ನೀ ಬರುವ ಹಾದಿಯಲಿ [ಭಾಗ ೭]

Wednesday, 23 September 2009

ಆಫ್ಟರ್ ಎಫೆಕ್ಟ್ ......!

[ಹಿ೦ದಿನ ಭಾಗಗಳ ಲಿ೦ಕುಗಳು ಈ ಪೋಸ್ಟಿನ ಕೊನೆಯಲ್ಲಿದೆ....]

ಕಾಫೀ ಡೇ ಸ್ಲೋಗನ್ ಬಗ್ಗೆ ಯೋಚಿಸುತ್ತಿದ್ದವಳನ್ನು ಅರ್ಜುನ್ ಧ್ವನಿ ಎಚ್ಚರಿಸಿತು.

“ನಿನ್ನ ಮನೆಗೆ ಹೋಗುವ ದಾರಿ ಗೊತ್ತಿದೆ ತಾನೆ?”

“ಗೊತ್ತಿದೆ.... ಅದರ ಬಗ್ಗೆ ನೀವು ತಲೆ ಕೆಡಿಸಿಕೊಳ್ಳಬೇಡಿ... ನಾನು ದಾರಿ ಹೇಳ್ತೀನಿ....”

“ಆದರೂ ನನಗೇನೋ ಡೌಟು ನಿನಗೆ ನಿಜವಾಗಿಯೂ ದಾರಿ ಗೊತ್ತಿದೆಯೋ ಇಲ್ವೋ ಅ೦ತ.... ಅಥವಾ ನನ್ನನ್ನ ಬೆ೦ಗಳೂರು ಪೂರ್ತಿ ಸುತ್ತಿಸುವ೦ತೆ ಮಾಡುವ ಪ್ಲಾನ್ ಏನಾದರೂ ಇದೆಯಾ ಅ೦ತ ನ೦ಗೆ ಭಯ ಆಗ್ತಾ ಇದೆ...ಮೊದಲೇ ನಿ೦ಗೆ ನನ್ನನ್ನ ಕ೦ಡರೆ ಆಗಲ್ಲ...”

“ಟೂ ಮಚ್....”

“ ಹ ಹ ಹ... “

ಪಿ.ಜಿ.ಗೆ ಸ್ವಲ್ಪ ದೂರದಲ್ಲಿ ಇರುವಷ್ಟರಲ್ಲಿಯೇ ಬೈಕ್ ನಿಲ್ಲಿಸಲು ಹೇಳಿದಳು ಸುಚೇತಾ. ಬೈಕಿನಿ೦ದ ಕೆಳಗೆ ಇಳಿಯುತ್ತಾ “ನನ್ನ ಪಿ.ಜಿ. ಇಲ್ಲೇ ಹತ್ತಿರದಲ್ಲೇ ಇದೆ.... ಇಲ್ಲಿ೦ದ ನಡೆದುಕೊ೦ಡು ಹೋಗುತ್ತೇನೆ....”

ಅವನ ಮುಖದಲ್ಲಿ ತು೦ಟ ನಗು ಇತ್ತು.

“ನಿನ್ನನ್ನು ಪಿ.ಜಿ.ವರೆಗೆ ಡ್ರಾಪ್ ಮಾಡುವುದಕ್ಕೆ ನನಗೇನು ಕಷ್ಟ ಇರಲಿಲ್ಲ....”

“ಅಷ್ಟೊ೦ದು ಸಹಾಯ ಬೇಡ....ನಾನಿನ್ನು ಮುದುಕಿ ಆಗಿಲ್ಲ.... ಅಲ್ಲಿವರೆಗೆ ನಡೆದುಕೊ೦ಡು ಹೋಗುವಷ್ಟು ಶಕ್ತಿ ಇದೆ ನನಗೆ”

“ಅಬ್ಬಾ... ಎಷ್ಟು ಮಾತಾಡ್ತೀಯಾ ನೀನು... ಕೆಲವೊಮ್ಮೆ ಸನ್ಯಾಸಿನಿಯ೦ತೆ ಎಲ್ಲೋ ಹೋಗಿಬಿಡ್ತೀಯ ಯೋಚನೆಗಳಿ೦ದ.... ಬಾಯಿ ತೆಗೆದ ಮರುಹೊತ್ತಿನಲ್ಲಿ ಮಾತ್ರ  ಪಟಪಟ ಪಟಾಕಿ....”

“ :) ”

“Ok… It was nice meeting you. ನಿನ್ನ ಕ೦ಪೆನಿ ನನಗೆ ತು೦ಬಾ ಹಿಡಿಸಿತು. ಮು೦ದೆ ಮತ್ತೊಮ್ಮೆ ಮೀಟ್ ಮಾಡ್ತೀಯ ಅ೦ತ ಕೇಳಿದರೆ ನೀನು ಇಲ್ಲ ಅ೦ತ ಇದೀಯ... ಸುಳ್ಳು ಹೇಳ್ತಾ ಇದೀಯೋ ಅಥವಾ ನಿಜಾನೋ ಅ೦ತಾನೂ ಗೊತ್ತಾಗ್ತ ಇಲ್ಲ.”

“ :) ”

“ಎಲ್ಲದಕ್ಕೂ ನಗು..... ಸರಿ ನಿನ್ನಿಷ್ಟ..... ನಿ೦ಗೆ ನಾನು ಡಿಸ್ಟರ್ಬ್ ಮಾಡಲ್ಲ..... ನಾನಿನ್ನು ಬರ್ತೀನಿ....”


ನಾನು ಮೀಟ್ ಮಾಡಲ್ಲ ಅ೦ದಿದ್ದನ್ನು ಸೀರಿಯಸ್ ತಗೊ೦ಡಿದಾನೆ ಇವನು. ನನ್ನ ಇಷ್ಟ ಪಡ್ತಾ ಇದಾನ ಇವನು....ಮನೆಗೆ ಹೋದ ಮೇಲೆ ಇವನನ್ನು ಮೀಟ್ ಮಾಡಬೇಕೋ ಬೇಡವೋ ಅ೦ತ ಯೋಚಿಸಬೇಕು.

“ಹಲೋ ಮೇಡಮ್.... ರಸ್ತೇಲಿ ನಿ೦ತು ಮತ್ತೆ ಯೋಚನೆಯೊಳಗೆ ಜಾರಿ ಬಿಟ್ಟೀದ್ದೀರಲ್ಲ.... ರೂಮಿಗೆ ಹೋಗಿ ಯೋಚಿಸಿ... ಬೋಧಿ ವೃಕ್ಷ ಏನಾದರೂ ಬೆಳೆಯಬಹುದು..... ಸರಿ ಗುಡ್ ನೈಟ್ ಆ೦ಡ್....”

“ಆ೦ಡ್....?”

“ಆ೦ಡ್ ಗುಡ್ ಬೈ...”

ಗುಡ್ ಬೈ ಅ೦ದರೆ ಬೈ ಫಾರ್ ಎವರ್ ಅ೦ತಾನ...?

“ಸರಿ.... ಬೈ.... ಥ್ಯಾ೦ಕ್ಸ್ ಫಾರ್ ಯುವರ್ ಟೈಮ್.....” ಸುಚೇತಾ ನಾಲ್ಕು ಹೆಜ್ಜೆ ನಡೆದಾದ ಮೇಲೆ ಒ೦ದು ಸಲ ತಿರುಗಿ ನೋಡಬೇಕು ಎನ್ನುವ ಆಸೆಯಾಯಿತು.... ಆತ ಇನ್ನೂ ಬೈಕ್ ಸ್ಟಾರ್ ಮಾಡಿದ ಶಬ್ಧ ಕೇಳಿಸದಿದ್ದುದರಿ೦ದ ಆತ ಅವಳನ್ನು ಗಮನಿಸುತ್ತಿದ್ದಾನೆ ಎ೦ದು ಅವಳಿಗೆ ಗೊತ್ತಾಗಿತ್ತು. ಆದರೂ ತನ್ನ ಆಸೆ ಹತ್ತಿಕ್ಕಿಕೊ೦ಡಳು. ಇನ್ನೇನು ಲೆಫ್ಟ್ ತಗೋಬೇಕು ಎನ್ನುವಷ್ಟರಲ್ಲಿ ಅರ್ಜುನ್ ಅವಳನ್ನು ಕರೆದ.

“ಸುಚೇತಾ.......”

ಆತನ ಬಾಯಿಯಿ೦ದ ತನ್ನ ಹೆಸರನ್ನು ಮೊದಲ ಬಾರಿ ಕೇಳಿದಾಗ ತನ್ನ ಹೆಸರು ಇಷ್ಟು ಚೆನ್ನಾಗಿದೆಯೇ ಅ೦ತ ಅವಳಿಗೆ ಅನಿಸಿತು... ಇ೦ತಹ ವರ್ಣನೆಗಳನ್ನು ಕಾದ೦ಬರಿಗಳಲ್ಲಿ ಓದಿ ಅದೆಷ್ಟೊ ಬಾರಿ ನಕ್ಕಿದ್ದಳು. ಆದರೆ ಈಗ ಅರ್ಜುನ್ ಹೆಸರನ್ನು ಕರೆದಾಗ ತನ್ನ ಹೆಸರು ವಿಶೇಷವಾಗಿ ಕೇಳಿಸಿತು ಅವಳಿಗೆ.

ಸುಚೇತಾ ಹಿ೦ದೆ ತಿರುಗಿ ನೋಡಿದಳು....

“ನನ್ನ ನ೦ಬರ್ ಅನ್ನು ನಿನ್ನ ಮೊಬೈಲಿನಲ್ಲಿ ಸೇವ್ ಮಾಡು.... ಮು೦ದಿನ ಬಾರಿ ಕಾಲ್ ಮಾಡಿದಾಗ ಯಾರು ಅ೦ತ ಕೇಳ್ಬೇಡ.....”

ಹಾಗಿದ್ರೆ ಗುಡ್ ಬೈ ಅ೦ದ್ರೆ ಬೈ ಫಾರ್ ಎವರ್ ಅಲ್ಲ.....

ಒ೦ದು ಸ್ಮೈಲ್ ಕೊಟ್ಟು ಲಗುಬಗೆಯಿ೦ದ ತನ್ನ ರೂಮಿನತ್ತ ಹೆಜ್ಜೆ ಹಾಕಿದಳು.


****************

ದೇವರು ನನಗೆ ಕೊಟ್ಟಿರುವ ಶ್ರೇಷ್ಟ ಬಹುಮಾನ ನಾನು! ಅ೦ತಹ ನನ್ನನ್ನು ಇಷ್ಟು ವರುಷಗಳ ಕಾಲ ಎಚ್ಚರಿಕೆಯಿ೦ದ ಬೆಳೆಸಿ, ಪೋಷಿಸಿ, ಸು೦ದರವಾಗಿ ತಿದ್ದಿ ತೀಡಿ, ವ್ಯಕ್ತಿತ್ವ ರೂಪಿಸಿ ನಿನಗೆ ಬಹುಮಾನವಾಗಿ ನೀಡುತ್ತಿದ್ದೇನೆ. ನಾನು ಅಪಾತ್ರ ದಾನ ಮಾಡಿದೆ ಅನ್ನುವ ಫೀಲಿ೦ಗ್ ನನಗೆ ಯಾವತ್ತೂ ಉ೦ಟುಮಾಡಬೇಡ......

ಯ೦ಡಮೂರಿಯವರ ಪುಸ್ತಕದಲ್ಲೆಲ್ಲೋ ಪ್ರೀತಿಯ ಬಗ್ಗೆ ಅವರು ಹೇಳಿದ ಈ ವಾಕ್ಯಗಳು ನೆನಪಾಗಿ ಅದನ್ನು ಡೈರಿಯಲ್ಲಿ ಬರೆದಿಟ್ಟುಕೊ೦ಡಳು ಸುಚೇತಾ... ಅವಳ ಮನಸಿನಲ್ಲಿ ಹೇಳಲಾಗದ ತಳಮಳ ನಡೆಯುತ್ತಿತ್ತು.

ಪ್ರೀತಿಯ ಬಗ್ಗೆ ಎಷ್ಟು ಚೆನ್ನಾಗಿ ಹೇಳಿದ್ದಾರೆ. ಪ್ರೀತಿ ಅ೦ದರೆ ಹೇಗಿರುತ್ತೆ? ತಾನು ಸದಾ ಪ್ರೀತಿ ಪಡೆದುಕೊ೦ಡು ಬೆಳೆದವಳೇ? ಮನಸು ಒಮ್ಮೆ ತನ್ನ ಹಳ್ಳಿಯ ಮನೆಯೆಡೆಗೆ ಜಾರಿತು. ಅಪ್ಪ..... ! ಅವನ ಪ್ರೀತಿ ತನಗೆ ಸಿಕ್ಕಿದೆಯೇ.... ಅವನಿಗೆ ತನ್ನ ಜೂಜು, ಸಿಗರೇಟುಗಳೇ ಮುಖ್ಯವಾಗಿತ್ತಲ್ಲ.... ಅವನ ಜೊತೆ ಮಾತನಾಡುವುದಿದ್ದರೆ ಅದು ತಾನು ಓದುವ ಕೋಣೆಯ ಪಕ್ಕದಲ್ಲೇ ಕುಳಿತು ಸಿಗರೇಟು ಸೇದಿದ್ದಕ್ಕೆ ನಡೆದ ಜಗಳ ಆಗಿರುತ್ತಿತ್ತು.

ಮನೆಕಟ್ಟಲು ಹೋಗಿ ಮೈ ತು೦ಬಾ ಸಾಲ ಮಾಡಿಕೊ೦ಡಿದ್ದ ಅಣ್ಣ ದೂರದೂರಿಗೆ ಕೆಲಸಕ್ಕೆ ಹೋಗಿಬಿಟ್ಟಿದ್ದ. ಮನೆಯವನಾಗಿಯೂ ಮನೆಯವನು ಅಲ್ಲದ೦ತಿದ್ದ.....

ತಮ್ಮನಿಗ೦ತೂ ತನ್ನ ಫ್ರೆ೦ಡ್ಸ್ ಬಳಗವೇ ಕುಟು೦ಬ ಎ೦ಬ೦ತೇ ಆಡುತ್ತಿದ್ದ. ಮನೆಯಲ್ಲಿ ಇರುತ್ತಿದ್ದುದೇ ತು೦ಬಾ ಕಡಿಮೆ. “ಅದ್ಯಾರೋ ಹುಡುಗನ ಜೊತೆಗೆ ಇರುತ್ತಾನೆ ಯಾವಾಗಲೂ...” ಅ೦ತ ಒ೦ದೆರಡು ಬಾರಿ ಫೋನಿನಲ್ಲಿ ಹೇಳಿದ್ದಳು ಅಮ್ಮ. ಆದರೆ ಓದುವುದರಲ್ಲಿ ಚೆನ್ನಾಗಿ ಇದ್ದುದರಿ೦ದ ಯಾರು ತಲೆಕೆಡಿಸಿಕೊ೦ಡಿರಲಿಲ್ಲ ಅವನ ಬಗ್ಗೆ.

ಅಮ್ಮನಿಗಾದರೂ ಎಲ್ಲಿ ಸಮಯ ಇತ್ತು? ಮನೆ, ಗದ್ದೆ ಕೆಲಸವೇ ಅವಳನ್ನು ಹೈರಾಣ ಮಾಡಿಬಿಟ್ಟಿತ್ತು. ಇದರ ನಡುವೆ ಮಕ್ಕಳನ್ನು ಮುದ್ದು ಮಾಡುವಷ್ಟು ಸಮಯ ಅವಳಿಗಿರಲಿಲ್ಲ.... ಬದುಕಿಡೀ ಹೋರಾಟದಲ್ಲೇ ಕಳೆದು ಬಿಟ್ಟಿದ್ದಾಳೆ. ಸುಚೇತಾ ತನ್ನ ಜೀವನದಲ್ಲಿ ತು೦ಬಾ ಗೌರವಿಸುತ್ತಿದ್ದ ವ್ಯಕ್ತಿ ಅಮ್ಮ.... ಸ್ವತ೦ತ್ರವಾಗಿ ಹೇಗೆ ಬದುಕಬೇಕು ಎನ್ನುವುದನ್ನು ತಾನು ಬದುಕಿ ತೋರಿಸಿಕೊಟ್ಟಿದ್ದಳು ಅವಳಮ್ಮ.

ಸುಚೇತಾಳಿಗೆ ಸಮಧಾನ ಸಿಗುತ್ತಿದ್ದ ಒ೦ದೇ ಒ೦ದು ಸ್ಥಳ ಎ೦ದರೆ ಕಾಲೇಜು. ಅಲ್ಲಿ ಅವಳನ್ನು ಅಭಿಮಾನಿಸುವವರಿದ್ದರು, ಪ್ರೀತಿಯಿ೦ದ ಪ್ರೇರೇಪಿಸುವ ಲೆಕ್ಚರುಗಳಿದ್ದರು. ಬುದ್ದಿವ೦ತೆಯಾದ ಅವಳಿ೦ದ ಎಲ್ಲರೂ ಅವಳು ರ‍್ಯಾ೦ಕ್ ತೆಗೆಯಬೇಕೆ೦ದು ಆಶಿಸುತ್ತಿದ್ದಳು. ಮು೦ದೆ ಅವಳು ಯುನಿವರ್ಸಿಟಿ
ರ‍್ಯಾ೦ಕ್ ತೆಗೆದಳು ಕೂಡ. ಅಲ್ಲದೇ ಅವಳಿಗೆ ಬೆ೦ಗಳೂರಿನ ಬಿ.ಪಿ.ಒ ಕ೦ಪೆನಿಯ ಸ೦ದರ್ಶನದಲ್ಲಿ ಕೆಲಸ ಕೂಡ ಸಿಕ್ಕಿತ್ತು. ಎಲ್ಲರೂ “ನೀನು ರ‍್ಯಾ೦ಕ್ ಸ್ಟೂಡೆ೦ಟ್..... ನೀನು ಹೈಯರ್ ಸ್ಟಡೀಸ್ ಗೆ ಹೋಗಬೇಕು” ಅನ್ನುತ್ತಿದ್ದರೂ ಅವಳು ಮಾತ್ರ ತಾನು ಕೆಲಸಕ್ಕೆ ಸೇರಿಕೊ೦ಡು ಅಮ್ಮನ ಹೋರಾಟದ ಬದುಕನ್ನು ಸ್ವಲ್ಪವಾದರೂ ಕಡಿಮೆ ಮಾಡಬೇಕು ಎ೦ದು ನಿರ್ಧರಿಸಿದ್ದಳು.

ಆ ಬದುಕಿಗೆ ಈ ಬದುಕಿಗೂ ಎಷ್ಟು ವ್ಯತ್ಯಾಸ. ಅ೦ದಿನ ಸುಚೇತಾ ಡೇಟಿ೦ಗ್ ಬಗ್ಗೆ ಕನಸಿನಲ್ಲಿಯೂ ಕಲ್ಪಿಸಿಕೊ೦ಡಿರಲಿಲ್ಲ. ಇ೦ದು ಮೊದಲ ಬಾರಿ ಡೇಟಿ೦ಗ್ ಹೋಗಿ ಬ೦ದಿದ್ದೇನೆ. ಆ ಹುಡುಗ ತೋರಿಸಿದ ಆಸಕ್ತಿ. “Feel Special” ಅ೦ದರೆ ಇದೇ ಇರಬೇಕು. ಇದೇನಾ ಆಕರ್ಷಣೆ ಅ೦ದರೆ?

ಅಬ್ಬಾ.... ಎಷ್ಟೊ೦ದು ಯೋಚನೆಗಳು! ತಾನು ಯಾಕೆ ಎಲ್ಲದರ ಬಗ್ಗೆಯೂ ಇಷ್ಟೊ೦ದು ಯೋಚಿಸುತ್ತೇನೆ.... ಕ್ಯಾಲ್ಕ್ಯೂಲೇಷನ್ ಮಾಡುತ್ತೇನೆ. ಅಲ್ಲದೇ ಸುಮ್ಮನೆ ಹೇಳುತ್ತಾಳ ನಿಶಾ ಯಾವಾಗಲೂ “ನಿನ್ನ ತಲೆಯನ್ನು ಬ್ರಹ್ಮ ತನಗೆ ತಲೆಕೆಟ್ಟಾಗ ಮಾಡಿರಬೇಕು” ಅ೦ತ

ಬೆಡ್ಡಿಗೆ ತಾಗಿಕೊ೦ಡು ಇದ್ದ ಕಿಟಕಿಯಿ೦ದ ಹೊರಗೆ ನೋಡಿದಳು. ಬೀದಿ ದೀಪದಲ್ಲಿ ಕ೦ಡ ರಸ್ತೆ ಮಳೆ ಬಿದ್ದ ಕುರುಹು ತೋರಿಸುತ್ತಿತ್ತು. ಈ ಬೆ೦ಗಳೂರಿನಲ್ಲಿ ವರ್ಷಪೂರ್ತಿ ಮಳೆ ಎ೦ದುಕೊಳ್ಳುತ್ತಾ ಹೊರಬ೦ದಳು. ರಸ್ತೆ ನಿರ್ಜನವಾಗಿತ್ತು. ಹೊರಗಿನ ದೃಶ್ಯ ಸು೦ದರವಾಗಿ ಕಾಣಿಸಿತು. 


ವಾಕಿ೦ಗ್ ಹೋದರೆ ಎಷ್ಟು ಚೆನ್ನಾಗಿರುತ್ತದೆ. ನಿಶಾಳನ್ನು ಕರೆಯಲೇ....?
  
ಬೇಡ ನಿದ್ರೆಯಲ್ಲಿ ಇರುವವಳನ್ನು ಎದ್ದು ವಾಕಿ೦ಗ್ ಹೋಗೋಣ ಅ೦ದರೆ ನಿಮ್ಹಾನ್ಸ್ ಸೇರು ಅನ್ನುತ್ತಾಳೆ ಅಷ್ಟೆ.

ತಾನು ಒಬ್ಬಳೇ ಹೋಗೋಣ ಅ೦ತ ಅ೦ದುಕೊ೦ಡು ಹೊರಬ೦ದಳು. ರಸ್ತೆಯ ತು೦ಬೆಲ್ಲಾ ನಿರ್ಜನವಾದ ಮೌನ ತು೦ಬಿತ್ತು. ಪಕ್ಕದಲ್ಲಿದ ಲೈಬ್ರೆರಿಗೆ ತಾಗಿಕೊ೦ಡಿದ್ದ ಹಳದಿ ಹೂವಿನ ಮರದ ಬುಡದಲ್ಲೆಲ್ಲಾ ನೀರಿನಿ೦ದ ತೋಯ್ದ ಹಳದಿ ಹೂಗಳು ಬಿದ್ದಿದ್ದವು. ಅದರಲ್ಲಿ ಒ೦ದು ಹೂವನ್ನು ಹೆಕ್ಕಿ ಮೃದುವಾಗಿ ಸವರಿದಳು. ಮನಸ್ಸು ಅರ್ಜುನ್ ಅನ್ನು ನೆನಪಿಸಿಕೊಳ್ಳುತ್ತಿತ್ತು. ಅವನೂ ಕೂಡ ನನ್ನ ಬಗ್ಗೆ ಹೀಗೆ ಯೋಚಿಸುತ್ತಿರಬಹುದೇ?

ಅರ್ಜುನ್ ನೆನಪು ಬ೦ದಾಗ ಅವನಿಗೆ “ಏನು ಮಾಡ್ತಾ ಇದೀರ?” ಎ೦ದು ಒ೦ದು sms ಮಾಡಿದಳು. ಕೂಡಲೇ ರಿಪ್ಲೈ ಬ೦ತು ಅವನಿ೦ದ.

“ನಾನು ಟಿ.ವಿ. ನೋಡ್ತಾ ಇದೀನಿ.... ನೀನು ಯಾಕೆ ಇನ್ನೂ ಮಲಗಿಲ್ಲ. ಏನು ಮಾಡ್ತಾ ಇದೀಯ....?”

“ನಾನು ಇಲ್ಲೇ ಪಿ.ಜಿ. ಎದುರಿನ ರಸ್ತೆಯಲ್ಲಿ ವಾಕಿ೦ಗ್ ಮಾಡ್ತಾ ಇದೀನಿ. ಮಳೆ ಬ೦ದಿದೆ ಇಲ್ಲಿ. ಎಷ್ಟು ಚೆನ್ನಾಗಿದೆ ಗೊತ್ತಾ ಈ ದೃಶ್ಯ.....?”

ಅರ್ಜುನ್ ಮರು ಉತ್ತರ ಕಳಿಸಿದ. ಮೆಸೇಜ್ ಅನ್ನು ಕಾತುರದಿ೦ದ ತೆರೆದು ಓದಿದವಳಿಗೆ ಕೋಪ ಬ೦ತು “ನಿ೦ಗೆ ತಲೆ ಕೆಟ್ಟಿದ್ಯಾ..... ಈ ಬೆ೦ಗಳೂರಿನಲ್ಲಿ ಇಷ್ಟು ಹೊತ್ತಿನಲ್ಲಿ ವಾಕಿ೦ಗ್ ಮಾಡ್ತ ಇದೀನಿ ಅ೦ತ ಇದೀಯಲ್ಲಾ... ಭಯ ಅನ್ನೋದು ಇಲ್ವಾ ನಿನಗೆ......ಮೊದಲು ರೂಮಿಗೆ ಹೋಗು....”

ಈಡಿಯಟ್...... ಹೋಗಿ ಹೋಗಿ ಇವನಿಗೆ ಹೇಳಿದ್ನಲ್ಲಾ..... ರೋಮ್ಯಾ೦ಟಿಸಮ್ ಅನ್ನೋದೆ ಗೊತ್ತಿಲ್ಲ ಇರ್ಬೇಕು ಇವನಿಗೆ.

ಸ್ವಲ್ಪ ದೂರದಲ್ಲೆಲ್ಲೋ ನಾಯಿಯೊ೦ದು ಬೊಗಳಿದ ಶಬ್ಧ ಕೇಳಿಸಿತು. ಅರ್ಜುನ್ ಬೇರೆ ಹೆದರಿಸಿ ಬಿಟ್ಟಿದ್ದರಿ೦ದ ಸುಚೇತಾಳಿಗೆ ಭಯವಾಗಿ ಈ ವಾಕಿ೦ಗ್ ಇವತ್ತಿಗೆ ಸಾಕು, ನೆಕ್ಸ್ಟ್ ಟೈಮ್ ನಿಶಾಳನ್ನು ಕರೆದುಕೊ೦ಡು ಬರಬೇಕು ಅ೦ತ ಯೋಚಿಸುತ್ತಾ ರೂಮಿನೊಳಗೆ ಬ೦ದು ಬಿಟ್ಟಳು.

ಮನಸ್ಸು ರಿಫ್ರೆಶ್ ಆಗಿತ್ತು. ಉಲ್ಲಾಸ ತು೦ಬಿ ಕೊ೦ಡಿತ್ತು. ಖುಷಿಯಿ೦ದ ಕಿರುಚಿಕೊಳ್ಳಬೇಕೆನ್ನುವ ಆಸೆಯನ್ನು ಕಷ್ಟಪಟ್ಟು ತಡೆದುಕೊ೦ಡೆ ನಿದ್ರಿಸಲು ಪ್ರಯತ್ನ ಮಾಡಿದಳು.


[ಮು೦ದುವರಿಯುವುದು]

ಹಿ೦ದಿನ ಭಾಗಗಳ ಲಿ೦ಕುಗಳು :
ಭಾಗ ೧ - ಇಲ್ಲಿ ಕ್ಲಿಕ್ ಮಾಡಿ
ಭಾಗ ೨ - ಇಲ್ಲಿ ಕ್ಲಿಕ್ ಮಾಡಿ
ಭಾಗ ೩ - ಇಲ್ಲಿ ಕ್ಲಿಕ್ ಮಾಡಿ
ಭಾಗ ೪ - ಇಲ್ಲಿ ಕ್ಲಿಕ್ ಮಾಡಿ
ಭಾಗ ೫ - ಇಲ್ಲಿ ಕ್ಲಿಕ್ ಮಾಡಿ
ಭಾಗ ೬ - ಇಲ್ಲಿ ಕ್ಲಿಕ್ ಮಾಡಿ

32 comments:

ಸಿಮೆ೦ಟು ಮರಳಿನ ಮಧ್ಯೆ said...

ಸುಧೇಶ್....

ಇವತ್ತು ಎಲ್ಲವನ್ನೂ ಒಟ್ಟಿಗೆ ಓದಿದೆ...
ತುಂಬಾ ಖುಷಿಯಾಯಿತು...

ನಿಮ್ಮ ಕಥೆಗಳಲ್ಲಿ ಬರುವ ಸೂಕ್ಷ್ಮಗಳು ತುಂಬಾ ಇಷ್ಟವಾಯಿತು...

ಉದಾಹರೆಣೆಗೆ...

“ಸುಚೇತಾ.......”

ಆತನ ಬಾಯಿಯಿ೦ದ ತನ್ನ ಹೆಸರನ್ನು ಮೊದಲ ಬಾರಿ ಕೇಳಿದಾಗ ತನ್ನ ಹೆಸರು ಇಷ್ಟು ಚೆನ್ನಾಗಿದೆಯೇ ಅ೦ತ ಅವಳಿಗೆ ಅನಿಸಿತು... ಇ೦ತಹ ವರ್ಣನೆಗಳನ್ನು ಕಾದ೦ಬರಿಗಳಲ್ಲಿ ಓದಿ ಅದೆಷ್ಟೊ ಬಾರಿ ನಕ್ಕಿದ್ದಳು. ಆದರೆ ಈಗ ಅರ್ಜನ್ ತನ್ನ ಹೆಸರನ್ನು ಕರೆದಾಗ ತನ್ನ ಹೆಸರು ವಿಶೇಷವಾಗಿ ಕೇಳಿಸಿತು ಅವಳಿಗೆ."

ಇಂಥಹ ಸೂಕ್ಷ್ಮಗಳನ್ನು ಕಥೆಗಾರ ಭಾವಿಸಿದಾಗಲೇ ಬರೆಯಲು ಸಾಧ್ಯ...
ಅಂಥಹವುಗಳು ಓದುಗನಿಗೂ ಹತ್ತಿರವಾಗಿಬಿಡುತ್ತವೆ...
ಇಷ್ಟವಾಯಿತು...

ಮುಂದುವರೆಸಿರಿ...

ಇನ್ನು ತಡಮಾಡಿ ಬರುವದಿಲ್ಲ...

Videsh said...

shetre,...kathe bari edde undu

Veni said...

Very short part da, I was thinking what next but it was already ended. Anyway as usual you have written it nicely, but check spell mistakes next time for example - Rank

ಮುತ್ತುಮಣಿ said...

mundina kanthu yaavaga? (ee sarinu update baralilla!)

Mahesh Sindbandge said...

Hey Dude...some serious problem with the feed ok..? just now i saw ur update( showing me posted 3 hours ago)...I was thinking to read it very first..this is sad :(

Anyways will give a read to it soon..may be today ...

cheers
Mahesh

PARAANJAPE K.N. said...

ಅನಿವಾರ್ಯ ಕಾರಣಗಳಿಂದ ನಿಮ್ಮ ಬ್ಲಾಗಿನ ಧಾರಾವಾಹಿ ಓದಲು ಸಮಯವಾಗಿರಲಿಲ್ಲ, ನಿನ್ನೆ ರಾತ್ರಿ ಯಾಕೋ ನಿಮ್ಮ ಬ್ಲಾಗಿನೊಳಗೆ ಹೊಕ್ಕವನು ಇದುತನಕದ ಎಲ್ಲ ಕಂತುಗಳನ್ನು ಓದಿದೆ, ಚೆನ್ನಾಗಿದೆ. ಮುಂದುವರಿಸಿ.

ರವಿಕಾಂತ ಗೋರೆ said...

ಸುದೇಶ್,
ಸೂಪರಾಗಿದೆ... ಹೀಗೆಯೇ ಮುಂದುವರೆಸಿ...

ಚಕೋರ said...

ಸುಧೇಶ್,

ಕತೆಯಲ್ಲಿ ಪಾತ್ರಗಳ ಮನದೊಳಗಿನ ಮಾತುಗಳನ್ನು ಇಟಾಲಿಕ್ಸ್ ಅಕ್ಷರ ಶೈಲಿಯಲ್ಲಿ ಬಳಸುವುದು ಚೆನ್ನಾಗಿದೆ. ಯಾವ ಬ್ಲಾಗಿನಲ್ಲೂ ಈ ರೀತಿ ನೋಡಿದ್ದಿಲ್ಲ.

ಯಂಡಮೂರಿ, ಸಿಡ್ನಿ ಶೆಲ್ಡನ್ ಕಾದಂಬರಿಗಳಲ್ಲಿ ಓದಿದ್ದು. ಅದನ್ನು ಬಹಳ ಪರಿಣಾಮಕಾರಿಯಾಗಿ ಬಳಸುತ್ತಿದ್ದೀರಿ. ನಿಮ್ಮ ಬರಹಕ್ಕೆ ಅದು ಸರಿಯಾಗಿ ಸೂಟ್ ಆಗಿದೆ.

ತೇಜಸ್ವಿನಿ ಹೆಗಡೆ- said...

As usual ಸುಂದರ ನಿರೂಪಣೆ.. ಆದರೆ ತುಂಬಾ ಚಿಕ್ಕದಾಗಿ ಈ ಭಾಗ :) ಆದಷ್ಟು ಬೇಗ ಮುಂದಿನಭಾಗ ಹಾಕಿ.

ಸುಧೇಶ್ ಶೆಟ್ಟಿ said...

ಪ್ರಕಾಶಣ್ಣ...

ತು೦ಬಾ ಥ್ಯಾ೦ಕ್ಸ್ ಕಥೆಯನ್ನು ಓದಿದ್ದಕ್ಕೆ... ನಿಮ್ಮ ಸಲಹೆ ಸೂಚನೆಗಳು ನನಗೆ ತು೦ಬಾ ಅಗತ್ಯ ನನ್ನ ಬರವಣಿಗೆಯನ್ನು ಉತ್ತಮ ಪಡಿಸಲು....

ಕಥೆಯನ್ನು ಮೆಚ್ಚಿದ್ದಕ್ಕೆ ಖುಷಿ ಅನಿಸಿತು.

ಮು೦ದಿನ ಭಾಗ ಹಾಕಲು ತು೦ಬಾ ತಡ ಮಾಡುವುದಿಲ್ಲ....

ಸುಧೇಶ್ ಶೆಟ್ಟಿ said...

ವಿದೇಶ್....

ಥ್ಯಾ೦ಕ್ಸ್ ಮಾರಾಯ್ರೆ.... ಈರ್ ಏರ್ ಪ೦ಡ್‍ದ್ ಗೊತ್ತಾತಿಜಿ....

ಸುಧೇಶ್ ಶೆಟ್ಟಿ said...

ವೇಣಿ...

ಈ ಭಾಗವನ್ನು ಮೆಚ್ಚಿದ್ದಕ್ಕೆ ಥ್ಯಾ೦ಕ್ಸ್....ಕಾಗುಣಿತ ತಪ್ಪನ್ನು ಈಗ ಸರಿ ಪಡಿಸಿದ್ದೇನೆ.... ನಾನು ಬರೆಯುವಾಗ ರ‍್ಯಾ೦ಕ್ ಅನ್ನು ಹೇಗೆ ಬರೆಯುವುದು ಎ೦ದು ಗೊತ್ತಾಗಲಿಲ್ಲ.... ಮತ್ತೆ ನೋಡಬೇಕು ಅ೦ದುಕೊ೦ಡಿದ್ದೆ...ಆದರೆ ಮರೆತು ಹಾಗೆ ಪೋಸ್ಟ್ ಮಾಡಿಬಿಟ್ಟೆ...

ಮು೦ದಿನ ಭಾಗದಲ್ಲಿ ಹೆಚ್ಚಿಗೆ ಬರೆಯಲು ಪ್ರಯತ್ನ ಮಾಡುತ್ತೇನೆ...

ಸುಧೇಶ್ ಶೆಟ್ಟಿ said...

ಮುತ್ತುಮಣಿಯವರೇ...

ಮು೦ದಿನ ಭಾಗ ಈ ಭಾನುವಾರಕ್ಕೆ ಹಾಕಲು ಪ್ರಯತ್ನ ಮಾಡುತ್ತೇನೆ :)

ಸಮಸ್ಯೆ ಗೊತ್ತಾಯಿತು.... ನಾನು ಇ೦ಟರ್ನೆಟ್ Explorer ಮೂಲಕ ಪೋಸ್ಟ್ ಮಾಡಿದಾಗಲೆಲ್ಲಾ ಅಪ್‍ಡೇಟ್ ಹೋಗಲಿಲ್ಲ.... ಏಕೆ ಎ೦ದು ಗೊತ್ತಿಲ್ಲ... ಅದಕ್ಕೆ ನಾನು ಹಿ೦ದೆ ಪೋಸ್ಟ್ ಮಾಡಿದುದನ್ನು ಡಿಲೀಟ್ ಮಾಡಿ Mozilla Firefox ಉಪಯೋಗಿಸಿ ಪುನ: ಪೋಸ್ಟ್ ಮಾಡಿದೆ. ಈಗ ಎಲ್ಲರಿಗೂ ಅಪ್‍ಡೇಟ್ ಹೋಗಿದೆ:)

ಸುಧೇಶ್ ಶೆಟ್ಟಿ said...

Hi Mahesh,

You are correct. There is some feed issue when I post using IE. Now I tried with Mozilla and everyone got the updates... going forward I will use Mozilla to post in my blog...

Read this part soon!

ಸುಧೇಶ್ ಶೆಟ್ಟಿ said...

ರವಿಕಾ೦ತ ಅವ್ರೇ...

:) ಬರ್ತಾ ಇರಿ....

ಸುಧೇಶ್ ಶೆಟ್ಟಿ said...

ಪರಾ೦ಜಪೆ ಅವರೇ....

ಧನ್ಯವಾದಗಳು ಮೆಚ್ಚಿದ್ದಕ್ಕೆ....ಬರ್ತಾ ಇರಿ....

ಸುಧೇಶ್ ಶೆಟ್ಟಿ said...

ಚಕೋರ ಅವರೇ....

ತು೦ಬಾ ಚೆನ್ನಾಗಿದೆ ನಿಮ್ಮ ಬ್ಲಾಗಿನ ಹೆಸರು...ಶೈಲಿ ಮೆಚ್ಚಿದ್ದಕ್ಕೆ ತು೦ಬಾ ಥ್ಯಾ೦ಕ್ಸ್.... ನೀವು ಹೇಳಿದ ಹಾಗೆ ಇದನ್ನು ಸಿಡ್ನಿ ಶೆಲ್ದನ್ ಕಾದ೦ಬರಿಗಳಲ್ಲಿ ಕಾಣಬಹುದು..... ಅದು ನನಗೆ ತು೦ಬಾ ಇಷ್ಟ ಆಗಿತ್ತು... ನನ್ನ ಬರಹಗಳಲ್ಲೂ ಅದರ ಛಾಯೆ ಕಾಣುತ್ತಿದೆ....

ನಿಮ್ಮ ಬ್ಲಾಗಿ ನೋಡ್ತೀನಿ...

ಸುಧೇಶ್ ಶೆಟ್ಟಿ said...

ತೇಜಕ್ಕ ತು೦ಬಾ ಥ್ಯಾ೦ಕ್ಸ್...

ಮು೦ದಿನ ಭಾಗವನ್ನು ಆದಷ್ಟು ಬೇಗ ಹಾಕುತ್ತೇನೆ.. ಬರ್ತಾ ಇರಿ....

Ravi said...

The characters are falling in Love & i am falling in love with this article, keep going :-)

ಸುಧೇಶ್ ಶೆಟ್ಟಿ said...

Ravi...

:) I think you have fallen in love with someone, not only the article ;)

ಮನಸು said...

ಸುಧೇಶ್,
ಕಥೆ ಎಂತ ಚೆಂದಾ ಇದೆ, ಕಥೆಯ ಒಂದೊಂದು ಎಳೆಯನ್ನು ಬಹಳ ಸೂಕ್ಷ್ಮವಾಗಿ ಬಂದಿದೆ... ಹೆಸರು ಕರೆಯುವುದು, ಅವಳ ಭಾವನೆಯನ್ನು ಹೇಳುವುದು ಎಲ್ಲವೂ ಚೆನ್ನಾಗಿದೆ...
ಸುಧೇಶ್ ನನ್ನ ಬ್ಲಾಗ್ ನಲ್ಲಿ ನಿಮ್ಮ ಲೇಖನ ಬಿತ್ತರವಾಗಿದ್ದು ತೋರಿಸುವುದೇ ಇಲ್ಲ ಆದ್ದರಿಂದ ನಾನು ಓದಲು ಆಗುತ್ತಲೇ ಇಲ್ಲ.... ಏನು ಇಷ್ಟು ದಿನ ಕಥೆ ಬರೆದಿಲ್ಲವೇ ಸುಧೇಶ್ ಎಂದು ಬಂದು ನೋಡಿದರೆ ಆಗಲೇ ಹಲವಷ್ಟು ಕಾಮೆಂಟ್ ಕೂಡ ಇದ್ದವು.... ತಡವಾದ ಪ್ರತಿಕ್ರಿಯೆಗೆ ಕ್ಷಮೆ ಇರಲಿ
ಕಥೆ ತುಂಬಾ ಚೆನ್ನಾಗಿದೆ ಮುಂದುವರಿಸಿ...

ಸುಧೇಶ್ ಶೆಟ್ಟಿ said...

ಮನಸು ಅವರೇ....

ಏನು ನೀವು ಇನ್ನೂ ನನ್ನ ಕಥೆಯನ್ನು ಓದಿಲ್ಲ ಅ೦ದು ಕೊಳ್ಳುತ್ತಿದೆ... ಈಗ ನೋಡಿದರೆ ನಿಮಗೆ ಅಪ್‍ಡೇಟೇ ಹೋಗಿಲ್ಲ... ಅದು ಏನು ಸಮಸ್ಯೆ ಆಗಿದೆಯೋ ಗೊತ್ತಿಲ್ಲ... ಇನ್ನೂ ಕೆಲವರು ನನಗೆ ಹೀಗೆ ಹೇಳಿದರು... ಆದರೆ ಈಗ ಅವರ ಬ್ಲಾಗಿನಲ್ಲಿ ಸರಿಯಾಗಿ ಬರ್ತಾ ಇದೆ ಅಪ್‍ಡೇಟ್...

ನೀವೊ೦ದು ಸಲ ನನ್ನ ಬ್ಲಾಗ್ ಲಿ೦ಕನ್ನು follow list ನಿ೦ದ ಡಿಲೀಟ್ ಮಾಡಿ, ಇನ್ನೊಮ್ಮೆ Add ಮಾಡಿ.... ಇದು ಉಪಯೋಗವಾಗಬಹುದೇನೋ....

ಕಥೆಯನ್ನು ಮೆಚ್ಚಿದ್ದಕ್ಕೆ ತು೦ಬಾ ಖುಶಿಯಾಯಿತು...

ಚಿತ್ರಾ said...

ಸುಧೇಶ್,

ಧಾರಾವಾಹಿ ತುಂಬಾ ಚೆನ್ನಾಗಿ ಬರುತ್ತಿದೆ . ರೋಮ್ಯಾಂಟಿಕ್ ಆಗಿ , ನವಿರಾಗಿ ಕಚಗುಳಿ ಇಡುತ್ತಾ , ಕುತೂಹಲ ಮೂಡುವಂತೆ ನೀವು ಬರೆಯುತ್ತಿರುವ ಶೈಲಿ ಬಹು ಇಷ್ಟವಾಗುತ್ತಿದೆ.
ಪ್ರಕಾಶಣ್ಣ ಹೇಳಿದ ಹಾಗೆ ಚಿಕ್ಕ ಚಿಕ್ಕ ವಿಷಯಗಳನ್ನೂ ಮನತಟ್ಟುವಂತೆ ಬರೆಯುತ್ತೀರಾ. ಇದರಿಂದ ಓದುಗರೂ ಸಹ ಕಥೆಯನ್ನು ಅನುಭವಿಸುವಂತಾಗುತ್ತದೆ ಎಂದು ನನ್ನ ಅಭಿಪ್ರಾಯ.
ಬೇಗ ಬೇಗ ಮುಂದುವರಿಸಿ. ಮುಂದಿನ ಭಾಗಕ್ಕಾಗಿ ಕಾಯುತ್ತಿದ್ದೇನೆ. ( ನಿಮ್ಮ update ಬರ್ತಾ ಇಲ್ಲ ! ನನಗೂ ಕಾರಣಾಂತರಗಳಿಂದ ಬೇಗ ಬರಲಾಗಲಿಲ್ಲ)

ದಿನಕರ ಮೊಗೇರ.. said...

ರೀ ಸುಧೇಶ್ ನಿಮ್ಮ ಬರವಣಿಗೆ ಸ್ಟೈಲ್ soooper ಕಣ್ರೀ.......ಈ ವಾಕ್ಯ ನಾನು ಈವರೆಗೂ ಎಲ್ಲೂ ಕೇಳಿರಲಿಲ್ಲ...“ನಿನ್ನ ತಲೆಯನ್ನು ಬ್ರಹ್ಮ ತನಗೆ ತಲೆಕೆಟ್ಟಾಗ ಮಾಡಿರಬೇಕು” ಥ್ಯಾಂಕ್ಸ್ ರೀ....... ಹುಡುಗಿಯರ ಭಾವನೆಯನ್ನ ಇಷ್ಟು ಚೆನ್ನಾಗಿ ಹೇಗೆ ಅರ್ಥ ಮಾಡ್ಕೊತಿರಲ್ಲ ಹೇಗೆ.....ನನಗೇನೋ ಸಂಶಯ......

shivu said...

ಸುಧೇಶ್,

ತಡವಾಗಿ ಬಂದಿದ್ದೇನೆ. ಎಂದಿನಂತೆ ಕೆಲಸದ ಒತ್ತಡ.

ಹೇಗಾದರೂ ನಿಮ್ಮ ಈ ಧಾರವಾಹಿಯನ್ನು ತಪ್ಪಿಸುತ್ತೇನಾ...ಈ ಕಂತಂತು ಸ್ವಲ್ಪ ರೊಮ್ಯಾಂಟಿಕ್ ಅನ್ನಿಸಿತ್ತು. ತುಂಬಾ ಚೆನ್ನಾಗಿ ಬರೆಯುತ್ತಿದ್ದೀರಾ....ಮುಂದಿನ ಕಂತುಗಳಗೆ ಬೇಗ ಬರುತ್ತೇನೆ..ಬೇಗ ಹಾಕಿ.

ಸುಧೇಶ್ ಶೆಟ್ಟಿ said...

ಚಿತ್ರಾ ಅವರೇ....

ತು೦ಬಾ ಥ್ಯಾ೦ಕ್ಸ್ ನನ್ನ ಕಥೆಯನ್ನು ಮೆಚ್ಚಿ ಪ್ರೋತ್ಸಾಹಿಸುತ್ತಿರುವುದಕ್ಕೆ....

ಅಪ್‍ಡೇಟ್ ಹೋಗದಿರುವುದಕ್ಕೆ ನನಗೂ ಬೇಜಾರಿದೆ... :( ಯಾಕೆ ಅ೦ತಲೇ ಗೊತ್ತಾಗುತ್ತಿಲ್ಲ.... ಈ ಮೊದಲು Add ಮಾಡಿರುವ ಲಿ೦ಕನ್ನು ಡಿಲೀಟ್ ಮಾಡಿ ಮತ್ತೊಮ್ಮೆ Add ಮಾಡಿ ನೋಡಿ ಹೇಳಿ....

ಸುಧೇಶ್ ಶೆಟ್ಟಿ said...

ಶಿವಣ್ಣ....

ತಡವಾಗಿ ಬ೦ದುದಕ್ಕೆ ಬೇಜಾರಿಲ್ಲ....

ಮು೦ದಿನ ಭಾಗವನ್ನು ಆದಷ್ಟು ಬೇಗ ಹಾಕುತ್ತೇನೆ...

ಸುಧೇಶ್ ಶೆಟ್ಟಿ said...

ದಿನಕರ್ ಅವರೇ...

"ಅನುಭೂತಿ"ಗೆ ಸ್ವಾಗತ....

ತು೦ಬಾ ಥ್ಯಾ೦ಕ್ಸ್ ನನ್ನ ಬ್ಲಾಗಿಗೆ ಬ೦ದು ಕಥೆಯನ್ನು ಮೆಚ್ಚಿದ್ದಕ್ಕೆ....

ಏನು ಸ೦ಶಯ? :)

ದಿನಕರ ಮೊಗೇರ.. said...

ಸಂಶಯ ಬೇರೇನೂ ಇಲ್ಲ, ಇವೆಲ್ಲ ನಿಮ್ಮದೇ ಅನುಭವವೇ ಅಥವಾ ಕಲ್ಪನೆಯೇ ಅಂತ.... ಏನೇ ಇರಲಿ, ತುಂಬಾ ಚೆನ್ನಾಗಿದೆ...ಮುಂದುವರೆಸಿ....

ಸುಧೇಶ್ ಶೆಟ್ಟಿ said...

ದಿನಕರ್ ಅವರೇ...

ಇದು ಸತ್ಯಕ್ಕೆ ಹತ್ತಿರವಾದ ಕಥೆ... ಆ ಕಥೆಗೆ ನನ್ನ ಕಲ್ಪನೆಯ ಹೂರಣವನ್ನು ಬೆರೆಸಿ ನಿಮ್ಮೆದುರಿಗೆ ಇಡುತ್ತಿದ್ದೇನೆ....

ರೂಪಾ ಶ್ರೀ said...

ಸುಧೇಶ್ ಅವರೇ,
ನಾನು ಗಾಡಿ ಓಡಿಸುವಾಗ coffee day ಕಂಡರೆ ನಿಮ್ಮ blog ನೆನಪಾಗುತ್ತದೆ. ಸೊಗಸಾಗಿದೆ ಕಥೆ. ನನಗೆ updates ತಡವಾಗಿ ಸಿಗುತ್ತದೆ. :( ಯಾಕೆ??
":)" -- ಈ ರೀತಿ ಸಂಭಾಷಣೆ ತುಂಬಾ creative ಅನ್ನಿಸಿತು.
ನೀವು ರವಿಯವರಿಗೆ ಕೊಟ್ಟಿರುವ ಉತ್ತರ ಚೆನ್ನಾಗಿದೆ.. ಪ್ರೀತಿಯಲ್ಲಿ ಇರುವವರಿಗೆ ಇದು ಹೆಚ್ಚು ಇಷ್ಟವಾಗಬಹುದೇನೋ..
ಮುಂದುವರೆಸಿ..
:) :)

Divya Mallya - ದಿವ್ಯಾ ಮಲ್ಯ said...

ಸುಧೇಶ್.. ಬೇಗ ಬರಲಿ ಮುಂದಿನ ಕಂತು :)

Post a Comment