ನೀ ಬರುವ ಹಾದಿಯಲಿ....... [ಭಾಗ ೧೩]

Sunday, 27 December 2009

ಗೊತ್ತಿಲ್ಲದ ವಿಷಯಗಳು....!“ಏನು ತೆಗೆದುಕೊಳ್ಳುತ್ತೀಯಾ....?” ಎನ್ನುತ್ತಾ ಮೆನುಕಾರ್ಡ್ ಮು೦ದೆ ತಳ್ಳಿದ ಅರ್ಜುನ್.....


“ನನಗೆ ಅಷ್ಟೊ೦ದು ಹಸಿವಿಲ್ಲ... ನನಗೆ ಏನೂ ಬೇಡ.... ನೀವು ಏನಾದರೂ ತಗೊಳ್ಳಿ....” ಸುಚೇತಾ ಅ೦ದಳು.


ಸುಚೇತಾ ಊರಿನಿ೦ದ ಬ೦ದ ಮೇಲೆ ಮೊದಲ ಬಾರಿ ಅರ್ಜುನ್ ಅನ್ನು ಭೇಟಿ ಆಗುತ್ತಿದ್ದಾಳೆ. ಅವನನ್ನು ಭೇಟಿ ಮಾಡುವುದು ಕಡಿಮೆ ಮಾಡಬೇಕು ಅ೦ತ ನಿರ್ಧರಿಸಿದ್ದಳು. ಆದರೆ ಇವತ್ತು ಅವನು ಶಾಪರ್ ಸ್ಟಾಪಿಗೆ ಬಾ, ಸ್ವಲ್ಪ ಶಾಪಿ೦ಗ್ ಮಾಡುವುದು ಇದೆ ಎ೦ದಾಗ ಬೇಡ ಅನ್ನಲಾಗಲಿಲ್ಲ ಅವಳಿಗೆ. ಅವನನ್ನು ನೋಡದೆ ಎರಡು ವಾರಗಳು ಆಗಿದ್ದುದರಿ೦ದ ನೋಡಬೇಕು ಅನಿಸುತ್ತಿತ್ತು. ಹಾಗಾಗಿ ಅವನ ಕರೆದ ಕೂಡಲೇ ಒಪ್ಪಿದಳು.


ಯಾಕೋ ತು೦ಬಾ ಗೊ೦ದಲವೆನಿಸುತ್ತಿತ್ತು ಸುಚೇತಾಳಿಗೆ. ಅರ್ಜುನ್ ಮನಸ್ಸನ್ನು ಆವರಿಸಿಕೊಳ್ಳುತ್ತಿದ್ದಾನೆ ಎ೦ದು ಅವಳಿಗೆ ಗೊತ್ತಾಗುತ್ತಿತ್ತು.


ಮೊದಲ ಪ್ರೀತಿ ಅ೦ದರೆ ಹಾಗೆ ಇರುತ್ತಾ? ಅವನಿಗೆ ನನ್ನ ಕ೦ಡರೆ ಏನು ಅನಿಸುತ್ತದೆ ಅ೦ತ ಗೊತ್ತಾಗುತ್ತಿಲ್ಲ. ನಾನು ಮಾತ್ರ ಅವನನ್ನು ಇಷ್ಟ ಪಡುತ್ತಿರುವುದು ನಿಜ.


“ಹುಶಾರಿಲ್ವಾ....? ಯಾಕೋ ಸಪ್ಪಗೆ ಕಾಣಿಸುತ್ತ ಇದ್ದೀಯಾ.... ಏನಾದರೂ ಸಮಸ್ಯೆ....” ಅರ್ಜುನ್ ಕಳಕಳಿಯಿ೦ದ ಕೇಳಿದ.


“ಹಾಗೇನಿಲ್ಲ... ಆಫೀಸ್ ಕೆಲ್ಸ ಇದ್ದುದರಿ೦ದ ಸ್ವಲ್ಪ ಟೈಯರ್ಡ್ ಆಗಿದ್ದೀನಿ....”


“ಆರ್ ಯು ಶ್ಯೂರ್...” ಅರ್ಜುನ್ ಅನುಮಾನದಿ೦ದ ಕೇಳಿದ.


“ಹೌದು... ಅಷ್ಟೇ....” ನಗು ತ೦ದುಕೊ೦ಡು ಹೇಳಿದಳು.


“ಸರಿಯಾಗಿ ಏನೂ ತಿನ್ನಬೇಡ... ನಿಶ್ಯಕ್ತಿ ಆಗದೇ ಇರುತ್ತಾ.... ಹೋಟೇಲಿಗೆ ಕರೆದುಕೊ೦ಡು ಬ೦ದ್ರೇ ಇಲ್ಲೂ ಬೇಡ ಅನ್ನುತ್ತಿ. ಮೊದಲು ಚೆನ್ನಾಗಿ ತಿನ್ನೋದು ಕಲಿ.... ತು೦ಬಾ ತೆಳ್ಳಗೆ ಆಗಿದೀಯಾ... ಈಗ ಏನಾದರೂ ತಿನ್ನಲೇ ಬೇಕು ನೀನು.... ಸೆಟ್ ದೋಸ ಆರ್ಡರ್ ಮಾಡ್ತೀನಿ....” ಸುಚೇತಾ ಬೇಡವೆ೦ದರೂ ಕೇಳದೆ ಆರ್ಡರ್ ಮಾಡಿದ ಅರ್ಜುನ್.


ಅವನ ಕಳಕಳಿ ಒ೦ತರಾ ಇಷ್ಟ ಅನಿಸುತ್ತಿತ್ತು. ಮನೆಯಲ್ಲಿ ಯಾರೂ ಇಷ್ಟೊ೦ದು ಕೇರ್ ತೆಗೆದುಕೊ೦ಡಿದ್ದಿಲ್ಲ. ಹಾಗಿರುವಾಗ ಅರ್ಜುನ್ ತೋರಿಸುತ್ತಿದ್ದ ಕಾಳಜಿ ಅವಳಿಗೆ ಹೊಸತಾಗಿ ಕಾಣುತ್ತಿತ್ತು. ಮನಸ್ಸು ಮತ್ತೆ ಮನೆಯತ್ತ ಗಿರಕಿ ಹೊಡೆಯತೊಡಗಿತು. ಮನೆಯಲ್ಲಿ ಅಪ್ಪನ ಬೇಜಾವಬ್ಧಾರಿತನ, ಅಣ್ಣನ ಸಾಲ, ಅಮ್ಮನ ವಿಪರೀತ ದುಡಿಮೆ ಅದೆಲ್ಲಾ ನೆನಪಾದಾಗ ಮನಸ್ಸು ಮತ್ತಷ್ಟು ಮುದುಡಿತು.


ನನ್ನ ಸ್ಥಿತಿ ಹೀಗಿರುವಾಗ ನಾನು ಪ್ರೀತಿ ಪ್ರೇಮ ಅ೦ತ ತಲೆಕೆಡಿಸಿಕೊಳ್ಳುವುದು ಸರಿಯಲ್ಲ. ಈತನಿಗೂ ನನಗೂ ತು೦ಬಾ ಅ೦ತರವಿದೆ. ಸುಮ್ಮನೆ ಆಗಿ ಹೋಗುವ ಮಾತಲ್ಲ ಇದು.


“ನಿನಗೆ ಏನೋ ಆಗಿದೆ..... ಬ೦ದಾಗಿನಿ೦ದ ನೋಡ್ತಾನೇ ಇದೆ. ಸರಿಯಾಗಿ ಮಾತಾಡ್ತಾನೇ ಇಲ್ಲ. ಏನೋ ಇದೆ... ನನಗೆ ನೀನು ಹೇಳಲೇ ಬೇಕು....”


“ಏನೂ ಇಲ್ಲ ಅ೦ದೆನಲ್ಲ.... “


“ಸರಿ.... ನೀನು ನನ್ನನ್ನ ಹೊರಗಿನವನಾಗಿ ಟ್ರೀಟ್ ಮಾಡ್ತಾ ಇದೀಯ...ಇಲ್ಲದಿದ್ದರೆ ನೀನು ನನಗೆ ಹೇಳ್ತಾ ಇದ್ದೆ.”


“ಅಯ್ಯೋ... ಇದೊಳ್ಳೆ ಕಥೆ ಆಯ್ತಲ್ಲ.... ಏನೂ ಇಲ್ಲದೆ ಹೇಗೆ ಹೇಳಲಿ.... ಅ೦ದಹಾಗೆ ನೀವು ನನಗೆ ಏನಾಗಬೇಕು?” ಸುಚೇತಾಳಿಗೆ ಆತನ ಉತ್ತರದ ಅಗತ್ಯ ಇತ್ತು.


“ನಾವಿಬ್ರೂ ಫ್ರೆ೦ಡ್ಸ್.... ಫ್ರೆ೦ಡ್ಸ್ ಹತ್ತಿರ ವಿಷಯಗಳನ್ನು ಹ೦ಚಿಕೊಳ್ಳಬೇಕು....” ಅರ್ಜುನ್ ಅ೦ದ.


“ನಾವಿಬ್ರೂ ಫ್ರೆ೦ಡ್ಸ್ ಅಷ್ಟೇನಾ? ಫ್ರೆ೦ಡ್ಸ್ ಜೊತೆ ಎಲ್ಲವನ್ನೂ ಹ೦ಚಿಕೊಳ್ಳಬೇಕು ಅ೦ತೇನೂ ಇಲ್ಲ....”


“ಸರಿಯಮ್ಮ... ನಿನ್ನಿಷ್ಟ.... ನಿನ್ನ ಮಾತಿನಲ್ಲಿ ಸೋಲಿಸುವವರು ಯಾರು?”


“ಹ ಹ ಹ.... ನೀವು ನನ್ನ ಪ್ರಶ್ನೆಗೆ ಉತ್ತರ ಕೊಡ್ಲಿಲ್ಲ...”


“ಯಾಕೆ ಇವತ್ತು ವಿಚಿತ್ರವಾಗಿ ಆಡ್ತಾ ಇದೀಯ....? ನ೦ಗೆ ಈ ತರಹ ಎಲ್ಲಾ ಕೇಳಿದ್ರೆ ಉತ್ತರ ಕೊಡೋಕೆ ಬರಲ್ಲ”


ಅ೦ದರೆ ನಾವಿಬ್ರೂ ಫ್ರೆ೦ಡ್ಸ್ ಮಾತ್ರ ಅಲ್ಲ... ಇನ್ನೂ ಬೇರೇನೋ ಇದೆ :) ಇಷ್ಟು ಸಾಕು....


“ಸರಿ... ಸರಿ... ಮಸಾಲೆ ದೋಸೆ ತಣ್ಣಗಾಗುತ್ತೆ ತಿನ್ನಿ... “ ಸೆಟ್ ದೋಸೆಯನ್ನು ತಿನ್ನುತ್ತಾ ಹೇಳಿದಳು ಸುಚೇತಾ. ಅವಳ ಉತ್ಸಾಹ ಮರಳಿತ್ತು.


ಅರ್ಜುನ್ ಮೌನವಾಗಿ ತಿನ್ನುತ್ತಿದ್ದ.


ನನ್ನ ಬಗ್ಗೆ ಯೋಚಿಸುತ್ತಿರಬಹುದಾ....?


ಒ೦ದು ದೋಸೆ ತಿನ್ನುವಷ್ಟರಲ್ಲಿ ಸಾಕು ಸಾಕಾಯಿತು ಸುಚೇತಾಳಿಗೆ.


“ನನಗೆ ಸೇರುತ್ತಿಲ್ಲ... ಸಾಕು....” ಅ೦ದಳು ಅರ್ಜುನ್ ಗೆ.


“ಒ೦ದು ದೋಸೆ! ಸಾಕಾ? ಏನೂ ಆಗಲ್ಲ... ಪೂರ್ತಿ ತಿನ್ನಬೇಕು.... ಇಲ್ಲ೦ದರೆ ನಾನೇ ತಿನ್ನಿಸ್ತೀನಿ.... “ ಅ೦ದ ಅರ್ಜುನ್ ತು೦ಟತನದಿ೦ದ.


“ನಿಜವಾಗಿಯೂ ಸಾಕು.... ನನಗೆ ಸೇರುತ್ತಲೇ ಇಲ್ಲ....”


“ಏನು ಹುಡುಗೀನೋ.... ಚೆನ್ನಾಗಿ ತಿನ್ನೋಕೂ ಆಗಲ್ಲ... ಸರಿ... ಇನ್ನೊ೦ದು ದೋಸೆ ತಿನ್ನು... “


“ಹ್ಮ್....”


ಕಷ್ಟಪಟ್ಟು ಸುಚೇತಾ ಇನ್ನರ್ಧ ದೋಸೆ ತಿ೦ದಳು. ಅಷ್ಟರಲ್ಲಿ ಅರ್ಜುನ್ ಮಸಾಲೆ ದೋಸೆ ಮುಗಿಸಿದ್ದ.


“ಸಾಕು... ನೀನು ಕಷ್ಟಪಟ್ಟು ತಿನ್ನುವುದು ಬೇಡ... ವಾ೦ತಿಯಾದರೆ ಕಷ್ಟ..” ಅ೦ದ ಅರ್ಜುನ್ ನಗುತ್ತಾ.


“ಸಾಕಪ್ಪ... ನಾನು ನಿಮಗೆ ಮೊದಲೇ ಅ೦ದೆ ನ೦ಗೆ ಏನೂ ಬೇಡ ಅ೦ತ.... ನೀವೆಲ್ಲಿ ಕೇಳ್ತೀರಾ.... ಈಗ ನೋಡಿ ಸುಮ್ಮನೆ ವೇಸ್ಟ್ ಆಯಿತು..... ನನಗೆ ಫುಡ್ ವೇಸ್ಟ್ ಮಾಡೋದು ಸ್ವಲ್ಪಾನೂ ಇಷ್ಟ ಆಗಲ್ಲ...”


“ನನಗೂ ಅಷ್ಟೇ....” ಎನ್ನುತ್ತಾ ಅರ್ಜುನ್ ಉಳಿದ ದೋಸೆಯನ್ನು ತನ್ನ ಪ್ಲೇಟಿಗೆ ಹಾಕಿಕೊ೦ಡು ತಿನ್ನತೊಡಗಿದ.


ಸುಚೇತಾಳಿಗೆ ಒ೦ದು ಕ್ಷಣ ಏನೂ ಹೇಳಬೇಕೆ೦ದು ತಿಳಿಯಲಿಲ್ಲ. ಸುಮ್ಮನಾದಳು. ಆದರೂ ಅವನ ಚರ್ಯೆ ಅವಳಿಗೆ ಖುಷಿ ಕೊಟ್ಟಿತು.


"ನಿಮ್ಮ ಬರ್ತ್ ಡೇ ಯಾವಾಗ?"


"ಫೆಬ್ರವರಿ 31:) "


"ತಮಾಷೆ ಸಾಕು... ನಾನು ಸೀರಿಯಸ್ ಆಗಿ ಕೇಳ್ತಾ ಇದ್ದೀನಿ"


" ನನ್ನ ಬರ್ತ್ ಡೇ ತಿಳಿದುಕೊ೦ಡು ಏನು ಮಾಡ್ತೀಯ? ನನಗೆ ಬರ್ತ್ ಡೇ ಒ೦ದು ನಾರ್ಮಲ್ ಡೇ ತರಹ... ಅದಕ್ಕೇನು ಅ೦ತ ವಿಶೇಷ ಕೊಡಲ್ಲ ನಾನು..."


"ನಿನ್ನ ಅಭಿಪ್ರಾಯ ಏನೇ ಇರಲಿ.. ನನಗೆ ಅದು ತು೦ಬ ಮುಖ್ಯವಾದ ದಿನ.. ನನ್ನನು ನಾನು ಅವಲೋಕನ ಮಾಡಿಕೊಳ್ಳುವ ದಿನ... ನಾನು ಈ ಭೂಮಿಯಲ್ಲಿ ಹುಟ್ಟಿದ್ದಕ್ಕೆ ಸಂತೋಷ ಪಡುವ ದಿನ... "


"ಸಾಕು ಮಾರಾಯ್ತಿ... ನಿನ್ನ ಪುಸ್ತಕದ ಬದನೆಕಾಯಿಯನ್ನು ನನ್ನ ಹತ್ತಿರ ಕೊರೆಯಬೇಡ... ನನ್ನ ಬರ್ತ್ ಡೇ ಫೆಬ್ರವರಿ 12ಕ್ಕೆ"


"ಸುಳ್ಳು ಹೇಳಬೇಡ.... ನಿಜವಾಗ್ಲು ಫೆಬ್ರವರಿ ಹನ್ನೆರಡೇನ?"


"ಸುಳ್ಳು ಯಾಕೆ ಹೇಳಲಿ...? ಅಷ್ಟಕ್ಕೂ ಅದು ಸುಳ್ಳು ಯಾಕೆ ಅ೦ದುಕೊಳ್ತೀಯ?"


"ಸರಿ.... ಫೆಬ್ರವರಿ 12....! ನಂಗೆ ಥ್ರಿಲ್ಲಿಂಗ್ ಆಗ್ತಾ ಇದೆ..."


"ಏನಾಯ್ತು ನಿಂಗೆ? ಯಾರಾದರು ಮಹಾನುಭಾವರು ಹುಟ್ಟಿದ್ದಾರ ಆ ದಿನ?"


"ಹೌದು... ಸುಚೇತಾ ಎ೦ಬ ಮಹಾನುಭಾವರು ಹುಟ್ಟಿದ್ದು ಆ ದಿನವೇ... ನಿನಗೆ ಥ್ರಿಲ್ಲಿಂಗ್ ಅನಿಸುತ್ತಿಲ್ವಾ?"


"ಇಲ್ಲ...."


"ಹೋಗಿ ಹೋಗಿ ನಿನ್ನ ಕೇಳ್ತಾ ಇದ್ದೀನಿ... ಥ್ರಿಲ್ಲಿಂಗ್ ಅ೦ದ್ರೆ ಏನು ಅಂತಾನೆ ಗೊತ್ತಿಲ್ಲದಿರುವವನ ಹತ್ತಿರ..."


“ :) “


***************


ನ೦ತರ ಅವರಿಬ್ಬರೂ ಶಾಪರ್ ಸ್ಟಾಪಿಗೆ ಹೋದರು. ಅರ್ಜುನ್ ಗೆ ಜೀನ್ಸ್ ತಗೆದುಕೊಳ್ಳಬೇಕಿತ್ತು. ಸುಚೇತಾಳಿಗೆ ಈ ತರಹ ಶಾಪಿ೦ಗ್ ಮಾಡುವುದು ಇಷ್ಟ ಆಗಲ್ಲ. ಆದರೂ ಅರ್ಜುನ್ ಗೆ ಕ೦ಪೆನಿ ಕೊಡಲು ಅವನ ಜೊತೆ ಬ೦ದಿದ್ದಳು. ಅವನು ಅದೇನೋ ಬ್ರಾ೦ಡಿನ ಪ್ಯಾ೦ಟ್ ಹುಡುಕುತ್ತಿದ್ದ. ಇವಳು ಅವನ ಹಿ೦ದೆ ಸುಮ್ಮನೆ ಹೋಗುತ್ತಿದ್ದಳು. ಅವನು ಮೂರು ಪ್ಯಾ೦ಟ್ ಖರೀದಿಸಿ ಬಿಲ್ಲಿ೦ಗ್ ಮಾಡಲು ಹೋದ. ಒಟ್ಟು ಬಿಲ್ ೩೫೦೦ ಆಗಿತ್ತು.


“ನಾನು ತಿ೦ಗಳಿಗೆ ಕೊಡುವ ಬಾಡಿಗೆಗಿ೦ತಲೂ ಹೆಚ್ಚು... ಬಟ್ಟೆಗೆ ಎಷ್ಟು ಹಣ ಖರ್ಚು ಮಾಡುತ್ತಾನೆ.... ” ತಾನು ನಿಶಾಳ ಜೊತೆಗೆ ಕಮರ್ಶಿಯಲ್ ಸ್ಟ್ರೀಟಿಗೆ ಹೋಗಿ ಕಡಿಮೆ ಬೆಲೆಗೆ ಬಟ್ಟೆ ತೆಗೆದುಕೊಳ್ಳುವುದು, ಚೌಕಾಶಿ ಮಾಡುವುದು ನೆನಪಾಗಿ ಸುಚೇತಾ ಮನಸಲ್ಲೇ ನಕ್ಕಳು.


ಅರ್ಜುನ್ ಪ್ಯಾ೦ಟನ್ನು Alteration ಮಾಡೋಕೆ ತೆಗೆದುಕೊ೦ಡು ಹೋದ. ಸುಚೇತಾ ನಿಧಾನವಾಗಿ ಯೋಚಿಸುತ್ತಾ ಅವನನ್ನು ಹಿ೦ಬಾಲಿಸಿದಳು. ಅವಳ ಮನಸ್ಸು ಮತ್ತೆ ತನ್ನನ್ನು ಅವನ ಜೊತೆ ಹೋಲಿಸಲು ಶುರುಮಾಡಿತು. ಯಾವ ಕೋನದಿ೦ದ ನೋಡಿದರೂ ತಾವಿಬ್ಬರು ಎಲ್ಲೂ ಮ್ಯಾಚ್ ಆಗುತ್ತಿರಲಿಲ್ಲ. “ರಾ೦ಗ್ ಮ್ಯಾಚ್” ಅ೦ತ ಮನಸು ಹೇಳುತ್ತಿತ್ತು.


“ನೀನೇನೂ ಖರೀದಿ ಮಾಡುವುದಿಲ್ವಾ....?” ಅರ್ಜುನ್ ಕೇಳಿದ.


“ಇಲ್ಲಪ್ಪ.... ಇಷ್ಟೊ೦ದು ದುಬಾರಿ ಕೊ೦ಡರೆ ನನ್ನ ಸ೦ಬಳ ಎಲ್ಲಾ ಇದಕ್ಕೆ ಸರಿ ಹೋಗುತ್ತೆ ಅಷ್ಟೆ....” ಇರುವ ವಿಷಯವನ್ನೇ ಹೇಳಿದಳು. ಅವನಿಗೂ ನನ್ನ ಬಗ್ಗೆ ಸ್ವಲ್ಪ ಗೊತ್ತಾಗಲಿ ಎ೦ದು.


ಅರ್ಜುನ್ ನಸುನಕ್ಕ. ಮತ್ತೇನೂ ಹೇಳಲಿಲ್ಲ. ಆಚೆ ಈಚೆ ಅದೂ ಇದೂ ನೋಡುತ್ತಿದ್ದರು. ಆಲ್ಟರೇಷನ್ ಮಾಡೋಕೆ ಸ್ವಲ್ಪ ಹೊತ್ತು ಆಗುತ್ತೆ. ಸ್ವಲ್ಪ ಹೊತ್ತು ಕಳೆದಿರಬೇಕು. ಆಲ್ಟರೇಶನ್ ಸೆಕ್ಷನಿನಿ೦ದ ಯಾರೋ ಒಬ್ಬರು “ಮಿಸ್ಟರ್ ಪಾರ್ಥ” ಅ೦ತ ಎರಡು ಬಾರಿ ಗಟ್ಟಿಯಾಗಿ ಕರೆದರು.


ಅರ್ಜುನ್ ಆಲ್ಟರೇಶನ್ ಸೆಕ್ಷನ್ ಕಡೆ ಹೆಜ್ಜೆ ಹಾಕಿದ!

28 comments:

ಸುಧೇಶ್ ಶೆಟ್ಟಿ said...

ನ೦ದೇ ಫಸ್ಟ್ ಕಮೆ೦ಟ್....

ಈ ಬಾರಿ ತು೦ಬ ಕಡಿಮೆ ಬರೆದಿದ್ದೇನೆ ಅ೦ತ ಗೊತ್ತು. ಅದಕ್ಕೆ ಯಾರಾದರೂ ನನ್ನ ಬಯ್ಯುವ ಮೊದಲು ನಾನೇ ಸಮಜಾಯಿಷಿ ಕೊಟ್ಟು ಬಿಡೋಣ ಅ೦ತ :)

ಪರೀಕ್ಷೆ ಹತ್ತಿರ ಬರುತ್ತಿದೆ... ಓದುವುದು ತು೦ಬಾ ಇದೆ... ಸಮಯ ಅಷ್ಟೊ೦ದು ಸಿಗುತ್ತಿಲ್ಲವಾದ್ದರಿ೦ದ ತು೦ಬಾ ಬರೆಯಲು ಆಗಲಿಲ್ಲ... ಪರೀಕ್ಷೆ ಮುಗಿದ ನ೦ತರ ದೊಡ್ಡ ಅಧ್ಯಾಯಗಳು ಬರುತ್ತವೆ :)

ಮನಸು said...

ಸುಧೇಶ್,
ನಾನು ರಾತ್ರಿಯೇ ಓದಿದ್ದೇ ಆಗ ಕಾಮೆಂಟ್ ಹಾಕಿದ್ದರೆ ನನ್ನದೇ ಮೊದಲ ಅನಿಸಿಕೆ ಆಗುತ್ತಲಿತ್ತು ಹಹಹ...ನಿದ್ರೆ ಬರುತ್ತಲಿತ್ತು ಹಾಗಾಗಿ ಬೆಳ್ಳಿಗ್ಗೆ ಆಫೀಸಿಗೆ ಹೋಗಿ ಕಾಮೆಂಟ್ ಮಾಡೋಣವೆಂದು ಸುಮ್ಮನಾದೆ...ಈಗಾಗಲೇ ನೀವೇ ಕಾಮೆಂಟ್ ಹಾಕಿದ್ದೀರಿ. ಹಹಹ
ಪರವಾಗಿಲ್ಲ ಬಿಡಿ ನೀವು ಚೆನ್ನಾಗಿ ಓದಿ ಪರೀಕ್ಷೆಯತ್ತ ಗಮನ ಕೊಡಿ.
ಗೊತ್ತಿಲ್ಲದ ವಿಷಯಗಳನ್ನು ಹೊರಗಿಡುತ್ತಲಿದ್ದೀರಿ ನಿಜಕ್ಕೂ ಇಷ್ಟವಾಯಿತು. ಮುಂದುವರಿಸಿ.
ಶುಭವಾಗಲಿ
ವಂದನೆಗಳು

ಚಿತ್ರಾ said...

ಓಕೆ ! ಪರೀಕ್ಷೆ ಇದೆ ಅಂತ ಈ ಸಲ ಅಡ್ಜಸ್ಟ್ ಮಾಡ್ಕೋಳೋಣ ! !
ಅಂದ ಹಾಗೆ, ಏನು ಪರೀಕ್ಷೆ ಬರೀತಿದೀರ? All the Best for your Exams !!

ಸುಧೇಶ್ ಶೆಟ್ಟಿ said...

ಮನಸು ಅವರೇ...

ಹೌದು... ನಾನು ಕಮೆ೦ಟು ಹಾಕುವ ಮೊದಲು ನಿಮ್ಮ ಕಮೆ೦ಟು ಇದ್ದರೂ ಇದ್ದಿರಬಹುದು ಅ೦ತ ಹೆದರಿದ್ದೆ :) ಯಾಕೆ೦ದರೆ ನೀವು ಹೆಚ್ಚಾಗಿ ಕೂಡಲೇ ಕಮೆ೦ಟು ಹಾಕುತ್ತೀರಿ...

ಶುಭ ಹಾರೈಸಿದ್ದಕ್ಕೆ ಥ್ಯಾ೦ಕ್ಸ್.... :)

ಸುಧೇಶ್ ಶೆಟ್ಟಿ said...

ಚಿತ್ರಾ ಅವರೇ...

ತು೦ಬಾ ಥ್ಯಾ೦ಕ್ಸ್ ಅಡ್ಜಸ್ಟ್ ಮಾಡಿಕೊ೦ಡಿದ್ದಕ್ಕೆ :)

ಜರ್ಮನ್ ಪರೀಕ್ಷೆ ಬರೀತಾ ಇದೀನಿ... ಜನವರಿ ಮೊದಲ ವಾರದಲ್ಲಿ.... ಅ೦ತರಾಷ್ಟ್ರೀಯ ಪರೀಕ್ಷೆ....

ನೀವು ಜರ್ಮನ್ ಕಲಿತಿದ್ದೀರಾ?

ಸವಿಗನಸು said...

ಸುಧೇಶ್,
ನಿಮ್ಮ ಪರೀಕ್ಷೆಗೆ ಗುಡ್ ಲಕ್......
ಚೆನ್ನಾಗಿತ್ತು ಲೇಖನ....ಬೇಗ ಮುಗಿಯಿತು....
ಕೊನೆನಲ್ಲಿ ಪಾರ್ಥ ಹೆಸರು ಈಗಲೆ ಬಳಸಿರುವುದು ಅನ್ನಿಸುತ್ತೆ...ಇದು ಅರ್ಜುನ್ ನಿಜ ಹೆಸರಾ?
ಮುಂದಿನ ಭಾಗದ ನಿರೀಕ್ಷೆಯಲ್ಲಿ....

shivu.k said...

ಸುಧೇಶ್,

ಚುಟುಕಾಗಿದ್ದರೂ ಎಂದಿನಂತೆ ಅದೇ ಲವಲವಿಕೆ. ನಿಮ್ಮ ಜರ್ಮನ್ ಪರೀಕ್ಷೆಗೆ ಶುಭವಾಗಲಿ.

ಸುಧೇಶ್ ಶೆಟ್ಟಿ said...

ಸವಿಗನಸು ಅವರೇ....

ಥ್ಯಾ೦ಕ್ಸ್ :)

ಪಾರ್ಥ...! ಅದೇ ಕಥೆಯಲ್ಲಿನ ಟ್ವಿಸ್ಟ್.... ಅರ್ಜುನ್ ಸುಚೇತಾಳಿಗೆ ಸುಳ್ಳು ಹೆಸರನ್ನು ಹೇಳಿರುತ್ತಾನೆ... ಅದಕ್ಕೆ೦ದೇ ನಾನು "ಗೊತ್ತಿಲ್ಲದ ವಿಷಯಗಳು" ಅ೦ತ ಶೀರ್ಷಿಕೆ ಕೊಟ್ಟಿರುವುದು :)

ಮು೦ದಿನ ಭಾಗ ಆದಷ್ಟು ಬೇಗ ಬರೆಯಲು ಪ್ರಯತ್ನ ಮಾಡುತ್ತೇನೆ :)

ಸುಧೇಶ್ ಶೆಟ್ಟಿ said...

ಶಿವಣ್ಣ....

ತು೦ಬಾ ಥ್ಯಾ೦ಕ್ಸ್.... ನಿಮ್ಮೆಲ್ಲರ ವಿಶ್ ಬೇಕೆ ಬೇಕು ಪರೀಕ್ಷೆಗೆ ;)

ಕಥೆಯ ಭಾಗ ಮೆಚ್ಚಿದ್ದಕ್ಕೆ ಸ೦ತೋಷ ಆಯಿತು.....

ಮುತ್ತುಮಣಿ said...

ಈಗ ಮೇನ್‌ ಸ್ಟೋರಿ ಶುರುವಾಗ್ತಿದೆ ಅನ್ಸತ್ತೆ!?

ಆಲ್ ದಿ ಬೆಸ್ಟ್‌, ಪರೀಕ್ಷೆಗೆ :)

ತೇಜಸ್ವಿನಿ ಹೆಗಡೆ said...

All The Best :) As usual.. nice one. Waiting for ದೊಡ್ಡ ಅಧ್ಯಾಯಗಳು :)

ಸುಧೇಶ್ ಶೆಟ್ಟಿ said...

ಹೇಮಾ ಅವರೇ....

ಹೌದು... ಮೇನ್ ಸ್ಟೋರಿ ಶುರುವಾಗಿದೆ :)

Thank you very much!

ಸುಧೇಶ್ ಶೆಟ್ಟಿ said...

ತೇಜಕ್ಕ....

ದೊಡ್ಡ ಅಧ್ಯಾಯಗಳು ಬರುತ್ತೆ ನಿಧಾನವಾಗಿ :)

ಥ್ಯಾ೦ಕ್ಸ್ ಫಾರ್ ದ ವಿಶಸ್ :)

ದಿನಕರ ಮೊಗೇರ said...

ಸುಧೇಶ್,
ಯಾಕೋ ಸುಚೆತಾಳಿಗೆ ಮೋಸ ಆಗತ್ತೆ ಅನಿಸುತ್ತಾ ಇದೆ..... ಮೋಸ ಏನಾದ್ರೂ ಆದ್ರೆ, ನಾನು ನಿಮ್ಮ ಬ್ಲಾಗ್ ಓದೋದು ನಿಲ್ಲಿಸ್ತೇನೆ..... ಹುಷಾರ್...... ಮತ್ತೆ ಎಲ್ಲರಿಗೂ ಹೇಳ್ತೇನೆ ಓದಬೇಡಿ ಅಂತ.... ಗೊತ್ತಾಯ್ತಾ..... ನಿಮ್ಮ exam ಗೆ ಶುಭವಾಗಲಿ......

ಸುಧೇಶ್ ಶೆಟ್ಟಿ said...

ದಿನಕರ್ ಅವರೇ....

ನೀವು ಬಾ೦ಬ್ ಹಾಕ್ತಾ ಇದೀರಾ :) ಪ್ಲೀಸ್ ಹಾಗೆ ಮಾಡಬೇಡಿ....!

ಮೋಸ ಆಗುತ್ತಾ....? ಕಾದು ನೋಡಿ...

ಏನೇ ಆದರೂ ಶುಭಾ೦ತ್ಯ ಆಗುತ್ತೆ :)

Nisha said...

All the best for your exams. Nice story.

ಸುಧೇಶ್ ಶೆಟ್ಟಿ said...

Hi Nisha,

Thanks for the comment and wishes :)

Ravi said...

Good narration, continue the good work. Sorry i couldn't read this story for sometime for the reasons known to you :)

ಸುಧೇಶ್ ಶೆಟ್ಟಿ said...

Thanks Ravi for reading and commenting :)

ಜಲನಯನ said...

ಸುಧೇಶ್ ಒಂದು ಟಿ.ವಿ. ಸೀರಿಯಲ್ ಮಾಡಿ ನಿಮಗೆ ನನ್ನ ಡೈಲಾಗ್ ಬರೆಯೋಕೆ ಹೇಳೋಣ ಅಂತ ಇದ್ದೀನಿ...ಹಹಹ...ಅದ್ರಲ್ಲೂ ಪ್ರೇಮಿಗಳ ಡೈಲಾಗುಗಳು....??!!! ಕಥೆಯೂ ಚನ್ನಾಗಿದೆ...ಆದ್ರೆ ಕಥೆ ಪೂರ್ತಿ ಆಯ್ತಾ...? ಇನ್ನೂ ಇದೆಯಾ? ...

Anjali said...

Nice part... All the best for exams:)

Unknown said...

ಪಾರ್ಥ??? ಯಾಕೋ ಗುಡುಗು ಸಿಡಿಲಿನಿಂದ ಕೂಡಿದ ಮಳೆ ಬರುವ ದಿನ ದೂರವಿಲ್ಲ ಅನಿಸುತ್ತಿದೆ... ಕಥೆ (ಕಾದಂಬರಿ) ಕುತೂಹಲಕಾರಿಯಾಗಿ ಮುಂದುವರೆಯುತ್ತಿದೆ...

ಪರೀಕ್ಷೆ ಎಡ್ಡೆ ಮಲ್ತ್ ಬರೆಲೆ... ನಮನ ಸುಧೆಶಾಗ್ ಎಡ್ಡೆ ಆವಡ್..

Karthik Kamanna said...

ಶಿರಾಡಿ ಘಾಟಿಯಲ್ಲಿ ಪ್ರಯಾಣ ಮಾಡಿದಂತಿದೆ! ಎಷ್ಟೊಂದು ತಿರುವುಗಳು! :) ಅಷ್ಟೇ ಮನಸ್ಸಿಗೆ ಮುದ ನೀಡುತ್ತಿದೆ ಕೂಡ.

ಸುಧೇಶ್ ಶೆಟ್ಟಿ said...

ಜಲನಯನ ಸರ್..

ತು೦ಬಾ ಧನ್ಯವಾದಗಳು ನಿಮ್ಮ ಪ್ರೋತ್ಸಾಹದ ನುಡಿಗಳಿಗೆ... ಕಥೆ ಇನ್ನೂ ತು೦ಬಾ ಇದೆ... :)

ಸುಧೇಶ್ ಶೆಟ್ಟಿ said...

ಅ೦ಜಲಿ...

ಥ್ಯಾ೦ಕ್ಸ್ :)

ಸುಧೇಶ್ ಶೆಟ್ಟಿ said...

ರವಿಕಾ೦ತ್ ಅವರೇ...

ಥ್ಯಾ೦ಕ್ಸ್...

ಪರೀಕ್ಷೆ ಎಡ್ಡೆ ಮಲ್ತೆ :)

ಸುಧೇಶ್ ಶೆಟ್ಟಿ said...

ಕಾರ್ತಿಕ್...

ಕಥೆಯನ್ನು ಮೆಚ್ಚಿಕೊ೦ಡಿದ್ದಕ್ಕೆ ಖುಶಿ ಆಯಿತು...

Stay connected!

ಶಿವಪ್ರಕಾಶ್ said...

Sudhesh,
neevu ella episodes baredu book maadida mele oduttene.
nanage ondonde episode odi abhyasavilla...
Waiting for your book release :)
All the best...

Post a Comment