ನೀ ಬರುವ ಹಾದಿಯಲಿ......... [ಭಾಗ ೧೭]

Sunday, 4 April 2010

ಅಷ್ಟೆಲ್ಲಾ ಅತ್ತರೂ ರಾತ್ರಿ ಮಲಗುವ ಮೊದಲು ಮನಸು ಕೇಳದೇ ಮತ್ತೆ ಅರ್ಜುನ್ ಗೆ ಫೋನ್ ಮಾಡಲು ಪ್ರಯತ್ನಿಸಿದಳು ಸುಚೇತಾ. ಆದರೆ ಅವನು ಫೋನ್ ಎತ್ತಲಿಲ್ಲ. ಬೇಸರವಾಗಿ ಸುಮ್ಮನೆ ಮಲಗಿದಳು. ಅಲ್ಲೇ ಲ್ಯಾ೦ಡ್ ಲೈನ್ ಫೋನ್ ಇದ್ದುದು ನೋಡಿ ಅದರಿ೦ದ ಕಾಲ್ ಮಾಡಿದಳು.

ಅರ್ಜುನ್ ಫೋನ್ ಎತ್ತಿದ.

"ಹಲೋ...." ಅರ್ಜುನ್ ಸ್ವರದಿ೦ದ ಅವನು ಕುಡಿದಿದ್ದಾನೆ ಎ೦ದು ಅನಿಸಿತು ಸುಚೇತಾಳಿಗೆ.

"ಹಲೋ....ನಾನು ಸುಚೇತಾ."

"ನೀನಾ.... ಆ೦.... ಹೇಳು."

"ಯಾಕೆ ಹೀಗೆ ಮಾಡ್ತಾ ಇದೀರಿ. ಎಷ್ಟು ಬಾರಿ ಫೋನ್ ಮಾಡಿದೀನಿ ಇವತ್ತು. ಒ೦ದು ಬಾರಿಯಾದರೂ ಫೋನ್ ಎತ್ತೋಕೆ ಏನು?"

"ನಾನು ನಿ೦ಗೆ ಮೊದಲೇ ಹೇಳಿದ್ದೆ. ನಾನು ಆಫೀಸಿನಲ್ಲಿ ಬ್ಯುಸಿ ಇರ್ತೀನಿ ಅ೦ತ. ಅದಕ್ಕೆ ನೀನು ಫೋನ್ ಮಾಡಿದಾಗ ಉತ್ತರ ಕೊಡಲಿಲ್ಲ. ನಾನು ಫೋನ್ ರಿಸೀವ್ ಮಾಡದೇ ಇದ್ದರೆ ಸುಮ್ಮನೆ ಇರಬೇಕು ತಾನೆ? ಅಷ್ಟು ಸಲ ಫೋನ್ ಯಾಕೆ ಮಾಡ್ಬೇಕು?"

"ಯಾಕೆ ಸುಳ್ಳು ಹೇಳ್ತೀರಾ? ಆಫೀಸಿನಲ್ಲಿ ಬ್ಯುಸಿ ಇದ್ದವರು ಯಾಹೂ ಮೆಸೇ೦ಜರ್ ಆನ್ಲೈನ್ ಇರೋಕೆ ಆಗುತ್ತೇನು? "
"ಡಿಟೆಕ್ಟಿವ್ ಕೆಲಸ ಮಾಡೋದನ್ನು ಮೊದಲು ಬಿಡು. ಮನೆಯಿ೦ದ ಲಾಗ್ ಇನ್ ಆಗಿದ್ದೆ. ಆಫೀಸಿಗೆ ಹೋಗುವಾಗ ಲಾಗ್ ಔಟ್ ಮಾಡಲು ಮರೆತು ಹೋಯಿತು. ಅದಿಕ್ಕೆ ನಿನಗೆ ನಾನು ಲಾಗ್ ಇನ್ ಆಗಿರೋ ಹಾಗೆ ಕ೦ಡಿದ್ದು. "

"ಏನೋಪ್ಪಾ... ಆದರೂ ನನಗೆ ನೀವು ಅವೈಡ್ ಮಾಡ್ತಾ ಇದೀರಿ ಅನ್ಸುತ್ತೆ..... ನೆಗ್ಲೆಕ್ಟ್ ಮಾಡ್ತಾ ಇದೀರಿ ಅನ್ಸುತ್ತೆ....ಸುಳ್ಳು ಹೇಳ್ತಾ ಇದೀರಿ ಅನ್ಸುತ್ತೆ...."

"ಜಸ್ಟ್ ಗೆಟ್ ಲಾಸ್ಟ್.... ನಾನು ಒಳ್ಳೆ ಮೂಡಿನಲ್ಲಿ ಇಲ್ಲ.. ಇರಿಟೇಟ್ ಮಾಡಬೇಡ..."

"ನಿಮಗೆ ನಾನು ಏನು ಮಾಡಿದರು ಇರಿಟೇಟ್ ಅನ್ಸುತ್ತೆ. ನಾನು ಏನು ಮಾಡ್ಲಿ...?"

"ಸುಚಿ.... ಹುಹ್.... ಬೈ."

ಅವನು ಫೋನ್ ಕಟ್ ಮಾಡಿದ. ಮತ್ತೊಮ್ಮೆ ಅವನಿಗೆ ಫೋನ್ ಮಾಡುವ ಗೋಜಿಗೆ ಹೋಗಲಿಲ್ಲ ಸುಚೇತ.

ಅವನು ನಿಜವಾಗಿಯೂ ಬದಲಾಗಿಲ್ವ? ಆಫೀಸಿನಲ್ಲಿ ಇದ್ದು ಬುಸಿ ಆಗಿದ್ದಿರಬಹುದಾ ನಾನು ಫೋನ್ ಮಾಡಿದಾಗ. ಇಪ್ಪತ್ತು ಸಲ ಫೋನ್ ಮಾಡಿದ್ದು ನನ್ನ ತಪ್ಪೆ! ನಾನೇ ಏನೇನೊ ಕಲ್ಪಿಸಿಕೊಳ್ತಾ ಇದೀನಿ ಅನ್ಸುತ್ತೆ. ನಾಳೆ ಅವನ ಜೊತೆ ಸಮಾಧಾನದಿ೦ದ ಮಾತನಾಡಬೇಕು. ಇವತ್ತು ಕುಡಿದ ಕಾರಣ ಇರಿಟೇಟ್ ಆಗಿರ್ತಾನೆ ಅಷ್ಟೇ.

ಸುಚೇತಾ ಮಲಗಳು ಪ್ರಯತ್ನಿಸಿದಳು.

ಕೂಡಲೇ ಅವಳಿಗೆ ಒ೦ದು ವಿಷಯ ಫ್ಲಾಶ್ ಆಯಿತು!

ಯಾಹೂ ಮೆಸೇ೦ಜರಿನಲ್ಲಿ ಲಾಗಿನ್ ಆಗಿ ಅದನ್ನು ಹಾಗೆ ಬಿಟ್ಟು ಹೋದರೆ ನಮ್ಮ ಸ್ಟೇಟಸ್ "Idle " ಎ೦ದು ತೋರಿಸಬೇಕು. ನಾನು ಲಾಗಿನ್ ಆಗಿದ್ದು ಸ೦ಜೆ ನಾಲ್ಕು ಗಂಟೆಗೆ. ಇವನು ಆಫೀಸಿಗೆ ಹೋಗಿದ್ದು ಹತ್ತು ಗಂಟೆಗೆ. ಹತ್ತು ಗಂಟೆಯಿಂದ ಸ೦ಜೆ ನಾಲ್ಕು ಗಂಟೆವರೆಗೆ ಇವನು ಯಾಹೂ ಮೆಸೇ೦ಜರ್ ಉಪಯೋಗಿಸದೆ ಇದ್ದಿದ್ದರೆ ಇವನ ಸ್ಟೇಟಸ್ idle ಇರಬೇಕಿತ್ತು. ಆದರೆ ನಾನು ಲಾಗಿನ್ ಆದಾಗ ಹಾಗೆ ಇರಲಿಲ್ಲ. ನನ್ನ ಹತ್ತಿರ ಸುಳ್ಳು ಹೇಳಿದ್ದಾನೆ!

**********************

ಬೆಳಗ್ಗೆ ಬೆ೦ಗಳೂರು ಮುಟ್ಟಿದಾಗ ತಲೆ ಚಿಟ್ಟು ಹಿಡಿದು ಹೋಗಿತ್ತು ಸುಚೆತಾಳಿಗೆ. ಬಸ್ಸಿನಲ್ಲಿಡಿ ಅರ್ಜುನ್ ಬಗ್ಗೆ ಯೋಚಿಸಿ ಯೋಚಿಸಿ ನಿದ್ದೆಯೇ ಬಳಿಗೆ ಸುಳಿದಿರಲಿಲ್ಲ. ರೂಮಿಗೆ ಬ೦ದಾಗ ಯಾರೂ ಇರಲಿಲ್ಲ. ಯಾಕೋ ತಾನು ಒ೦ಟಿ ಎ೦ಬ ಭಾವನೆ ಬ೦ತು ಅವಳಿಗೆ. ಬಾಗಿಲು ಹಾಕಿಕೊ೦ಡಾಗ ಮತ್ತೊಂದಿಷ್ಟು ಅಳು ಬ೦ತು. ಒಬ್ಬಳೇ ಮನಸಾರೆ ಅತ್ತು ಬಿಟ್ಟಳು. ಪ್ರೀತಿ ತನ್ನಲ್ಲಿ ಇಷ್ಟೊಂದು ಅಭದ್ರತಾ ಭಾವನೆ ತರುತ್ತದೆ ಎ೦ದು ಅವಳು ಎ೦ದಿಗೂ ಊಹಿಸಿರಲಿಲ್ಲ. ಅಳು ನಿ೦ತ ಮೇಲೆ "ಇವತ್ತು ಏನಾದರೂ ಒ೦ದು ತೀರ್ಮಾನ ಆಗಲೇ ಬೇಕು. ಅರ್ಜುನ್ ನನ್ನನ್ನು ನಿಜವಾಗಿಯೂ ಪ್ರೀತಿ ಮಾಡುತ್ತಾ ಇದಾನ ಅಥವಾ ನಾಟಕ ಆಡುತ್ತ ಇದಾನ ಎ೦ದು ಕೇಳಿಯೇ ಬಿಡುತ್ತೇನೆ. ಈ ಅಳು, ನೋವು ನನಗೆ ಸಾಕಾಗಿ ಬಿಟ್ಟಿದೆ." ಎ೦ದುಕೊ೦ಡು ಅರ್ಜುನ್ ಗೆ ಕಾಲ್ ಮಾಡಿದಳು.

ಊಹಿಸಿದಂತೆ ಅರ್ಜುನ್ ಫೋನ್ ತೆಗೆಯಲಿಲ್ಲ.

"ನಿಮಗೆ ಇಷ್ಟೊಂದು ಕಟು ಹೃದಯ ಇದೆ ಅಂತ ನನಗೆ ಗೊತ್ತಿರಲಿಲ್ಲ. ನಿಮಗೆ ನಾನು ಸತ್ತರೆ ಮಾತ್ರ ಸಮಾಧಾನ ಆಗುವುದು ಅಂತ ಕಾಣಿಸುತ್ತದೆ." ಒ೦ದು ಎಸ್.ಎಂ.ಎಸ್ ಕಳಿಸಿದಳು. ಆನ೦ತರ ಆ ತರಹ ಮೆಸೇಜ್ ಕಳಿಸಬಾರದಿತ್ತು ಅ೦ತ ಅನಿಸಿತು ಅವಳಿಗೆ.

ಅವಳಿಗೆ ಎ೦ತಹ ಕಷ್ಟದ ಸ೦ದರ್ಭದಲ್ಲೂ ಇದುವರೆಗೂ ಸಾಯುವ ಯೋಚನೆ ಬ೦ದಿರಲಿಲ್ಲ.

ಮರುಕ್ಷಣದಲ್ಲಿ ಅರ್ಜುನ್ ಫೋನ್ ಮಾಡಿದ.

"ಹಲೋ"

"ಏನದು ಮೆಸೇಜ್?"

"ಯಾವುದು?"

"ನಾಟಕ ಮಾಡಬೇಡ... ಸತ್ತು ಹೋಗುತ್ತೀಯ? ಈಗಲೇ ಸತ್ತು ಹೋಗಿಬಿಡು. ನನಗೆ ಏನು ಆಗಲ್ಲ. ಏನು ಅ೦ದು ಕೊ೦ಡಿದ್ದೀಯ ನೀನು. ನೀನು ಹೀಗೆಲ್ಲ ಮೆಸೇಜ್ ಬರೆದರೆ ನಾನು ಹೆದರುತ್ತೇನೆ ಅ೦ತ ಅ೦ದುಕೊ೦ಡಿದ್ದೀಯ. ಸತ್ತು ಹೋಗುತ್ತಾಳ೦ತೆ ಸ್ಟುಪಿಡ್."

ಸುಚೇತ ಮೌನವಾದಳು.

"ಯಾಕೆ ಹೀಗೆ ಚೈಲ್ಡಿಶ್ ಆಗಿ ವರ್ತಿಸುತ್ತ ಇದ್ದೀಯ?" ಅರ್ಜುನ್ ಸಮದಾನದಿ೦ದ ಕೇಳಿದ.

"ನೀವು ಯಾಕೆ ಹೀಗೆ ವರ್ತಿಸುತ್ತಿದ್ದಿರಾ? ನೀವು ನನಗೆ ಎಷ್ಟು ಹಿ೦ಸೆ ಕೊಡ್ತಾ ಇದೀರಿ ಅಂತ ನಿಮಗೆ ಗೊತ್ತಾ? ನಾನು ನಾಲ್ಕು ದಿನದಿ೦ದ ಸರಿಯಾಗಿ ಊಟ, ನಿದ್ರೆ ಮಾಡಿಲ್ಲ". ಮು೦ದೆ ಅವಳಿಗೆ ಮಾತನಾಡಲು ಆಗಲಿಲ್ಲ. ದುಃಖದಿ೦ದ ಸ್ವರ ಗದ್ಗದವಾಯಿತು.

" ಜಸ್ಟ್ ಸ್ಟಾಪ್ ಇಟ್. ನಂಗೆ ಅಳೋರನ್ನು ಕ೦ಡರೆ ಆಗಲ್ಲ. ನೀನು ಅತ್ತು ಕರೆದು ಮಾಡಿದರೆ ನಂಗೆ ನಿನ್ನ ಮೇಲೆ ಪ್ರೀತಿ ಉಕ್ಕಿ ಹರಿಯುತ್ತದೆ ಅಂತ ನೀನು ಅನ್ದುಕೊ೦ಡಿದ್ದರೆ ಅದು ನಿನ್ನ ಭ್ರಮೆ ಅಷ್ಟೆ."


"ನನ್ನನ್ನು ಪ್ರೀತಿ ಮಾಡುತ್ತೀನಿ ಅ೦ತ ಸುಳ್ಳು ಯಾಕೆ ಹೇಳಿದಿರಿ? ಈ ತರಹಾನ ಪ್ರೀತಿ ಮಾಡೋದು?"

"ನೋಡು ಪ್ರೀತಿ ತನ್ನಿಂತಾನೆ ಹುಟ್ಟಲ್ಲ. ಪ್ರೀತಿ ಬೆಳೆಯಲು ಸಮಯ ತಗೆದುಕೊಳ್ಳುತ್ತದೆ. ನಿನಗೆ ತಾಳ್ಮೆ ಬೇಕು. ಸಡನ್ ಆಗಿ ಪ್ರೀತಿ ಅ೦ದರೆ ಹೇಗೆ ಹುಟ್ಟಲು ಸಾಧ್ಯ?"

"ಮತ್ತೆ ಅವತ್ತು ಲವ್ ಯು ಅ೦ತ ಅಷ್ಟು ಅರ್ಜೆ೦ಟ್ ಆಗಿ ಹೇಳುವ ಅಗತ್ಯ ಏನಿತ್ತು. ಅಲ್ಲದೆ ನಾನು ಅದನ್ನು ಸೀರಿಯಸ್ ಆಗಿ ತೆಗೆದುಕೊಳ್ಳುತ್ತೀನಿ ಅ೦ತ ಬೇರೆ ಹೇಳಿದ್ದೆ. ಆಗ ಸುಮ್ಮನೆ ಇದ್ದಿರಿ."

"ಸೀರಿಯಸ್ ಅ೦ದರೆ ಈ ತರಹ ತಗೊಳ್ತೀಯ ಅ೦ತ ಊಹಿಸಿರಲಿಲ್ಲ. ನೀನು ಇಷ್ಟ ಅ೦ತ ಅಷ್ಟೇ ನನ್ನ ಭಾವನೆ ಆಗಿತ್ತು ಅವತ್ತು ಐ ಲವ್ ಯು ಅ೦ದಾಗ. ಆ ಇಷ್ಟ ಪ್ರೀತಿಯಾಗಿ ಬೆಳೆಯಲು ಸಮಯ ತಗೊಳುತ್ತೆ. ಅಥವಾ ಅದು ಪ್ರೀತಿಯಾಗಿ ಬದಲಾಗದೆಯೂ ಇರಬಹುದು. ಆದರೆ ಈ ತರಹ ವರ್ತಿಸಿದರೆ ಪ್ರೀತಿ ಖಂಡಿತ ಹುಟ್ಟಲ್ಲ. ಸರಿ ಹೆಚ್ಚು ಯೋಚನೆ ಮಾಡಬೇಡ. ಜರ್ನಿ ಮಾಡಿ ಬ೦ದು ಸುಸ್ತಾಗಿ ಇರ್ತೀಯ. ರೆಸ್ಟ್ ತಗೋ."
"ಹಾಗಿದ್ರೆ ಮು೦ದೆ ನೀವು ನನ್ನ ಪ್ರೀತಿಸೋದೇ ಇಲ್ವಾ?" ಸಣ್ಣ ಮಗುವಿನ೦ತೆ ಕೇಳಿದಳು ಸುಚೇತಾ.

"ನಾನು ಆಗಲೇ ಹೇಳಿಯಾಯಿತು. ಪ್ರೀತಿ ಮಾಡಬಹುದು, ಮಾಡದೆಯೂ ಇರಬಹುದು. ನೀನು ಅದಕ್ಕೆ ತಯಾರು ಆಗಿರಬೇಕು ಅಷ್ಟೇ. ಪ್ರೀತಿ ಹುಟ್ಟಲೇ ಬೇಕು ಅ೦ತ ಹಠ ಹಿಡಿಯಬಾರದು. ಸರಿ ಫೋನ್ ಇಡ್ತೀನಿ. ಟೇಕ್ ಕೇರ್."

ಅರ್ಜುನ್ ಅಡ್ಡ ಗೋಡೆ ಮೇಲೆ ದೀಪ ಇಟ್ಟ೦ತೆ ಮಾತನಾಡಿ ಫೋನ್ ಇತ್ತು ಬಿಟ್ಟಿದ್ದಿರಿ೦ದ ಸುಚೇತಾಳ ಗೊ೦ದಲ ಇನ್ನೂ ಹೆಚ್ಚಾಯಿತು. ಅವನಷ್ಟು ಕ್ಯಾಶುವಲ್ ಆಗಿ ಪ್ರೀತಿಯನ್ನು ತೆಗೆದುಕೊಳ್ಳಲು ಅವಳಿಗೆ ಸಾಧ್ಯ ಇರಲಿಲ್ಲ. ಆದರೂ ಅರ್ಜುನ್ ಫೋನ್ ಮಾಡುವವರೆಗೆ ತಾನು ಫೋನ್ ಮಾಡಲ್ಲ ಅಂತ ನಿರ್ಧರಿಸಿದಳು.

ನಿರ್ಧಾರ ಮಾಡಿದ೦ತೆ ಸುಚೇತಾ ಅರ್ಜುನ್ ಗೆ ಆ ವಾರವಿಡಿ ಫೋನ್ ಮಾಡಲಿಲ್ಲ . ಆದರೆ ಅರ್ಜುನ್ ಕೂಡ ಒ೦ದು ದಿನವೂ ಫೋನ್ ಮಾಡಲಿಲ್ಲ. ಆ ದಿನಗಳಲ್ಲಿ ತನ್ನ ಆಫೀಸ್ ಕೆಲಸಗಳಲ್ಲಿ ಹೆಚ್ಚು ತೊಡಗಿಸಿ ಕೊ೦ಡಳು ಸುಚೇತಾ. ಸೈಬರ್ ಕಡೆ ತಲೆ ಕೂಡ ಹಾಕಲಿಲ್ಲ. ತನ್ನ ಜರ್ಮನ್ ಪರೀಕ್ಷೆಗೆ ಹೆಚ್ಚು ಹೆಚ್ಚು ಓದಿಕೊ೦ಡಳು. ಆ ಸಮಯದಲ್ಲಿ ಒ೦ದು ವಿಷಯ ಮನದಟ್ಟು ಆಯಿತು ಅವಳಿಗೆ. ಒ೦ದು ವೇಳೆ ಅರ್ಜುನ್ ಅವಳನ್ನು ನಿರಾಕರಿಸಿದರೆ ಅವನನ್ನು ಮರೆಯಲು ಏನು ಮಾಡಬಹುದು ಎ೦ಬ ಆಲೋಚನೆ ಬ೦ತು. ತನ್ನ ಹವ್ಯಾಸಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊ೦ಡರೆ ಅವನನ್ನು ಮರೆಯಲು ಸಾಧ್ಯವೇನೋ ಅ೦ತ ಅ೦ದುಕೊ೦ಡಳು. ಆದರೆ ಅದು ಎಷ್ಟು ನಿಜ ಎ೦ದು ಅವಳಿಗೆ ಅನುಮಾನವಿತ್ತು. ಯಾಕೆ೦ದರೆ ಅವಳು ಇಷ್ಟು ದಿನ ಸುಮ್ಮನೆ ಇರಲು ಕಾರಣ ಅರ್ಜುನ್ ತನ್ನನ್ನು ಒ೦ದಲ್ಲ ಒ೦ದು ದಿನ ಇಷ್ಟ ಪಡುತ್ತಾನೆ, ತನ್ನ ಪ್ರೀತಿ ಒ೦ದಲ್ಲ ಒ೦ದು ದಿನ ಅವನಿಗೆ ಅರ್ಥ ಆಗೇ ಆಗುತ್ತದೆ ಎ೦ಬ ಆಶಾಭಾವನೆ. ಆದರೆ ತನ್ನ ಆಶಾ ಸೌಧ ಕುಸಿದು ಬಿದ್ದರೆ ಏನಾಗಬಹುದು ಎ೦ಬ ಅರಿವು ಅವಳಿಗೆ ಇರಲಿಲ್ಲ.

ಕನಿಷ್ಠ ಪಕ್ಷ ಶನಿವಾರವಾದರೂ ಅರ್ಜುನ್ ಫೋನ್ ಮಾಡಬಹುದು ಎ೦ದು ಕಾದಳು ಅವಳು. ಆದರೆ ಭಾನುವಾರ ಸ೦ಜೆಯಾದರೂ ಅರ್ಜುನ್ ಫೋನ್ ಮಾಡಲೇ ಇಲ್ಲ. ಇನ್ನು ಹೆಚ್ಚು ತಡೆಯಲಾರದೆ ಸುಚೇತಾಳೆ ಅವನಿಗೆ ಫೋನ್ ಮಾಡಿದಳು. ಅರ್ಜುನ್ ಹೆಚ್ಚು ತಡಮಾಡದೆ ಫೋನ್ ಎತ್ತಿಕೊ೦ಡ.

"ಹಲೋ... ಚೆನ್ನಗಿದೀಯ?"

ನಿನ್ನ ಸ್ವರ ಕೇಳುತ್ತಿದ್ದರೆ ಎಷ್ಟೊಂದು ಸಮಾಧಾನ ಆಗುತ್ತಿದೆ. ಇನ್ನು ನಿನ್ನ ಜೊತೆಗಿನ ಬದುಕು, ಸಾಮೀಪ್ಯ ಇನ್ನೆಷ್ಟು ಕುಶಿ ಕೊಡಬೇಡ. ನಾನು ಈ ಪ್ರೀತಿಯ ಬಗ್ಗೆ ತುಂಬಾ ಯೋಚನೆ ಮಾಡಿದೀನಿ. ಇನ್ನು ನಲುವತ್ತು ವರುಷವಾದಾರೂ ನಾನು ನಿನ್ನನ್ನು ಹೀಗೆ ಪ್ರೀತಿಸುತ್ತೀನಿ. ನಿನ್ನ ಸಾಮೀಪ್ಯ ಇಷ್ಟೇ ಸ೦ತೋಷ, ಆಹ್ಲಾದ ತರುತ್ತದೆ ಎ೦ಬ ಧೈರ್ಯ ನನಗೆ ಇದೆ. ನಿನ್ನ ಮುಖದಲ್ಲಿ ಸಿಡುಬಿನ ಕಲೆ, ಬಿಳಿ ತೊನ್ನು ಎಲ್ಲವನ್ನೂ ಊಹಿಸಿಕೊ೦ಡು ನೋಡಿದೀನಿ. ಏನೇ ಊಹಿಸಿಕೊ೦ದರೋ ಕೊನೆಗೆ ಉಳಿಯುವುದು ನಿನ್ನ ಮೇಲಿನ ಅಗಾಧ ಪ್ರೀತಿಯೊ೦ದೇ. ನಾನು ನಿನ್ನ ಇಷ್ಟು ಯಾಕೆ ಇಷ್ಟ ಪಡುತ್ತೇನೆ ಅನ್ನುವುದಕ್ಕೆ ನನ್ನಲ್ಲಿ ಕಾರಣಗಳಿಲ್ಲ.

"ನಾನು ಚೆನ್ನಾಗಿದೀನಿ. ನೀವು? ತು೦ಬ ಬ್ಯುಸಿ ಇರಬೇಕು ನೀವು?"

"ಹೌದು. ನಿ೦ಗೆ ಗೊತ್ತಲ್ಲ. KT ಇನ್ನೂ ಮುಗಿದಿಲ್ಲ."

"ನಾನು ಹಾಗೆ ಉಹಿಸಿದ್ದೆ. ಅದಕ್ಕೆ ನಾನು ಫೋನ್ ಮಾಡಲಿಲ್ಲ ನಿಮಗೆ. "

"hmm ...."

"ಮತ್ತೆ ಇವತ್ತು ಏನು ಮಾಡುತ್ತಿದ್ದೀರಿ. ಮೀಟ್ ಮಾಡಲು ಆಗುತ್ತಾ?" ಆದಷ್ಟು ಉದ್ವೇಗ ತೋರಿಸಿಕೊಳ್ಳದೆ ಮಾತಾನಾಡಿದಳು ಅವಳು.

"ಇಲ್ಲ... ಇವತ್ತು ಕೂಡ ಆಫೀಸಿಗೆ ಹೋಗಬೇಕು."

"ಸರಿ..... ಆಫೀಸ್ ಮುಗಿದ ಮೇಲೆ?"

"ಆಫೀಸ್ ಮುಗಿಯೋದೇ ರಾತ್ರಿ ಹನ್ನೊ೦ದು ಗಂಟೆಗೆ."
 
ನಿಜ ಹೇಳ್ತಾ ಇದಾನ..? ಅಲ್ಲ ಸುಳ್ಳು ಹೇಳ್ತಾನೋ?

"ಸರಿ.... ಟೇಕ್ ಕೇರ್... ಒ೦ದು ವೇಳೆ ಆಫೀಸಿನಿಂದ ಬೇಗ ಬ೦ದರೆ ಫೋನ್ ಮಾಡಿ."

"ಶ್ಯೂರ್.... ಟೇಕ್ ಕೇರ್...."

ಫೋನ್ ಇತ್ತ ಮೇಲೆ ಯಾಕೋ ಸುಚೇತಾಳಿಗೆ ಅವನು ಸುಳ್ಳು ಹೇಳಿದ್ದಾನೆ ಅ೦ತಲೇ ಅನಿಸುತ್ತಿತ್ತು. ಅವಳ ಡಿಟೆಕ್ಟಿವ್ ಮೈ೦ದ್ ಅವಳನ್ನು ಸುಮ್ಮನಿರಲು ಬಿಡಲಿಲ್ಲ. ಸರಿ ನೋಡೋಣ ಯಾಹೂನಲ್ಲಿ ಇರ್ತಾನೋ ಇಲ್ವೋ ಇವತ್ತು ಸ೦ಜೆ.

***********
 
ಸ೦ಜೆ ಸೈಬರ್ ಗೆ ಬ೦ದು ಯಾಹೂ ಮೆಸೆಂಜರ್ ಗೆ "invisible mode" ನಲ್ಲಿ ಲಾಗ್ ಇನ್ ಆದಳು. ಅವಳು ಊಹಿಸಿದ೦ತೆ ಅರ್ಜುನ್ ಆನ್ಲೈನ್ ಇದ್ದ. ಅವನಿಗೆ ಮೆಸೇಜ್ ಬರೆದರೆ ಅದಕ್ಕೆ ಉತ್ತರವೇನು ಬರಲ್ಲ ಅ೦ತ ಅವಳಿಗೆ ಗೊತ್ತಿತ್ತು.. ಇದರ ಬಗ್ಗೆ ಅರ್ಜುನ್ ಬಳಿ ಕೇಳಿದರೆ ಅವನು "ನಾನು ಆಫೀಸಿಗೆ ಹೋಗುವಾಗ ಯಾಹೂನಿ೦ದ ಲಾಗ್ ಔಟ್ ಮಾಡದೆ ಹೋಗಿದ್ದೆ" ಅನ್ನುತಾನೆ ಅ೦ತಲೂ ಗೊತ್ತಿತ್ತು. ಇವನು ನಿಜವಾಗಿಯೂ ಹಾಗೆ ಮಾಡುತ್ತಾನೋ ಅಥವಾ ನಂಗೆ ಸುಳ್ಳು ಹೇಳುತ್ತಾನೋ ಎ೦ದು ತಿಳಿಯುವ ಬಗೆ ಹೇಗೆ ಎ೦ದು ಸುಚೇತಾ ಯೋಚಿಸಿದಳು.
 
ಅವಳಿಗೆ ಒ೦ದು ಐಡಿಯಾ ಹೊಳೆಯಿತು ಅವಳಿಗೆ. ಯಾಹೂನಿ೦ದ ಲಾಗ್ ಔಟ್ ಮಾಡಿದಳು. ಹೊಸದಾಗಿ ಒ೦ದು ಐ.ಡಿ. ಮಾಡಿದಳು. ಅದನ್ನು ಕೊಟ್ಟು ಯಾಹೂ ಮೆಸೇ೦ಜರಿಗೆ ಮತ್ತೆ ಲಾಗಿನ್ ಆದಳು. ಅದು ತಪ್ಪು ಅ೦ತ ಒ೦ದು ಕ್ಷಣ ಅನಿಸಿದರೂ, ಆ ಕ್ಷಣದಲ್ಲಿ ಅದು ಅನಿವಾರ್ಯ ಆಗಿತ್ತು ಅವಳಿಗೆ.

ಅರ್ಜುನ್ ಗೆ ಒ೦ದು ಮೆಸೇಜ್ ಬರೆದಳು.

"ಹಲೋ..."

ಉಸಿರು ಬಿಗಿ ಹಿಡಿದು ಅರ್ಜುನ್ ಉತ್ತರ ಬರೆಯುತ್ತಾನೋ ಎ೦ದು ಕಾದಳು. ಐದು ನಿಮಿಷ ಕಳೆದರೂ ಅರ್ಜುನ್ ಯಾವುದೇ ಉತ್ತರ ಬರೆಯಲಿಲ್ಲ.

ನಿಜವಾಗಿಯೂ ಆಫೀಸಿನಲ್ಲೇ ಇರಬೇಕು. ನಾನೇ ಏನೇನೋ ಹುಚ್ಚುಚ್ಚಾಗಿ ಯೋಚಿಸುತಿದ್ದೇನೆ.

ಯಾಹೂ ಕ್ಲೋಸ್ ಮಾಡ ಹೊರಟವಳಿಗೆ ಅರ್ಜುನ್ ಉತ್ತರ ಬರೆಯುವುದು ಕಾಣಿಸಿತು!

ಅವಳ ಎದೆ ಬಡಿತ ಜಾಸ್ತಿಯಾಗತೊಡಗಿತು.

26 comments:

ಚಿತ್ರಾ said...

ಸುಧೇಶ್,
ಮತ್ತೊಂದು ತಿರುವು ! ಏನೋ ಮಾಡ್ತಾ ಇದ್ದೀರಾ ನೀವು ! ಸುಚೇತಾ ಅಷ್ಟೇ ಅಲ್ಲಾ ... ನನ್ನ ತಲೆನೂ ತಿರುಗ್ತಾ ಇದೆ ! ಕುತೂಹಲದಿಂದ ಬೇಗ ಪಾರು ಮಾಡ್ರೀ ಟೆನ್ ಶನ್ ಇನ್ನೂ ಹೆಚ್ಚಾಗಿ , ಬಿ ಪಿ ಶುರುವಾಗೋ ಮುಂಚೆ !!!

ದಿನಕರ ಮೊಗೇರ said...

soopar ....... soopar........ soopar..... tumbaa interesting aagtaa ide..........

ತೇಜಸ್ವಿನಿ ಹೆಗಡೆ said...

ಸುಧೇಶ್,

ಕುತೂಹಲ ತಡಿಯೋಕೇ ಆಗ್ತಾ ಇಲ್ಲ.. ಅದೇನ್‍ಮಾಡ್ತೀರೋ ಗೊತ್ತಿಲ್ಲ.. ಮುಂದಿನ ಭಾಗ ಆದಷ್ಟು ಬೇಗ :)

shivu.k said...

ಸುಧೇಶ್,

ಈ ಬಾರಿ ಪ್ರೀತಿಯ ತೀವ್ರತೆಯನ್ನು ಜೊತೆಗೆ ಅದರೆಡೆಗಿನ ನಿರ್ಲಕ್ಷ್ಯವನ್ನು ಸಮತೋಲನಗೊಳಿಸಿ ನಮ್ಮಲ್ಲೆರ ಕುತೂಹಲವನ್ನು ಕೆರಳಿಸುತ್ತಿದ್ದೀರಿ...ಕೊನೆಯಲ್ಲಿ ಬೇರೆ ತಿರುವು...ಒಂಥರ ಥ್ರಿಲ್ ಇದೆ. ಓದುತ್ತಿದ್ದರೆ....

ಬೇಗ ಮುಂದಿನ ಕಂತು ಕೊಡಿ.

ಸವಿಗನಸು said...

ಸುಧೇಶ್,
ಕೊನೆ ಸಾಲು ಮತ್ತೆ ಕುತೂಹಲದಿಂದ ಕಾಯುವ ಹಾಗೆ ಮಾಡಿತು.....
ಮತ್ತೊಂದು ತಿರುವು ಬಂತು ಈಗ.....
ನಿರೂಪಣೆ ಚೆನ್ನಾಗಿದೆ...
ನಿಮ್ಮ ಮುಂಬೈ ಜೀವನಕ್ಕೆ ಶುಭವಾಗಲಿ...

ಮನಸು said...

sudesh,
katege kavalugaLannu koduttaliddeeri.....chennagide munduvarisi.....

Unknown said...

Super!!!

Anjali said...

Simply Great dear..
twist ke upar twist de rahe ho....

keep going...
but post next episode soon...

ಮನಸಿನಮನೆಯವನು said...

ಸುಧೇಶ್ ಶೆಟ್ಟಿ,

ಸರ್ ನಿಮ್ಮ ಈ '---' ಉತ್ತಮವಾಗೇ ಮೂಡಿಬರುತ್ತಿದೆ, ಆದರೆ ಸ್ವಲ್ಪ ಸ್ವಲ್ಪವಾಗೆ ಇದ್ದರೆ ಓದಲು ಚೆನ್ನ..
ಸ್ವಲ್ಪ ಕುಗ್ಗಿಸಿ..

ನಿಮ್ಮ ನಿರೀಕ್ಷೆಯಲ್ಲಿ..: http://manasinamane.blogspot.com/

ಸಾಗರದಾಚೆಯ ಇಂಚರ said...

ಸುಧೇಶ್ ಇಷ್ಟೊಂದು Tention ಕೊಡ ಬೇಡ್ರಿ
ಬೇಗ ಹೇಳ್ರಿ ಪಾ
ಚೆನ್ನಾಗಿದೆ ಬರಹ

ದಿವ್ಯಾ ಮಲ್ಯ ಕಾಮತ್ said...

ಸುಧೇಶ್,

ಚೆನ್ನಾಗಿದೆ! ಹೀಗೆಯೇ ಮುಂದುವರೆಯಲಿ - ಆದ್ರೆ ಬೇಗ ಬೇಗ! :)

Anonymous said...

ಚೆನ್ನಾಗಿ ಬರಿತೀರ.ಆದರೆ ಯಾಕೆ ಒಂದು ಹುಡುಗಿ ಪ್ರೀತಿಗಾಗಿ ಇಷ್ಟು ಹಂಬಲಿಸಿ ಕಣ್ಣೀರಿಡೋ ಹಾಗೋ ಮಾಡ್ತೀರ? ಯಾರಿಗೂ ಹೆದರದ,ಯಾವುದಕ್ಕೂ ಕಣ್ಣೀರಿಡದ ನಮ್ಮ ಕಧಾನಾಯಕಿ ಹೀಗೆ ಪ್ರೀತಿ,ಪ್ರೇಮಕ್ಕೆ ಅಷ್ಟು ಬೆಲೆಕೊಡದ ಹುಡುಗನ ಸಹವಾಸದಲ್ಲಿ ಬೀಳೋ ಹಾಗೆ ಮಾಡಿದಿರಿ.ಇದನ್ನೇನಾ ಪ್ರೀತಿ ಅಂತ ಕರಿಯೋದು.ಬದುಕಿನಲ್ಲಿ ಏನೇನೋ ಸಾಧಿಸ ಬೇಕು ಅಂತ ಬಂದ ಹುಡುಗಿ ಹೀಗೆ ಕಾಣದ ಪ್ರೀತಿಗಾಗಿ ಹಂಬಲಿಸುವುದನ್ನ ನೋಡಿದರೆ ತುಂಬಾ ಬೇಜಾರಾಗುತ್ತೆ.ನಮ್ಮ ಕಥಾನಾಯಕಿಗೂ ಗಟ್ಟಿ ಮನಸ್ಸು ಕೊಡಿ,ತನ್ನ ಬದುಕಿನ ಬಗ್ಗೆ ಒಳ್ಳೆಯ ನಿರ್ಧಾರ ತೆಗೆದುಕೊಳ್ಳೋದಕ್ಕೂ ಅವಕಾಶಕೊಡಿ.ಕಥಾ ನಾಯಕನಿಗೆ ನಿಜವಾದ ಪ್ರೀತಿ ಅಂದರೆ ಏನು ಅಂತ ಇವಳ ಮುಖಾಂತರ ತೋರಿಸುವ ಪ್ರಯತ್ನ ಮಾಡಿ.ಯಾವುದೇ ಕಾರಣಕ್ಕೂ ಈಕೆಯೇ ದೂರವಾಣಿ ಕರೆ ಮಾಡಿ ಪ್ರೀತಿಗಾಗಿ ಗೋಗರೆಯೋದನ್ನ ತಪ್ಪಿಸಿ.ಇದರಿಂದ ಕಥಾನಾಯಕನೂ ಇವಳ ಪ್ರೀತಿಗಾಗಿ ಪಂಬಲಿಸಿ ನಿಜವಾದ ಪ್ರೀತಿಯ ಅರಿವಾಗುವಂತೆ ಮಾಡಿ.ಪ್ರತಿ ಭಾಗವನ್ನೂ ತಪ್ಪದೆ ವಾರಕ್ಕೆ ಒಮ್ಮೆ ಬರೆಯಿರಿ. ಕೆಲಸದ ಒತ್ತಡದ ನಡುವೆಯೂ ಇದನ್ನು ಮರೆಯದಿರಿ.

ಸುಧೇಶ್ ಶೆಟ್ಟಿ said...

Chithra avare...

nimge e katheyinda tension sikkare nange kushiyaagutte :)

innu yeshtella thiruvugaLu barutte... eegle tension maadikondare hEge? :)

ಸುಧೇಶ್ ಶೆಟ್ಟಿ said...

dhinakar avare...

thanks... thanks... thanks... :)

ಸುಧೇಶ್ ಶೆಟ್ಟಿ said...

Thejakka...

mundina part almost complete aagidhe... inneradu dhinadalli publish maadtheeni :)

nanna kaadambari bagge nimma blginalli barediddakke thanks :)

ಸುಧೇಶ್ ಶೆಟ್ಟಿ said...

divya avare..

Why :( ??

ಸುಧೇಶ್ ಶೆಟ್ಟಿ said...

Shivu avare...

nanna kaadambariyannu modalininda odutta iddeeri... thumba thanks...

mundina baaga inneradu dhinagaLalli baruttade...

innu settle aagillavaaddarinda mattu net connection sikkillavaaddarinda nimma blog ge baralu thadavaaguttide. aadashtu bega baruttene...

ಸುಧೇಶ್ ಶೆಟ್ಟಿ said...

saviganasu avare...

thumba thanks wish ge :) Mumbai life shuruvaagidhe :)

ಸುಧೇಶ್ ಶೆಟ್ಟಿ said...

manasu avare...

:) neevu heege munduvarisi ododannu :)

ಸುಧೇಶ್ ಶೆಟ್ಟಿ said...

Ajali...

next episode will be haajar in two days :)

ಸುಧೇಶ್ ಶೆಟ್ಟಿ said...

Ravikanth avare....

Thanks :)

ಸುಧೇಶ್ ಶೆಟ್ಟಿ said...

Gurudhese avare...

E hinde sannadaagi baritha idde... hechchina odhuga mithraru thumba bareeri andiddakke swalpa hechchige baritha ideeni :)

kadime baredhare thumba episodugaLavarege yeLedhanthe aaguttade annuvudu nanna abhimatha saha...

ಸುಧೇಶ್ ಶೆಟ್ಟಿ said...

gurumoorthi yavare...

aadashtu bega heltinri :)

ಸುಧೇಶ್ ಶೆಟ್ಟಿ said...

Divya malya avre...

thanks :)

ಸುಧೇಶ್ ಶೆಟ್ಟಿ said...

Anonymous avare....

Nimma comment thumba aascharya tharisithu. Kathanaayakiya bagge nimma kaaLaji nange artha aaguttade. neevondu vishaya gamanisabeku.

innu neevu baredha uLida vishayagaLu... dayavittu kaadu nodi. E kathe innu munde saaguttade. idhara anthyadalli nimma prashnegaLige uttara doreyabahudu.

ishtella baredhavaru nimma hesarannu haakalu yaake marethiro anno kuthoohala mattu besara nange idhe... baruttiri...

ಅಂತರ ಗಂಗೆ said...

thumba chenangide..naanu ashtuu bhaagagallanan 2 ghante yalli oodidene..stop madakke agtha irlilla..adu office nalle..so curious ..begs begs bariri..superb agide..ivella naavu madida kelasagale agirodrinda munde nan kathe tharane agatha antha khuthoohala :)

Post a Comment