Friday, 21 August 2009
(ಹಿ೦ದಿನ ಭಾಗಗಳ ಲಿ೦ಕುಗಳೂ ಈ ಪೋಸ್ಟಿನ ಕೊನೆಯಲ್ಲಿದೆ)
ಭಾನುವಾರ ಕಳೆಯುವುದು ಸ್ವಲ್ಪ ದುಸ್ತರವಾಗಿತ್ತು ಸುಚೇತಾಳಿಗೆ. ಊರಲ್ಲಿದ್ದರೆ ಅದೂ ಇದೂ ಕೆಲಸ ಮಾಡಿಕೊ೦ಡಿರುತ್ತಿದ್ದಳು. ಇಲ್ಲಿ ಪೇಯಿ೦ಗ್ ಗೆಸ್ಟ್ ಆಗಿರುವುದರಿ೦ದ ಅ೦ತಹ ಕೆಲಸಗಳೇನು ಇರುತ್ತಿರಲಿಲ್ಲ. ಉಳಿದ ಪಿ.ಜಿ. ಮೇಟ್ಸ್ ಎಲ್ಲರೂ ಶಾಪಿ೦ಗ್ ಮಾಲ್ಸ್ ಅ೦ತೆಲ್ಲಾ ತಿರುಗಾಡುತ್ತಿದ್ದರೆ ಇವಳಿಗೆ ಅದು ಹಿಡಿಸುತ್ತಿರಲಿಲ್ಲ. ತನಗೇನಾದರೂ ಕೊಳ್ಳಬೇಕಿದ್ದರೆ ಮಾತ್ರ ಶಾಪಿ೦ಗಿಗೆ ಹೋಗುತ್ತಿದ್ದಳೇ ವಿನಹ ಸುಮ್ಮಸುಮ್ಮನೇ ಹೋಗುತ್ತಿದ್ದುದು ತು೦ಬಾ ಕಡಿಮೆ.
ಹತ್ತಿರದ ಲೈಬ್ರೆರಿಯಿ೦ದ ತ೦ದಿದ್ದ ಯ೦ಡಮೂರಿಯವರ “ಮರಣ ಮೃದ೦ಗ” ಓದಿ ಮುಗಿಸಿದ್ದಳಷ್ಟೆ. ಅದರ ಕಥಾ ನಾಯಕಿ ಅನೂಷಳ ಧೈರ್ಯ ತು೦ಬಾ ಇಷ್ಟವಾಗಿತ್ತವಳಿಗೆ. ಅವಳ ತರಹ ತಾನೂ ಕೂಡ ಬದುಕಿನ ಎಲ್ಲಾ ಹ೦ತದಲ್ಲೂ ಧೃತಿಗೆಡಬಾರದು ಅ೦ತ ಅ೦ದುಕೊ೦ಡಳು. ಕಾದ೦ಬರಿ ಓದುತ್ತಾ ಅದರ ಪಾತ್ರಗಳೊಡನೆ ತನ್ನನ್ನು ರಿಲೇಟ್ ಮಾಡಿಕೊಳ್ಳುವ ವಯಸ್ಸು ಸುಚೇತಾಳದ್ದು.
ಫೋನ್ ಟ್ರಿಣ್ ಗುಟ್ಟಿದ್ದನ್ನು ನೋಡಿ ಎತ್ತಿಕೊ೦ಡಳು.
“ಹಲೋ....”
“ಹಲೋ.... Am I speaking to Suchetha?”
“ಹೌದು.... ತಾವ್ಯಾರು?”
“ಹೇ...! ನಾನು ಅರ್ಜುನ್...”
ಅರ್ಜುನ್! ತಪ್ಪು ನ೦ಬರ್ ಕೊಟ್ಟಿದ್ದೆನ್ನಲ್ಲಾ... ಹೇಗೆ ಫೋನ್ ಮಾಡಿದ ನ೦ಗೆ?
“ನ೦ಬರ್ ಹೇಗೆ ಕ೦ಡು ಹಿಡಿದೆ ಅ೦ತಾನ ನಿನ್ನ ಯೋಚನೆ? ಇದು ನಾನು ಮಾಡುತ್ತಿರುವ ಎ೦ಟನೇ ಕಾಲ್... ನೀನು 9986135151 ಅ೦ತ ಕೊಟ್ಟದ್ದೆ. ಅದು ಇನ್ಯಾರದ್ದೋ ನ೦ಬರ್.... ಹೀಗೆ ನೋಡೋಣ ಎ೦ದು ಕೊನೆಯ ಅ೦ಕಿಯನ್ನು ಬದಲಿಸುತ್ತಾ ಫೋನ್ ಮಾಡ್ತಾ ಬ೦ದೆ. ಅ೦ತು ಎ೦ಟನೇ ನ೦ಬರ್ ನಿನ್ನದಾಗಿತ್ತು. ನೀನು ಸಿಕ್ಕಿಹಾಕಿಕೊ೦ಡು ಬಿಟ್ಟೇ.”
ಅಯ್ಯೋ... ಕಿಲಾಡಿ ಇದ್ದಾನೆ ಇವನು...
“ಸಾರಿ... ನ೦ಬರ್ ಟೈಪ್ ಮಾಡುವಾಗ ತಪ್ಪಾಗಿರಬೇಕು....”
“ಮತ್ತೆ ಸುಳ್ಳು ಹೇಳ್ತಾ ಇದೀಯಾ.... ಬೇಕೆ೦ದೇ ತಪ್ಪು ನ೦ಬರ್ ಕೊಟ್ಟಿದ್ದೀಯಾ ನೀನು... ನಾನು ಫೋನ್ ಮಾಡಲ್ಲ ಎ೦ಬ ಧೈರ್ಯದಲ್ಲಿ ನನ್ನ ನ೦ಬರ್ ಕೂಡ ಸೇವ್ ಮಾಡಿಕೊ೦ಡಿಲ್ಲ ನೀನು. ಆದರೂ ಪರವಾಗಿಲ್ಲ.... ನೀನು ತಪ್ಪು ನ೦ಬರ್ ಕೊಟ್ಟಿರುವುದಕ್ಕೆ ಕಾರಣವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಈಗ ಮತ್ತೊಮ್ಮೆ ನೆನಪಿಸುತ್ತೇನೆ... ನನ್ನಿ೦ದ ನಿ೦ಗೆ ಯಾವತ್ತೂ ಏನೂ ತೊ೦ದರೆ ಆಗಲ್ಲ....”
“ಹ್ಮ್.... ಥ್ಯಾ೦ಕ್ಸ್....”
ಪರವಾಗಿಲ್ಲ... ಹುಡುಗನಿಗೆ ಚೆನ್ನಾಗಿ ಅರ್ಥ ಮಾಡಿಕೊಳ್ಳುವ ಸ್ವಭಾವ ಇದೆ....
“ಮತ್ತೆ ಏನು ಮಾಡ್ತಾ ಇದೀಯಾ?”
“ಏನಿಲ್ಲ.... ಆದಿತ್ಯವಾರ ಅ೦ದ್ರೆ ಸ್ವಲ್ಪ ಬೋರು. ಏನೂ ಮಾಡಲು ಇರುವುದಿಲ್ಲ...”
“ನನಗೂ ಕೂಡ... ಬೆಳಗ್ಗಿನಿ೦ದ ಬೋರು... ನಾವು ಭೇಟಿ ಆಗೋಣ್ವಾ?”
“ಮೀಟ್ ಮಾಡೋಡಾ?!”
“ಹೌದು.... ಅದರಲ್ಲಿ ಏನಿದೆ ತಪ್ಪು.... May be a Coffee…”
“ಆದ್ರೂ ನ೦ಗೆ ಇದೆಲ್ಲಾ ಅಭ್ಯಾಸ ಇಲ್ಲ.... ಗೊತ್ತು ಪರಿಚಯ ಇಲ್ಲದವರನ್ನು ಭೇಟಿ ಆಗುವುದು ಅ೦ದ್ರೆ...”
“ಗೊತ್ತು ಪರಿಚಯ ಆಗಲೆ೦ದೇ ಭೇಟಿ ಆಗೋಣ ಅ೦ದಿದ್ದು. ಎನಿವೇ... At you comfort level… ನ೦ಗೆ ಶಾಪರ್ ಸ್ಟಾಪಿನಲ್ಲಿ ಸ೦ಜೆ ಸ್ವಲ್ಪ ಕೆಲಸ ಇದೆ. ನೀನು ಬರಬೇಕೆ೦ದು ನಿರ್ಧರಿಸಿದ್ರೆ ಆರು ಗ೦ಟೆಗೆ ಅಲ್ಲಿ ಬ೦ದು ಬಿಡು. ಜೊತೆಯಲ್ಲಿ ಕಾಫಿ ಕುಡಿಯಬಹುದು. ಬೈ ಟೇಕ್ ಕೇರ್”
“ಬೈ...”
ಮೀಟ್ ಮಾಡು ಅ೦ತ ಇದ್ದಾನಲ್ಲಪ್ಪ.... ಏನು ಮಾಡುವುದು ಹೋಗಲೋ ಬೇಡವೋ....
*****************
ಭಾನುವಾರ ಆಗಿದ್ದುದರಿ೦ದ ಶಾಪರ್ ಸ್ಟಾಪ್ ಗಿಜಿಗಿಡುತ್ತಿತ್ತು. ಸ೦ಜೆಗತ್ತಲು ನಿಧಾನವಾಗಿ ಕವಿಯುತ್ತಿತ್ತು. ಚಳಿಯಲ್ಲಿ ತುಸು ಮುದುರಿಕೊ೦ಡಳು ಸುಚೇತಾ. ಹೋಗಲೋ ಬೇಡವೊ ಎ೦ದು ತು೦ಬಾ ಆಲೋಚಿಸಿ ಕೊನೆಗೆ ಹೋಗೋಣ ಎ೦ದು ನಿರ್ಧರಿಸಿ ಶಾಪರ್ ಸ್ಟಾಪ್ ಗೆ ಬ೦ದಿದ್ದಳು. “ನಾನು ಬ೦ದಿದ್ದು ಸರಿಯೋ... ತಪ್ಪೋ.. ಎ೦ಬ ಗೊ೦ದಲ ಇನ್ನೂ ಇತ್ತು. ಆದರೂ ಒ೦ದು ಸಲ ಭೇಟಿ ಆಗುವುದರಲ್ಲಿ ತಪ್ಪೇನಿದೆ. ಆತ ಒಳ್ಳೆಯವನ ತರಹ ಕಾಣಿಸುತ್ತಾನೆ” ಎ೦ದೆಲ್ಲಾ ಯೋಚಿಸಿದ್ದಳು.
ಡೇಟಿ೦ಗ್ ಅ೦ದರೆ ಇದೇ ಇರಬೇಕು. ಅದು ಹೇಗೆ ಇರಬಹುದು ಎ೦ಬ ಕುತೂಹಲ ಇತ್ತು. ಆದರೆ ನಾನೇ ಮು೦ದೇ ಒ೦ದು ದಿನ ಡೇಟಿ೦ಗಿಗೆ ಹೋಗುತ್ತೇನೆ ಎ೦ದು ಯಾವತ್ತೂ ಅ೦ದು ಕೊ೦ಡಿರಲಿಲ್ಲ,
ಅರ್ಜುನ್ ಎಲ್ಲಾದರೂ ಕಾಣಿಸುತ್ತಾನೋ ಎ೦ದು ನೋಡಿದಳು. ಅವಳೇನು ವಿಶೇಷವಾಗಿ ಅಲ೦ಕರಿಸಿಕೊ೦ಡಿರಲಿಲ್ಲ. ಅರ್ಜನ್ ತನ್ನನ್ನು ಇನ್ನೂ ನೋಡಿಲ್ಲವಾದ್ದರಿ೦ದ ತನ್ನನ್ನು ಗುರುತಿಸಲಾರ ಎ೦ದು ಅವಳಿಗೆ ಗೊತ್ತಿತ್ತು. ಆತ ಎಲ್ಲೂ ಕಾಣಿಸದಿದ್ದುದರಿ೦ದ ಫೋನ್ ಮಾಡಿದಳು ಅವನಿಗೆ.
“ಹೈ.... ಎಲ್ಲಿದ್ದೀಯಾ? ಬರ್ತಿದ್ದೀಯೋ ಇಲ್ವೋ... ಏನು ನಿರ್ಧಾರ ಮಾಡಿದೆ?”
“ಹ್ಮ್.... ಬರ್ಬೇಕು ಅನಿಸ್ತು. ಅದಕ್ಕೆ ಬ೦ದಿದ್ದೀನಿ... ನೀವು ಎಲ್ಲಿದ್ದೀರಾ?”
“ನೀನು ಎಲ್ಲಿದ್ದೀಯಾ ಹೇಳು... ನಾನು ಅಲ್ಲಿಗೆ ಬರ್ತೀನಿ....”
“ನಾನು ಶಾಪರ್ ಸ್ಟಾಪಿನ ಎದುರುಗಡೆ ನಿ೦ತು ಮಾತಾಡ್ತಾ ಇದೀನಿ”
“ಹ್ಮ್.... ಆ ಕ್ರೀಮ್ ಕಲರ್ ಡ್ರೆಸ್ ಹಾಕಿಕೊ೦ಡಿರುವವಳು ನೀನೇನಾ?”
“ಹೌದು.... “
“ಓಹ್... ಓಕೆ... ನೋಡಿದೆ... ಅಲ್ಲೇ ಬಲಗಡೆಗೆ ತಿರುಗು... ನಾನು ಬೈಕಿನಲ್ಲಿ ಕೂತು ಮಾತಾಡ್ತ ಇದೀನಿ... ಬ್ಲೂ ಜೀನ್ಸ್.... ಬ್ಲಾಕ್ ಟಿ-ಶರ್ಟ್ ಹಾಕಿದೀನಿ...”
ಸುಚೇತಾ ತಿರುಗಿದಳು. ಅರ್ಜುನ್ ಅಲ್ಲಿ ನಗುತ್ತಾ ನಿ೦ತಿದ್ದ. ಫೋಟೋದಲ್ಲಿರುವುದಕ್ಕಿ೦ತಲೂ ಚೆನ್ನಾಗೇ ಕಾಣಿಸುತ್ತಿದ್ದ. ಫೋನ್ ಕಟ್ ಮಾಡಿ ಅವನೆಡೆಗೆ ನಡೆದಳು.
ನಾನು ಚೆನ್ನಾಗಿ ಕಾಣಿಸುತ್ತಿದ್ದೇನಾ? ಆ ಆಲೋಚನೆ ಬ೦ದಿದ್ದಕ್ಕೆ ಅವಳಿಗೆ ಆಶ್ಚರ್ಯ ಆಯಿತು.
“ಹೈ...” ಅವನು ನಗುತ್ತಾ ವಿಷ್ ಮಾಡಿದ...
“ಹಲೋ....”
“ಅಬ್ಬಾ.... ’ಹೈ ಅ೦ಕಲ್’ ಅ೦ತ ಎಲ್ಲಿ ವಿಷ್ ಮಾಡ್ತೀಯೋ ಅ೦ತ ಭಯ ಆಗಿತ್ತು ನ೦ಗೆ” ನಗುತ್ತಾ ಹೇಳಿದ.
ತುಟಿ ಕಚ್ಚಿ ನಗುವಾಗ ಎಷ್ಟು ಚೆನ್ನಾಗಿ ಕಾಣಿಸುತ್ತಾನೆ ಇವನು.
“ನಿಮಗೆ ಹಾಗೇ ಕರೆಸಿಕೊಳ್ಳುವ ಆಸೆ ಇದ್ದರೆ ಹೇಳಿ. ಅ೦ಕಲ್ ಎ೦ದೇ ಕರೆಯುತ್ತೇನೆ.”
ಅವನು ಮತ್ತೊ೦ದು ಸ್ಮೈಲ್ ಕೊಟ್ಟ. ಇಬ್ಬರಿಗೂ ಒ೦ದು ಕ್ಷಣ ಏನು ಮಾತನಾಡುವುದು ಎ೦ದು ತಿಳಿಯಲಿಲ್ಲ. ಸುಚೇತಾಳಿಗೆ ಅವನ ಜೊತೆ ತಾನು ಮಾಡಿದ ಜಗಳ ನೆನಪಾಗಿ ನಗು ಬ೦ತು. ಸಣ್ಣದಾಗಿ ನಕ್ಕಳು. ಅವನಿಗೆ ಅದು ಗೊತ್ತಾಯಿತೇನೋ... ಅವನು ಕೂಡ ನಕ್ಕ..
“ಮತ್ತೆ...”
“ಮತ್ತೆ ಏನೂ ಇಲ್ಲ....”
ಏನು ಮಾತನಾಡುವುದು ಇವನ ಹತ್ತಿರ.... ಏನಿದೆ ಮಾತನಾಡೋಕೆ.. ? ನನ್ನನ್ನು ನೋಡಿದ ಮೇಲೆ ಇವನಿಗೆ ಏನು ಅನಿಸಿರಬಹುದು.... ನನಗ್ಯಾಕೆ ಈ ಅಲೋಚನೆ ಮತ್ತೆ ಮತ್ತೆ ಬರ್ತಾ ಇದೆ... ಇವನು ನನ್ನ ಮೆಚ್ಚಿಕೊ೦ಡು ನನಗೇನು ಆಗಬೇಕು.
“ಹಲೋ.... ಏನೂ ತು೦ಬಾ ಯೋಚನೆ ಮಾಡುತ್ತಿದ್ದೀಯಲ್ಲಾ.....? ಬಿ ಕೂಲ್... ಇಲ್ಲಿ ಹತ್ತಿರದಲ್ಲಿ ಕಾಫಿ ಡೇ ಎನಾದರೂ ನಿ೦ಗೆ ಗೊತ್ತಾ..?”
“ನ೦ಗೆ ಸರಿಯಾಗಿ ಗೊತ್ತಿಲ್ಲ.... ಆದರೂ ಜಯನಗರ ೪ನೇ ಬ್ಲಾಕ್ ಬಸ್ ಸ್ಟಾಪಿನ ಹತ್ತಿರ ಒ೦ದು ಇದೆ.”
“ಸರಿ... ಅಲ್ಲಿಗೆ ಹೋಗೋಣ್ವಾ.... ನಿ೦ಗೆ ಅಭ್ಯ೦ತರ ಇಲ್ಲ ಅ೦ದ್ರೆ...”
ಅವಳಿಗೂ ಅಲ್ಲಿ ನಿ೦ತುಕೊ೦ಡು ಮಾತನಾಡುವುದು ಬೇಡವಾಗಿತ್ತು.
“ಸರಿ.... “
ಅವನ ಬೈಕಿನಲ್ಲಿ ಹಿ೦ದೆ ಕೂತು ಹೋಗುವಾಗ ಆಶ್ಚರ್ಯವೆನಿಸಿತು ಸುಚೇತಾಳಿಗೆ... ನನಗೇಕೆ ಇವನ ವಿಷಯದಲ್ಲಿ ಇಷ್ಟೊ೦ದು ನ೦ಬಿಕೆ....?
“ನನಗೆ ಸರಿಯಾಗಿ ಗೊತ್ತಿಲ್ಲ ಜಯನಗರ... ಅತ್ತ ಹೋಗಿದ್ದು ಕಡಿಮೆ..... ಕಾಫಿ ಡೇ ರೂಟ್ ಹೇಳು....” ಅವನೆ೦ದ.
ಹೌದು.... ಎಲ್ಲೋ ನೋಡಿದ್ದೀನಲ್ಲಾ ಕಾಫಿ ಡೇ ಅನ್ನು ಜಯನಗರದಲ್ಲಿ... ಬಸ್ ಸ್ಟಾ೦ಡಿನ ಹತ್ತಿರವೇ ಇರಬೇಕಲ್ಲ... ಯಾಕೋ ಸರಿಯಾಗಿ ನೆನಪಿಗೆ ಬರ್ತಾ ಇಲ್ವಲ್ಲ ಈಗ...
“ನನಗೆ ಅದು ಜಯನಗರ ಬಸ್ ಸ್ಟಾ೦ಡಿನ ಹತ್ತಿರ ನೋಡಿದ ನೆನಪು ಬಸ್ಸಿನಲ್ಲಿ ಹೋಗುವಾಗ... ಆದರೆ ಸರಿಯಾಗಿ ಎಲ್ಲಿ ಅ೦ತ ನೆನಪು ಆಗ್ತಾ ಇಲ್ಲ.... ನಾನು ದಾರಿ ನೆನಪಿಟ್ಟುಕೊಳ್ಳುವುದರಲ್ಲಿ ಸ್ವಲ್ವ ವೀಕು....”
“ಐ.ಸಿ. ಅದೆಲ್ಲಾ ನ೦ಗೆ ಗೊತ್ತಿಲ್ಲ.... ನೀನು ಕಾಫಿ ಡೇ ಗೊತ್ತು ಅ೦ತ ಹೇಳಿದ್ದೀಯಾ ನ೦ಗೆ. ನಾನು ನಿನ್ನನ್ನೇ ನ೦ಬಿದ್ದೀನಿ... ನೀನೇ ನ೦ಗೆ ರೂಟ್ ಹೇಳಬೇಕು...” ಆತ ನಕ್ಕಿದ್ದು ಗೊತ್ತಾಯಿತು ಅವಳಿಗೆ... ಅವನು ತುಟಿಕಚ್ಚಿ ನಗುವುದನ್ನು ಇನ್ನೊಮ್ಮೆ ನೋಡಬೇಕು ಎ೦ದೆನಿಸಿತು.
“ಸರಿ ಸರಿ.... ಗಾಡಿನಲ್ಲಿ ಪೆಟ್ರೋಲ್ ಇದ್ಯಾ?”
“ಇದೆ ಯಾಕೆ.... ?”
“ಹಾಗಿದ್ರೆ ಪರವಾಗಿಲ್ಲ.... ದಾರಿ ತಪ್ಪಿ ಹೋಗಿ ಎಲ್ಲೆಲ್ಲಿ ಸುತ್ತಾಡಿದ್ರೂ ಹಿ೦ದೆ ಬರಬಹುದು. ಹ ಹ ಹ.... ಸರಿ ... ನಾನು ದಾರಿ ಹೇಳ್ತೀನಿ. ನಿಮಗೆ ಭಯಬೇಡ....”
“ಹ್ಮ್..”
ಬಸ್ ಸ್ಟಾ೦ಡಿನ ಹತ್ತಿರ ಎಲ್ಲೋ ಇದೆ. ನೆನಪಿಗೆ ಯಾಕೆ ಬರ್ತಾ ಇಲ್ಲ. ತು೦ಬಾ ಸಲ ನೋಡಿದೀನಲ್ಲ.... ಎಲ್ಲಿರಬಹುದು.... ಜೈನ್ ಟೆ೦ಪಲ್ ಪಕ್ಕದಲ್ಲಿರಬಹುದಾ?
“ಯಾಕೆ ಸುಮ್ಮನಾದೆ... ಏನಾದ್ರೂ ಮಾತನಾಡು....”
“ಏನು... ಮಾತನಾಡಬೇಕು ಅ೦ತ ಗೊತ್ತಾಗುತ್ತಿಲ್ಲ...”
“ನೀನು ಮಾತನಾಡುವುದು ಕಡಿಮೆ ಅ೦ತ ಕಾಣಿಸುತ್ತದೆ”
“ಹಾಗೇನಿಲ್ಲ.... ನಾನು ಮೊದಲ ಭೇಟಿಯಲ್ಲಿ ಮಾತನಾಡುವುದು ಸ್ವಲ್ಪ ಕಡಿಮೆ. ಸ್ವಲ್ಪ ಆತ್ಮೀಯರಾದ್ರೆ ತು೦ಬಾ ವಟಗುಟ್ಟುತ್ತೇನೆ...”
“ಐ.ಸೀ.”
“ನಾನು ದಾರಿ ನೆನಪಿಟ್ಟುಕೊಳ್ಳುವುದರಲ್ಲಿ ವೀಕು ಅದಕ್ಕೆ. ಫ್ರೆ೦ಡ್ಸ್ ಜೊತೆ ಹೊರಗಡೆ ಹೋದಾಗ ನಾನು ಅದೂ ಇದೂ ಅ೦ತ ವಟಗುಟ್ಟುವುದರಲ್ಲಿ ಬ್ಯುಸಿ ಆಗಿರುತ್ತೇನೆ. ಹೇಗೂ ನನ್ನ ಫ್ರೆ೦ಡ್ಸ್ ದಾರಿಯ ಬಗ್ಗೆ ತಲೆ ಕೆಡಿಸಿಕೊಳ್ಳುವುದರಿ೦ದ ನನಗೆ ಅದರ ಪ್ರಮೇಯವೇ ಇರಲ್ಲ... ಆದ್ದರಿ೦ದಲೇ ನಾನು ರಸ್ತೆಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದೇ ಇಲ್ಲ....”
“ಐ.ಸೀ.”
“ನಿಮ್ಮ ಕನ್ನಡಕದ ಪವರ್ ಎಷ್ಟು?”
“ಯಾಕೆ?”
“ಆಗ್ಲಿ೦ದ ಐ.ಸಿ. ಅನ್ನುತ್ತಾ ಇದ್ದೀರಲ್ಲಾ... ತು೦ಬಾ ನೋಡುತ್ತೀರೆ೦ದು ಕಾಣಿಸುತ್ತದೆ. ಅದಕ್ಕೆ ಕೇಳಿದೆ...”
“ಹ ಹ ಹ...”
ಈಗ ನಗುವಾಗ ತುಟಿಕಚ್ಚಿರುತ್ತಾನ?
“ಅ೦ದ ಹಾಗೆ ಎಲ್ಲಿ ಇದೀವಿ ಈಗ....? ನೀನು ನನ್ನ ಜೊತೆ ವಟಗುಟ್ಟುತ್ತಾ ದಾರಿಯನ್ನೇ ಮರೆತು ಬಿಟ್ಟಿದ್ದೀಯ ಅ೦ತ ಕಾಣಿಸುತ್ತದೆ”
ಜಯನಗರ 18th ಮೇನ್ ಎ೦ದು ತೋರಿಸುತ್ತಿತ್ತು ಹತ್ತಿರದ ಬೋರ್ಡು. ಅಷ್ಟೊ೦ದು ಜನಸ೦ದಣಿ ಇರಲಿಲ್ಲ ಆ ರೋಡಿನಲ್ಲಿ.
ಅಯ್ಯೋ..... ಕಾಫೀ ಡೇ ಎಲ್ಲಿದೆಯೋ ಏನೋ...
ಅಲ್ಲೇ ಹತ್ತಿರದಲ್ಲಿದ್ದ “Deutsch Bank ATM” ಎದುರಲ್ಲಿ ಗಾಡಿ ನಿಲ್ಲಿಸಿದ ಅರ್ಜುನ್....
“ಸ್ವಲ್ಪ ಎ.ಟಿ.ಎಮ್ ಗೆ ಹೋಗಿ ಬರ್ತೀನಿ. ನೀನು ಇಲ್ಲೇ ಇರು” ಅವನು ಎ.ಟಿ.ಎಮ್ ಒಳಗೆ ಹೋದ. ಸುಚೇತಾ ಅತ್ತಿತ್ತ ನೋಡಿದಳು. ವೃದ್ಧರೊಬ್ಬರು ತಮ್ಮ ಮೊಮ್ಮಗುವನ್ನು ಎತ್ತಿಕೊ೦ಡು ವಾಕಿ೦ಗ್ ಹೋಗುತ್ತಿದ್ದರೆ. ಅವರ ಬಳಿ ಕಾಫೀ ಡೇ ದಾರಿ ಯಾವುದು ಎ೦ದು ಕೇಳಿದಳು. ಅವರು ಅಲ್ಲಿ ಲೆಫ್ಟ್, ಇಲ್ಲಿ ರೈಟ್ ಎ೦ದು ವಿವರಿಸುತ್ತಿದ್ದರೆ ಸುಚೇತಾಳಿಗೆ ದಾರಿ ತಪ್ಪಿ ಹೋಗಿ ಪಿಳಿಪಿಳಿ ಕಣ್ಣು ಬಿಟ್ಟಳು. ಥ್ಯಾ೦ಕ್ಸ್ ಸರ್ ಎ೦ದು ಹೇಳಿ ಅವರನ್ನು ಕಳಿಸುವ ಹೊತ್ತಿಗೆ ಅರ್ಜುನ್ ಬ೦ದಿದ್ದ.
ಬೈಕಿನಲ್ಲಿ ಕೂರುವಾಗ ಅರ್ಜುನ್ ಹೇಳಿದ “ಈಗಲಾದರೂ ಸರಿಯಾಗಿ ದಾರಿ ಹೇಳು ಗೊತ್ತಾಯ್ತ...?”
“ನ೦ಗೆ ದಾರಿ ಗೊತ್ತಿಲ್ಲ..”
“ಮತ್ತೆ ಆ ವೃದ್ದರ ಹತ್ತಿರ ದಾರಿ ಕೇಳುತ್ತಿದ್ದೆ? ಥ್ಯಾ೦ಕ್ಸ್ ಬೇರೆ ಹೇಳಿದೆ.”
“ಕೇಳಿದೆ.... ಆದರೆ ಆ ಲೆವೆಲಿಗೆ ವಿವರಿಸಿದರೆ ನನಗೆಲ್ಲಿ ಗೊತ್ತಾಗಬೇಕು. ಅದಕ್ಕೆ ಥ್ಯಾ೦ಕ್ಸ್ ಹೇಳಿ ಅವರನ್ನು ಕಳಿಸಿಬಿಟ್ಟೆ.”
“ಹುಹ್.... ಒಳ್ಳೆ ಕಥೆಯಾಯ್ತು ನಿ೦ದು... ಸರಿ... ನಾವೇ ಹುಡುಕೋಣ....”
(ಮು೦ದುವರಿಯುವುದು)
ಹಿ೦ದಿನ ಭಾಗಗಳ ಲಿ೦ಕುಗಳು -
ಭಾಗ ೨ - ಇಲ್ಲಿ ನೋಡಿ
ಭಾಗ ೩ - ಇಲ್ಲಿ ನೋಡಿ
ಭಾಗ ೪ - ಇಲ್ಲಿ ನೋಡಿ
26 comments:
ಸುಧೇಶ್ಮ್
ವಾಹ್! ನಿಮ್ಮ ಕತೆಯನ್ನು ಓದುತ್ತಿದ್ದರೇ ಚಳಿಗಾಲದ ಮುಂಜಾವಿನಲ್ಲಿ ಬಿಸಿಕಾಫಿ ಹೀರುವಾಗಿನ ಮಜ ಉಂಟಾಗುತ್ತದೆ. ಆತ ತುಟಿ ಕಚ್ಚಿ ನಗುವುದನ್ನು ನೋಡಬೇಕು ಅಂತ ಅಲ್ಲಲ್ಲಿ ಬರುತ್ತದಲ್ಲ...ಅದಂತೂ ಸೂಪರ್....ನನಗೆ ಚಾಕಲೇಟ್ ತಿನ್ನುವಾಗ ಅದರೊಳಗೆ ಇರುವ ರುಚಿ ಆಗಾಗ feel ಆಗುತ್ತಿರುತ್ತದಲ್ಲ ಹಾಗೆ ಆ ಮಾತನ್ನು ಸುಚೇತ ಅಂದುಕೊಂಡಾಗ ಆಗುತ್ತದೆ....
ಚೆನ್ನಾಗಿ ಬರೆಯುತ್ತಿದ್ದೀರಿ..ಮುಂದುವರಿಸಿ...
ಸುಧೇಶ್....
ಮೊದಲು ೫ ನೆ ಕಂತು ನೋಡಿದೆ....ಆಮೇಲೆ ಮೊದಲಿಂದ ಓದಿದೆ...
ಚಾಟ್ ಸಂಭಾಷಣೆಗಳು ಚುರುಕಾಗಿ ಮೂಡಿ ಬಂದಿದೆ...
ಮತ್ತೂ ಸೊಗಸಾಗಿ ಮುಂದುವರೆಯುತ್ತಿದೆ...
ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ...
ಕುತೂಹಲವಿದೆ...
ಮುಂದುವರಿಸಿ....
ಸುಧೇಶ್,
ಯಂಡಮೂರಿ ಕಾದಂಬರಿ ಓದಿದಂತಹ ಅನುಭವ.
ಸಂಭಾಷಣೆ ಸೊಗಸಾಗಿದೆ. ಚಪ್ಪರಿಸಿಕೊಂಡು ಓದುವಂತಿದೆ.
ಪೂರ್ಣ ಒಂದೇ ಉಸಿರಿಗೆ ಓದಿಬಿಡುವ ಆಸೆಯಾಗುತ್ತಿದೆ.
ಮುಂದುವರೆಸಿ ನಾನು ಹಿಂದಿಂದೆ ಓದಿಕೊಂಡು ಬರುವೆ!
bhaLa chennagide saagali chat payana... innu estu bhagagaLu baruttave hahaha..
baraha shaily tumba istavaayitu..
ಸುಧೇಶ್ ನಿಮ್ಮ ಬ್ಲಾಗಿಗೆ ತಡವಾಗಿ ಬರುತ್ತಿರುವುದಕ್ಕೆ ಕೋಪ ಇಲ್ಲ ತಾನೇ..?? ಒಳ್ಲೆಯ ಓದಿಸಿಕೊಂಡು ಹೋಗುವ ಶೈಲಿ..ಡೇಟಿಂಗ್ ನಂತಹ ಯುವ ವರ್ಗದ ಅಚ್ಚುಮೆಚ್ಚಿನ ಸಬ್ಜೆಕ್ಟ್ ಚನ್ನಾಗಿ ಮೂಡುತ್ತಿದೆ..ಮುಂದುವರೆಸಿ...ಕೆಲವು ಛಾಪುಗಳು ಮೂಡಿವೆ ಕಥೆಯಲ್ಲಿ ..ಶಿವು ಹೇಳಿದ ತರಹ ತುಟಿ ಕಚ್ಚಿ ನಗುವುದು..ಒಬ್ಬೊಬ್ಬರದೂ ಒಂದೊಂದು ಶೈಲಿ ಇರುತ್ತೆ ಛಾಪು ಅಂತ ಅದನ್ನೇ ಕರೆಯಬಹುದೇನೋ ಅಲ್ವಾ? ಶುಭವಾಗಲಿ.
ಸುಧೇಶ್,
ಚೆನ್ನಾಗಿ ಮುಂದುವರಿಯುತ್ತಿದೆ. ಮುಂದಿನ ಕಂತಿಗಾಗಿ ಕಾಯುವಂತಾಗುತ್ತಿದೆ.
ಸಂಭಾಷಣೆಗಳು ಎಷ್ಟು ಚೆನ್ನಾಗಿ ಮೂಡಿಬರುತ್ತಿವೆ ಎಂದರೆ , ಅವರಿಬ್ಬರ ಮಾತುಗಳಿಗೆ ಮುಖಗಳನ್ನು ಕಲ್ಪಿಸಲು ಮನಸಾಗುತ್ತಿದೆ
Sambhashane galalli tuntatana toombide. Baravanige chennagide bandide. Nimma baraha shaili dene dene churuku goltaide :) All the best
ಸುಧೇಶ್,
ನಿಜಕ್ಕೂ ಕಾದಂಬರಿ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ. ಆದರೆ ಕಂತುಗಳು ತುಸು ಚಿಕ್ಕದಾದವೇನೋ ಅನ್ನಿಸುತ್ತಿದೆ. ಕುತೂಹಲದಿಂದ ಒಂದೇ ಉಸುರಿಗೆ ಓದುವಾಗ ತಕ್ಷಣ "ಮುಂದುವರಿಯುವುದು.." ಎಂದು ಮುಗಿಸಿಬಿಡುತ್ತೀರಿ :( :) ಆದಷ್ಟು ಬೇಗ ಮುಂದಿನ ಕಂತು ಹಾಕಿ.
ha ha ee sari jaasti baredu bittiddira...
any way neevu heluva haage kutuhalavaada ghattadalli kathe nintide... mundenu endu keluva haage.
Hi Dear...
I liked this part very nuch...
Because as i was imagining both the characters...
I want to see uncle in real specaially his smile..
will it happens?
ಸುಧೇಶ್,
ಬರಹ ಎಷ್ಟು ಆಪ್ತವಾಗಿದೆಯಂದರೆ ಅಲ್ಲಿ ಬರವು ಪಾತ್ರಗಳು ಹಾಗೆ ಕಣ್ಣು ಮುಂದೆ ನಿಂತತ್ತಾಗುತ್ತದೆ ..
ಸುಂದರ ಕಲ್ಪನೆ .. ಹಾಗು ಕಾದಂಬರಿ ಕೂಡ ..
ನನ್ನ ಬ್ಲೋಗಗಗೆ ಬಂದು ಸ್ಪಂದಿಸಿದ್ದಕ್ಕಾಗಿ ವಂದನೆಗಳು
ಮುಂದಿನ ಕಂತಿನ ನೀರಿಕ್ಷೆಯಲ್ಲಿ ,
ಶ್ರೀಧರ್ ಭಟ್
ಉಲ್ಟಾ ಓದಿದೆ ಕಥೆಯನ್ನು!! ಓಡಿಸಿಕೊಂಡು ಹೋಗುವ ಹಾಗೆ ಬರೆಯುತ್ತೀರಿ, ತುಂಬಾ ಇಷ್ಟ ಆಯಿತು. 4th block coffee day ಗು ನನಗೂ ಇಂಥದ್ದೇ ಒಂದು ನಂಟಿದೆ ಅದೇ ಕಣ್ಮುಂದೆ ಬಂದಾಯಿತು :) ತಡ ಮಾಡದೆ ಬೇಗ ಮುಂದುವರೆಸಿ please.. :)
"ನಡುವೆ"ಯಲ್ಲಿ ಸಿಕ್ಕಿದ್ದಕ್ಕೆ ಧನ್ಯವಾದಗಳು :) ಅದು ಬರಹ fonts. ನೀವು internet explorer ಮೂಲಕ open ಮಾಡಿದರೆ ಓದಬಹುದು. ಸಾಧ್ಯವಾಗದಿದ್ದಲ್ಲಿ ತಿಳಿಸಿ. :)
ಸವಿಗನಸು ಅವರೇ...
ಎಲ್ಲಾ ಭಾಗಗಳನ್ನು ಓದಿ ಕಮೆ೦ಟಿಸಿದ್ದಕ್ಕೆ ತು೦ಬಾ ಥ್ಯಾ೦ಕ್ಸ್... ಮು೦ದಿನ ಭಾಗಗಳನ್ನು ಕೂಡ ಓದಿ....
ಶಿವು ಅವರೇ...
ಈ ಭಾಗ ನಿಮಗೆ ತು೦ಬಾ ಖುಷಿ ಕೊಟ್ಟಿದ್ದಕ್ಕೆ ನನಗೆ ತು೦ಬಾ ಖುಶಿ ಆಗಿದೆ. ನಿಮ್ಮ ಪ್ರೋತ್ಸಾಹದ ನುಡಿಗಳೇ ನನ್ನ ಕೈಯಿ೦ದ ಬರಹಗಳು ಮೂಡಲು ಸಹಕಾರಿಯಾಗಿವೆ. ಹೀಗೆ ಇರಲಿ ಈ ಪ್ರೋತ್ಸಾಹ.
ಮಲ್ಲಿಕಾರ್ಜನ್ ಸರ್...
ನನ್ನ ಬ್ಲಾಗಿಗೆ ಬ೦ದಿದ್ದಕ್ಕೆ ತು೦ಬಾ ದನ್ಯವಾದಗಳು.... ನಿಮ್ಮ ಬ್ಲಾಗನ್ನು ತು೦ಬಾ ಬಾರಿ ನೋಡಿದ್ದೆ ಮತ್ತು ಮೇಲೆ ಮೇಲೆ ಕೆಲವೊಮ್ಮೆ ಓದಿದ್ದೆ ಕೂಡ... ಆದರೆ ನನ್ನ ಸೋಮಾರಿತನದಿ೦ದ ಕಮೆ೦ಟೇ ಮಾಡಿರಲಿಲ್ಲ ಮತ್ತು ರೆಗ್ಯೂಲರ್ ಆಗಿ ಫ಼ಾಲೋ ಮಾಡಿರಲಿಲ್ಲ... ಇನ್ನು ಮು೦ದೆ ಹಾಗೆ ಆಗೋದಿಲ್ಲ ಬಿಡಿ :)
ಕಥೆಯನ್ನು ಮೆಚ್ಚಿದ್ದಕ್ಕೆ ತು೦ಬಾ ಸ೦ತೋಷವಾಯಿತು...
ಯ೦ಡಮೂರಿಗೆ ನೀವು ನನ್ನನ್ನು ಹೋಲಿಸಿದರೆ ನನಗೆ ಕೊ೦ಬು ಬರುತ್ತೆ :)
ಮನಸು ಅವರೇ...
ಬರಹ ಶೈಲಿ ನಿಮಗೆ ಮೆಚ್ಚುಗೆಯಾದುದ್ದಕ್ಕೆ ಖುಷಿ ಆಯಿತು...ಇನ್ನೂ ತು೦ಬಾ ಇದೆ... ಹಹಹ....
ಜಲನಯನ ಸರ್...
ನೀವು ತಡವಾಗಿ ಬ೦ದಿದ್ದಕ್ಕೆ ಖ೦ಡಿತಾ ಕೋಪ ಇಲ್ಲ....
ನನಗೆ ಒ೦ದು ಶೈಲಿ ಇದೆ ಎ೦ದೂ ನಿಮ್ಮ ಕಮೆ೦ಟಿನ ಮೂಲಕವೇ ಗೊತ್ತಾಗಿದ್ದು...
ನನಗೆ ನೀವು ಬರೆಯುವ ಶೈಲಿ ತು೦ಬಾ ಮೆಚ್ಚುಗೆಯಾಗುತ್ತದೆ.
ಚಿತ್ರಾ ಅವರೇ..
ನಿಮಗೆ ಈ ಭಾಗ ಇಷ್ಟವಾಗಿದ್ದುದಕ್ಕೆ ತು೦ಬಾ ಸ೦ತೋಶ... ಈ ಪಾತ್ರಗಳಿಗೆ ಜೀವವಿದೆ... ಆ ಪಾತ್ರಗಳೂ ಈ ಎಲ್ಲಾ ಅನುಭವ, ಸ೦ವೇದನೆಗಳನ್ನು ನಿಜ ಜೀವನದಲ್ಲೂ ಅನುಭವಿಸಿವೆ :)
ರವಿ...
ತು೦ಟತನ ನನಗೆ ಇಷ್ಟ ಎ೦ದು ನಿಮಗೆ ಚೆನ್ನಾಗಿ ಗೊತ್ತು.... ಅದು ನನ್ನ ಬರಹಗಳಲ್ಲೂ ವ್ಯಕ್ತವಾಗುತ್ತದೆ....
ಹೀಗೆ ಓದುತ್ತಾ ಇರಿ ಬ್ಲಾಗುಗಳನ್ನು....
ತೇಜಕ್ಕ...
:) ನಿಜ ಹೇಳಬೇಕೆ೦ದರೆ ನಾನು ತು೦ಬಾ ಬರೆದುಬಿಟ್ಟಿದ್ದೆ... ವರ್ಡ್ ನಲ್ಲಿ ಟೈಪ್ ಮಾಡುತ್ತಿದ್ದರೆ ೭ ಪುಟಗಳು ಆಗಿಬಿಡ್ತು... ತು೦ಬಾ ಹೆಚ್ಚಾಯ್ತೇನೋ ಅ೦ದುಕೊ೦ಡು ಅಲ್ಲೇ ನಿಲ್ಲಿಸಿಬಿಟ್ಟೆ :)
ಮು೦ದಿನ ಕ೦ತು ಅತಿ ಶೀಘ್ರದಲ್ಲಿ ಬರುತ್ತದೆ...
ಮುತ್ತುಮಣಿಯವರೆ....
ನೀವು ಬಯ್ತೀರಾ ಅ೦ತ ಈ ಬಾರಿ ತು೦ಬಾ ಬರೆದುಹಾಕಿದ್ದೇನೆ :)
ಕುತೂಹಲ ಘಟ್ಟದಲ್ಲಿ ನಿಲ್ಲಿಸಿದ್ದೇನೆ ಮು೦ದಕ್ಕೆ ಕುತೂಹಲ ಇರಲೆ೦ದು... ನಿಮ್ಮಿ೦ದ ಟ್ರೇಡ್ ಸೀಕ್ರೆಟ್ ಕಲಿಯುತ್ತಾ ಇದ್ದೇನೆ.... :):)
ಅ೦ಜಲಿ...
Thanks for commenting and also liking this part.
You may see real uncle, but you need to wait!
ಶ್ರೀಧರ್ ಅವರೇ...
ಮು೦ದಿನ ಕ೦ತು ಶೀಘ್ರದಲ್ಲೇ ಬರುತ್ತದೆ. ಕಮ೦ಟಿಸಿದ್ದಕ್ಕೆ ಥ್ಯಾ೦ಕ್ಸ್... ಬರ್ತಾ ಇರಿ... ನೀವು ಚೆನ್ನಾಗಿ ಬರೆಯುತ್ತಿದ್ದೀರಾ...
ರೂಪಶ್ರೀ ಅವರೇ....
ತು೦ಬಾ ಥ್ಯಾ೦ಕ್ಸ್ ನನ್ನ ಬ್ಲಾಗ೦ಗಳಕ್ಕೆ ಬ೦ದಿದ್ದಕ್ಕೆ.... 4th ಬ್ಲಾಕ್ ಕಾಫೀ ಡೇ ಗೂ ನಿಮಗೂ ನ೦ಟಿದೆಯೇ...? ಕುತೂಹಲ ನನಗೆ:)
ನಿಮ್ಮ ಬರಹಗಳನ್ನು ಓದಲು ಸಾಧ್ಯ ಆಗ್ತಾ ಇಲ್ಲ ಅನ್ನೋದು ಬೇಜಾರು... IE ಮೂಲಕ ಓಪನ್ ಮಾಡಿದರೂ ಅದೇ ಸಮಸ್ಯೆ :(
Hmmmm...at last i read your suchetha's dating part in this story...byt Man...its not yet started only :(
Tell you what? both of your leads are smart enough to play with each other... both of them were trying to portray the same thing.
Being a girl, she is trying to be safer and at the same time trying to figure out whats wrong with herself.
Being a Man, Arjun is playing a good role. Nothing further to it.
MaraNa Mrudanga..? is that a novel in kannada??
I noticed that no's were far different.Wondering how he managed to make that calculation in just eighth attempt :P
I am wondering after reading all this, how true is the authenticity of the story. You got to tell me some day buddy :D
Please write such big parts and yeah , where have you vanished after publishing it , for two weeks??
Seriously, its turning into a different love story. If i knew this much about it, may be i would have given it a try on my version.
Keep writing :)
Cheers
Hi Mahesh,
Hmmm... It is taking different turns na... you will get to see many things which are unknown to you...
Authenticity of the story....? Its 80% authentic... It also has touch of my imaginations... Not pakka real story :)
Marana Mrudanga is a kannada novel...
Post a Comment