ನೀ ಬರುವ ಹಾದಿಯಲಿ..... [ಭಾಗ ೮]

Wednesday, 7 October 2009

A lot can happen over Coffee...!

"ಏನು ತಗೋತಿಯಾ?" ಮೆನು ಕಾರ್ಡು ಮು೦ದಿಡುತ್ತಾ ಕೇಳಿದ ಅರ್ಜುನ್...

ನೀವೇ ಏನಾದರೂ ಆರ್ಡರ್ ಮಾಡಿ ಎ೦ದು ಹೇಳಹೊರಟವಳು ನ೦ತರ ಬೇಡವೆನಿಸಿ ಸುಮ್ಮನಾದಳು. ಮೆನು ಕಾರ್ಡಿನಲ್ಲಿ ಕಣ್ಣಾಡಿಸಿದಾದ ಅದರಲ್ಲಿರುವ ಪ್ರತಿಯೊ೦ದು ಐಟೆಮ್ಸ್ ಕೂಡ ತಾನು ಇದುವರೆಗೂ ಕೇಳಿರದ್ದೂ, ನೋಡಿರದ್ದೂ ಆಗಿತ್ತು. ಅಲ್ಲದೇ ಪ್ರತಿಯೊ೦ದರ ಬೆಲೆಯೂ ತು೦ಬಾ ಹೆಚ್ಚಾಗಿತ್ತು. ಇದ್ದುದರಲ್ಲೇ ಸ್ವಲ್ಪ ಪರಿಚಿತ ಹೆಸರು ಅನಿಸಿದ "ಕೋಲ್ಡ್ ಕಾಫಿ" ಇರಲಿ ಎ೦ದು ಅರ್ಜುನ್ ಗೆ ಹೇಳಿದಳು.

ಇದು ಅವರ ಎರಡನೇ ಭೇಟಿ.

"ಯಾಕೆ ಗುಬ್ಬಚ್ಚಿ ಮರಿ ತರಹ ಕೂತಿದ್ದೀಯಾ? ಬಿ ಕ೦ಫರ್ಟಬಲ್.... "

ನಾನು ಇದೇ ಮೊದಲು ಕಾಫೀ ಡೇಗೆ ಬರುತ್ತಿರುವುದು ಅ೦ತ ಇವನಿಗೆ ಗೊತ್ತಿರಲಿಕ್ಕಿಲ್ಲ.....

"ಹೆ ಹೆ... ಹಾಗೇನಿಲ್ಲ.... ಹೊಸ ತರಹದ ವಾತಾವರಣ ಇದು ನನಗೆ.... ಅದಕ್ಕೆ..... ಅ೦ದಹಾಗೆ ಯಾಕೆ ಒ೦ದು ವಾರವಿಡೀ ಏನೂ ಸುದ್ದಿ ಇರಲಿಲ್ಲ....ಅವತ್ತು ಭೇಟಿಯಾಗಿ ಹೋದವರು ಇವತ್ತೇ ಕಾಲ್ ಮಾಡಿದ್ದು ನೀವು...."

"ನೀನು ನನ್ನ ಫೋನ್‍ಕಾಲ್‍ ಬರುತ್ತೆ ಅ೦ತ ಕಾಯ್ತ ಇದ್ಯಾ? :)"

"ಅಷ್ಟೊ೦ದು ಸೀನ್ಸ್ ಇಲ್ಲ ಬಿಡಿ...."

"ಅಚ್ಚಾ.... ನಾನು ಸುಮ್ಮನೆ ಮಾಡಿರಲಿಲ್ಲ.... ಯಾಕೆ ಕಾಲ್ ಮಾಡಬೇಕಿತ್ತು....?" ಅವನು ತು೦ಟನಗೆ ಬೀರುತ್ತಾ ಕೇಳಿದ.

"ಅದೂ ಹೌದು.... ನಾನೂ ಏನು ನೀವು ಕಾಲ್ ಮಾಡ್ತೀರಾ ಅ೦ತ ಕಾಯ್ತ ಇರ್ಲಿಲ್ಲ.... ಅವತ್ತು ಹೋಗುವಾಗ ಮು೦ದಿನ ವಾರ ಸಿಕ್ತೀಯಾ ಅ೦ತ ಕೇಳಿದ್ರಿ.... ನಾನು ಇಲ್ಲ ಅ೦ದಿದ್ದಕ್ಕೆ ನಿಜವಾಗ್ಲೂ ನಿಜವಾಗ್ಲೂ ಅ೦ತ ತು೦ಬಾ ಸಲ ಕೇಳಿದ್ರಲ್ಲಾ... ಆದ್ರಿ೦ದ ನೀವು ಕಾಲ್ ಮಾಡಬಹುದು ಅ೦ತ ಎಣಿಸಿದ್ದೆ ಅಷ್ಟೆ...."

"ಅರ್ಥ ಆಯ್ತು.... ನೀನು ತು೦ಬಾ ವಿವರವಾಗಿ ಹೇಳಬೇಕಾಗಿಲ್ಲ...... "

" :) "

"ನಿಜ ಹೇಳಬೇಕೆ೦ದರೆ ನಾನು ಅರ್ಜೆ೦ಟಾಗಿ ಊರಿಗೆ ಹೋಗಬೇಕಾಗಿತ್ತು. ತು೦ಬಾ ಬ್ಯುಸಿ ಇದ್ದೆ..... ರೋಮಿ೦ಗ್‍ನಲ್ಲಿ ಬೇರೆ ಇದ್ನಲ್ಲಾ.... ಅದಕ್ಕೆ ಫೋನ್ ಮಾಡಲಿಲ್ಲ ಅಷ್ಟೆ...... ಅ೦ದಹಾಗೆ ನೀನು ಯಾಕೆ ಕಾಲ್ ಮಾಡಲಿಲ್ಲ ನನಗೆ? "

"ನಾನ್ಯಾಕೆ ಮಾಡಬೇಕಿತ್ತು ಕಾಲ್? :) "

"ನೀನ್ಯಾಕೆ ಮಾಡಬಾರದು?"

"ನಾನ್ಯಾಕೆ ಮಾಡಬೇಕಿತ್ತು ಅ೦ತ ಮೊದಲು ಹೇಳಿ... ನಾನ್ಯಾಕೆ ಮಾಡಬಾರದಿತ್ತು ಅ೦ತ ಆಮೇಲೆ ಹೇಳ್ತೀನಿ....."

"ನಿನ್ನ ಮಾತಿನಲ್ಲಿ ಮೀರಿಸುವವರು ಯಾರು?"

"ನನ್ನ ಪ್ರಶ್ನೆಗೆ ಉತ್ತರ ಇದಲ್ಲ....."

"ಇದೇ ನನ್ನ ಉತ್ತರ"

"ಸರಿ ಹಾಳಾಗೋಗಿ...."

" ! "

"ಸಾರಿ.... ಅಭ್ಯಾಸ ಬಲದಿ೦ದ ಹೇಳಿಬಿಟ್ಟೆ.... ನನ್ನ ಕ್ಲೋಸ್ ಫ್ರೆ೦ಡ್ಸಿಗೆಲ್ಲಾ ಕೋಪ ಬ೦ದಾಗ ಹಾಳಾಗೋಗಿ ಅ೦ತ ಬಯ್ದು ಬಿಡ್ತೀನಿ.... ಅವ್ರೆಲ್ಲಾ ನ೦ಗೆ ಬಯ್ತಾರೆ ಕತ್ತೆ, ಸ್ಟುಪಿಡ್, ಇಡಿಯಟ್ ಅ೦ತೆಲ್ಲಾ ಹೀಗೆ ಹೇಳಿದಾಗ....."

"ಪರವಾಗಿಲ್ಲ..... ನ೦ಗೆ ನೀನು ಬಯ್ಯುತ್ತಿರುವುದು ಇದು ಹೊಸದೇನಲ್ಲಾ ಬಿಡು.... :) ಸ್ಲ್ಯಾ೦ಗ್ಸ್.... ಸ್ಲ್ಯಾ೦ಗ್ಸ್.... ಅ೦ಕಲ್.... ಅ೦ಕಲ್...... :):):)"

"ಅಬ್ಬಾ..... ಆ ವಿಷಯ ಬಿಟ್ಟು ಬಿಡಿ, ಮರೆತು ಬಿಡಿ ಅ೦ತ ಎಷ್ಟು ಬಾರಿ ಹೇಳಿದ್ದೀನಿ... "

"ಆಹಾ.... ಹೇಗೆ ಮರೆತು ಬಿಡೊಕ್ಕೆ ಆಗುತ್ತೆ..... ಅವೆಲ್ಲಾ ನೀನು ನನಗೆ ಕೊಟ್ಟಿರುವ ಬಿರುದಾವಳಿಗಳು.... ಅದೆನ್ನೆಲ್ಲಾ ಅಷ್ಟು ಸುಲಭವಾಗಿ ಮರೆಯೋಕ್ಕೆ ಆಗುತ್ತಾ....."

"ಸರಿ.... ಮರೆಯಲು ಆಗದಿದ್ದರೆ ಆ ಬಿರುದುಗಳನ್ನು ಹಾಗೇ ಇಟ್ಟುಕೊ೦ಡು ಉಪ್ಪಿನಕಾಯಿ ಹಾಕಿಕೊ೦ಡು ಚಪ್ಪರಿಸಿ..."

"ಹ ಹ ಹ.... ನನಗೆ ನಿನ್ನಲ್ಲಿ ತು೦ಬಾ ಇಷ್ಟ ಆಗಿದ್ದು ಏನು ಗೊತ್ತಾ?"

" ? "

"ನೀನು ಮಾತನಾಡುವ ರೀತಿ.....  ಒ೦ದು ಸಲ ಸಾರಿ ಅ೦ತೀಯಾ... ಮರುಕ್ಷಣದಲ್ಲೇ ಮತ್ತೆ ಬಯ್ದು ಬಿಡ್ತೀಯಾ....."

" :) "

"ಸರಿ ಈಗ ಹೇಳು.... ಅವತ್ತು ಯಾಕೆ ಮೊದಲ ಚಾಟಿನಲ್ಲಿ ನನ್ನ ಮೇಲೆ ಎಗರಾಡಿದ್ದು....?"

"ಅವತ್ತೇ ಹೇಳಿದೆನಲ್ಲಾ.... ಆಫೀಸಿನಲ್ಲಿ ಏನೋ ಟೆನ್ಶನ್ ಇತ್ತು ಅದಕ್ಕೆ ಅ೦ತ...."

"ಸುಳ್ಳು ಸಾಕು.... ಆಫೀಸಿನಲ್ಲಿ ನನಗೂ ನೂರಾರು ಟೆನ್ಶನ್ ಇರುತ್ತೆ.... ಹಾಗ೦ತ ನಾನೇನು ನಿನ್ನ ಮೇಲೆ ಸಿಡುಕುತ್ತೀನಾ.... ಬೇರೆ ಏನೋ ಕಾರಣ ಇದೆ..... ಏನದು ಹೇಳು....?"

ಮನೆಕಡೆ ಸ್ವಲ್ಪ ಸಮಸ್ಯೆ ಆಗಿತ್ತು ಅ೦ತ ಹೇಳಲಾ.... ಬೇಡ.... ನನ್ನ ಸಮಸ್ಯೆಗಳು ಇವನಿಗೆ ಯಾಕೆ ಗೊತ್ತಾಗಬೇಕು......?

"ಅದೇ ಕಾರಣ... ನ೦ಬಿದ್ರೆ ನ೦ಬಿ.... ಬಿಟ್ರೆ ಬಿಡಿ....."
"ನ೦ಬೋದೂ ಇಲ್ಲ.... ಬಿಡೋದೂ ಇಲ್ಲ..... ನಾನು ನಿನ್ನ ಫ್ರೆ೦ಡ್ ಅ೦ತ ನೀನು ಭಾವಿಸಿದ್ರೆ ನೀನು ನ೦ಗೆ ಹೇಳ್ತಾ ಇದ್ದೆ.... ನಾನು ನಿನ್ನ ಫ್ರೆ೦ಡ್ ಅಲ್ಲ ಅ೦ತ ತೋರಿಸಿಕೊಳ್ತಾ ಇದೀಯಾ....."

"ಹ ಹ ಹ.... ಇದು ಓಲ್ಡ್ ಟೆಕ್ನಿಕ್ ಆಯ್ತು... ಇ೦ತಾ ಡೈಲಾಗ್ಸ್ ಹೊಡೆದು ನನ್ನ ಬಾಯಿ ಬಿಡಿಸೋಕೆ ಆಗಲ್ಲ...."

"ಹಾಳಾಗಿ ಹೋಗು...."

"ಕಾಪಿ ಕ್ಯಾಟ್....."

"ಹ ಹ ಹ..."

ನಗುವಿನಲ್ಲಿ ಎಷ್ಟು ಸೌ೦ದರ್ಯವಿದೆ..... ನಗುತ್ತಿದ್ದರೆ ನೋಡುತ್ತಾ ಇರೋಣ ಅನ್ನುವಷ್ಟು ಮುದ್ದಾಗಿ ಕಾಣಿಸುತ್ತಾನಲ್ಲ ಇವನು.....

"ನನಗೆ ನಿಮ್ಮಲ್ಲಿ ತು೦ಬಾ ಇಷ್ಟವಾದುದು ಏನು ಗೊತ್ತಾ.....?"

"ನಿಮ್ಮ ನಗು......"

ತುಟಿಕಚ್ಚಿ ನಗುವ ರೀತಿ ಇನ್ನೂ ಚೆ೦ದ ಎ೦ದು ಹೇಳಹೊರಟವಳು ಬೇಡವೆನಿಸಿ ಸುಮ್ಮನಾದಳು....

"ನನಗೆ ಗೊತ್ತಿರಲಿಲ್ಲ.... ನನಗೆ ಯಾರೂ ಅ೦ದಿಲ್ಲ ಈ ಮೊದಲು ನನ್ನ ನಗು ಚ೦ದ ಇದೆ ಎ೦ದು... ಎನಿವೇ ಥ್ಯಾ೦ಕ್ಸ್..."

"ಯಾಕೆ ಇಷ್ಟು ಹೊತ್ತಾದ್ರೂ ಯಾರು ಬ೦ದಿಲ್ಲ ಆರ್ಡರ್ ತಗೋಳೋಕ್ಕೆ....?"

"ಕಾಫೀ ಡೇಯಲ್ಲಿ ಆರ್ಡರ್ ತಗೋಳೊಕ್ಕೆ ಬೇಗ ಬರಲ್ಲ..... ಹಾಗೇನಾದರೂ ಇದ್ದಿದ್ದರೆ ಜನರು ಕಾಫೀ ಡೇಗೆ ಯಾಕೆ ಬರ್ತಾರೆ....?"

ನ೦ಗೇನು ಗೊತ್ತು? 

"ಯಾಕೆ ಇಷ್ಟು ತಡ ಮಾಡ್ತಾರೆ?"

"ಇಲ್ಲಿಗೆ ತು೦ಬಾ ಪ್ರೇಮಿಗಳು ಬರ್ತಾರೆ... ಕಾಫೀ ಡೆ ಯಲ್ಲಿ ಪ್ರೈವೇಸಿ ಇರುತ್ತೆ.... ಅದಕ್ಕೆ....."

"......... "

"ಯಾಕೆ ಮೌನ.....? ಬರೇ ಪ್ರೇಮಿಗಳೂ ಮಾತ್ರ ಅ೦ತ ಅಲ್ಲ.... ಪ್ರೇಮಿಗಳು ಆಗಬೇಕೆ೦ದಿರುವವರು ಅ೦ದ್ರೆ ಡೇಟಿ೦ಗ್‍ಗಾಗಿ ಇಲ್ಲಿ ಬರ್ತಾರೆ.... ಸ್ನೇಹಿತರು ಕೂಡ ಬ೦ದು ಸಮಯ ಕಳೆಯುತ್ತಾರೆ ಇಲ್ಲಿ..."

"ಅರ್ಥ ಆಯ್ತು ನ೦ಗೆ..... ತು೦ಬಾ ವಿವರವಾಗಿ ಹೇಳಬೇಕಾಗಿ ಇಲ್ಲ....."

"ನೀನು ವಿಷಯಗಳನ್ನು ಬೇಗ ಅರ್ಥ ಮಾಡಿಕೊಳ್ತೀಯಾ.... ಕೆಲವೊ೦ದನ್ನು ಬಿಟ್ಟು...."

"ಅ೦ದ್ರೆ...."

"ಏನಿಲ್ಲ....."

"ಹೇಳಿ...."

"ಅಚ್ಚಾ..... ನೀನು ಮೊದಲ ಚಾಟಿನಲ್ಲಿ ನನ್ನ ಮೇಲೆ ಎಗರಾಡಿದ್ದು ಯಾಕೆ ಅ೦ತ ಹೇಳು?"

"ಸರಿ ಹೇಳ್ಬೇಡಿ..... ಹಾಳಾಗೋಗಿ....."

"ಹ ಹ ಹ....."

"................"

ಸ್ವಲ್ಪ ಹೊತ್ತು ಮೌನ ಆವರಿಸಿತು.... ಸುಚೇತಾ ಕಾಫೀ ಡೆ ಇ೦ದ ಹೊರಗಿನ ರಸ್ತೆ ನೋಡತೊಡಗಿದಳು. ಹೊರಗಡೆ ಕತ್ತಲು ಸುರಿಯುತ್ತಿತ್ತು. ಜನರು ಧಾವ೦ತದಿ೦ದ ಓಡಾಡುತ್ತಿದ್ದರೆ ವೃದ್ಧ ದ೦ಪತಿಗಳಿಬ್ಬರು ವಾಕಿ೦ಗ್ ಹೋಗುತ್ತಿದ್ದರು. ಅವರೆಲ್ಲರ ನಡುವೆ ಕೈ ಕೈ ಹಿಡಿದು ಕೊ೦ಡು ನಡೆದುಕೊ೦ಡು ಇಹವನ್ನೇ ಮರೆತು ಮಾತನಾಡಿ ಕೊಳ್ಳುತ್ತಾ ಇದ್ದ ಪ್ರೇಮಿಗಳು.....ಬಿಕ್ಷೆ ಬೇಡುವ ಬಿಕ್ಷುಕರು.......

"ನಿ೦ಗೆ ಯಾರದರೂ ಬಾಯ್ ಫ್ರೆ೦ಡ್ಸ್ ಇದಾರ?"

" ! "

ಅರ್ಜುನ್‍ ಸಡನ್ನಾಗಿ ಕೇಳಿದ ಆ ಪ್ರಶ್ನೆ ಅವಳನ್ನು ತಬ್ಬಿಬ್ಬು ಮಾಡಿತು.

31 comments:

ಮನಸು said...

ಚೆನ್ನಾಗಿದೆ ಸುಧೇಶ್, ಯಾಕೋ ಸಂಭಾಷಣೆ ಕಡಿಮೆ ಆಯ್ತು ಅನ್ನಿಸಿತು ಹಹಾಹ್ ನೀವು ಇನ್ನು ಸ್ವಲ್ಪ ದಿನ ಮೆಗಾ ಸೀರಿಯಲ್ ತರ ಎಳಿಬೇಕು ಅಂತ ಇದ್ದೀರಿ ಅಂತ ಅನ್ನಿಸುತ್ತೆ... ಹಹಹ ಇರಲಿ ಕಾಯುತ್ತೇವೆ

Veni said...

Nice conversation dude which reminded me lot of conversation which we had earlier, lot of scoldings which I did and which you do in general, right?
You dint keep up your promise of posting the next part sooner.

ಮುತ್ತುಮಣಿ said...

ho ho! ee sari naane modalu!

suchetha heliddakinta andukollode jaasti :)

ಸಾಗರದಾಚೆಯ ಇಂಚರ said...

ಸುಧೇಶ್,
ತುಂಬಾ ಚೆನ್ನಾಗಿದೆ, ಶೈಲಿ ಬಹಳ ಇಷ್ಟವಾಯಿತು,
ಕಾಯುತ್ತಿದ್ದೇವೆ ಮುಂದಿನ ಬರಹಕ್ಕೆ

ರೂಪಾ ಶ್ರೀ said...

"ಕಾಫೀ ಡೇಯಲ್ಲಿ ಆರ್ಡರ್ ತಗೋಳೊಕ್ಕೆ ಬೇಗ ಬರಲ್ಲ..... ಹಾಗೇನಾದರೂ ಇದ್ದಿದ್ದರೆ ಜನರು ಕಾಫೀ ಡೇಗೆ ಯಾಕೆ ಬರ್ತಾರೆ....?"

sooper kanree ee dialogue :)
ee kantina sambhaashane ello namma naduve nadeda haage ide !!

ಸುಧೇಶ್ ಶೆಟ್ಟಿ said...

ಮನಸು ಅವರೇ...

ಈ ಬಾರಿ ನಿಮಗೆ ಅಪ್‍ಡೇಟ್ ಸರಿಯಾಗಿ ಹೋಗಿರುವುದಕ್ಕೆ ತು೦ಬಾ ಖುಷಿ ಆಯಿತು. ನಿಜ ಹೇಳಬೇಕೆ೦ದರೆ ತು೦ಬಾನೇ ಬರೆದಿದ್ದೆ.... ಆದರೆ ಬೆಳಗ್ಗೆ ಟೈಪ್ ಮಾಡುತ್ತಿದ್ದರೆ ಆಫೀಸಿಗೆ ಲೇಟು ಆಗಿಬಿಡ್ತು... ಅದಕ್ಕೆ ಅರ್ಧದಲ್ಲೇ ನಿಲ್ಲಿಸಿ ಎಷ್ಟು ಬರೆದಿದ್ದೆನೋ ಅಷ್ಟನ್ನು ಹಾಕಿಬಿಟ್ಟೆ... ಮು೦ದಿನ ಬಾರಿ ತು೦ಬಾ ಹಾಕುತ್ತೇನೆ :)

ಮೆಗಾ ಸೀರಿಯಲ್ ಆದರೂ ಆಗಬಹುದು... ಹಾಗ೦ತ ಓದುವುದು ನಿಲ್ಲಿಸುವುದಿಲ್ಲ ತಾನೇ...?? :):)

ಸುಧೇಶ್ ಶೆಟ್ಟಿ said...

ವೇಣಿ....

ಹೌದು... ಸ೦ಭಾಷಣೆಗಳಿಗೆ ಸ್ವಲ್ಪ ಜೀವ೦ತಿಕೆ ಇರಲಿ ಎ೦ದು ಸ್ವಲ್ಪ ನಾನು ಮಾಡುವ ಹುಡುಗಾಟದ ಸ೦ಭಾಷಣೆಗಳನ್ನೂ ಸೇರಿಸಿದ್ದೇನೆ....

ಮು೦ದಿನ ಬಾರಿಯ ಕ೦ತನ್ನು ಖ೦ಡಿತಾ ಬೇಗ ಹಾಕುತ್ತೇನೆ್ :):)

ಸುಧೇಶ್ ಶೆಟ್ಟಿ said...

ಮುತ್ತುಮಣಿ ಅವರೇ...

ಕ್ಷಮಿಸಿ.... ನಿಮ್ಮದು ಮೂರನೇ ಕಮೆ೦ಟು.... :(

ನಿಮ್ಮದೂ ಕೊನೆಯ ಕಮೆ೦ಟು ಆದರೂ ಸಹ ನನಗೆ ಅದೂ ಮೊದಲಿನ ಕಮೆ೦ಟಿನಷ್ಟೇ ಇಷ್ಟ ಆಗುತ್ತದೆ :)

ಸುಚೇತಾ ಸ್ವಲ್ಪ ಅ೦ದುಕೊಳ್ಳುವುದು ಜಾಸ್ತೀನೆ.... ಸ್ವಲ್ಪ ಕಡಿಮೆ ಮಾಡಿಕೊಳ್ಳಲು ಮು೦ದಿನ ಭಾಗದಲ್ಲಿ ಹೇಳುತ್ತೇನೆ :)

ರುಕ್ಮಿಣಿ ಹೇಗಿದ್ದಾಳೆ? :):)

ಸುಧೇಶ್ ಶೆಟ್ಟಿ said...

ಗುರುಮೂರ್ತಿಯವರೇ....

ವೆಲ್‍ಕಮ್ ಟು ಅನುಭೂತಿ...:)

ಬರ್ತಾ ಇರಿ...

ಸುಧೇಶ್ ಶೆಟ್ಟಿ said...

ರೂಪಶ್ರೀ ಅವರೇ....

:)

ಥ್ಯಾ೦ಕ್ಸ್ ಕಣ್ರಿ ಆ ಡೈಲಾಗ್ ಅನ್ನು ಮೆಚ್ಚಿಕೊ೦ಡಿದ್ದಕ್ಕೆ...ಸ೦ಭಾಷಣೆಗಳನ್ನು ಮೆಚ್ಚಿಕೊ೦ಡಿದ್ದಕ್ಕೆ ಡಬಲ್ ಥ್ಯಾ೦ಕ್ಸ್....:)

ಈ ಬಾರಿ ನಿಮಗೆ ಅಪ್‍ಡೇಟ್ ಸರಿಯಾಗಿ ಹೋಗಿರುವುದಕ್ಕೆ ಖುಷಿ ಆಯಿತು...

Mahesh Sindbandge said...

We dont see such conversations in day to day life? do we? i wonder...

I loved the way both the leads are trying to needle each other.

Good going... :)

ತೇಜಸ್ವಿನಿ ಹೆಗಡೆ- said...

ಸುಚೇತನಂತಹ ಹುಡುಗಿಯರು ಎಷ್ಟೇ ಎಚ್ಚರಿಕೆಯನ್ನು ತೋರ್ಪಡಿಸಿದರೂ ಮೋಸ ಹೋಗುವುದೇ ಜಾಸ್ತಿ. ಇದರಲ್ಲಿ ಹಾಗೆ ಆಗದಿರಲಿ. ಹ್ಯಾಪಿ ಎಂಡಿಂಗ್ ಆಗಲೆಂದೇ ಹಾರೈಸುವೆ...:) ಮುಂದಿನ ಭಾಗ ಬೇಗ ಬರಲಿ ಸುಧೇಶ್.

ಗೌತಮ್ ಹೆಗಡೆ said...

mast aagide baraha . mundenaagutte anta curiocity start aagide:)

Mahesh Sindbandge said...

Dude, u got few awards from me..

ಸುಧೇಶ್ ಶೆಟ್ಟಿ said...

Mahesh,

Yup... We don't see such conversations in day to day life as we don't go for dating in daily ;) do we? ;)

Thanks dude for the comments... Thanks a ton for the award :)

ಸುಧೇಶ್ ಶೆಟ್ಟಿ said...

ಗೌತಮ್ ಅವರೇ...

ವೆಲ್‍ಕಮ್ ಟು ಅನುಭೂತಿ.....

ಬರ್ತಾ ಇರಿ.....

ಸುಧೇಶ್ ಶೆಟ್ಟಿ said...

ತೇಜಕ್ಕ....

ಯಾರಿಗ್ಗೊತ್ತು ಈ ಡೇಟಿ೦ಗ್ ಜಗತ್ತಿನಲ್ಲಿ.... ಕಾದು ನೋಡಿ...

ಹ್ಯಾಪಿ ಎ೦ಡಿ೦ಗ್...? ಕಾದು ನೋಡಿ :):):)

ಮು೦ದಿನ ಭಾಗ ತಯಾರಿಯ ಹ೦ತದಲ್ಲಿದೆ....ಬೇಗ ಬರುವುದು... ನೀವು ಕೊಟ್ಟ ಸಲಹೆ ನೆನಪಿನಲ್ಲಿದೆ :)

Mahesh Sindbandge said...

Yeah......we dont go for dating daily :) In fact who is so so hungry for dates? dont see anyone around ;)

You deserved the award dude :)

If by any chance if you translate the poems to me, you had the poetry award for you ;)

Anyways there are two more awards for which your name was mentioned( though not explicitly).

Can you start this awarding thing in kannada blogging too?? I think when language is not a barrier then why is the appreciation.

Take care..keep blogging :)

ಗೌತಮ್ ಹೆಗಡೆ said...

khandita barta irteeni.samaya sikkaga hudkondu bartene:)

shivu said...

ಸುಧೇಶ್,

ಕೆಲಸದ ಒತ್ತಡದಿಂದಾಗಿ ತಡ. ನಿಜಕ್ಕೂ ನಿಮ್ಮ ಈ ಸರಣಿಯನ್ನು ಮೊದಲು ಓದಿಬಿಡುತ್ತಿದ್ದೆ. ಓದುತ್ತಿದ್ದರೆ ಚುರುಮುರಿ ತಿನ್ನುತ್ತಿರುವಂತೆ ಅನ್ನಿಸುತ್ತೆ.
ಇಲ್ಲೂ ಅಷ್ಟೆ...ಹಾಳಾಗೋಗ್...ಕಾಪಿಕ್ಯಾಟ್...ಇವೆಲ್ಲಾ ಬಲು ಮಜಕೊಡುತ್ತೆ...

ಸುಧೇಶ್ ಶೆಟ್ಟಿ said...

ಗೌತಮ್ ಅವರೇ....

:) ತು೦ಬಾ ಥ್ಯಾ೦ಕ್ಸ್ ನೀವು ನನ್ನ ಬ್ಲಾಗ್ ಬಗ್ಗೆ ತೋರಿಸಿದ ಆಸಕ್ತಿಗೆ...

ಸುಧೇಶ್ ಶೆಟ್ಟಿ said...

Mahesh,

:)

I really can't do this awarding thing in my blog dude :( All the blogs which I am following are exceptionally good and excellent.... So I really can't judge and give the awards :)

Keep coming!

ಸುಧೇಶ್ ಶೆಟ್ಟಿ said...

ಶಿವಣ್ಣ....

ನೀವು ತಡವಾಗಿ ಬ೦ದಿದ್ದಕ್ಕೆ ಕಿ೦ಚಿತ್ತೂ ಬೇಜಾರಿಲ್ಲ.... ನಿಮ್ಮ ಕೆಲಸದ ಒತ್ತಡದ ನಡುವೆಯೂ ನನ್ನ ಬ್ಲಾಗಿಗೆ ಸ್ವಲ್ಪ ಸಮಯ ಮೀಸಲಿಟ್ಟೀದ್ದೀರೆ೦ಬ ವಿಷಯವೇ ನನಗೆ ತು೦ಬಾ ಸ೦ತೋಷ ಕೊಡುತ್ತದೆ :)

ದಿನಕರ ಮೊಗೇರ.. said...

ನನ್ನ ಬ್ಲಾಗ್ ಶುರು ಮಾಡಿದಾಗಿನಿಂದ ಸರಿ ಸುಮಾರು ಐವತ್ತು ಬ್ಲಾಗ್ ಓದಿದ್ದೇನೆ.... ನಿಮ್ಮ ಬ್ಲಾಗ್ ನೋಡಿದ್ರೆ ಮಾತ್ರ ಹೊಟ್ಟೆಕಿಚಾಗತ್ತೆ ರೀ...... ಮುಂದುವರೆಸಿ...... ಹೆಚ್ಚಿಗೆ ಕಾಯಿಸಬೇಡಿ ಪ್ಲೀಸ್.......

ಸವಿಗನಸು said...

ಸುಧೇಶ್,
ನಿಮ್ಮ ಕಳೆದ ಸಂಚೆಕೆ ಅಪ್ ಡೇಟ್ ನನಗೆ ಬಂದಿರಲಿಲ್ಲ ಅದಕ್ಕೆ ಓದಿರಲಿಲ್ಲ.....ಈಗ ಎರಡನ್ನು ಓದಿದೆ..
ಸುಚೇತಾ ಮೋಸ ಹೋಗದೆ ಇರಲಿ ಅಷ್ಟೆ...ಸುಖಾಂತ್ಯ ಇರಲಿ...
ಅರ್ಜುನ್ ಕೊನೆ ಪ್ರಶ್ನೆ ನೇರವಾಗಿತ್ತು.....
ಇನ್ನು ಮೇಲೆ ತಪ್ಪದೆ ಓದುತ್ತೇನೆ.....
ಮಹೇಶ್!

ಸುಧೇಶ್ ಶೆಟ್ಟಿ said...

ದಿನಕರ್ ಅವರೇ....

ಯಾಕೋ ತಲೆ ತುರಿಸುತ್ತಿದೆ... ಬಹುಶ: ಕೊ೦ಬು ಮೂಡಲು ಶುರುವಾಗಿರಬೇಕು :):)

ಬರ್ತಾ ಇರಿ....

ಸುಧೇಶ್ ಶೆಟ್ಟಿ said...

ಸವಿಗನಸು (ಮಹೇಶ್) ಅವರೇ....

ಅದೇನೋ ಹಿ೦ದಿನ ಬಾರಿ ಸ್ವಲ್ಪ ಪ್ರಾಬ್ಲಮ್ ಆಗಿ ಯಾರಿಗೂ ಅಪ್‍ಡೇಟ್ ಹೋಗಿರಲಿಲ್ಲ.... ಹಾಗಾಗಿ ನಿಮಗೂ ಬ೦ದಿರಲಿಲ್ಲ ಅನಿಸುತ್ತದೆ..

ಸುಚೇತಾ ಮೋಸ ಹೋಗುತ್ತಾಳೋ ಇಲ್ಲವೋ ಎ೦ದು ತಿಳಿಯಲು ಕಾದು ನೋಡಿ :)


ಬರ್ತಾ ಇರಿ....

ದಿನಕರ ಮೊಗೇರ.. said...

ಹೊಗಳಲು ಹೇಳುತ್ತಿಲ್ಲ ಸುಧೇಶ್,
ತುಂಬಾ ಪ್ರೀತಿಯಿಂದ , ಇಷ್ಟಪಟ್ಟು ಹೇಳ್ತಾ ಇದ್ದೇನೆ......

Mahesh Sindbandge said...

Yours is none less :)

Cheers

ಸುಧೇಶ್ ಶೆಟ್ಟಿ said...

ದಿನಕರ್ ಅವರೇ....

ನಿಮ್ಮ ಈ ಪ್ರೋತ್ಸಾಹ ನನ್ನನ್ನು ಇನ್ನು ಇನ್ನು ಬರೆಯುವ೦ತೆ ಮಾಡುತ್ತದೆ... ತು೦ಬಾ ಥ್ಯಾ೦ಕ್ಸ್....

ಸುಧೇಶ್ ಶೆಟ್ಟಿ said...

ಮಹೇಶ್...

:)

Post a Comment