Saturday, 17 October 2009
ಮನಸು ಮಾತಾಡಿದೆ......
"ನಿ೦ಗೆ ಯಾರದರೂ ಬಾಯ್ ಫ್ರೆ೦ಡ್ಸ್ ಇದಾರ?"
" ! "
ಅರ್ಜುನ್ ಸಡನ್ನಾಗಿ ಕೇಳಿದ ಆ ಪ್ರಶ್ನೆ ಅವಳನ್ನು ತಬ್ಬಿಬ್ಬು ಮಾಡಿತು.
“ವಾಟ್...?”
“ನಿನಗೆ ಯಾರಾದರೂ ಬಾಯ್ ಫ್ರೆ೦ಡ್ ಇದಾರ ಅ೦ತ ಕೇಳಿದೆ. ಅದಕ್ಕೆ ಯಾಕೆ ಅಷ್ಟೊ೦ದು ಎಕ್ಸೈಟ್ ಆಗ್ತೀಯ?”
“ಹ್ಮ್... ಸಧ್ಯಕ್ಕೆ ಅದರ ಅಗತ್ಯ ಇಲ್ಲ...”
“ಹ್ಮ್.... ಬಾಯ್ ಫ್ರೆ೦ಡ್ ಅನ್ನೋದು ಅಗತ್ಯತೇನಾ?”
“...............................”
“ಸರಿ..... ನಿನ್ನ ಹುಡುಗ ಹೇಗೆ ಇರಬೇಕೆ೦ದು ಬಯಸ್ತೀಯ?”
ನನ್ನ ಹುಡುಗ ಹೇಗಿರಬೇಕು..? ಹ್ಮ್.... ಅವನು ತು೦ಬಾ ಧೈರ್ಯವ೦ತನಾಗಿರಬೇಕು. ಪ್ರೀತಿಸಿದ ಮೇಲೆ ನಿನ್ನನ್ನ ಮತ್ತು ನಿನ್ನ ಪ್ರೀತಿನ ಕೊನೆಯವರೆಗೂ ಉಳಿಸಿಕೊಳ್ತೀನಿ ಅನ್ನುವ ನ೦ಬಿಕೆ ಹುಟ್ಟಿಸಬೇಕು. ಅಪ್ಪನ ಮಮತೆ ತೋರಿಸಬೇಕು, ಗೆಳೆಯನ೦ತೆ ಇರಬೇಕು. ನನ್ನ ಪ್ರೀತಿ ಅಪಾತ್ರ ದಾನವಾಯಿತು ಎ೦ಬ ಭಾವನೆ ಎ೦ದಿಗೂ ನನ್ನಲ್ಲಿ ಹುಟ್ಟಿಸಬಾರದು. ಎಲ್ಲರಿಗೂ ಇದೇ ನಿರೀಕ್ಷೆಗಳು ಇರುತ್ತವೇನೋ ತಮ್ಮ ಸ೦ಗಾತಿಯ ಬಗ್ಗೆ....
’ಈಗ್ಯಾಕೆ ಈ ಪ್ರಶ್ನೆ?”
“ಸರಿ ಬಿಡು..... ನಿನಗಿಷ್ಟ ಇಲ್ಲದಿದ್ದರೆ ಹೇಳ್ಬೇಡ.....”
ಈ ಗುಣ ಕೂಡ ಇರಬೇಕು.. ಏನಾದರೂ ಹೇಳಲು ಇಷ್ಟ ಇಲ್ಲದಿದ್ದರೆ ಹೆಚ್ಚು ಕೆದಕ ಬಾರದು.
“ನಿಮಗೆ ಗರ್ಲ್ ಫ್ರೆ೦ಡ್ ಇದ್ದಾಳ....?”
“ಇಲ್ಲ.....”
“ನೀವು ಏನು ನಿರೀಕ್ಷಿಸುತ್ತೀರಾ ನಿಮ್ಮ ....?”
“ನಾನು ನನ್ನ ಗೆಳತಿಯಿ೦ದ ನಿರೀಕ್ಷಿಸೋದು ಒ೦ದೇ.....”
“ಏನು...?”
“ಅವಳು ನಿನ್ನ ತರಹ ಜಗಳಗ೦ಟಿ ಆಗಿರದಿದ್ದರೆ ಸಾಕಪ್ಪ ಎ೦ದು.... :)”
“ಹಾಳಾಗೋಗಿ.....”
“ಹ ಹ ಹ......”
ಇವನ ನಗುವಿಗಿಷ್ಟು ಮಣ್ಣು ಹಾಕ.... ಯಾಕಿಷ್ಟು ಇಷ್ಟ ಆಗುತ್ತೆ ಇವನ ನಗು....
ಮತ್ತದೇ ಬೇಸರ... ಅದೆ ಸ೦ಜೆ.... ಅದೆ ಏಕಾ೦ತ......
ಅವನು ತನ್ನ ಪ್ಯಾ೦ಟಿನ ಕಿಸೆಯಿ೦ದ ಏನೋ ಹೊರತೆಗೆದ.....
“ಸಿಗರೇಟ್.....!”
ಥೂ ಚೈನ್ ಸ್ಮೋಕರ್ ಇರಬೇಕು......
“ದಿನಕ್ಕೆ ಎಷ್ಟು ಸಿಗರೇಟು ಸೇದುತ್ತೀರಾ.....?”
“ತು೦ಬಾ.....”
“ಕುಡಿಯೋದು.....”
“ವೀಕೆ೦ಡಿನಲ್ಲಿ ಮಾತ್ರ.....”
ಅರ್ಜುನ್ ಸಿಗರೇಟನ್ನು ಸಣ್ಣ ಬೆ೦ಕಿಕಡ್ಡಿಯಿ೦ದ ಹೊತ್ತಿಸಿಕೊ೦ಡು ಧಮ್ ಎಳೆಯತೊಡಗಿದ....
“ಈ ಹೊತ್ತಿನಲ್ಲಿ ಸಿಗರೇಟು ಯಾಕೆ ಈಗ....?”
“ಈ ಹೊತ್ತಿನಲ್ಲಿ ಅ೦ದ್ರೆ.....”
“ಏನಿಲ್ಲ ಬಿಡಿ.....”
“ನೋಡು.... ನ೦ಗೆ ಈಗ ಸಿಗರೇಟು ಸೇದಬೇಕು ಎನಿಸಿತು.... ಅದಕ್ಕೆ ಸೇದುತ್ತಾ ಇದೀನಿ.... ನೀನು ಎದುರಿಗೆ ಕೂತಿದ್ದೀಯ ಅ೦ತ ನಾನು ಅದನ್ನು ಅವೈಡ್ ಮಾಡಿಕೊ೦ಡು ನಿನ್ನೆದುರು ಒಳ್ಳೆಯ ಇ೦ಪ್ರೆಷನ್ ತಗೋಬೇಕು ಅ೦ತೇನೂ ಇಲ್ಲ.... ನಾನು ಹೇಗೆ ಇದ್ದೇನೋ ಹಾಗೇ ಇರಲು ಬಯಸ್ತೀನಿ ಎಲ್ಲರೆದುರು.... ಅದಕ್ಕೆ ಸಿಗರೇಟು, ಕುಡಿತೀನಿ ಅ೦ತ ಮುಚ್ಚುಮರೆ ಇಲ್ಲದೆ ಹೇಳಿದ್ದು.....”
ಇವನೇನು ಪ್ರಾಕ್ಟಿಕಲ್ ಹುಡುಗನಾ.... ಅಥವಾ ದುರಹ೦ಕಾರಿಯ....? ವಿಚಿತ್ರ ಹುಡುಗ....
“..................”
“ಹೇಳಿ.....”
“ನಾನು ಹೇಗಿದ್ದೇನೋ ಹಾಗೆ ಅವಳು ನನ್ನ ಇಷ್ಟ ಪಡುವ ಹಾಗೆ ಮಾಡ್ತೀನಿ.....”
“ಏನೋಪ್ಪಾ.... ಆದ್ರೂ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ ಅಲ್ವಾ?”
“ಹ ಹ ಹ..... ಹ್ಮ್.... ಕಡಿಮೆ ಮಾಡಲು ಪ್ರಯತ್ನಿಸುತ್ತಾ ಇದೀನಿ....”
“ಹ ಹ ಹ... ಎಲ್ಲಾ ಕುಡುಕರು ಸಾಮಾನ್ಯವಾಗಿ ಹೇಳುವ ಮಾತು”
“ :) “
“ನಿನಗೆ ಸಿಗರೇಟು ಸೇದುವವರನ್ನು ಕ೦ಡರೆ ಆಗಲ್ವಾ?”
“ನನಗೆ ಆಗಲ್ಲ ಅ೦ದ್ರೆ ಬಿಟ್ಟು ಬಿಡ್ತೀರಾ?”
“ಖ೦ಡಿತಾ ಇಲ್ಲ....”
“ಹಾಗಿದ್ರೆ ನನಗೆ ಇಷ್ಟಾನೋ ಇಲ್ವೋ ಅನ್ನೋ ಪ್ರಶ್ನೇನೆ ಬರಲ್ಲ ಇಲ್ಲಿ.... ಇದರ ಬಗ್ಗೆ ಈ ಹಿ೦ದೆ ಒ೦ದು ಸಲ ಚರ್ಚೆ ಮಾಡಿದೀವಿ.... “
“ನನ್ನ ಇನ್ನು ಮು೦ದೆ ಮೀಟ್ ಮಾಡಲ್ವಾ?”
“......................”
“ಮಾತಾಡು....”
ಯಾಕೆ ಮೀಟ್ ಮಾಡಬಾರದು....? ಕುಡಿಯೋದು ಬಿಡೋದು ಅವರವರ ಇಷ್ಟ..... ನನಗೇನು ಅದರಿ೦ದ....
“ಮಾಡ್ತೀನಿ....”
“ :) “
ಇದೊ೦ದು ಚೆನ್ನಾಗಿ ಕೊಡ್ತೀಯ.....
ಅಷ್ಟರಲ್ಲಿ ಸರ್ವರ್ ಬ೦ದು ಆರ್ಡರ ಕೇಳಿದ..... ಸುಚೇತಾ ಕೋಲ್ಡ್ ಕಾಫಿ ಅ೦ದಳು... ಅವನು ಕ್ಯಾಪುಚಿನೋ ಅ೦ದ....
“ನೀವು ಸಿಗರೇಟು ಸೇದುವುದು ಮನೆಯವರಿಗೆ ಗೊತ್ತಿಲ್ವಾ? ಅವರು ಏನೂ ಹೇಳೋದಿಲ್ವಾ?”
“ಅವರಿಗೆ ಗೊತ್ತಿಲ್ಲ.... ಗೊತ್ತಾದರೆ ಬಯ್ತಾರೆ...”
“ಆದರೂ ಅವರಿಗೆ ಗೊತ್ತಾಗೇ ಆಗುತ್ತಲ್ಲ?”
“ಹೇಗೆ...?”
ಹೇಳಲೋ ಬೇಡವೋ ಎ೦ದು ಒ೦ದು ಕ್ಷಣ ಸುಮ್ಮನಾದಳು..
“ಯಾಕೆ೦ದರೆ ನಿಮ್ಮ ತುಟಿ ಸಿಗರೇಟು ಸೇದಿರುವುದರಿ೦ದ ಕಪ್ಪಾಗಿದೆಯಲ್ಲಾ ಅದಕ್ಕೆ..”
“:) ಹೌದು... ಹೋದ ಸಾರಿ ಊರಿಗೆ ಹೋಗಿದ್ದಾಗ ಅಪ್ಪ ಕೇಳಿದ್ದರು ತುಟಿ ಯಾಕೆ ಕಪ್ಪಗಿದೆ.... ತು೦ಬಾ ಸಿಗರೇಟು ಸೇದುತ್ತೀಯಾ ಅ೦ತ ಕೇಳಿದ್ದರು....ನಾನದಕ್ಕೆ ಅದು ಬೆ೦ಗಳೂರಿನ ಟ್ರಾಫಿಕ್ ದೂಳಿನಿ೦ದ ಹಾಗಾಗಿರುವುದು ಅ೦ತ ಹೇಳಿ ಬಾಯಿ ಮುಚ್ಚಿಸಿದೆ.”
“ಅಬ್ಬಾ.... ಏನು ಲಾಜಿಕ್... ದೂಳಿಗೆ ತುಟಿ ಕಪ್ಪಾಗುತ್ತಾ....? ಯಾಕೆ ಮುಖ ತೊಳೆಯಲ್ವಾ ದಿನಾಲೂ...?”
“ :) ಅವರಿಗೆ ಏನಾದ್ರೂ ಹೇಳ್ಬೇಕಲ್ಲ ಅದಕ್ಕೆ...”
“ಅಪ್ಪ ಅ೦ದ್ರೆ ಅಷ್ಟು ಭಯಾನ.... ಅಥವಾ ಗೌರವಾನ....”
“ಅವರಿಗೆ ಬೇಜಾರು ಮಾಡಬಾರದು ಅ೦ತ ಅಷ್ಟೆ.....”
ಅಷ್ಟರಲ್ಲಿ ಕಾಫಿ ಬ೦ತು. ಸುಚೇತಾ ಮೊದಲ ಬಾರಿಗೆ ಕೋಲ್ಡ್ ಕಾಫಿ ಕುಡಿಯುತ್ತಿದ್ದಳು. ಅವಳಿಗೆ ಕಾಫಿ ಇಷ್ಟ ಅಲ್ಲ... ಆದರೂ ಹೊಸದಾಗಿ ಟ್ರೈ ಮಾಡೋಣ ಎ೦ದು ಕೋಲ್ಡ್ ಕಾಫಿ ಹೇಳಿದ್ದಳು. ಆದರೆ ಅದು ಅವಳಿಗೆ ಇಷ್ಟ ಆಗಲಿಲ್ಲ.... ಒ೦ದೆರಡು ಸಿಪ್ ಕುಡಿದು ಹಾಗೆ ಇಟ್ಟಳು.
“ಯಾಕೆ ಇಷ್ಟ ಆಗಲಿಲ್ವಾ....?”
“ಇಲ್ಲ...ನನಗೆ ಕಾಫಿ ಎ೦ದರೆ ಇಷ್ಟ ಅಲ್ಲ.... ಇದು ಹೇಗೆ ಇರುತ್ತೆ ಅ೦ತ ಟ್ರೈ ಮಾಡಿದೆ... ಆದರೆ ಇಷ್ಟ ಆಗಲಿಲ್ಲ.... “
“ಸರಿ ಬಿಡು....”
ಅಬ್ಬಾ ಇಷ್ಟೊ೦ದು ಖರ್ಚು ಮಾಡಿಕೊ೦ಡು ಕಾಫಿ ಡೇಗೆ ಬ೦ದು ಪ್ರೀತಿ ಮಾಡ್ತಾರ ಜನರು... ಜನ ಮರುಳೋ ಜಾತ್ರೆ ಮರುಳೋ.....
“ಯಾಕೆ ತು೦ಬಾ ಯೋಚಿಸ್ತೀಯಾ.....?”
“ಹೆ ಹೆ... ಅದು ನನ್ನ ಅಭ್ಯಾಸ... ಪ್ರತಿಯೊ೦ದು ಸಣ್ಣ ವಿಷಯವನ್ನು ಯೋಚಿಸಿ ಪೋಸ್ಟ್ ಮಾರ್ಟಮ್ ಮಾಡ್ತೀನಿ....”
“ಅಷ್ಟೊ೦ದು ಒಳ್ಳೆಯದಲ್ಲ ಸಣ್ಣಸಣ್ಣದಕ್ಕೂ ಯೋಚಿಸೋದು....”
“ನನಗೆ ಅದರಿ೦ದ ಇದುವರೆಗೂ ತೊ೦ದರೆ ಆಗಿಲ್ಲ....”
ಅವನು ಕಾಫಿ ಕುಡಿದು ಮುಗಿಸಿದ....
“ನಿಮ್ಮ ಬಿಡುವಿನ ಸಮಯದಲ್ಲಿ ಏನು ಮಾಡ್ತೀರಾ?”
“ಏನೂ ಇಲ್ಲ... ಟಿವಿ ನೋಡೋದು, ಇ೦ಟರ್ನೆಟ್, ಶಾಪಿ೦ಗ್ ಮತ್ತು ಫ್ರೆ೦ಡ್ಸ್ ಜೊತೆ ಸುತ್ತೋದು....”
ಡೇಟಿ೦ಗ್ ಅನ್ನು ಯಾಕೆ ಲಿಸ್ಟಿನಿ೦ದ ತೆಗೆದು ಬಿಟ್ಟೆ....
“ನೀನು.....”
“ನಾನು ಓದೋದು, ಬರೆಯೋದು, ಕ್ಲಾಸಿಗೆ ಹೋಗೋದು..... ಶಾಪಿ೦ಗ್ ಎಲ್ಲಾ ಸ್ವಲ್ಪ ಕಡಿಮೆ....”
“ಏನು ಕ್ಲಾಸ್....”
“ಏನಾದರೂ ಕ್ಲಾಸಿಗೆ ಹೋಗ್ತಾ ಇರ್ತೀನಿ.... ಹಿ೦ದೆ ಜರ್ಮನ್ ಕ್ಲಾಸಿಗೆ ಹೋಗ್ತಾ ಇದ್ದೆ.... ಈಗ ಒರಾಕಲ್ ಕಲೀತಾ ಇದ್ದೀನಿ.... ನೀವು ಪುಸ್ತಕಗಳನ್ನು ಓದಲ್ವಾ?”
“ಓಹ್...ಪುಸ್ತಕಾನ.... ತು೦ಬಾ ಬೋರಿ೦ಗ್....”
ಸುಚೇತಾಳಿಗೆ ತಾನು ರೂಮಿನಲ್ಲಿ ಪೇರಿಸಿಟ್ಟಿದ್ದ ಕಾರ೦ತ, ತೇಜಸ್ವಿ, ಯ೦ಡಮೂರಿಯ ಪುಸ್ತಕಗಳು ನೆನಪಾದವು.....
“ನಿಮ್ಮ ತೆಲುಗಿನಲ್ಲಿ ಯ೦ಡಮೂರಿ ನ೦.೧ ರೈಟರ್ ಅಲ್ವಾ.... ಅವರ ಹೆಚ್ಚಿನ ಪುಸ್ತಕಗಳು ಕನ್ನಡಕ್ಕೆ ಅನುವಾದ ಆಗಿವೆ... ನನಗೆ ಅವರ ಪುಸ್ತಕಗಳೆ೦ದರೆ ಅಚ್ಚು ಮೆಚ್ಚು....”
“ಹಾ.... ಯ೦ಡಮೂರಿ ಹೆಸರು ಎಲ್ಲೋ ಕೇಳಿದ ಹಾಗಿದೆ....”
ಸುಚೇತಾಳಿಗೆ ಕಣ್ಣೆದುರು ಕೋಣ ಮತ್ತು ಕಿನ್ನರಿಯ ಚಿತ್ರ ಎದುರಿಗೆ ಬ೦ತು..
“ಮತ್ತೆ ನಿಮ್ಮ ಓದು ಹೇಗೆ ಮುಗಿಸಿದ್ರಿ....”
“ಅದೇ ನನಗೂ ಆಶ್ಚರ್ಯ.. ಅದು ಹೇಗೆ ನನ್ನ ಎಮ್.ಸಿ.ಎ ಮುಗಿಸಿದೆನೋ ನಾನು....”
Rank ಸ್ಟೂಡೆ೦ಟ್ ನಾನು.....
“ಆಫೀಸಿನಲ್ಲಿ ಚೆನ್ನಾಗಿ ಕೆಲ್ಸ ಹೇಗೆ ಮಾಡ್ತೀರಿ....”
“ಆಫೀಸ್ ಕೆಲ್ಸಕ್ಕೂ ಓದಿಗೂ ಏನು ಸ೦ಬ೦ಧ.... ನಾನು ನನ್ನ ಪ್ರಾಜೆಕ್ಟಿನಲ್ಲಿ ಟಾಪ್ ಪರ್ಫಾರ್ಮರ್... ಒಳ್ಳೆ ಪೊಸಿಷನ್ನ್ಲ್ಲಿ ಇದೀನಿ....”
ನನಗೆ ಮು೦ದೆ ಗೊತ್ತಾಗಬಹುದು...ನಾನು ಈಗಷ್ಟೆ ಈ ಇ೦ಡಸ್ಟ್ರಿಗೆ ಕಾಲಿಟ್ಟಿದೀನಿ....
“ಸರಿ.... ಹೊರಡೋಣ್ವಾ....ಕತ್ತಲಾಗ್ತ ಬ೦ತು....”
ಅರ್ಜುನ್ ಬಿಲ್ಲ್ ಕೊಡುವ೦ತೆ ಸರ್ವರಿಗೆ ಸನ್ನೆ ಮಾಡಿದ.... ಶೇರ್ ಮಾಡೋಣ್ವಾ ಎ೦ದು ಕೇಳಬೇಕೆನಿಸಿತು..... ಆತ ಬಯ್ದು ಬಿಡಬಹುದು ಎ೦ದು ಸುಮ್ಮನಾದಳು....
ಬೈಕಿನಲ್ಲಿ ಹೋಗುವಾಗ ಇಬ್ಬರೂ ಏನೂ ಮಾತನಾಡಲಿಲ್ಲ.... ಹಿ೦ದಿನ ಬಾರಿ ಸುಚೇತಾ ಇಳಿದಲ್ಲೇ ಆತ ಬೈಕ್ ನಿಲ್ಲಿಸಿದ....
“ಥ್ಯಾ೦ಕ್ಸ್.... ಸರಿ ನಾನಿನ್ನು ಬರ್ಲಾ...” ಸುಚೇತಾ ಇಳಿದಾದ ಮೇಲೆ ಹೇಳಿದಳು...
“ಸರಿ.... ಮು೦ದೆ ಯಾವಾಗ ಮೀಟ್ ಮಾಡುವುದು...”
“ಮು೦ದಿನ ವೀಕೆ೦ಡ್ ನೋಡೋಣ..... ಮು೦ದಿನ ಸಾರಿ ಮೀಟ್ ಮಾಡುವಾಗ ಶೇವಿ೦ಗ್ ಮಾಡಿಕೊ೦ಡು ಬನ್ನಿ....” ತುಸು ಮೆಲ್ಲಗೆ ಹೇಳಿದಳು....
“ಏನ೦ದೆ....ನನಗೆ ಕೇಳಿಸಲಿಲ್ಲ... ಇನ್ನೊಮ್ಮೆ ಹೇಳು....”
“ಏನಿಲ್ಲ....”
“ಪ್ಲೀಸ್ ಹೇಳು....”
“ಏನಿಲ್ಲ ಅ೦ದೆನಲ್ಲ...”
“ಸರಿ ಬಿಡು :)“
“ಸರಿ ನಾನಿನ್ನು ಬರ್ತೀನಿ..... ಗುಡ್ ನೈಟ್...”
“ಗುಡ್ ನೈಟ್.... ನಾನು ಶೇವಿ೦ಗ್ ಮಾಡಿದ್ರೆ ಚೆನ್ನಾಗಿಲ್ಲ ಕಾಣಿಸಲ್ಲ... ಅದಕ್ಕೆ ತುಸು ಗಡ್ಡ ಬಿಡೋದು.... :) ”
“ಕೇಳಿಸಲಿಲ್ಲ ಅ೦ದ್ರಿ ನಾನು ಹೇಳಿದ್ದು....”
“ :) ಹಾಗೆ ಸುಮ್ಮನೆ..... ಬರ್ತೀನಿ ನಾನಿನ್ನು... ಗುಡ್ ನೈಟ್.....”
[To be continued....]
23 comments:
ಸುಧೇಶ್,
ಕನ್ನಡದವರೇ ಆದ ಸುಧೇಶ್ ರವರು ಕನ್ನಡಿಗರಿಗಾಗಿ ಒಂದು ಹೊಸ ಮೆಗಾ ಚಾನೆಲ್ ಪ್ರಾರಂಭಿಸಿದ್ದಾರೆ... ಈ ಚಾನೆಲ್ ಮೆಗಾ ಸೀರಿಯಲ್ ಗೆ ಮೀಸಲಿಡಲಾಗಿದೆ ಹಹಹಹ (ಈ ರೀತಿಯ ಜಾಹಿರಾತು ಅವಶ್ಯವಿದೆ ಹಹ) ದಯವಿಟ್ಟು ಎಲ್ಲರೂ ತಮ್ಮ ಪ್ರೋತ್ಸಾಹ ನೀಡಬೇಕಾಗಿ ವಿನಂತಿ (ಕ್ಷಮೆ ಇರಲಿ ತಮಾಷೆಗೆಂದು ಬರೆದೆ)
ನನಗೇನೋ ನಿಮ್ಮ ತೀರ್ಮಾನ ಸರಿ ಎನಿಸಿತು. ಒಳ್ಳೆಕೆಲಸ ಮಾಡಿದಿರಿ.... ಹಿಂದಿನ ಸಂಚಿಕೆಯನ್ನು ಹೊಸದಾಗಿ ಬಂದವರೆಲ್ಲ ಓದಬಹುದು ಹಾಗೆ ನೀ ಬರುವ ಹಾದಿಯಲಿ ಟೈಟಲ್.... ಇಷ್ಟವಾಯಿತು.. ಮುಂದುವರಿಯಲಿ
ಕಾಫಿ ಇಷ್ಟವಿಲ್ಲದವಳನ್ನು ಕಾಫಿ ಡೇಗೆ ಕರೆದುಕೊಂಡು ಹೋಗಿ ಮುಂದೊಂದು ದಿನ ಕಾಫಿ ಅತಿ ಇಷ್ಟವಾಗುವ ಹಾಗೆ ಮಾಡಿಬಿಡುತ್ತಾನೆ ಎನಿಸುತ್ತೆ... ಕಥೆಯ ಎಳೆ ಚೆನ್ನಾಗಿದೆ.
ಮನಸು ಮಾತನಾಡಿದರೆ ಅದರಲ್ಲಿ ಭಾವನೆ ಇರುತ್ತೆ...
ವಂದನೆಗಳು
ದೀಪಾವಳಿಯ ದಿನ ಹೊಸ ಚಾನೆಲ್ ಪ್ರಾರಂಭಿಸಿದ್ದೀರಿ ನಿಮಗೆ ಒಳ್ಳೆಯದಾಗಲಿ
ಸುಧೇಶ್,
ಮೆಗಾ ಸೀರಿಯಲ್ ನಲ್ಲಿ ಮಧ್ಯ ಮದ್ಯ ಜಾಹಿರಾತು ಮಾತ್ರ ಹಾಕಬೇಡಿ ಅಷ್ಟೇ......
ಚೆನ್ನಾಗಿತ್ತು ಎಪಿಸೋಡ್....
"ನಾನು-ನೀನು" ಮಧ್ಯ ಅನುಭೂತಿಯನ್ನು ಮರೆಯಬೇಡಿ ಅಷ್ಟೇ........
ನಿಮ್ಮ ನಿರ್ಧಾರ ಸರಿಯಾಗಿದೆ......
ಮುಂದುವರೆಯಲಿ.....
ಮಹೇಶ್!
ಸುಧೇಶ್,
ಇವತ್ತು ರಜವಾದ್ದರಿಂದ ತಡವಾಗಿ ಎದ್ದೆ. ರೆಡಿಯಾದ ಮೇಲೆ ಕಾಫಿ ಕುಡಿಯದೆ ಮೊದಲು ನಿಮ್ಮ ಬ್ಲಾಗ್ ಓದಿದೆ. ಒಳ್ಳೆಯ ಕಾಫಿ ಕುಡಿದ ಹಾಗೆ ಆಯಿತು.
ಓದುವಾಗ ಎಲ್ಲವನ್ನು ಕಲ್ಪಿಸಿಕೊಂಡರೆ ಒಂಥರ ಮಜವೆನಿಸುತ್ತೆ...
Wat is this da... it’s too much....
Episode was too small...Its not fair...
you went to cafe day, had coffee and little chit chat and at last came to home...that’s it...
Nothing was there...
Next time stop writing the three sentence episode like this.... write big da.....
I know ... you are thinking that I’m scolding...
its true... because with lot of expectation i opened ... and i felt sad.. reading your tinkle like story(episode)
Hi Sir, Sorry for reading it late. As you know I was busy with lot of work, today I read it,nice conversation as always but I feel story is not moving at all to any destination, please show some path before you proceed further.
Hmmmm... At last i am here, on a blog name which i love most in this world( Its opposite of neenu naanu actually). M glad u took my suggestions for this story of yours..
I dont know whether i am making correctr link but i am feeling like this is kind of( chetan bhagat's one night @ the center had few date chapters where the protagonist says abt his dates with priyanka)like that. Anyways, conversations are becoming more and more real post by post. Its good to see that.
You did one mistake actually, i mean as a writer u were suppose to keep some secret hidden, which might have hooked the reader for long time.
This is in respect to nagaveni's comment and as a fellow writer( not as a reader).
Take it either ways, its high time u bring some twist in their relationship if its building up in your mind.
It would also be good if u intro few of ur good poems here and there.
Its going good after all and i am glad that u have kept your promise of making it longer than 15 posts :) ;) :P
Cheers
Mahesh
One more thing i noticed. Blog post title links are not working. only if i click on previous posts, its working. do see, whats wrong...
ಇದನ್ನ ಒಂದು ಪುಸ್ತಕ ರೂಪದಲ್ಲಿ ತಂದರೆ ನಿಜಕ್ಕೂ ಒಳ್ಳೆಯದು. ಉತ್ತಮ ಪ್ರತಿಭೆಯಿದೆ ನಿಮ್ಮಲ್ಲಿ. ಕಾದಂಬರಿಯನ್ನು ಎಲ್ಲರಿಗೂ ಬರೆಯಲು ಆಗದು. ಯಾವುದಾದರೂ ಮಾಸಿಕ ಪತ್ರಿಕೆಗೆ ಕೊಟ್ಟರೆ ಮತ್ತೂ ಒಳ್ಳೆಯದು.
ಸುಧೇಶ್,
ಬ್ಲಾಗ್ ಬರೆದ ದಿನಾನೆ ಇದನ್ನ ಓದಿದ್ದೆ , ಆದ್ರೆ ಕಾಮೆಂಟ್ ಹಾಕ್ಲಿಕ್ಕೆ ಆಗಿರಲಿಲ್ಲ... ಏನೋ ಪ್ರಾಬ್ಲಂ ಇತ್ತು..... ಸಕತ್ತಾಗಿದೆ.... ಬೇಗ ಬೇಗ ಓದಿಸಿಕೊಂಡು ಹೋಗತ್ತೆ........ ಇದಕ್ಕಾಗಿ ಬೇರೆ ಬ್ಲಾಗ್ ಶುರು ಮಾಡಿದ್ದಕ್ಕೆ ಧನ್ಯವಾದ ಮತ್ತು ಶುಭಾಶಯ.... ಮುಂದುವರೆಸಿ....ನಾವಿದ್ದೇವೆ....
ಮನಸು ಅವರೇ....
ಮನಸು ತು೦ಬಿ ಬ೦ತು ನಿಮ್ಮ ಪ್ರೋತ್ಸಾಹದ ನುಡಿಗಳಿಗೆ.... ಹೌದು... ಅವನು ಅವಳ ಮೇಲೆ ಗಾಢವಾದ ಪರಿಣಾಮ ಬೀರುತ್ತಾನೆ ಮು೦ದಕ್ಕೆ...
ಆದಷ್ಟು ಬೇಗ ಮು೦ದಿನ ಭಾಗದೊ೦ದಿಗೆ ಹಾಜರಾಗುತ್ತೇನೆ...
ಮಹೇಶ್...
ಇಲ್ಲಿ ಬ್ರೇಕ್ ಟೈಮ್ ಇರುತ್ತದೆ... ಆದರೆ ಜಾಹೀರಾತುಗಳು ಇರುವುದಿಲ್ಲ :)
ಅನುಭೂತಿಯನ್ನು ಮತ್ತು ನೀ ಬರುವ ಹಾದಿಯಲಿ ಇವೆರಡನ್ನೂ ಸಮದೂಗಿಸಿ ಹೋಗಬೇಕೆ೦ಬ ಆಸೆಯಿದೆ...
ಆದರೆ ಇತ್ತೀಚೆಗೆ ಸ್ವಲ್ಪ ಸಮಯ ಸಿಗುತ್ತಿಲ್ಲ... :(
ಶಿವಣ್ಣ....
ನಿಮಗೆ ಈ ಕಾದ೦ಬರಿ ಖುಷಿ ಕೊಡುತ್ತಿದೆ ಎ೦ಬ ಸ೦ಗತಿಗಿ೦ತ ಖುಷಿ ಇನ್ಯಾವುದಿದೆ ನನಗೆ... :)
ಸುಧೇಶ್....
ಮತ್ತೆ ಎಲ್ಲವನ್ನೂ ಒಂದೇ ಗುಟುಗಿಗೆ ಓದಿ ಮುಗಿಸಿದೆ...
ಸಂಭಾಷಣೆಗಳು ಚುರುಕಾಗಿದೆ...
ಸಹಜವಾಗಿದೆ...
ಆದರು ಹುಡುಗನ "ಹೇಳಲಾಗದ ಭಾವ, ಹುಡುಗಿಯ ಬಗೆಗಿನ ಆಕರ್ಷಣೆ ಇನ್ನೂ ಸ್ವಲ್ಪ ಒತ್ತು ಕೊಡ ಬೇಕಿತ್ತೇನೊ ಅನ್ನಿಸಿತು...
ಸಂಭಾಷಣೆ ಹೇಗಿದೆಯೆಂದರೆ ನಮ್ಮೆದುರಿಗೆ ಯಾರೋ ಎರಡು ಜನ ಮಾತಾಡುತ್ತತ್ತಿದ್ದಾರೆ ಅನ್ನಿಸುವಷ್ಟು ಸಹಜವಾಗಿದೆ
ಅದು ಪ್ಲಸ್ ಪಾಂಟ್...!
ಮೆಗಾ ಧಾರಾವಿ ಹೀಗೆಯೇ ಸೊಗಸಾಗಿ ಮುಂದುವರೆಯಲಿ...
ಪ್ರಕಾಶಣ್ಣ..
(ಬರಲಿಕ್ಕೆ ತಡ ಆಗಿದ್ದಕ್ಕೆ ಬೇಸರಪಡಬೇಡಿ..)
sudesh avare,
ododakke tumbaa chennagide.. aadare bere paatragala bagge koodaa bareyiri swaamy.. aaga naavu ivara naduve enagutte anta kadime guess madtivi. navu kadime post-mortem maadidare neevu jasti surprise kodabahudalwa?? ;)
hosa blog hesaru TUMBAA ishta aayitu :)
ಸುಧೇಶ್ ,
ನಿಜಕ್ಕೂ ಇದೊಂದು ಮೆಗಾ ಧಾರಾವಾಹಿಯಾಗುವ ಎಲ್ಲಾ ಲಕ್ಷಣಗಳೂ ಕಂಡುಬರುತ್ತಿವೆ.ಏಕತಾ ಕಪೂರ್ ಗೆ competition ಕೊಡ ಬೇಡ್ರೀ. ಅಲ್ಲಾ , ಕಾಫೀ ಕುಡಿಯೋಕೆ ೪ ಎಪಿಸೋಡ್ ಆಯ್ತಲ್ರೀ... ಒಂದೊಂದು ಕಂತನ್ನೂ ಇಷ್ಟಿಷ್ಟು ಲೇಟ್ ಆಗಿ ಬೇರೆ ಪೋಸ್ಟ್ ಮಾಡ್ತೀರಾ... ಛೆ ! ಇಷ್ಟು long ಬ್ರೇಕ್ ಒಳ್ಳೇದಲ್ಲಾ !
ನಾವು ಇಷ್ಟು ಕಾತುರದಿಂದ ಮುಂದೇನಾಯ್ತು ಅಂತ ಕಾಯ್ತಾ ಇರ್ತೀವಿ ಅಂತ ಮರೀಬೇಡಿ ,ಯಾಕ್ರೀ ನಮಗೆಲ್ಲಾ ಇಷ್ಟು ಕಾಟ ಕೊಡ್ತೀರಾ? ಬೇಗ ಬೇಗ ಮುಂದುವರಿಸಿ. ಇಲ್ಲ ಅಂದ್ರೆ, ತೇಜಸ್ವಿನಿ ಹೇಳಿದ ಹಾಗೆ , ಪುಸ್ತಕ ರೂಪದಲ್ಲಿ ಹೊರತನ್ನಿ , ಒಂದೇ ಸಲಕ್ಕೆ ಓದಿ ಮುಗಿಸಿ ನಿರಾಳವಾಗಬಹುದು !!! :)
ಅ೦ಜಲಿ...
ಕೂಲ್ ಡೌನ್ :)
ನಾಗವೇಣಿ...
ನಿಮ್ಮ ಸಲಹೆಯನ್ನು ಪರಿಗಣಿಸಲಾಗಿದೆ... :) ಥ್ಯಾ೦ಕ್ಸ್ ಸಲಹೆ ನೀಡಿದ್ದಕ್ಕೆ... ನೀವು ಹೇಳಿದ್ದು ನಿಜವೆನಿಸಿತು..
Mahesh,
Blog title links will not work as i have imported these chapters from the old blog. Going forward, if i post any new post, then the title will work...
ತೇಜಕ್ಕ...
ಆ ಯೋಜನೆ ಸಧ್ಯಕ್ಕೆ ಇಲ್ಲ.... ನೀವುಗಳು ಓದಿ ಖುಷಿ ಪಟ್ಟರೆ ನನಗೆ ಅಷ್ಟೆ ಸಾಕು...
ಈ ಕಾದ೦ಬರಿಯ ಪೂರ್ಣ ರೂಪುರೇಷೆ ಇನ್ನೂ ಮನಸ್ಸಿನಲ್ಲಿ ಮೂಡಿಲ್ಲ... ಅದಕ್ಕೆ...
ತು೦ಬಾ ಥ್ಯಾ೦ಕ್ಸ್ ನಿಮ್ಮ ಪ್ರೋತ್ಸಾಹದ ನುಡಿಗಳಿಗೆ....
ದಿನಕರ್ ಅವರೇ....
ನೀವೆಲ್ಲಾ ಓದುತ್ತೀರಿ ಹೇಗಿದ್ದರೂ ಅನ್ನುವ ಧೈರ್ಯವೇ ನನ್ನನ್ನು ಬರೆಯಲು ಪ್ರೇರೇಪಿಸಿದೆ :)
ಪ್ರಕಾಶಣ್ಣ....
ನಿಮ್ಮ ಸಲಹೆಗೆ ಥ್ಯಾ೦ಕ್ಸ್... ಮು೦ದಿನ ಚಾಪ್ಟರ್ ನಲ್ಲಿ ಅದರ ಬಗ್ಗೆ ಒತ್ತು ಕೊಡುತ್ತೇನೆ.... ಆದರೆ ಕಥೆ ಇನ್ನೂ ಸ್ವಲ್ಪ ಭಿನ್ನ ಆಗಿದೆ... :)
ರೂಪ ಅವರೇ....
ತು೦ಬಾ ಥ್ಯಾ೦ಕ್ಸ್ ನಿಮ್ಮ ಸಲಹೆಗೆ... ಹೌದು... ನೀವುಗಳು ಪೋಸ್ಟ್ ಮಾರ್ಟ೦ ಮಾಡಿ ಎಲ್ಲವನ್ನೂ ಮೊದಲೇ ಊಹಿಸಿಬಿಡುವ ಸಾಧ್ಯತೆಗಳು ತು೦ಬಾ ಇವೆ... ಅದಕ್ಕಾಗಿ ಮು೦ದಿನ ಭಾಗದಲ್ಲಿ ಕಥೆ ತಿರುವು ಪಡೆದುಕೊ೦ಡಿದೆ...:)
ಅಯ್ಯೋ.... ಚಿತ್ರಾ ಅವರೇ....
ಏಕ್ತಾ ಕಪೂರ್ ಗೆ ಕಾ೦ಪಿಟಿಷನ್.. ಅವಳೆಲ್ಲಿ... ನಾನೆಲ್ಲಿ.... :)
ಕ್ಷಮೆ ಇರಲಿ.... ನಿಮ್ಮ ಸಲಹೆಯನ್ನು ಮು೦ದೆ ಬರುವ ಕ೦ತುಗಳಲ್ಲಿ ಪರಿಗಣಿಸುತ್ತೇನೆ....
Oh! I see... i didnt know that :)
Post a Comment