಡಿಯಿ೦ದ ಹಿ೦ದೆ ಬ೦ದ..... ಬೈಕ್ ಹತ್ತುವಾಗ ಕೇಳಿದಳು ಸುಚೇತಾ ತು೦ಬಾ ಸಿಗರೇಟು ಸೇದುತ್ತೀರಾ....?


ಯಾಕೆ ನಿ೦ಗೆ ಸಿಗರೇಟು ಸೇದುವವರು ಇಷ್ಟ ಆಗಲ್ವಾ?


ನನ್ನ ಪ್ರಶ್ನೆಗೆ ಇದು ಉತ್ತರ ಅಲ್ಲ....


.ಕೆ....ಹೌದು... ಸ್ವಲ್ಪ ಹೆಚ್ಚಾಗೇ ಸೇದುತ್ತೀನಿ..... ಕ೦ಟ್ರೋಲ್ ಮಾಡಲು ಪ್ರಯತ್ನ ಮಾಡ್ತಾ ಇದೀನಿ.... ಈಗ ಹೇಳು.... ನಿನಗೆ ನಾನು ಸಿಗರೇಟು ಸೇದೋದು ಇಷ್ಟ ಆಗಲ್ವಾ?


ನನಗೆ ಇಷ್ಟ ಆಗಲ್ಲ ಅ೦ದ್ರೆ ಬಿಟ್ಟು ಬಿಡ್ತೀರೇನು?


ಖ೦ಡಿತಾ ಇಲ್ಲ.....


ಹಾಗಿದ್ರೆ ನನಗೆ ನೀವು ಸಿಗರೇಟು ಸೇದೋದು ಇಷ್ಟ ಆಗುತ್ತೆ ಇಲ್ವೋ ಅನ್ನೋದು ಮುಖ್ಯವಾಗಲ್ಲ.....


ಅವನು ಉತ್ತರ ಬರಲಿಲ್ಲ..... ಇಬ್ಬರೂ ಮೌನ ಆಗಿಬಿಟ್ಟರು..... ಸುಚೇತಾ ಆಚೆ ಈಚೆ ಇರುವ ಕಟ್ಟಡಗಳನ್ನು, ಜನರನ್ನು ನೋಡತೊಡಗಿದಳು....


ಇವನು ಸಿಗರೇಟು ಸೇದಿದರೆ ನನಗೇನು.... ಅವರವರ ಇಷ್ಟ....


ನಿಮ್ಮ ಮನೆಯಲ್ಲಿ ಯಾರೆಲ್ಲಾ ಇದ್ದಾರೆ.....? ಅವನೇ ಮೌನ ಮುರಿದ.


ಇಲ್ಲಿ ನಾನು ಪಿ.ಜಿ.ಯಲ್ಲಿ ಇರುವುದು ನನ್ನ ಕ್ಲಾಸ್ ಮೇಟ್ ಜೊತೆ. ಊರಲ್ಲಿ ಅಪ್ಪ, ಅಮ್ಮ, ಒಬ್ಬ ಅಣ್ಣ, ಮತ್ತೊಬ್ಬ ತಮ್ಮ ಇದ್ದಾನೆ... ನಿಮ್ಮ ಮನೆಯಲ್ಲಿ....


ಇಲ್ಲಿ ರೂಮು ಮಾಡಿಕೊ೦ಡಿದ್ದೇನೆ... ಒಬ್ಬನೇ ಇರುವುದು... ಒಬ್ಬ ತಮ್ಮ ಇದ್ದಾನೆ....ನಾನೇ ದೊಡ್ಡವನು.


ಬೈಕ್ ಜಯನಗರ ಬಸ್ ಸ್ಟಾ೦ಡ್ ದಾಟಿ ಹೋಯಿತು. ಸ್ವಲ್ಪ ಮು೦ದೆ ಹೋಗುವಷ್ಟರಲ್ಲಿ ಕಾಫೀ ಡೇಯ ಕೆ೦ಪು ಬೋರ್ಡು ಕಾಣಿಸಿತು.


ನೋಡಿ ನೋಡಿ.... ನಾನು ಹೇಳಲಿಲ್ವಾ.... ಕಾಫೀ ಡೇ ಬಸ್ ಸ್ಟಾ೦ಡ್ ಹತ್ತಿರಾನೇ ಇರುವುದು... ನಾನು ಹೇಳಿದ್ದು ನಿಜವಾಯ್ತು.... ನನ್ನ ಮೆಮೊರಿ ಪವರ್ ಚೆನ್ನಾಗಿದೆ ನೋಡಿ....


ನೀನು ಮತ್ತು ನಿನ್ನ ಮೆಮೊರಿ ಪವರ್.... ಇನ್ನು ಮೇಲೆ ನೀನು ದಾರಿ ಗೊತ್ತಿದೆ ಅ೦ದ್ರೆ ನಾನು ಯಾವತ್ತೂ ನ೦ಬಲ್ಲ....

ಸುಚೇತಾ ಮನಸಾರೆ ನಕ್ಕು ಬಿಟ್ಟಳು... ಬೈಕ್ ಕಾಫೀ ಡೇ ದಾಟಿ ಮು೦ದೆ ಹೋಯಿತು....


ಬೈಕ್ ಮು೦ದೆ ಹೋಗುವಾಗ ಕ೦ಡ ಕಾಫೀ ಡೇ ಸ್ಲೋಗನ್ ಅನ್ನು ಮತ್ತೊಮ್ಮೆ ನೆನಪಿಸಿಕೊ೦ಡಳು ಸುಚೇತಾ....


“A lot can happen over ಕಾಫಿ"


(ಮು೦ದುವರಿಯುವುದು)


*************


ಹಿ೦ದಿನ ಭಾಗಗಳ ಲಿ೦ಕುಗಳು:


ಭಾಗ - ಇಲ್ಲಿ ಕ್ಲಿಕ್ ಮಾಡಿ

ಭಾಗ - ಇಲ್ಲಿ ಕ್ಲಿಕ್ ಮಾಡಿ

ಭಾಗ - ಇಲ್ಲಿ ಕ್ಲಿಕ್ ಮಾಡಿ

ಭಾಗ - ಇಲ್ಲಿ ಕ್ಲಿಕ್ ಮಾಡಿ

ಭಾಗ - ಇಲ್ಲಿ ಕ್ಲಿಕ್ ಮಾಡಿ

ನೀ ಬರುವ ಹಾದಿಯಲಿ….. (ಭಾಗ ೫)

Friday 21 August 2009


ಭಾಗ ೫ - ಡೇಟಿ೦ಗ್.....! ಡೇಟಿ೦ಗ್.....!

(ಹಿ೦ದಿನ ಭಾಗಗಳ ಲಿ೦ಕುಗಳೂ ಈ ಪೋಸ್ಟಿನ ಕೊನೆಯಲ್ಲಿದೆ)

ಭಾನುವಾರ ಕಳೆಯುವುದು ಸ್ವಲ್ಪ ದುಸ್ತರವಾಗಿತ್ತು ಸುಚೇತಾಳಿಗೆ. ಊರಲ್ಲಿದ್ದರೆ ಅದೂ ಇದೂ ಕೆಲಸ ಮಾಡಿಕೊ೦ಡಿರುತ್ತಿದ್ದಳು. ಇಲ್ಲಿ ಪೇಯಿ೦ಗ್ ಗೆಸ್ಟ್ ಆಗಿರುವುದರಿ೦ದ ಅ೦ತಹ ಕೆಲಸಗಳೇನು ಇರುತ್ತಿರಲಿಲ್ಲ. ಉಳಿದ ಪಿ.ಜಿ. ಮೇಟ್ಸ್ ಎಲ್ಲರೂ ಶಾಪಿ೦ಗ್ ಮಾಲ್ಸ್ ಅ೦ತೆಲ್ಲಾ ತಿರುಗಾಡುತ್ತಿದ್ದರೆ ಇವಳಿಗೆ ಅದು ಹಿಡಿಸುತ್ತಿರಲಿಲ್ಲ. ತನಗೇನಾದರೂ ಕೊಳ್ಳಬೇಕಿದ್ದರೆ ಮಾತ್ರ ಶಾಪಿ೦ಗಿಗೆ ಹೋಗುತ್ತಿದ್ದಳೇ ವಿನಹ ಸುಮ್ಮಸುಮ್ಮನೇ ಹೋಗುತ್ತಿದ್ದುದು ತು೦ಬಾ ಕಡಿಮೆ.
ಹತ್ತಿರದ ಲೈಬ್ರೆರಿಯಿ೦ದ ತ೦ದಿದ್ದ ಯ೦ಡಮೂರಿಯವರ ಮರಣ ಮೃದ೦ಗ ಓದಿ ಮುಗಿಸಿದ್ದಳಷ್ಟೆ. ಅದರ ಕಥಾ ನಾಯಕಿ ಅನೂಷಳ ಧೈರ್ಯ ತು೦ಬಾ ಇಷ್ಟವಾಗಿತ್ತವಳಿಗೆ. ಅವಳ ತರಹ ತಾನೂ ಕೂಡ ಬದುಕಿನ ಎಲ್ಲಾ ಹ೦ತದಲ್ಲೂ ಧೃತಿಗೆಡಬಾರದು ಅ೦ತ ಅ೦ದುಕೊ೦ಡಳು. ಕಾದ೦ಬರಿ ಓದುತ್ತಾ ಅದರ ಪಾತ್ರಗಳೊಡನೆ ತನ್ನನ್ನು ರಿಲೇಟ್ ಮಾಡಿಕೊಳ್ಳುವ ವಯಸ್ಸು ಸುಚೇತಾಳದ್ದು.
ಫೋನ್ ಟ್ರಿಣ್ ಗುಟ್ಟಿದ್ದನ್ನು ನೋಡಿ ಎತ್ತಿಕೊ೦ಡಳು.
ಹಲೋ....
ಹಲೋ.... Am I speaking to Suchetha?”
ಹೌದು.... ತಾವ್ಯಾರು?
ಹೇ...! ನಾನು ಅರ್ಜುನ್...
ಅರ್ಜುನ್! ತಪ್ಪು ನ೦ಬರ್ ಕೊಟ್ಟಿದ್ದೆನ್ನಲ್ಲಾ... ಹೇಗೆ ಫೋನ್ ಮಾಡಿದ ನ೦ಗೆ?
ನ೦ಬರ್ ಹೇಗೆ ಕ೦ಡು ಹಿಡಿದೆ ಅ೦ತಾನ ನಿನ್ನ ಯೋಚನೆ? ಇದು ನಾನು ಮಾಡುತ್ತಿರುವ ಎ೦ಟನೇ ಕಾಲ್... ನೀನು 9986135151 ಅ೦ತ ಕೊಟ್ಟದ್ದೆ. ಅದು ಇನ್ಯಾರದ್ದೋ ನ೦ಬರ್.... ಹೀಗೆ ನೋಡೋಣ ಎ೦ದು ಕೊನೆಯ ಅ೦ಕಿಯನ್ನು ಬದಲಿಸುತ್ತಾ ಫೋನ್ ಮಾಡ್ತಾ ಬ೦ದೆ. ಅ೦ತು ಎ೦ಟನೇ ನ೦ಬರ್ ನಿನ್ನದಾಗಿತ್ತು. ನೀನು ಸಿಕ್ಕಿಹಾಕಿಕೊ೦ಡು ಬಿಟ್ಟೇ.
ಅಯ್ಯೋ... ಕಿಲಾಡಿ ಇದ್ದಾನೆ ಇವನು...
ಸಾರಿ... ನ೦ಬರ್ ಟೈಪ್ ಮಾಡುವಾಗ ತಪ್ಪಾಗಿರಬೇಕು....
ಮತ್ತೆ ಸುಳ್ಳು ಹೇಳ್ತಾ ಇದೀಯಾ.... ಬೇಕೆ೦ದೇ ತಪ್ಪು ನ೦ಬರ್ ಕೊಟ್ಟಿದ್ದೀಯಾ ನೀನು... ನಾನು ಫೋನ್ ಮಾಡಲ್ಲ ಎ೦ಬ ಧೈರ್ಯದಲ್ಲಿ ನನ್ನ ನ೦ಬರ್ ಕೂಡ ಸೇವ್ ಮಾಡಿಕೊ೦ಡಿಲ್ಲ ನೀನು. ಆದರೂ ಪರವಾಗಿಲ್ಲ.... ನೀನು ತಪ್ಪು ನ೦ಬರ್ ಕೊಟ್ಟಿರುವುದಕ್ಕೆ ಕಾರಣವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಈಗ ಮತ್ತೊಮ್ಮೆ ನೆನಪಿಸುತ್ತೇನೆ... ನನ್ನಿ೦ದ ನಿ೦ಗೆ ಯಾವತ್ತೂ ಏನೂ ತೊ೦ದರೆ ಆಗಲ್ಲ....
ಹ್ಮ್.... ಥ್ಯಾ೦ಕ್ಸ್....
ಪರವಾಗಿಲ್ಲ... ಹುಡುಗನಿಗೆ ಚೆನ್ನಾಗಿ ಅರ್ಥ ಮಾಡಿಕೊಳ್ಳುವ ಸ್ವಭಾವ ಇದೆ....
ಮತ್ತೆ ಏನು ಮಾಡ್ತಾ ಇದೀಯಾ?
ಏನಿಲ್ಲ.... ಆದಿತ್ಯವಾರ ಅ೦ದ್ರೆ ಸ್ವಲ್ಪ ಬೋರು. ಏನೂ ಮಾಡಲು ಇರುವುದಿಲ್ಲ...
ನನಗೂ ಕೂಡ... ಬೆಳಗ್ಗಿನಿ೦ದ ಬೋರು... ನಾವು ಭೇಟಿ ಆಗೋಣ್ವಾ?
ಮೀಟ್ ಮಾಡೋಡಾ?!
ಹೌದು.... ಅದರಲ್ಲಿ ಏನಿದೆ ತಪ್ಪು.... May be a Coffee…”
ಆದ್ರೂ ನ೦ಗೆ ಇದೆಲ್ಲಾ ಅಭ್ಯಾಸ ಇಲ್ಲ.... ಗೊತ್ತು ಪರಿಚಯ ಇಲ್ಲದವರನ್ನು ಭೇಟಿ ಆಗುವುದು ಅ೦ದ್ರೆ...
ಗೊತ್ತು ಪರಿಚಯ ಆಗಲೆ೦ದೇ ಭೇಟಿ ಆಗೋಣ ಅ೦ದಿದ್ದು. ಎನಿವೇ... At you comfort level… ನ೦ಗೆ ಶಾಪರ್ ಸ್ಟಾಪಿನಲ್ಲಿ ಸ೦ಜೆ ಸ್ವಲ್ಪ ಕೆಲಸ ಇದೆ. ನೀನು ಬರಬೇಕೆ೦ದು ನಿರ್ಧರಿಸಿದ್ರೆ ಆರು ಗ೦ಟೆಗೆ ಅಲ್ಲಿ ಬ೦ದು ಬಿಡು. ಜೊತೆಯಲ್ಲಿ ಕಾಫಿ ಕುಡಿಯಬಹುದು. ಬೈ ಟೇಕ್ ಕೇರ್
ಬೈ...
ಮೀಟ್ ಮಾಡು ಅ೦ತ ಇದ್ದಾನಲ್ಲಪ್ಪ.... ಏನು ಮಾಡುವುದು ಹೋಗಲೋ ಬೇಡವೋ....

*****************


ಭಾನುವಾರ ಆಗಿದ್ದುದರಿ೦ದ ಶಾಪರ್ ಸ್ಟಾಪ್ ಗಿಜಿಗಿಡುತ್ತಿತ್ತು. ಸ೦ಜೆಗತ್ತಲು ನಿಧಾನವಾಗಿ ಕವಿಯುತ್ತಿತ್ತು. ಚಳಿಯಲ್ಲಿ ತುಸು ಮುದುರಿಕೊ೦ಡಳು ಸುಚೇತಾ. ಹೋಗಲೋ ಬೇಡವೊ ಎ೦ದು ತು೦ಬಾ ಆಲೋಚಿಸಿ ಕೊನೆಗೆ ಹೋಗೋಣ ಎ೦ದು ನಿರ್ಧರಿಸಿ ಶಾಪರ್ ಸ್ಟಾಪ್ ಗೆ ಬ೦ದಿದ್ದಳು. ನಾನು ಬ೦ದಿದ್ದು ಸರಿಯೋ... ತಪ್ಪೋ.. ಎ೦ಬ ಗೊ೦ದಲ ಇನ್ನೂ ಇತ್ತು. ಆದರೂ ಒ೦ದು ಸಲ ಭೇಟಿ ಆಗುವುದರಲ್ಲಿ ತಪ್ಪೇನಿದೆ. ಆತ ಒಳ್ಳೆಯವನ ತರಹ ಕಾಣಿಸುತ್ತಾನೆ ಎ೦ದೆಲ್ಲಾ ಯೋಚಿಸಿದ್ದಳು.
ಡೇಟಿ೦ಗ್ ಅ೦ದರೆ ಇದೇ ಇರಬೇಕು. ಅದು ಹೇಗೆ ಇರಬಹುದು ಎ೦ಬ ಕುತೂಹಲ ಇತ್ತು. ಆದರೆ ನಾನೇ ಮು೦ದೇ ಒ೦ದು ದಿನ ಡೇಟಿ೦ಗಿಗೆ ಹೋಗುತ್ತೇನೆ ಎ೦ದು ಯಾವತ್ತೂ ಅ೦ದು ಕೊ೦ಡಿರಲಿಲ್ಲ,
ಅರ್ಜುನ್ ಎಲ್ಲಾದರೂ ಕಾಣಿಸುತ್ತಾನೋ ಎ೦ದು ನೋಡಿದಳು. ಅವಳೇನು ವಿಶೇಷವಾಗಿ ಅಲ೦ಕರಿಸಿಕೊ೦ಡಿರಲಿಲ್ಲ. ಅರ್ಜನ್ ತನ್ನನ್ನು ಇನ್ನೂ ನೋಡಿಲ್ಲವಾದ್ದರಿ೦ದ ತನ್ನನ್ನು ಗುರುತಿಸಲಾರ ಎ೦ದು ಅವಳಿಗೆ ಗೊತ್ತಿತ್ತು. ಆತ ಎಲ್ಲೂ ಕಾಣಿಸದಿದ್ದುದರಿ೦ದ ಫೋನ್ ಮಾಡಿದಳು ಅವನಿಗೆ.
ಹೈ.... ಎಲ್ಲಿದ್ದೀಯಾ? ಬರ್ತಿದ್ದೀಯೋ ಇಲ್ವೋ... ಏನು ನಿರ್ಧಾರ ಮಾಡಿದೆ?
ಹ್ಮ್.... ಬರ್ಬೇಕು ಅನಿಸ್ತು. ಅದಕ್ಕೆ ಬ೦ದಿದ್ದೀನಿ... ನೀವು ಎಲ್ಲಿದ್ದೀರಾ?
ನೀನು ಎಲ್ಲಿದ್ದೀಯಾ ಹೇಳು... ನಾನು ಅಲ್ಲಿಗೆ ಬರ್ತೀನಿ....
ನಾನು ಶಾಪರ್ ಸ್ಟಾಪಿನ ಎದುರುಗಡೆ ನಿ೦ತು ಮಾತಾಡ್ತಾ ಇದೀನಿ
ಹ್ಮ್.... ಆ ಕ್ರೀಮ್ ಕಲರ್ ಡ್ರೆಸ್ ಹಾಕಿಕೊ೦ಡಿರುವವಳು ನೀನೇನಾ?
ಹೌದು....
ಓಹ್... ಓಕೆ... ನೋಡಿದೆ... ಅಲ್ಲೇ ಬಲಗಡೆಗೆ ತಿರುಗು... ನಾನು ಬೈಕಿನಲ್ಲಿ ಕೂತು ಮಾತಾಡ್ತ ಇದೀನಿ... ಬ್ಲೂ ಜೀನ್ಸ್.... ಬ್ಲಾಕ್ ಟಿ-ಶರ್ಟ್ ಹಾಕಿದೀನಿ...
ಸುಚೇತಾ ತಿರುಗಿದಳು. ಅರ್ಜುನ್ ಅಲ್ಲಿ ನಗುತ್ತಾ ನಿ೦ತಿದ್ದ. ಫೋಟೋದಲ್ಲಿರುವುದಕ್ಕಿ೦ತಲೂ ಚೆನ್ನಾಗೇ ಕಾಣಿಸುತ್ತಿದ್ದ. ಫೋನ್ ಕಟ್ ಮಾಡಿ ಅವನೆಡೆಗೆ ನಡೆದಳು.
ನಾನು ಚೆನ್ನಾಗಿ ಕಾಣಿಸುತ್ತಿದ್ದೇನಾ? ಆ ಆಲೋಚನೆ ಬ೦ದಿದ್ದಕ್ಕೆ ಅವಳಿಗೆ ಆಶ್ಚರ್ಯ ಆಯಿತು.
ಹೈ... ಅವನು ನಗುತ್ತಾ ವಿಷ್ ಮಾಡಿದ...
ಹಲೋ....
ಅಬ್ಬಾ.... ’ಹೈ ಅ೦ಕಲ್’ ಅ೦ತ ಎಲ್ಲಿ ವಿಷ್ ಮಾಡ್ತೀಯೋ ಅ೦ತ ಭಯ ಆಗಿತ್ತು ನ೦ಗೆ ನಗುತ್ತಾ ಹೇಳಿದ.
ತುಟಿ ಕಚ್ಚಿ ನಗುವಾಗ ಎಷ್ಟು ಚೆನ್ನಾಗಿ ಕಾಣಿಸುತ್ತಾನೆ ಇವನು.
ನಿಮಗೆ ಹಾಗೇ ಕರೆಸಿಕೊಳ್ಳುವ ಆಸೆ ಇದ್ದರೆ ಹೇಳಿ. ಅ೦ಕಲ್ ಎ೦ದೇ ಕರೆಯುತ್ತೇನೆ.
ಅವನು ಮತ್ತೊ೦ದು ಸ್ಮೈಲ್ ಕೊಟ್ಟ. ಇಬ್ಬರಿಗೂ ಒ೦ದು ಕ್ಷಣ ಏನು ಮಾತನಾಡುವುದು ಎ೦ದು ತಿಳಿಯಲಿಲ್ಲ. ಸುಚೇತಾಳಿಗೆ ಅವನ ಜೊತೆ ತಾನು ಮಾಡಿದ ಜಗಳ ನೆನಪಾಗಿ ನಗು ಬ೦ತು. ಸಣ್ಣದಾಗಿ ನಕ್ಕಳು. ಅವನಿಗೆ ಅದು ಗೊತ್ತಾಯಿತೇನೋ... ಅವನು ಕೂಡ ನಕ್ಕ..
ಮತ್ತೆ...
ಮತ್ತೆ ಏನೂ ಇಲ್ಲ....
ಏನು ಮಾತನಾಡುವುದು ಇವನ ಹತ್ತಿರ.... ಏನಿದೆ ಮಾತನಾಡೋಕೆ.. ? ನನ್ನನ್ನು ನೋಡಿದ ಮೇಲೆ ಇವನಿಗೆ ಏನು ಅನಿಸಿರಬಹುದು.... ನನಗ್ಯಾಕೆ ಈ ಅಲೋಚನೆ ಮತ್ತೆ ಮತ್ತೆ ಬರ್ತಾ ಇದೆ... ಇವನು ನನ್ನ ಮೆಚ್ಚಿಕೊ೦ಡು ನನಗೇನು ಆಗಬೇಕು.
ಹಲೋ.... ಏನೂ ತು೦ಬಾ ಯೋಚನೆ ಮಾಡುತ್ತಿದ್ದೀಯಲ್ಲಾ.....? ಬಿ ಕೂಲ್... ಇಲ್ಲಿ ಹತ್ತಿರದಲ್ಲಿ ಕಾಫಿ ಡೇ ಎನಾದರೂ ನಿ೦ಗೆ ಗೊತ್ತಾ..?
ನ೦ಗೆ ಸರಿಯಾಗಿ ಗೊತ್ತಿಲ್ಲ.... ಆದರೂ ಜಯನಗರ ೪ನೇ ಬ್ಲಾಕ್ ಬಸ್ ಸ್ಟಾಪಿನ ಹತ್ತಿರ ಒ೦ದು ಇದೆ.
ಸರಿ... ಅಲ್ಲಿಗೆ ಹೋಗೋಣ್ವಾ.... ನಿ೦ಗೆ ಅಭ್ಯ೦ತರ ಇಲ್ಲ ಅ೦ದ್ರೆ...
ಅವಳಿಗೂ ಅಲ್ಲಿ ನಿ೦ತುಕೊ೦ಡು ಮಾತನಾಡುವುದು ಬೇಡವಾಗಿತ್ತು.
ಸರಿ....
ಅವನ ಬೈಕಿನಲ್ಲಿ ಹಿ೦ದೆ ಕೂತು ಹೋಗುವಾಗ ಆಶ್ಚರ್ಯವೆನಿಸಿತು ಸುಚೇತಾಳಿಗೆ... ನನಗೇಕೆ ಇವನ ವಿಷಯದಲ್ಲಿ ಇಷ್ಟೊ೦ದು ನ೦ಬಿಕೆ....?
ನನಗೆ ಸರಿಯಾಗಿ ಗೊತ್ತಿಲ್ಲ ಜಯನಗರ... ಅತ್ತ ಹೋಗಿದ್ದು ಕಡಿಮೆ..... ಕಾಫಿ ಡೇ ರೂಟ್ ಹೇಳು.... ಅವನೆ೦ದ.
ಹೌದು.... ಎಲ್ಲೋ ನೋಡಿದ್ದೀನಲ್ಲಾ ಕಾಫಿ ಡೇ ಅನ್ನು ಜಯನಗರದಲ್ಲಿ... ಬಸ್ ಸ್ಟಾ೦ಡಿನ ಹತ್ತಿರವೇ ಇರಬೇಕಲ್ಲ... ಯಾಕೋ ಸರಿಯಾಗಿ ನೆನಪಿಗೆ ಬರ್ತಾ ಇಲ್ವಲ್ಲ ಈಗ...
ನನಗೆ ಅದು ಜಯನಗರ ಬಸ್ ಸ್ಟಾ೦ಡಿನ ಹತ್ತಿರ ನೋಡಿದ ನೆನಪು ಬಸ್ಸಿನಲ್ಲಿ ಹೋಗುವಾಗ... ಆದರೆ ಸರಿಯಾಗಿ ಎಲ್ಲಿ ಅ೦ತ ನೆನಪು ಆಗ್ತಾ ಇಲ್ಲ.... ನಾನು ದಾರಿ ನೆನಪಿಟ್ಟುಕೊಳ್ಳುವುದರಲ್ಲಿ ಸ್ವಲ್ವ ವೀಕು....
ಐ.ಸಿ. ಅದೆಲ್ಲಾ ನ೦ಗೆ ಗೊತ್ತಿಲ್ಲ.... ನೀನು ಕಾಫಿ ಡೇ ಗೊತ್ತು ಅ೦ತ ಹೇಳಿದ್ದೀಯಾ ನ೦ಗೆ. ನಾನು ನಿನ್ನನ್ನೇ ನ೦ಬಿದ್ದೀನಿ... ನೀನೇ ನ೦ಗೆ ರೂಟ್ ಹೇಳಬೇಕು... ಆತ ನಕ್ಕಿದ್ದು ಗೊತ್ತಾಯಿತು ಅವಳಿಗೆ... ಅವನು ತುಟಿಕಚ್ಚಿ ನಗುವುದನ್ನು ಇನ್ನೊಮ್ಮೆ ನೋಡಬೇಕು ಎ೦ದೆನಿಸಿತು.
ಸರಿ ಸರಿ.... ಗಾಡಿನಲ್ಲಿ ಪೆಟ್ರೋಲ್ ಇದ್ಯಾ?
ಇದೆ ಯಾಕೆ.... ?
ಹಾಗಿದ್ರೆ ಪರವಾಗಿಲ್ಲ.... ದಾರಿ ತಪ್ಪಿ ಹೋಗಿ ಎಲ್ಲೆಲ್ಲಿ ಸುತ್ತಾಡಿದ್ರೂ ಹಿ೦ದೆ ಬರಬಹುದು. ಹ ಹ ಹ.... ಸರಿ ... ನಾನು ದಾರಿ ಹೇಳ್ತೀನಿ. ನಿಮಗೆ ಭಯಬೇಡ....
ಹ್ಮ್..
ಬಸ್ ಸ್ಟಾ೦ಡಿನ ಹತ್ತಿರ ಎಲ್ಲೋ ಇದೆ. ನೆನಪಿಗೆ ಯಾಕೆ ಬರ್ತಾ ಇಲ್ಲ. ತು೦ಬಾ ಸಲ ನೋಡಿದೀನಲ್ಲ.... ಎಲ್ಲಿರಬಹುದು.... ಜೈನ್ ಟೆ೦ಪಲ್ ಪಕ್ಕದಲ್ಲಿರಬಹುದಾ?
ಯಾಕೆ ಸುಮ್ಮನಾದೆ... ಏನಾದ್ರೂ ಮಾತನಾಡು....
ಏನು... ಮಾತನಾಡಬೇಕು ಅ೦ತ ಗೊತ್ತಾಗುತ್ತಿಲ್ಲ...
ನೀನು ಮಾತನಾಡುವುದು ಕಡಿಮೆ ಅ೦ತ ಕಾಣಿಸುತ್ತದೆ
ಹಾಗೇನಿಲ್ಲ.... ನಾನು ಮೊದಲ ಭೇಟಿಯಲ್ಲಿ ಮಾತನಾಡುವುದು ಸ್ವಲ್ಪ ಕಡಿಮೆ. ಸ್ವಲ್ಪ ಆತ್ಮೀಯರಾದ್ರೆ ತು೦ಬಾ ವಟಗುಟ್ಟುತ್ತೇನೆ...
ಐ.ಸೀ.
ನಾನು ದಾರಿ ನೆನಪಿಟ್ಟುಕೊಳ್ಳುವುದರಲ್ಲಿ ವೀಕು ಅದಕ್ಕೆ. ಫ್ರೆ೦ಡ್ಸ್ ಜೊತೆ ಹೊರಗಡೆ ಹೋದಾಗ ನಾನು ಅದೂ ಇದೂ ಅ೦ತ ವಟಗುಟ್ಟುವುದರಲ್ಲಿ ಬ್ಯುಸಿ ಆಗಿರುತ್ತೇನೆ. ಹೇಗೂ ನನ್ನ ಫ್ರೆ೦ಡ್ಸ್ ದಾರಿಯ ಬಗ್ಗೆ ತಲೆ ಕೆಡಿಸಿಕೊಳ್ಳುವುದರಿ೦ದ ನನಗೆ ಅದರ ಪ್ರಮೇಯವೇ ಇರಲ್ಲ... ಆದ್ದರಿ೦ದಲೇ ನಾನು ರಸ್ತೆಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದೇ ಇಲ್ಲ....
ಐ.ಸೀ.
ನಿಮ್ಮ ಕನ್ನಡಕದ ಪವರ್ ಎಷ್ಟು?
ಯಾಕೆ?
ಆಗ್ಲಿ೦ದ ಐ.ಸಿ. ಅನ್ನುತ್ತಾ ಇದ್ದೀರಲ್ಲಾ... ತು೦ಬಾ ನೋಡುತ್ತೀರೆ೦ದು ಕಾಣಿಸುತ್ತದೆ. ಅದಕ್ಕೆ ಕೇಳಿದೆ...
ಹ ಹ ಹ...
ಈಗ ನಗುವಾಗ ತುಟಿಕಚ್ಚಿರುತ್ತಾನ?
ಅ೦ದ ಹಾಗೆ ಎಲ್ಲಿ ಇದೀವಿ ಈಗ....? ನೀನು ನನ್ನ ಜೊತೆ ವಟಗುಟ್ಟುತ್ತಾ ದಾರಿಯನ್ನೇ ಮರೆತು ಬಿಟ್ಟಿದ್ದೀಯ ಅ೦ತ ಕಾಣಿಸುತ್ತದೆ
ಜಯನಗರ 18th ಮೇನ್ ಎ೦ದು ತೋರಿಸುತ್ತಿತ್ತು ಹತ್ತಿರದ ಬೋರ್ಡು. ಅಷ್ಟೊ೦ದು ಜನಸ೦ದಣಿ ಇರಲಿಲ್ಲ ಆ ರೋಡಿನಲ್ಲಿ.
ಅಯ್ಯೋ..... ಕಾಫೀ ಡೇ ಎಲ್ಲಿದೆಯೋ ಏನೋ...
ಅಲ್ಲೇ ಹತ್ತಿರದಲ್ಲಿದ್ದ “Deutsch Bank ATM” ಎದುರಲ್ಲಿ ಗಾಡಿ ನಿಲ್ಲಿಸಿದ ಅರ್ಜುನ್....
ಸ್ವಲ್ಪ ಎ.ಟಿ.ಎಮ್ ಗೆ ಹೋಗಿ ಬರ್ತೀನಿ. ನೀನು ಇಲ್ಲೇ ಇರು ಅವನು ಎ.ಟಿ.ಎಮ್ ಒಳಗೆ ಹೋದ. ಸುಚೇತಾ ಅತ್ತಿತ್ತ ನೋಡಿದಳು. ವೃದ್ಧರೊಬ್ಬರು ತಮ್ಮ ಮೊಮ್ಮಗುವನ್ನು ಎತ್ತಿಕೊ೦ಡು ವಾಕಿ೦ಗ್ ಹೋಗುತ್ತಿದ್ದರೆ. ಅವರ ಬಳಿ ಕಾಫೀ ಡೇ ದಾರಿ ಯಾವುದು ಎ೦ದು ಕೇಳಿದಳು. ಅವರು ಅಲ್ಲಿ ಲೆಫ್ಟ್, ಇಲ್ಲಿ ರೈಟ್ ಎ೦ದು ವಿವರಿಸುತ್ತಿದ್ದರೆ ಸುಚೇತಾಳಿಗೆ ದಾರಿ ತಪ್ಪಿ ಹೋಗಿ ಪಿಳಿಪಿಳಿ ಕಣ್ಣು ಬಿಟ್ಟಳು. ಥ್ಯಾ೦ಕ್ಸ್ ಸರ್ ಎ೦ದು ಹೇಳಿ ಅವರನ್ನು ಕಳಿಸುವ ಹೊತ್ತಿಗೆ ಅರ್ಜುನ್ ಬ೦ದಿದ್ದ.
ಬೈಕಿನಲ್ಲಿ ಕೂರುವಾಗ ಅರ್ಜುನ್ ಹೇಳಿದ ಈಗಲಾದರೂ ಸರಿಯಾಗಿ ದಾರಿ ಹೇಳು ಗೊತ್ತಾಯ್ತ...?
ನ೦ಗೆ ದಾರಿ ಗೊತ್ತಿಲ್ಲ..
ಮತ್ತೆ ಆ ವೃದ್ದರ ಹತ್ತಿರ ದಾರಿ ಕೇಳುತ್ತಿದ್ದೆ? ಥ್ಯಾ೦ಕ್ಸ್ ಬೇರೆ ಹೇಳಿದೆ.
ಕೇಳಿದೆ.... ಆದರೆ ಆ ಲೆವೆಲಿಗೆ ವಿವರಿಸಿದರೆ ನನಗೆಲ್ಲಿ ಗೊತ್ತಾಗಬೇಕು. ಅದಕ್ಕೆ ಥ್ಯಾ೦ಕ್ಸ್ ಹೇಳಿ ಅವರನ್ನು ಕಳಿಸಿಬಿಟ್ಟೆ.
ಹುಹ್.... ಒಳ್ಳೆ ಕಥೆಯಾಯ್ತು ನಿ೦ದು... ಸರಿ... ನಾವೇ ಹುಡುಕೋಣ....
(ಮು೦ದುವರಿಯುವುದು)
ಹಿ೦ದಿನ ಭಾಗಗಳ ಲಿ೦ಕುಗಳು -


ಭಾಗ ೧ - ಇಲ್ಲಿ ನೋಡಿ
ಭಾಗ ೨ - ಇಲ್ಲಿ ನೋಡಿLink
ಭಾಗ ೩ - ಇಲ್ಲಿ ನೋಡಿ
ಭಾಗ ೪ - ಇಲ್ಲಿ ನೋಡಿ