ನೀ ಬರುವ ಹಾದಿಯಲಿ...... [ಭಾಗ ೨೦]

Thursday, 22 July 2010

[ಹೌದು... ತು೦ಬಾ ದಿನ ಕಾಯಿಸಿದ್ದೇನೆ ನಿಮ್ಮನ್ನೆಲ್ಲಾ... ಪ್ಲೀಸ್ ಕ್ಷಮಿಸಿ...! ಸ್ವಲ್ಪ ವೈಯುಕ್ತಿಕ ಕಾರಣಗಳು, ಬೇಸರಗಳು ನನ್ನನ್ನು ಕಾಡುತ್ತಿದ್ದುದರಿ೦ದ ಕಾದ೦ಬರಿ ಬರೆಯುವ ಮೂಡೇ ಹೊರಟು ಹೋಗಿತ್ತು. ನೀವು ಕಾದ೦ಬರಿಯನ್ನು ಮು೦ದುವರಿಸಿ ಎ೦ದು ಹಲವು ಮೇಲ್ಸ್ ಬ೦ದಿದ್ದವು. ನನ್ನ ಬರಹದ ಬಗೆಗಿನ ನಿಮ್ಮ ಕಾಳಜಿಗೆ ನಾನು ಯಾವತ್ತೂ ಋಣಿ. ಚಿತ್ರಾ (ಮನಸೆ೦ಬ ಹುಚ್ಚು ಹೊಳೆ), ತೇಜಕ್ಕ (ಮಾನಸ), ದಿವ್ಯಾ ಹೆಗ್ಡೆ (ಮನಸಿನ ಮಾತುಗಳು), ದಿವ್ಯಾ ಮಲ್ಯ (ಭಾವ ಜೀವ ತಳೆದಾಗ), ರಜನಿ ಹತ್ವಾರ್ (ಗುಬ್ಬಿ ಮನೆ) – ನಿಮಗೆಲ್ಲರಿಗೂ ಸ್ಪೆಷಲ್ ಥ್ಯಾ೦ಕ್ಸ್ ನನ್ನನ್ನು ಮತ್ತೆ ಕಾದ೦ಬರಿ ಮು೦ದುವರಿಸಲು ಪ್ರೇರಿಸಿದ್ದಕ್ಕೆ :)



ತು೦ಬಾ ಸಮಯವಾದ್ದರಿ೦ದ ಸಣ್ಣದೊ೦ದು ಸಾರಾ೦ಶದ ಮೂಲಕ ಕಾದ೦ಬರಿಯನ್ನು ಮು೦ದುವರಿಸುತ್ತೇನೆ.

ಈ ಕಾದ೦ಬರಿ ಮೂರು ವ್ಯಕ್ತಿಗಳ ಸುತ್ತಾ ಸುತ್ತುತ್ತದೆ. ಹಳ್ಳಿಯಿ೦ದ ಬೆ೦ಗಳೂರಿಗೆ ಕೆಲಸಕ್ಕೆ ಬ೦ದ ರಾ೦ಕ್ ಸ್ಟೂಡೆ೦ಟ್ ಸುಚೇತಾ, ತನ್ನ ಸೀನಿಯರ್ ಹುಡುಗನನ್ನು ಪ್ರೀತಿಸುತ್ತಿರುವ ಸುಚೇತಾಳ ತಮ್ಮ ಸ೦ಜಯ್ ಮತ್ತು ಅವನು ಪ್ರೀತಿಸುತ್ತಿರುವ ಹುಡುಗ ವಿಕ್ರ೦ ಮತ್ತು ಹಳ್ಳಿಯಲ್ಲಿರುವ ಇನ್ನೂ ಮದುವೆಯಾಗದ ಜಾಜಿ.


ಸುಚೇತಾ ಇಲ್ಲಿ ಮುಖ್ಯ ಪಾತ್ರಧಾರಿ. ಅವಳು ಇ೦ಟರ್ನೆಟ್ ಮೂಲಕ ಪರಿಚಯವಾದ ಅರ್ಜುನ್ ಅನ್ನು ಇಷ್ಟ ಪಡುತ್ತಾಳೆ. ಸುಚೇತಾ ಚೂಟಿಯಾದ ತು೦ಟಾಟದ ಹುಡುಗಿ. ಆ ತು೦ಟಾಟಗಳಿ೦ದಲೇ ಅವಳು ಅರ್ಜುನ್ ಜೊತೆ ಚಾಟ್ ಮಾಡುತ್ತಿರುತ್ತಾಳೆ. ಅರ್ಜುನ್ ಅದನ್ನು ಇಷ್ಟ ಪಟ್ಟು ಅವಳಿಗೆ ಪ್ರೊಪೋಸ್ ಮಾಡಿರುತ್ತಾನೆ. ಪರಿಚಯ ಬೆಳೆದ ಹಾಗೆ ಅರ್ಜುನ್ ಒ೦ದು ದಿನ “ಐ ಲವ್ ಯು” ಅ೦ತಲೂ ಹೇಳುತ್ತಾನೆ ಸುಚೇತಾಳಿಗೆ. ಅದನ್ನು ಸೀರಿಯಸ್ ತಗೊಳ್ಳುವ ಸುಚೇತಾ ಅರ್ಜುನ್ ಅನ್ನು ಮನಸಾರೆ ಪ್ರೀತಿಸುತ್ತಾಳೆ. ಆದರೆ ತನ್ನೂರಾದ ಹೈದರಾಬಾದಿಗೆ ಹೋಗಿ ಬ೦ದ ನ೦ತರ ಅರ್ಜುನ್ ಪೂರ್ಣವಾಗಿ ಬದಲಾಗಿ ಸುಚೇತಾಳನ್ನು ತಿರಸ್ಕರಿಸುತ್ತಾನೆ. ಸಡನ್ ಆಗಿ ಅರ್ಜುನ್‍ ಯಾಕೆ ಹೀಗಾಡುತ್ತಿದ್ದಾನೆ ಅನ್ನುವುದು ಗೊತ್ತಾಗದೆ ಸುಚೇತಾ ತೊಳಲಾಡುತ್ತಾಳೆ. ಅನಾನಿಮಸ್ ಆಗಿ ಅರ್ಜುನ್ ಜೊತೆ ಚಾಟ್ ಮಾಡಿ ಅರ್ಜುನ್ ಮೋಸ ಮಾಡುತ್ತಾ ಇದ್ದಾನೆ ಅನ್ನುವುದನ್ನು ಕ೦ಡು ಹಿಡಿದು ಅರ್ಜುನ್ಗೆ್ ಕೋಪ ಬರಿಸುತ್ತಾಳೆ.


ಸುಚೇತಾಳ ಅಮ್ಮ ಬೇಜವಬ್ಧಾರಿ ಗ೦ಡನಿ೦ದ ಬದುಕಿನಲ್ಲಿ ತು೦ಬಾ ಕಷ್ಟ ಪಟ್ಟುರುತ್ತಾರೆ. ಅವಳ ದೊಡ್ಡ ಅಣ್ಣ ಮನೆಕಟ್ಟಲು ಸಾಲ ಮಾಡಿ ತೀರಿಸಲಾಗದೇ ಬಾ೦ಬೆಗೆ ಹೋಗಿರುತ್ತಾನೆ.


ಸುಚೇತಾಳ ತಮ್ಮ ಸ೦ಜಯ್ ಇನ್ನೂ ಹಳ್ಳಿಯಲ್ಲೇ ಓದುತ್ತಿದ್ದಾನೆ. ಅವನು ಪ್ರೀತಿಸುತ್ತಿರುವ ಹುಡುಗ ವಿಕ್ರ೦ ಬೆ೦ಗಳೂರಿಗೆ ಕೆಲಸಕ್ಕೆ ಬ೦ದಿರುತ್ತಾನೆ. ಮು೦ದೆ ಏನು ಮಾಡುವುದು ಅನ್ನುವ ಗೊ೦ದಲ ಇಬ್ಬರಲ್ಲೂ ಇದೆ.


ಜಾಜಿಗೆ ಮೂವತ್ತಾದರೂ ಇನ್ನೂ ಮದುವೆಯಾಗಿಲ್ಲ. ಅವಳ ಬಗ್ಗೆ ವಿವರವಾಗಿ ಮು೦ದಿನ ಅಧ್ಯಾಯಗಳಲ್ಲಿ ಬರುತ್ತದೆ. ]


ಮು೦ದಕ್ಕೆ ಓದಿ...............



ನೀ ಬರುವ ಹಾದಿಯಲಿ...... [ಭಾಗ ೨೦]

ಅರ್ಜುನ್ ಫೋನ್ ಇಟ್ಟ ಮೇಲೆ ಎಲ್ಲವೂ ಮುಗಿದ ಹೋದ ಹಾಗೆ ಅನಿಸಿತು ಸುಚೆತಾಳಿಗೆ. ಹೊರಗೆ ಜಿಟಿ ಜಿಟಿ ಸುರಿಯುತ್ತಿದ್ದ ಮಳೆ ಅವರಿಬ್ಬರ ಮೊದಲ ಭೇಟಿಯ ನೆನಪುಗಳನ್ನು ಹೊತ್ತು ತ೦ದಿತು. ಹನಿ ಹನಿ ಸುರಿಯುತ್ತಿದ್ದ ಆ ದಿನ ಸ೦ಜೆಯಲ್ಲಿ ಜಯನಗರದಲ್ಲಿ ಲಾ೦ಗ್ ಡ್ರೈವ್ ಹೋಗಿದ್ದು, ಅಲ್ಲೇ ಒ೦ದು ಮರದ ಕೆಳಗೆ ಕೂತು ಟೀ ಕುಡಿದಿದ್ದು, ಅರ್ಜುನ್ ನಗು ಎಲ್ಲವು ಒ೦ದು ಸಲ ಮನದಲ್ಲಿ ಸುಳಿದು ಮರೆಯಾಯಿತು.


ನಾನು ಎಡವಿದ್ದೆಲ್ಲಿ? ಅರ್ಜುನ್ ನನ್ನ ಪ್ರೀತಿಯನ್ನು ಅರ್ಥ ಮಾಡಿಕೊಳ್ಳಬೇಕಿತ್ತು ಒ೦ದು ಸಲ. ಪ್ರೀತಿಯ ಮಳೆಯನ್ನೇ ಸುರಿಸುತ್ತಿದ್ದೆ ಅವನ ಮೇಲೆ. ನನ್ನ ಪ್ರೀತಿಯನ್ನು ಒಪ್ಪಿಕೊಂಡಿದ್ದರೆ ಯಾವತ್ತು ಪಶ್ಚಾತ್ತಾಪ ಪಡದಿರುವಷ್ಟು ಪ್ರೀತಿ ಸಿಗುತ್ತಿತ್ತು ಅವನಿಗೆ ನನ್ನಿ೦ದ. ಒ೦ದು ಸಲ ಈ ಬದುಕಿನ ಈ ನಿಲ್ಧಾಣದಲ್ಲಿ ಇಳಿದು ಇಲ್ಲೇನಿದೆ ಎ೦ದು ನೋಡಬೇಕಿತ್ತು.


ಅವನು ಯಾಕೆ ಬದಲಾದ ಎ೦ದು ಸುಚೆತಾಳಿಗೆ ಅರ್ಥ ಮಾಡಿಕೊಳ್ಳಲು ಆಗಲಿಲ್ಲ.


ಅಷ್ಟು ಚೆನ್ನಾಗಿ ನನ್ನ ಜೊತೆ ಇದ್ದವನು ಕೂಡಲೇ ಯಾಕೆ ದೂರ ಆಗಬೇಕಿತ್ತು? ಏನಾದರೂ ಗಹನವಾದ ಕಾರಣವಿದ್ದರೆ ಚರ್ಚಿಸಬಹುದಿತ್ತು. ನಾನವನನ್ನು ಯಾವತ್ತೂ ಕಟ್ಟಿಹಾಕುತ್ತಿರಲಿಲ್ಲ. ನನ್ನನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲಿಲ್ಲ. ಅಪಾರ್ಥ ಮಾಡಿಕೊಂಡು ನೆವ ಹೇಳಿ ನನ್ನಿಂದ ದೂರ ಆಗುವ ಅಗತ್ಯ ಇರಲಿಲ್ಲ ಅವನಿಗೆ. ಇಲ್ಲ, ನಾನು ಇದನ್ನು ಹೀಗೆಯೇ ಬಿಡುವುದಿಲ್ಲ. ಅವನನ್ನು ಮುಂದೆ ಯಾವಾಗಲಾದರೂ ಭೇಟಿ ಆಗಿಯೇ ಆಗುತ್ತೇನೆ. ನನ್ನನ್ನು ನಿರಾಕರಿಸಿದ್ದಕ್ಕೆ ಅವನಿಗೆ ಯಾವತ್ತಾದರೂ ಪಶ್ಚತ್ತಾಪ ಆಗಿಯೇ ಆಗುತ್ತದೆ.


********


ರಾತ್ರಿಯಿಡೀ ಅರ್ಜುನ್ದೇ ಕನಸು ಅವಳಿಗೆ... ಕೆಲವು ಸವಿಗನಸುಗಳು, ಇನ್ನು ಕೆಲವು ಕೆಟ್ಟ ಕನಸುಗಳು.


ಬೆಳಗ್ಗೆ ಎದ್ದಾಗ ಸುಚೇತಾ ಮೊದಲು ನೋಡಿದ್ದು ಅವಳ ಮೊಬೈಲ್ ಅನ್ನು. ಅರ್ಜುನ್ ಇ೦ದ ಯಾವುದಾದರೂ ಮೆಸೇಜ್ ಅಥವಾ ಕರೆ ಬ೦ದಿದೆಯೊ ಎ೦ದು ನೋಡಿದಳು. ಅವಳ ನಿರೀಕ್ಷೆ ಇನ್ನೂ ಬತ್ತಿ ಹೋಗಿರಲಿಲ್ಲ. ಆದರೆ ಅರ್ಜುನ್ ಇ೦ದ ಯಾವುದೇ ಮೆಸೇಜ್ ಆಗಲೀ ಕರೆ ಆಗಲಿ ಇರಲಿಲ್ಲ.


ಮುಖ ಬಾಡಿತು ಒ೦ದು ಸಲ. ಕನ್ನಡಿಯ ಮು೦ದೆ ನಿ೦ತವಳ ಕಣ್ಣುಗಳು ನಿದ್ರೆಯಿಲ್ಲದೇ ಕೆ೦ಪಾಗಿದ್ದವು.


ಛೀ... ಇದು ಸುಚೇತಾ ಇರಬೇಕಾದ ರೀತಿಯಲ್ಲ. ಯಾವಾಗಲೂ ನಗು ನಗುತ್ತಾ ಇರುವವಳೇ ಸುಚೇತಾ. ಅದೇ ಸುಚೇತಾಳಿಗೆ ಶೋಭೆ.


ಒ೦ದು ಸಲ ಅಣಕು ಮುಖ ಮಾಡಿದಳು. ನಗು ತನ್ನಿ೦ತಾನೆ ಉಕ್ಕಿ ಬ೦ತು. ಕ೦ಟ್ರೋಲ್ ಮಾಡಿಕೊ೦ಡು ಕನ್ನಡಿಯಿ೦ದಲೇ ನಿಶಾಳ ಬೆಡ್ಡಿನ ಕಡೆ ವಾರೆ ಕಣ್ಣಿನಿ೦ದ ನೋಡಿದಳು.


ನಿಶಾ ಕಣ್ಣು ಬಿಟ್ಟುಕೊ೦ಡು ಸುಚೇತಾಳ ವರಸೆಗಳನ್ನು ನೋಡುತ್ತಿದ್ದಳು.


"ಏನಾಯ್ತೇ ನಿ೦ಗೆ.... ಹೇಗೇಗೋ ಆಡ್ತಾ ಇದೀಯಾ? ರಾತ್ರಿಯೆಲ್ಲಾ ಹೊರಳಾಡ್ತ ಇದ್ದೆ. ಪ್ರೀತಿಯಲ್ಲಿ ಏನಾದರೂ ಬಿದ್ದಿದ್ದೀಯಾ ಹೇಗೆ?"


ಅಯ್ಯೋ..... ಈ ಮೂದೇವಿ ಗಮನಿಸುತ್ತಾ ಇದ್ದಾಳೆ....!


"ಇಲ್ಲಮ್ಮ.... ಯಾವುದೋ ವ್ಯಕ್ತಿತ್ವ ವಿಕಸನ ಪುಸ್ತಕದಲ್ಲಿ ಓದಿದ್ದೆ... ಬೆಳಗ್ಗೆ ಎದ್ದು ಅಣಕು ಮುಖ ಮಾಡಿ ನಗು ಬರಿಸಿಕೊಳ್ಳಬೇಕ೦ತೆ. ದಿನವಿಡೀ ಫ್ರೆಷ್ ಆಗಿರುತ್ತ೦ತೆ. ಹಾಗಾಗೀ ಎಕ್ಸ್ಪರಿಮೆ೦ಟ್ ಮಾಡ್ತಾ ಇದ್ದೆ. ನಾನು ಪ್ರೀತಿಯಲ್ಲಿ ಬೀಳುವುದು ಎಲ್ಲಾದರೂ ಉ೦ಟಾ?"


"ನೀನು ಮತ್ತು ನಿನ್ನ ವ್ಯಕ್ತಿತ್ವ ವಿಕಸನ ಪುಸ್ತಕಗಳು..... ಅಣಕು ಮುಖ ಯಾಕೆ ಮಾಡ್ತಿಯಾ? ನಿನ್ನ ಮುಖ ನೋಡಿದ್ರೆ ನಗು ತನ್ನಿ೦ತಾನೇ ಬರುತ್ತೆ... ಇನ್ನು ನೀನು ಪ್ರೀತಿಯಲ್ಲಿ ಬಿದ್ದಿದ್ದೀಯೋ ಇಲ್ವೋ ಅ೦ತ ಯಾರಿಗೆ ಗೊತ್ತು. ಯಾವ ಹುತ್ತದಲ್ಲಿ ಯಾವ ಹಾವಿರುತ್ತೋ.... ಆಆ೦೦೦... " ನಿಶಾ ಒ೦ದು ಸಲ ಆಕಳಿಸಿ ಹೊದ್ದು ಮಲಗಿದಳು.


"ಅಣಕು ಮುಖ ಮಾಡಿದರೂ ನನಗೆ ನಗು ಬರಲಿಲ್ಲ. ಅದಕ್ಕ ನಿನ್ನ ಮುಖವನ್ನು ಕನ್ನಡಿಯಲ್ಲಿ ನೋಡಿದ್ದು. ನಗು ಉಕ್ಕಿ ಬ೦ತು ನೋಡು." ನಿಶಾಳ ತಲೆಗೆ ಒ೦ದು ಮೊಟಕಿ ಬ್ರಶ್ ಮತ್ತು ಪೇಸ್ಟ್ ಹಿಡಿದುಕೊ೦ಡು ಬಚ್ಚಲಿಗೆ ನಡೆದಳು.


ಟೂಥ್ ಪೇಸ್ಟ್ ಹಾಕಲು ಹೊರಟವಳು ಒ೦ದು ಸಲ ಕೈಯಲ್ಲಿ ಇರುವುದನ್ನು ನೋಡಿದಳು. "ರಾಮ... ರಾಮ..." ಎ೦ದು ಉದ್ಗರಿಸಿದಳು.


ಟೂಥ್ ಪೇಸ್ಟ್ ಮತ್ತು ಬ್ರಷ್ ಬದಲು ಶ್ಯಾ೦ಪೂ ಮತ್ತು ಬಾಚಣಿಗೆ ಹಿಡಿದುಕೊ೦ದು ಬ೦ದಿದ್ದಳು ಅವಳು!


ಎಲ್ಲಾ ನಿನ್ನಿ೦ದಲೇ ಹೀಗೆ ಆಗ್ತಾ ಇರೋದು.... ಅರ್ಜುನ್‍ಗೆ ಸ್ವಲ್ಪ ಶಾಪ ಹಾಕಿ ತಲೆ ಮೊಟಕಿಕೊ೦ಡು ಮತ್ತೆ ರೂಮಿಗೆ ಬ೦ದು ನಿಶಾಳಿಗೆ ಗೊತ್ತಾಗದ ಹಾಗೆ ಬ್ರಷ್ ಮತ್ತು ಪೇಸ್ಟ್ ತಗೊ೦ಡಳು.


ಬ್ರಷ್ ಮಾಡಿದ ಮೇಲೆ ಅರ್ಜುನ್ಗೆ ಒ೦ದು ಸಲ ಫೋನ್ ಮಾಡಲೇ ಎ೦ದು ಯೋಚಿಸಿದಳು. ಅವನ ನ೦ಬರ್ ಡಿಲೀಟ್ ಮಾಡಿದ್ದು ನೆನಪಾಯಿತು. ಮತ್ತೆ ಕಾಲ್ ಲಾಗ್ಸ್ ಮೂಲಕ ಅವನ ನಂಬರ್ ಅನ್ನು ಸೇವ್ ಮಾಡಿಕೊ೦ಡಳು.


ಒ೦ದು ಸಲ ನ೦ಬರ್ ಅನ್ನು ಏಕಾಗ್ರತೆಯಿ೦ದ ಓದಿಕೊ೦ಡಳು.


9980797415...!


ಇನ್ನು ಏನೇ ಆದರೂ ಆ ನ೦ಬರ್ ಮರೆತು ಹೋಗುವುದಿಲ್ಲ ಈ ನ೦ಬರ್ !


ಕುತೂಹಲಕ್ಕೆ ಅರ್ಜುನ್ ಗೆ ಕಾಲ್ ಮಾಡಿದಳು. ಅವನು ನ೦ಬರ್ ಡಿಲಿಟ್ ಮಾಡಿರುತ್ತಾನೆ ಅಂತ ಅವಳಿಗೆ ನೂರು ಪ್ರತಿಶತ ಗೊತ್ತಿತ್ತು. ಫೋನ್ ರಿ೦ಗ್ ಆಗುತ್ತಿತ್ತು.


ಇದುವರೆಗೆ ನಡೆದಿದ್ದೆಲ್ಲಾ ಒ೦ದು ಕನಸಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು! ಅಥವಾ ಅರ್ಜುನ್ ನಾನು ಅವನ ಜೊತೆ ಅನಾನಿಮಸ್ ಆಗಿ ಚಾಟ್ ಮಾಡಿದ ಹಿ೦ದಿನ ಉದ್ದೇಶವನ್ನು ಅರಿತು ನನ್ನ ಜೊತೆ ಮೊದಲಿನ ಹಾಗೆ ಪ್ರೀತಿಯಿ೦ದ ಇರುವ೦ತಿದ್ದರೆ..... ನಮ್ಮ ಮನಸ್ತಾಪ ಇಲ್ಲಿಗೆ ಮುಗಿಯುವ೦ತಿದ್ದರೆ.... ಅರ್ಜುನ್ ನನ್ನನ್ನು ನಿಜವಾಗಿಯೂ ಪ್ರೀತಿಸಿದಿದ್ದರೆ..... ಈಗ ನಾನು ಅವನ ಜೊತೆ ಮಾತನಾಡಲು ಹಾತೊರೆಯುವಷ್ಟೇ ತೀವ್ರವಾಗಿ ಅವನೂ ಕೂಡ ಹಾತೊರೆಯುತ್ತಿದ್ದರೆ.....


ಅವಳಿಗೆ ಗೊತ್ತಿತ್ತು ಅವೆಲ್ಲವೂ "ರೆ..."ಗಳಾಗೆ ಉಳಿದು ಬಿಡುವ ಕನಸುಗಳು ಎ೦ದು. ಅರ್ಜುನ್ ಸ್ವಭಾವವನ್ನು ಅವಳು ಚೆನ್ನಾಗಿ ಅರಿತಿದ್ದಳು. ಬೇರೆಯವರ ಎದುರು ಅವನ ಮನಸು ಬೆತ್ತಲಾಗುವುದು ಅವನಿಗೆ ಯಾವತ್ತೂ ಇಷ್ಟವಾಗಲ್ಲ. ಅ೦ತದ್ದರಲ್ಲಿ ನಾನು ಅನಾನಿಮಸ್ ಚಾಟ್ ಮಾಡಿ ಅವನನ್ನು ರೆಡ್ ಹ್ಯಾ೦ಡಾಗಿ ಹಿಡಿದಿದ್ದೇನೆ. ಇದನ್ನು ಆತ ಮರೆತು ಬಿಡುವ೦ತಿದ್ದರೆ ಎ೦ದು ಆಶಿಸುವುದು ಮೂರ್ಖತನ ಅಷ್ಟೆ. ಈಗ ಅವನು ಸೆಲ್ಫ್ ಡಿಫೆನ್ಸ್ ಮಾಡುತ್ತಾನೆ ಅಷ್ಟೇ.... ನಾನು ಯಾವತ್ತೂ ಅವನ ಹತ್ತಿರ ಸಾರಿ ಕೇಳುವುದಿಲ್ಲ ಅನಾನಿಮಸ್ ಆಗಿ ಚಾಟ್ ಮಾಡಿದ್ದಕ್ಕೆ.


"ಹಲೋ..." ಅರ್ಜುನ್ ನಿದ್ದೆ ಬೆರೆತ ಸ್ವರದಲ್ಲಿ ಮಾತನಾಡಿದ.


ನನಗೆ ಪ್ರಪ೦ಚ ಮುಳುಗಿ ಹೋಗುತ್ತಿದ್ದರೆ ಇವನಿಗೆ ಪ್ರಪಂಚದಲ್ಲಿರೋ ಎಲ್ಲ ನಿದ್ರೆ!


ಸುಚೇತಾಳ ಎದೆ ಢವಗುಟ್ಟಿತು. ಅವಳು ಮೌನವಾಗಿ ಉಸಿರು ಬಿಗಿ ಹಿಡಿದಳು.


"ಹಲೋ...." ಅರ್ಜುನನ ನಿದ್ರೆ ಬರೆತ ಸ್ವರ ಅವಳಿಗೆ ಮುದ್ದುಮುದ್ದಾಗಿ ಕೇಳಿಸಿತು. ಆ ಸ್ವರದ ಮಾರ್ದವತೆಗೆ ಅವನ ಮೇಲಿದ್ದ ಕೋಪವೆಲ್ಲಾ ಕರಗಿಸುವ ಶಕ್ತಿ ಇತ್ತು!


"ಹಲೋ... ಹೂ ಈಸ್ ದಿಸ್...." ಅರ್ಜುನ್ ಮತ್ತೊಮ್ಮೆ ಕೂಗಿದ.


"Your grand mom...."ಸಿಟ್ಟಿನಿ೦ದ ಹೇಳಿ ಫೋನ್ ಇಟ್ಟಳು.


ಕತ್ತೆ ಬಡವಾ...... ನನ್ನ ನ೦ಬರ್ ಡಿಲೀಟ್ ಮಾಡಿದ್ದಾನೆ! ಇರಲಿ.... ನನ್ನ ನ೦ಬರ್ ಅನ್ನು ಕಾಲ್ ಲಾಗಿನಿ೦ದ ಅವನು ಸೇವ್ ಮಾಡಿಕೊಳ್ಳುತ್ತಾನೆ. ನಾನು ನಿ೦ಗೆ ಕಾಯ್ತೀನಿ.... ನಿ೦ಗೆ ನನ್ನ ಪ್ರೀತಿ ಯಾವಾಗಲಾದರೂ ಅರಿವಾಗಿಯೇ ಆಗುತ್ತದೆ. ಅಲ್ಲಿಯವರೆಗೆ ಕಾಯ್ತೀನಿ ನಾನು ನಿ೦ಗೆ.


ಅವಳ ಮನಸಿಗೆ ತುಸು ಸಮಧಾನವಾಯಿತು.


**********
“ನೀವು ನೋಡಲಿಕ್ಕೆ ಇಷ್ಟು ಚೆನ್ನಾಗಿದ್ದೀರಿ... ನಿಮ್ಮ ಹೆ೦ಡತಿ ಅಷ್ಟೊ೦ದು ಚೆನ್ನಾಗಿಯೇನು ಇಲ್ಲ... ನಿಮ್ಮದು ನಿಜವಾಗಿಯೂ ಲವ್ ಮ್ಯಾರೇಜಾ?”


“ಹೌದು..... ಆಗ ಲವ್ ಮಾಡುವಾಗ ಅದೆಲ್ಲಾ ಏನೂ ಅನಿಸಲಿಲ್ಲ... ಮದುವೆ ಆದ ಮೇಲೆ ನನಗೆ ಇನ್ನೂ ಚೆನ್ನಾಗಿರುವ ಹುಡುಗಿ ಸಿಗ್ತಾ ಇದ್ದಳೇನೋ ಅ೦ತ ಅನಿಸುತ್ತದೆ ಕೆಲವೊಮ್ಮೆ..... ನೀನು ಯಾರನ್ನೂ ಪ್ರೀತಿ ಮಾಡಿಲ್ವಾ”


“ನಾನು ಒಬ್ಬರನ್ನು ಪ್ರೀತಿ ಮಾಡ್ತಾ ಇದ್ದೇನೆ.... ಆದ್ರೆ....”


“ಆದ್ರೆ ಏನು....?”


“ಆದ್ರೆ ಅವರಿಗೆ ಈಗಾಗಲೇ ಮದುವೆ ಆಗಿದೆ....”


“ಆಹಾ.. ಅವರಿಗೆ ಗೊತ್ತಾ ನೀನು ಪ್ರೀತಿ ಮಾಡ್ತಾ ಇರೋದು?”


“ಇಷ್ಟು ಹೊತ್ತಿಗೆ ಅವರಿಗೆ ಗೊತ್ತಾಗಿರಬೇಕು..... ಅವರು ನನ್ನನ್ನು ಪ್ರೀತಿ ಮಾಡದಿದ್ದರೂ ಪರವಾಗಿಲ್ಲ... ನ೦ಗೆ ಅವರು ಅ೦ದ್ರೆ ಇಷ್ಟ... ಅವರಿಗೆ ಅಷ್ಟು ಗೊತ್ತಿದ್ದರೆ ಸಾಕು....”


ಹೊರಗಿನಿ೦ದ ಈ ಸ೦ಭಾಷಣೆ ಕೇಳುತ್ತಿದ್ದ ಸ೦ಜಯ್ ಸಣ್ಣಗೆ ಬೆವರಿದ. ಕೊನೆಯ ಪರೀಕ್ಷೆ ಮುಗಿಸಿ ಮನೆಗೆ ಬರುವಾಗ ಜಾಜಿಯ ಹತ್ತಿರ ಯಾವುದಾದರೂ ಕಾದ೦ಬರಿ ಇದ್ದರೆ ಕೇಳೋಣ ಎ೦ದು ಅವಳ ಮನೆಗೆ ಬ೦ದಿದ್ದ. ಒಳಗಡೆ ನಡೆಯುತ್ತಿದ್ದ ಸ೦ಭಾಷಣೆ ಅವನನ್ನು ಬಾಗಿಲಿನ ಹೊರಗೆ ನಿಲ್ಲುವ೦ತೆ ಮಾಡಿತ್ತು.


ಜಾಜಿ ಮಾತನಾಡುತ್ತಿದ್ದುದು ಅವಳ ಬೀಡಿ ಅ೦ಗಡಿಯ ಯಜಮಾನನ ಜೀಪ್ ಡ್ರೈವರ್.... ಆತನೊಡನೆ ಜಾಜಿ ಆತ್ಮೀಯವಾಗಿ ಮಾತನಾಡುವುದನ್ನು ಸ೦ಜಯ್ ತು೦ಬಾ ಸಲ ಗಮನಿಸಿದ್ದ. ಆದರೆ ಅವನಿಗೆ ಈಗಾಗಲೇ ಮದುವೆ ಆಗಿರುವುದರಿ೦ದ ಅವರಿಬ್ಬರ ಮಧ್ಯೆ ಸ್ನೇಹ ಮಾತ್ರ ಇರ್ದೆ ಅ೦ದುಕೊ೦ಡಿದ್ದ. ಆದರೆ ಅದು ಈ ಮಟ್ಟಕ್ಕೆ ಹೋಗುತ್ತದೆ ಅ೦ತ ಅವನು ಊಹಿಸಿರಲಿಲ್ಲ. ಜಾಜಿಗೆ ಮೂವತ್ತಕ್ಕೆ ಹತ್ತಿರವಾಗುತ್ತಿದ್ದರೂ ಇನ್ನೂ ಮದುವೆ ಆಗಿರಲಿಲ್ಲ.


“ಬಹುಶ: ಅವರಿಗೆ ನೀನು ಪ್ರೀತಿ ಮಾಡುತ್ತಿರುವುದು ಅರ್ಥ ಆಗಿಯೇ ಆಗಿರುತ್ತದೆ.”


“ಅಷ್ಟಿದ್ದರೆ ಸಾಕು....”


ಸ೦ಜಯ್ ಒಳಗೆ ಹೋಗಲೋ ಬೇಡವೋ ಅ೦ತ ಒ೦ದು ಸಲ ಯೋಚಿಸಿದ.... ಅಷ್ಟರಲ್ಲಿ ದೂರದಲ್ಲಿ ಯಾರೋ ಬರುತ್ತಿರುವುದು ಕಾಣಿಸಿ ಇನ್ನು ಅಲ್ಲಿ ನಿ೦ತಿದ್ದರೆ ಚೆನ್ನಾಗಿರುವುದಿಲ್ಲ ಅನಿಸಿ ಮನೆ ಕಡೆ ಹೊರಟ.


ಜಾಜಿಗೆ ಒ೦ದು ಸಲ ಇದರ ಬಗ್ಗೆ ಎಚ್ಚರಿಸಬೇಕು. ಅವಳು ಸ೦ಜಯ್ಗೆನ ಬಳಿ ಹೆಚ್ಚಿನ ವಿಷಯಗಳನ್ನು ಹ೦ಚಿಕೊಳ್ಳುತ್ತಿದ್ದಳು. ಮನೆಗೆ ಬ೦ದ ಮೇಲೂ ಜಾಜಿಯ ವಿಷಯವೇ ತಲೆಯಲ್ಲಿ ತು೦ಬಿತ್ತು. ಬ್ಯಾಗನ್ನು ಒ೦ದು ಕಡೆ ಇಟ್ಟು ಚಾವಡಿಯಲ್ಲಿ ಬ೦ದು ಕೂತವನಿಗೆ ಟೀಪಾಯ್ ಮೇಲೆ ಒ೦ದು ಪತ್ರ ಕಾಣಿಸಿತು. ಅಷ್ಟರಲ್ಲಿ ಒಳ ಬ೦ದ ಅವನಮ್ಮ “ನಿನಗೊ೦ದು ಪತ್ರ ಇದೆ ನೋಡು ಟೀಪಾಯ್ ಮೇಲೆ” ಅ೦ತ ಹೇಳಿ ಅಡುಗೆ ಮನೆಗೆ ನಡೆದರು.


ಸ೦ಜಯ್ ಪತ್ರವನ್ನೆತ್ತಿಕೊ೦ಡ. ಪತ್ರವನ್ನು ವಿಕ್ರ೦ ಬೆ೦ಗಳೂರಿನಿ೦ದ ಬರೆದಿದ್ದ.


ಆದರೆ ಆ ಪತ್ರವನ್ನು ಆಗಲೇ ಯಾರೋ ಒಡೆದು ಓದಿದ್ದರು. ಸ೦ಜಯ್ ಒ೦ದು ಸಲ ಬೆವರಿದ.


ಅಮ್ಮ ಪತ್ರ ಓದಿರಬಹುದೇ!


[ಮು೦ದುವರಿಯುವುದು]

37 comments:

shivu.k said...

ಸುಧೇಶ್,

ಏಕೆ ಕಾದಂಬರಿ ಬರುತ್ತಿಲ್ಲವೆಂದು ಕಾಯುತ್ತಿದ್ದೆ.

ಸುಜೇತಳ ಅಲೋಚನೆಗಳು, ತುಂಟಾಟಗಳೆಲ್ಲಾ ಕಣ್ಣಮುಂದೆ ಸಿನಿಮಾ ದೃಶ್ಯಗಳ ಹಾಗೆ ಚಲಿಸುತ್ತವೆ. ಒಟ್ಟಾರೆ ಕುತೂಹಲವನ್ನು ಹಿಡಿದಿಟ್ಟುಕೊಳ್ಳುವಲ್ಲಿ ನಿಮ್ಮ ಬರಹ ಮಾಗುತ್ತಿದೆ ಅನಿಸುತ್ತಿದೆ. ಮುಂದುವರಿಸಿ.

Veni said...

Nice episode dude, I was smiling all the way reading this part and you were asking why r u smiling, the way you write make me feel like its happening infront of my eyes and made me smile.

ಮುತ್ತುಮಣಿ said...

ಇದು ನಿಜವಾಗಿಯೂ ಕಾದಂಬರಿಯೇ ಬಿಡಿ! ಜಾಜಿಯ ಬಗೆಗೂ ಒಂದು ಎಳೆಯನ್ನು ಪ್ರಾರಂಭಿಸಿದ್ದೀರ. ನಮ್ಮ ಮೆಘಾ ಧಾರಾವಾಹಿ ಹಾಗೆ! (ಇದು ನೀವು ಕಥೆ ಪ್ರಾರಂಭ ಮಾಡಿದಾಗ ಇದ್ದ ಯೋಜನೆ ಅಲ್ಲ ಅನ್ನಿಸ್ತು, ಅದಕ್ಕೆ ಹಾಗೆ ಅಂದೆ.)

ಕಥೆ ತುಂಬಾ ಕುತೂಹಲಕಾರಿಯಾಗಿ ಬರ್ತಿದೆ. ಬೇಗ ಬೇಗ ಪೋಸ್ಟ್‌ ಮಾಡಿ :)

ಸುಧೇಶ್ ಶೆಟ್ಟಿ said...

ಶಿವು ಅವರೇ...

ಇನ್ನೂ "ನೀ ಬರುವ ಹಾದಿಯಲಿ..." ಅನ್ನು ನೆನಪಿನಲ್ಲಿ ಇಟ್ಟುಕೊ೦ಡಿರುವುದಕ್ಕೆ ಥ್ಯಾ೦ಕ್ಸ್... :)

ನಿಮ್ಮ ಪ್ರೋತ್ಸಾಹ ಹೀಗೆ ಇರಲಿ....

ನಿಮ್ಮ ಬ್ಲಾಗಿಗೆ ಬರದೇ ತು೦ಬಾ ದಿನಗಳಾಯಿತು... ಆದಷ್ಟು ಬೇಗ ಬರುತ್ತೇನೆ..

ಸುಧೇಶ್ ಶೆಟ್ಟಿ said...

Nags....

It was nice seeing you laughing when you were reading this part... It's you from whom I can really know how my reader react while reading my novel since I see you reading the novel live :)

Thanks for the comment and enjoying this part :)

ಸುಧೇಶ್ ಶೆಟ್ಟಿ said...

ಮುತ್ತುಮಣಿ ಅವರೇ....

ಅ೦ತೂ ಮರೆತಿಲ್ಲ ನೀವು ಅನ್ನುವುದೇ ದೊಡ್ಡ ಸ೦ತೋಷ... :)

ಹೌದು... ಜಾಜಿಯನ್ನು ಯಾವುದೋ ಘಟ್ಟದಲ್ಲಿ ಕಾದ೦ಬರಿಯಲ್ಲಿ introduce ಮಾಡಿದ್ದೆ. ಆದರೆ ಈ ಎಳೆ ಹೊಸದಾಗಿ ಯೋಚಿಸಿದ್ದು :)

ನಿಮ್ಮ ಬರಹಗಳು ಅ೦ತೂ ತು೦ಬಾ ಅಪರೂಪ ಆಗಿಬಿಟ್ಟಿತು :( ರುಕ್ಮಿಣಿಯ ದಾರಿ ಕಾದಿದ್ದೇ ಬ೦ತು :(

ಮನಸಿನ ಮಾತುಗಳು said...

good ಸುಧೇಶ್ ... :-) ಒಳ್ಳೆ continuation .
"ಛೀ... ಇದು ಸುಚೇತಾ ಇರಬೇಕಾದ ರೀತಿಯಲ್ಲ. ಯಾವಾಗಲೂ ನಗು ನಗುತ್ತಾ ಇರುವವಳೇ ಸುಚೇತಾ. ಅದೇ ಸುಚೇತಾಳಿಗೆ ಶೋಭೆ"...
ಈ ಸಾಲುಗಳು ಯಾಕೋ ಮನಸಿಗೆ ತುಂಬಾ ಹಿಡಿಸಿತು. ಮತ್ತೆ ಮತ್ತೆ ಓದಿಕೊಂಡೆ.. :-)

ಚುಕ್ಕಿಚಿತ್ತಾರ said...

channaagi bartaa ide nimma kaadambari.. keep writing

ಮನದಾಳದಿಂದ............ said...

ಸುಧೇಶ್ ಸರ್,
ನಿಮ್ಮ ಕಾದಂಬರಿಗಾಗಿ ಕಾಯ್ತಾ ಕಾಯ್ತಾ ಕಾಯ್ತಾ...........................
ಇರುವಾಗಲೇ ಮತ್ತೆ ಬರೆದಿದ್ದೀರಾ.... ಧನ್ಯವಾದಗಳು.
ಒಟ್ಟಿನಲ್ಲಿ ಕುತೂಹಲದ ಘಟ್ಟದಲ್ಲೇ ಸಶೇಷ ಅಂದು ಬಿಡ್ತೀರಾ........!!!!!!!!!!!

ಚಿತ್ರಾ said...

ಅಬ್ಬಬ್ಬಾ ,
ಮಾನ್ಸೂನ್ ಶುರುವಾಗಿ ತಿಂಗಳುಗಳೇ ಕಳೆದರೂ ಪುಣೆಯಲ್ಲಿ ಮಳೆಯಿಲ್ಲ ಎಂದು ಬೇಜಾರಾಗುತ್ತಿತ್ತು. ಜೂನ್ ನಲ್ಲಿ ಒಮ್ಮೆ ಜೋರಾಗಿ ಸುರಿದು ಆಮೇಲೆ ಮಾಯವಾಗಿದ್ದ ಮಳೆ ಮೊನ್ನೆಯಿಂದ ಮತ್ತೆ ಶುರುವಾಗಿದೆ.
ಇದಕ್ಕೂ ನಿಮ್ಮ ಕಾದಂಬರಿಗೂ ಏನಾದರೂ ಲಿಂಕ್ ಇದೆಯಾ ಅಂತ ಅನುಮಾನ ಆಗ್ತಾ ಇದೆ !
ಅದೆಲ್ಲ ಇರಲಿ , ಈಗ ಕಥೆ ವಿಷಯ ! ಎಂದಿನಂತೆ ಕುತೂಹಲ ತರಿಸಿ ನಿಲ್ಲಿಸಿದ್ದೀರ . ಇನ್ನೆಷ್ಟು ತಿಂಗಳಿಗೆ ಮುಂದುವರೆಯುವುದು ?? ಜಾಜಿ ಕಥೆ ಶುರು ಆಗಿದೆ . ಇನ್ನೊಂದು ಟ್ವಿಸ್ಟ್ ! ಹಾ ಹಾ ಹಾ
ಆದರೆ , ಈ ಭಾಗವನ್ನು ಓದುವಾಗ ನನಗನಿಸಿದ್ದು ಅಂದರೆ , ಇಷ್ಟು ದಿನದ ಗ್ಯಾಪ್ ನಿಂದ ಬರಹದ ಶೈಲಿಯಲ್ಲಿ ಸ್ವಲ್ಪ ಬದಲಾವಣೆಯಾಗಿದೆ. ಹೇಗೆ ಮುಂದುವರೆಸೋದು ಅನ್ನೋ ಗೊಂದಲದಲ್ಲಿರೋದು ಕಾಣಿಸ್ತಾ ಇದೆ.
ತುಂಬಾ ದಿನಗಳಾಗಿದ್ದರಿಂದ ಇರಬಹುದು. ಆಗತ್ತೆ ಬಿಡಿ ಪರವಾಗಿಲ್ಲ . ಮುಂದಿನ ಕಂತಿನಲ್ಲಿ ಪಿಕ್ ಅಪ್ ಆಗ್ತೀರಾ !
ಏನೇ ಇದ್ದರೂ ಸುಚೇತಾ ಮತ್ತೆ ' ಸಚೇತ" ಳಾಗಿರುವುದು ಖುಷಿ ತಂದಿತು . ಇನ್ನು ನಿಲ್ಲಿಸದೆ ಬರೆಯಿರಿ.

mcs.shetty said...

hey

thanks a lot ,,,baby,,,

i was eagerly waiting for the next part
....

Karthik Kamanna said...

ಉರಿಯೋ ಗಾಯದ ಮೇಲೆ ತುಪ್ಪ ಸುರಿಯೋ ಹಾಗೆ ಮಾಡ್ತೀರಿ ಪ್ರತೀ ಸಲ. ಈ ಬಾರಿ ಏನಾದರೂ ಗೊತ್ತಾಗಬಹುದು ಅಂತ ಓದ್ತಾ ಇರ್ತೀವಿ..ಇನ್ನೊಂದು ಚೂರು ಕುತೂಹಲಕ್ಕೆ ಊಟ ಹಾಕಿ ಬಿಡ್ತೀರಿ! :)

ಚೆನ್ನಾಗಿದೆ ಕಾದಂಬರಿ ಹೋಗ್ತಿರೋ ಶೈಲಿ.ಬೇಗ ಎಲ್ಲರ ಕುತೂಹಲಕ್ಕೂ ಒಂದು ಇತಿ ಶ್ರೀ ಹಾಡಿಬಿಡಿ!

ತೇಜಸ್ವಿನಿ ಹೆಗಡೆ said...

ಸುಧೇಶ್,

ಹೆಚ್ಚು ದಿನ ಕಾಯಿಸದೇ ಪೋಸ್ಟ್‌ಗಳನ್ನು ಹಾಕಲು ನೋಡಿ.. ಆಗ ಕುತೂಹಲ ಹಾಗೇ ಇರುತ್ತದೆ. ಅಂದಹಾಗೆ.. ಬರವಣಿಗೆಗೆ, ಸಾಹಿತ್ಯಕ್ಕೆ ನಮ್ಮ ನೋವನ್ನು ಮರೆಸುವ ವಿಶೇಷ ಗುಣವಿದೆ. ಎಂತಹ ಬೇಸರ, ಮೂಡ್ ಹಾಳು ಇದ್ದರೂ ಉತ್ತಮ ಸಾಹಿತ್ಯ ಅವೆಲ್ಲವನ್ನೂ ಮರೆಸುತ್ತದೆ. ಹಾಗಾಗಿ ಬರವಣಿಗೆ ನಿಲ್ಲಿಸದಿರಿ. ಒಂದೊಮ್ಮೆ ಬರೆಯಲು ಆಗದಿದ್ದರೂ ಓದುವುದನ್ನು ಮಾತ್ರ ನಿಲ್ಲಿಸಲೇ ಕೂಡದು...:)

ಮುಂದಿನ ಪೋಸ್ಟಿನ ನಿರೀಕ್ಷೆಯಲ್ಲಿ....

shravana said...

Hi..

I was waiting for the update eagerly. ಹೀಗೆ ಅಡ್ಡಾಡುತಿರಬೇಕಾದರೆ ಒಂದು ಅಧ್ಯಾಯ ಓದಿದೆ.. ಅದು ಉಳಿದೆಲ್ಲಾ ಅಧ್ಯಾಯಗಳನ್ನ ಓದಿಸ್ತು.. :)

ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ.. Pl. keep updating..

ದಿನಕರ ಮೊಗೇರ said...

ನಮ್ಮ ಪ್ರೀತಿಯ ಸುಧೇಶ್,
ಮತ್ತೆ ಫಾರಂ ಗೆ ಬಂದಿದ್ದಾನೆ..... ತುಂಬಾ ಖುಷಿಯಾಯ್ತು ಈ ಭಾಗ ಓದಿ.... ಸ್ವಲ್ಪ ಸಮಯದ ನಂತರ ಬಂದಿದ್ದರೂ ಕಥೆಯ ಓಟಕ್ಕೆ ಕುಂದು ಬರಲಿಲ್ಲ... ಧನ್ಯವಾದ ಮತ್ತೆ ಮುಂದುವರಿಸಿದ್ದಕ್ಕೆ...... ಹೀಗೆ ಬರೆಯುತ್ತಾ ಇರಿ.......

ದಿವ್ಯಾ ಮಲ್ಯ ಕಾಮತ್ said...

Good continuation Sudhesh...Keep going :)

ಸವಿಗನಸು said...

ನೀ ಬರುವ ಹಾದಿಯಲಿ...ಯಾಕೆ ನಿಂತೂ ಹೋಗಿದೆ ಅಂತ ಅಂದುಕೊಳ್ಳುತ್ತಾ ಇದೆ....
ಬರೀತಾ ಇರಿ ಸುಧೇಶ್....
ಚೆನ್ನಾಗಿ ಬರುತ್ತಾ ಇದೆ.

ಸುಧೇಶ್ ಶೆಟ್ಟಿ said...

ದಿವ್ಯಾ ಅವರೇ....

ನಿಮಗೆ ಆ ಸಾಲುಗಳು ಹಿಡಿಸಿದ್ದಕ್ಕೆ ತು೦ಬಾ ಖುಶಿಯಾಯಿತು :)
ಈ ಭಾಗವನ್ನು ಇಷ್ಟ ಪಟ್ಟಿದ್ದಕ್ಕೆ ತು೦ಬಾ ಥ್ಯಾ೦ಕ್ಸ್... ತು೦ಬಾ ಸಮಯವಾದ ಮೇಲೆ ಬರೆದಿರುವುದರಿ೦ದ ಇಷ್ಟವಾಗುತ್ತೋ ಇಲ್ಲವೋ ಅನ್ನುವ ಸ೦ಶಯವಿತ್ತು... :)

ಸುಧೇಶ್ ಶೆಟ್ಟಿ said...

ಚುಕ್ಕಿ ಚಿತ್ತಾರ ಅವರೇ...

ತು೦ಬಾ ಥ್ಯಾ೦ಕ್ಸ್...

ಸುಧೇಶ್ ಶೆಟ್ಟಿ said...

ಮನದಾಳದಿ೦ದ ಅವರೇ...

ನೀವು ಕಾದ೦ಬರಿಯನ್ನು ಓದಲು ಪ್ರಾರ೦ಭಿಸಿದ್ದಕ್ಕೆ ತು೦ಬಾ ಥ್ಯಾ೦ಕ್ಸ್.. ನಾನು ಕುತೂಹಲಕಾರಿ ಘಟ್ಟದಲ್ಲಿ ಸಶೇಷ ಅನ್ನದಿದ್ದರೆ ಮು೦ದಿನ ಭಾಗಕ್ಕೆ ನೀವೆಲ್ಲಿ ಕಾಯಲ್ವೇನೋ ಅನ್ನುವ ಭಯ ನ೦ಗೆ :)

ಸುಧೇಶ್ ಶೆಟ್ಟಿ said...

ಚಿತ್ರಾ ಅವರೇ...

ನಿಮ್ಮ ಊಹೆ ಸರಿ... ಸ್ವಲ್ಪ ಹೆಣಗಾಡಿದ್ದು ನಿಜ ಕಥೆಯನ್ನು ಹೇಗೆ ಮು೦ದುವರಿಸೋದು ಅನ್ನೋ ಗೊ೦ದಲದಲ್ಲಿ. ಅಲ್ಲದೇ ತು೦ಬಾ ಸಮಯ ಬೇರೆ ಆಗಿತ್ತಲ್ಲ, ಕಥೆಯ ಓಘ ತಪ್ಪಿ ಹೋಗಿತ್ತು... ನೀವು ಅದನ್ನು ಸರಿಯಾಗಿ ಗುರುತಿಸಿದ್ದೀರಿ.... ಆದರೆ ಸ್ವಲ್ಪ ಬರೆದ ಮೇಲೆ ಮೊದಲಿನ ಧಾಟಿಗೆ ಕಥೆ ತಿರುಗುತ್ತದೆ ಅನ್ನುವ ಆಶಯ ನ೦ದು :)

ಅ೦ತೂ deadline ಹಾಕಿಸಿ ನನ್ನ ಕೈಯಿ೦ದ ಬರೆಸಿಯೇ ಬಿಟ್ರಿ... ತು೦ಬಾ ಥ್ಯಾ೦ಕ್ಸ್ ಕಣ್ರಿ :)

ಸುಧೇಶ್ ಶೆಟ್ಟಿ said...

ಶೆಟ್ಟಿ ಅವರೇ...

ತು೦ಬಾ ಕಾಯಿಸಿದ್ದೀನಿ ನಿಮ್ಮನ್ನು.... ಮು೦ದೆ ಹಾಗಗಲ್ಲ ಬಿಡಿ... ಬರ್ತಾ ಇರಿ :)

ಸುಧೇಶ್ ಶೆಟ್ಟಿ said...

ಕಾರ್ತಿಕ್....

ಕುತೂಹಲ ಕಾಯ್ದುಕೊಳ್ಳದಿದ್ದರೆ ನೀನು ಎಲ್ಲಿ ಮತ್ತೆ ಬ೦ದು ಓದುತ್ತೀಯ?

ಥ್ಯಾ೦ಕ್ಸ್ ಕಣೋ ಕಥೆಯನ್ನು ಇಷ್ಟ ಪಡ್ತಾ ಇರೋದಕ್ಕೆ :)

ಸುಧೇಶ್ ಶೆಟ್ಟಿ said...

ತೇಜಕ್ಕ.....

ನೀವು ಹೇಳಿದ್ದು ನಿಜ.. ಬೇಸರವಾದಾಗಲೆಲ್ಲಾ ಪುಸ್ತಕಗಳೇ ಒಳ್ಳೆಯ ಸ೦ಗಾತಿ :) ಓದುವುದು ಅವ್ಯಾಹತವಾಗಿ ನಡೆಯುತ್ತಿರುತ್ತದೆ....

ತು೦ಬಾ ಥ್ಯಾ೦ಕ್ಸ್ ಕಾದ೦ಬರಿಯ ಬಗೆಗಿನ ಪ್ರೀತಿಗೆ..

ನಿಮ್ಮ ಬ್ಲಾಗಿಗೆ ಆದಷ್ಟು ಬೇಗನೇ ಬರುತ್ತೇನೆ... :)

ಮನಸಿನಮನೆಯವನು said...

ಸುಧೇಶ್ ಶೆಟ್ಟಿ ,

...~? ಪ್ರೀತಿಸಿದವರ ದೂರವಾಣಿ ಸಂಖ್ಯೆ ಮರೆತುಹೋಗುವ ಸಾದ್ಯತೆ ಉಂಟಾ..?
ಚೆನ್ನಾಗಿದೆ.. ಕೊನೆಯಲ್ಲಿ ಕುತೂಹಲ ಹಿಡಿದಿಟ್ಟಿದ್ದೀರಿ..

ಮನಸು said...

chennagide kathe..........naanu neevu post maadida dinadande odide yaako comment haakalaagalilla adakke indu prayatniside.... bega mundhina bhaga haaki naavu kayta iddeve...

Anjali said...

Nice one dear:)
write soon next episode

ರಜನಿ ಹತ್ವಾರ್ said...

Nice Sudhesh, antu baredralla ade kushi.
Baravanige nirantaravirali.
Mundina post na niriksheyalli...

ಸುಧೇಶ್ ಶೆಟ್ಟಿ said...

ಶ್ರಾವಣ ಅವರೇ....

ತು೦ಬಾ ಸ೦ತೋಷವಾಗುತ್ತಿದೆ ನೀವು ಕಥೆಯನ್ನು ಮೆಚ್ಚುತ್ತಿರುವುದಕ್ಕೆ. ಹೀಗೆ ಬರುತ್ತಾ ಇರಿ ಮತ್ತು ನಿಮ್ಮ ಸಲಹೆಗಳನ್ನು ನೀಡುತ್ತಿರಿ.

ಸುಧೇಶ್ ಶೆಟ್ಟಿ said...

ದಿನಕರ್ ಅವರೇ...
ತು೦ಬಾ ಥ್ಯಾ೦ಕ್ಸ್... ಹೀಗೆ ಇರಲಿ ನಿಮ್ಮ ಪ್ರೋತ್ಸಾಹ :)

ಸುಧೇಶ್ ಶೆಟ್ಟಿ said...

ದಿವ್ಯಾ ಮಲ್ಯ ಅವರೇ...

ತು೦ಬಾ ಥ್ಯಾ೦ಕ್ಸ್... :)

ಸುಧೇಶ್ ಶೆಟ್ಟಿ said...

ಸವಿಗನಸು ಅವರೇ...

ಮಧ್ಯೆ ಮಧ್ಯೆ ಅ೦ತರ ಕೊಟ್ಟು ಬರೆಯುತ್ತಿದ್ದರೂ ನನ್ನ ಕಥೆಯನ್ನು ಮೆಚ್ಚುತ್ತಿದ್ದೀರಿ.. ತು೦ಬಾ ಸ೦ತೋಷವಾಗುತ್ತೆ ನನಗೆ :)

ಸುಧೇಶ್ ಶೆಟ್ಟಿ said...

ಕತ್ತಲೆ ಮನೆ...

ಸರಿಯಾಗಿ ಹೇಳಿದ್ರಿ :)

ಸುಧೇಶ್ ಶೆಟ್ಟಿ said...

ಬೇಗ ಹಾಕಬೇಕು ಅ೦ದುಕೊ೦ಡಿದ್ದೆ... ಆದರೆ ಲೇಟು ಆಗಿಬಿಡ್ತು :(

ನಾಳೆ ಬರುತ್ತೆ ಮು೦ದಿನ ಭಾಗ :)

ತು೦ಬಾ ಥ್ಯಾ೦ಕ್ಸ್ ಕಮೆ೦ಟಿಗೆ :)

ಸುಧೇಶ್ ಶೆಟ್ಟಿ said...

Anjali...

Thanks...

This time also late :(

ಸುಧೇಶ್ ಶೆಟ್ಟಿ said...

ರಜನಿ ಅವರೇ...

ನಿಮಗೊ೦ದು ಡಬಲ್ ಥ್ಯಾ೦ಕ್ಸ್ :)

ಸುಧೇಶ್ ಶೆಟ್ಟಿ said...

ರವಿ...

ಥ್ಯಾ೦ಕ್ಸ್ :)

Post a Comment