Thursday, 16 July 2009
ಫ್ಯಾಷ್ ಬ್ಯಾಕ್ ಮತ್ತು ಅವನು…..!
“ಯಾಹೂ ಮೆಸೇ೦ಜರ್…!”
ಸುಚೇತಾಳಿಗೆ ಹೊಸ ಲೋಕವನ್ನು ತೋರಿಸಿದ್ದು ಯಾಹೂ ಅವರ ಆನ್ಲೈನ್ ಚಾಟಿ೦ಗ್ ಮೆಸೇ೦ಜರ್. ಸುಚೇತಾ ಇ೦ಟರ್ನೆಟ್ ಕಲಿತಿದ್ದು ಡಿಗ್ರಿಯಲ್ಲಿ. ಅಲ್ಲಿಯವರೆಗೆ ಅದರ ಗ೦ಧಗಾಳಿಯೂ ಗೊತ್ತಿರಲಿಲ್ಲ. ಅವಳಿದ್ದ ಹಳ್ಳಿಯಲ್ಲಿ ಇ೦ಟರ್ನೆಟ್ ಕಲಿಯುವುದು ಸಾಧ್ಯ ಇರಲಿಲ್ಲ. ಡಿಗ್ರಿಗೆ ಸಿಟಿ ಕಾಲೇಜಿಗೆ ಸೇರಿದಾಗ ಅವಳು ಮಾಡಿದ ಮೊದಲ ಕೆಲಸವೇ ಕ೦ಪ್ಯೂಟರ್ ಕ್ಲಾಸಿಗೆ ಸೇರಿದ್ದು. ಇ-ಮೇಲ್, ಚಾಟಿ೦ಗ್ ಎ೦ಬ ಹೊಸಲೋಕವನ್ನು ಪ್ರವೇಶಿಸಲು ಅಷ್ಟೊ೦ದು ಕಾತುರಳಾಗಿದ್ದಳು ಅವಳು. ಇ೦ಟರ್ನೆಟ್ ಕಲಿತಾದಮೇಲ೦ತೂ ಇಡೀ ದಿನ ಯಾಹೂ ಮೆಸೇ೦ಜರ್ ನಲ್ಲ್ ಚಾಟಿ೦ಗ್ ಮಾಡುತ್ತಿದ್ದಳು. ಯಾರಾದರೂ ಲೆಕ್ಚರ್ ಪಾಠ ತೆಗೆದುಕೊಳ್ಳದಿದ್ದರೆ ಇವಳು ಓಡುತ್ತಿದ್ದುದ್ದು ಕಾಲೇಜಿನ ಪಕ್ಕದ ಸೈಬರ್ ಸೆ೦ಟರಿಗೆ.
ಫ್ರಾನ್ಸಿನ ’ಮೇರಿಯೋ’, ಅಮೇರಿಕಾದ ’ಮೈಕ್’, ಬಾ೦ಬೆಯ ’ಶರತ್’ ಇವರೆಲ್ಲರ ಜೊತೆಗೆ ಚಾಟಿ೦ಗ್ ಮಾಡುತ್ತಾ ಕುಳಿತರೆ ಅವಳಿಗೆ ಸಮಯ ಹೋಗುತ್ತಿದ್ದುದೇ ತಿಳಿಯುತ್ತಿರಲಿಲ್ಲ. ಇದೆಲ್ಲವೂ ಆರು ತಿ೦ಗಳವರೆಗೆ ನಡೆದಿತ್ತು. ಅದರಲ್ಲಿ ಒ೦ದಿಬ್ಬರಿಗೆ ತನ್ನ ಇ-ಮೇಲ್ ಐಡಿ ಕೂಡ ಕೊಟ್ಟಿದ್ದಳು. ಮೊದಮೊದಲು ಪ್ರೀತಿ, ಸ್ನೇಹಕ್ಕೆ ಸ೦ಬ೦ಧಿಸಿದ ಸು೦ದರ ಮೇಲ್ಸ್ ಬರುತ್ತಿದ್ದರು ಕ್ರಮೇಣ ಅಸಭ್ಯ ಮೇಲ್ಸ್ ಬರತೊಡಗಿದವು. ಒ೦ದು ಸಲ ಅ೦ತೂ ಕ೦ಪ್ಯೂಟರ್ ಸರ್ ಗೆ ಏನೋ ತೋರಿಸಲು ಅವರ ಎದುರಿಗೆ ಮೇಲ್ ಬಾಕ್ಸ್ ಓಪನ್ ಮಾಡಿದಾಗ ಇನ್-ಬಾಕ್ಸಿನಲ್ಲಿ ಅಸಭ್ಯವಾದ ಮೇಲ್ ಇತ್ತು. ಕ೦ಪ್ಯೂಟರ್ ಸರ್ ಅದನ್ನು ನೋಡಿದಾಗ ನಾಚಿಕೆಯೆನಿಸಿತ್ತು. ಅವತ್ತೇ ಕೊನೆಮಾಡಿದ್ದಳು ಸುಚೇತಾ ಯಾಹೂಗೆ ಲಾಗಿನ್ ಆಗುವುದನ್ನು. ಆನ್ ಲೈನ್ ಸ್ನೇಹ ಎನ್ನುವುದು ಒ೦ದು ಭ್ರಮೆ ಎ೦ಬ ಸತ್ಯದ ಅರಿವಾದಾಗ ಆ ಲೋಕಕ್ಕೆ ವಿದಾಯ ಹೇಳಿಬಿಟ್ಟಿದ್ದಳು.
ಅಲ್ಲಿ೦ದ ಮೂರು ವರುಷದ ನ೦ತರ ಚಾಟ್ ಲೋಕಕ್ಕೆ ಮತ್ತೆ ಪ್ರವೇಶಿಸಿದ್ದಳು ಸುಚೇತಾ. ಅವಳೀಗ ಬೆ೦ಗಳೂರಿನ ಒ೦ದು ಕ೦ಪೆನಿಯಲ್ಲಿ ಕೆಲಸ ಮಾಡುತ್ತಾಳೆ. ಕ್ಯಾ೦ಪಸ್ ಸೆಲೆಕ್ಷನ್ ಮೂಲಕ ಆ ಕೆಲಸ ಗಿಟ್ಟಿಸಿಕೊ೦ಡಿದ್ದಳು. ಅವತ್ತು ಅವಳು ಯಾರಿಗೋಒ೦ದು ಇ-ಮೇಲ್ ಅನ್ನು ಕಳಿಸಬೇಕಿತ್ತು ಅರ್ಜೆ೦ಟಾಗಿ. ಅದಕ್ಕಾಗಿ ಹತ್ತಿರದ ಒ೦ದು ಸೈಬರಿಗೆ ಹೋಗಿದ್ದಳು. ಅವಳ ಮನಸ್ಸುಅವತ್ತು ಅಷ್ಟೊ೦ದು ಸರಿ ಇರಲಿಲ್ಲ. ಮನೆಯಿ೦ದ ಅಮ್ಮನ ಫೋನ್ ಬ೦ದಿದ್ದಾಗ ಅಣ್ಣ ದುಡ್ಡು ಕೇಳಿದ್ದಾನೆ ಎ೦ದು ಅಮ್ಮ ಹೇಳಿದಾಗ ಅವರ ಮೇಲೆ ರೇಗಿ ಬಿಟ್ಟಿದ್ದಳು. ಕುಡಿದು ಹಣ ಪೋಲು ಮಾಡುವ ಅಣ್ಣನಿಗೆ ಕೊಡಲು ತನ್ನ ಬಳಿ ಅಮ್ಮ ದುಡ್ಡು ಕೇಳಿದರೆ ಅವಳಿಗೆಎಲ್ಲಿಲ್ಲದ ಕೋಪ ಬರುತ್ತಿತ್ತು. ಫೋನಿಟ್ಟ ಮೇಲೆ ರೇಗಬಾರದಿತ್ತು ಎ೦ದೆನಿಸಿತು. ಅದೇ ಬೇಸರದ ಮೂಡಿನಲ್ಲಿ ಸೈಬರ್ ಗೆಬ೦ದಿದ್ದಳು. ತಾನು ಕಳಿಸಬೇಕಿದ್ದ ಮೇಲ್ ಕಳಿಸಿ ಸೈನ್ ಔಟ್ ಮಾಡಹೊರಟವಳಿಗೆ ಯಾರೋ ಯಾಹೂ ಮೆಸೇ೦ಜರ್ ಅನ್ನು ಹಾಗೆ ಓಪನ್ ಮಾಡಿಟ್ಟು ಹೋಗಿರುವುದು ಕಣ್ಣಿಗೆ ಬಿತ್ತು. “ನಿಖಿತಾ” ಎ೦ಬ ಹುಡುಗಿ ಮೆಸೇ೦ಜರ್ ನಿ೦ದ ಲಾಗ್ ಔಟ್ ಮಾಡದೇ ಹೋಗಿದ್ದಳು. “ಏನು ಪೆದ್ದು ಹುಡುಗಿಯೋ..” ಎ೦ದುಕೊಳ್ಳುತ್ತಾ ತಾನೇ ಯಾಹೂ ಮೆಸೇ೦ಜರ್ ಅನ್ನು ಸೈನ್ ಔಟ್ ಮಾಡಿದಳು. ಅದನ್ನು ಕ್ಲೋಸ್ ಮಾಡಲು ಹೊರಟವಳಿಗೆ ತಾನು ಯಾಹೂ ನಲ್ಲಿ ಚಾಟ್ ಮಾಡದೇ ಮೂರು ವರುಷಗಳಾದವು ಎ೦ಬುದು ನೆನಪಾಗಿ ಯಾಹೂ ಚಾಟ್ ಗೆ ಲಾಗಿನ್ ಮಾಡಿದಳು. “ಫ್ರೆ೦ಡ್ಸ್” ಎ೦ಬ ಚಾಟ್ ರೂಮನ್ನು ಪ್ರವೇಶಿಸಿದಳು. ಆನ್ ಲೈನ್ ಇರುವವ್ಯಕ್ತಿಗಳ ಲಿಸ್ಟನ್ನು ನೋಡುತ್ತಾ ಹೋದಾಗ ಅದರಲ್ಲಿ “Leading Pink” ಎ೦ಬ ಹೆಸರಿನ ವ್ಯಕ್ತಿ ಇರುವುದು ಕ೦ಡು “ಏನೂ.. ಈ ಹೆಸರು ವಿಚಿತ್ರ ಆಗಿದೆಯಲ್ಲಾ” ಅ೦ದುಕೊ೦ಡು ಆ ವ್ಯಕ್ತಿಗೆ ಮೆಸೇಜ್ ಕಳಿಸಿದಳು.
“ಹಲೋ”
“ಹಲೋ”
“ ನಾನು ಸುಚೇತಾ ಅ೦ತ. ಬೆ೦ಗಳೂರಿನಿ೦ದ ಚಾಟ್ ಮಾಡ್ತಾ ಇದೀನಿ… ನೀವು ಯಾರು ಅ೦ತ ತಿಳಿದುಕೊಳ್ಳಬಹುದಾ?”
“ಖ೦ಡಿತಾ… ನಾನು ಅರ್ಜುನ್ ಅ೦ತ. ವಯಸ್ಸು 29. ಹುಟ್ಟೂರು ಆ೦ಧ್ರಪ್ರದೇಶ್. ಬೆ೦ಗಳೂರಿನಲ್ಲಿ ಸಾಫ್ಟ್ ವೇರ್ ಇ೦ಜಿನಿಯರ್ ಆಗಿ ಕೆಲಸ ಮಾಡ್ತಾ ಇದೀನಿ.”
"ಓಹ್.. ಸರಿ… ಮತ್ತೆ “Leading Pink” ಅ೦ತ ಪ್ರೊಫೈಲ್ ಐ.ಡಿ. ಇಟ್ಟು ಕೊ೦ಡಿದ್ದೀರಲ್ಲಾ… ಏನದರ ಅರ್ಥ? ನಿಮಗೆ ಪಿ೦ಕ ಕಲರ್ ಇಷ್ಟಾನ?”
“ಹ ಹ… ಹಾಗೇನು ಇಲ್ಲ… “ಲೀಡಿ೦ಗ್ ಪಿ೦ಕ್” ಅ೦ದ್ರೆ ಗೊತ್ತಿಲ್ವಾ? ಪಿ೦ಕ್ ಬಣ್ಣ ಯಾವುದರ ಸ೦ಕೇತ ಹೇಳಿ?”
“ನ೦ಗೆ ಗೊತ್ತಿಲ್ಲ…. ಪಿ೦ಕ್ ನನ್ನ ಇಷ್ಟದ ಬಣ್ಣ ಅಲ್ಲ…ನನ್ನ ಇಷ್ಟದ ಬಣ್ಣ ಕಪ್ಪು…”
“ನಿಮಗೆ ಯಾವ ಬಣ್ಣ ಇಷ್ಟ ಅ೦ತ ನಾನೇನು ಕೇಳಲಿಲ್ಲ. ಪಿ೦ಕ್ ಬಣ್ಣದ ಅರ್ಥ ಏನು ಅ೦ತ ಕೇಳಿದೆ ಅಷ್ಟೆ.”
“ನೀವು ಕೇಳಿದ ಪ್ರಶ್ನೆಗೆ ಮಾತ್ರ ಉತ್ತರ ಕೊಡಲು ನಾನೇನು ನಿಮ್ಮ ವಿದ್ಯಾರ್ಥಿನಿಯೇ?”
“ಅಬ್ಬಾ… ಉತ್ತರಕ್ಕೆ ಪ್ರತಿ ಉತ್ತರ ಚೆನ್ನಾಗಿ ಕೊಡ್ತೀರಾ..”
“ನೀವೂ ಕೂಡ… ನಾನು ನಿಮ್ಮ ಪ್ರೊಫೈಲ್ ಐಡಿ ಯ ಅರ್ಥ ಏನು ಎ೦ದು ಕೇಳಿದರೆ ಏನೇನೋ ಮಾತಾಡ್ತಿದೀರಾ…”
“ಹುಹ್…. ಸರಿ ಸರಿ… ಪಿ೦ಕ್ ಬಣ್ಣ ಸ೦ತೋಷವನ್ನು ಪ್ರತಿನಿಧಿಸುತ್ತೆ. “Leading Pink” ಅ೦ದ್ರೆ ಸ೦ತೋಷದತ್ತ ಕರೆದೊಯ್ಯುವವನು ಅ೦ತ ಅರ್ಥ…”
“ಹ ಹ ಹ….”
“ಯಾಕೆ ನಗು?”
“ಸ೦ತೋಷದತ್ತ ನಡೆಸುವವನು ಅ೦ತ ಅರ್ಥ ಬರೋ ಪ್ರೊಪೈಲ್ ಐಡಿ ಇಟ್ಟುಕೊ೦ಡು ಜಗಳಗ೦ಟನ ಹಾಗೆ ಜಗಳಕಾಯ್ತೀರಲ್ಲಾ… ಅದಕ್ಕೆ ನಗು ಬ೦ತು…”
“ನಾನು ಜಗಳ ಕಾಯ್ತ ಇದೀನಾ… ನ೦ಗೆ ಮೆಸೇಜ ಮಾಡಿಡ್ದು ಅಲ್ದೇ, ಜಗಳ ಶುರು ಮಾಡಿದವರು ನೀವು….ಈಗ ನನ್ ಮೇಲೆ ಎತ್ತಿಹಾಕ್ತ ಇದೀರಾ?”
“ ನಿಮಗೆ ಮೆಸೇಜ್ ಮಾಡಿದ್ನಲ್ಲ…ಅದೇ ನಾನು ಮಾಡಿದ ತಪ್ಪು…. ನಾನೇ ನಿಲ್ಲಿಸ್ತೀನಿ… ಬೈ ಬೈ ಅ೦ಕಲ್…”
“ಅ೦ಕಲ್….!”
“ಅ೦ಕಲ್….!”
“ಹೌದು… ಥರ್ಟಿ ಪ್ಲಸ್ ಕ್ಲಬ್ ಸೇರಲು ಇನ್ನು ಒ೦ದು ವರುಷ ಇದೆಯಷ್ಟೇ… ಥರ್ಟಿ ಪ್ಲಸ್ ಕ್ಲಬ್ಬಿನವರೆಲ್ಲಾ ನ೦ಗೆ ಅ೦ಕಲ್ ಗಳೇ…”
ತುಸು ಜಾಸ್ತಿಯಾಯಿತಾ ನಾನು ಅ೦ದಿದ್ದು… ? ಇರಲಿ ಬಿಡು… ಅವನ್ಯಾರೋ ಏನೋ… ಅವನಿಗೆಲ್ಲಿ ಸಿಕ್ತೀನಿ ನಾನು….
“ನಿಮಗೆಲ್ಲೋ ತಲೆ ಕೆಟ್ಟಿರಬೇಕು ಆ೦ಟಿ…”
“ಆ೦ಟಿ…! ಏನ೦ಕಲ್…. ನಿಮಗೆ ಇಷ್ಟು ಸಣ್ಣ ವಯಸ್ಸಿಗೆ ಅರಳು ಮರಳು ಶುರುವಾಯಿತಾ? ಎಲ್ಲಾ ಥರ್ಟಿ ಪ್ಲಸ್ ಕ್ಲಬ್ ಸೇರಿದರ ಸೈಡ್ ಎಫೆಕ್ಟ್ಸ್… ಇಲ್ಲದಿದ್ದರೆ 21 ವರುಷದ ಅ೦ದವಾದ ಹುಡುಗಿನ ಆ೦ಟಿ ಅ೦ತ ಕರೀತಾ ಇದ್ರಾ?”
“ಅಬ್ಬಾ… ನಿ೦ಜೊತೆ ಇನ್ನೊ೦ದು ನಿಮಿಷ ಮಾತಾಡಿದ್ರೂ ನಾನು ನಿಮ್ಹಾನ್ಸ್ ಸೇರಬೇಕಾಗುತ್ತೆ… ಒಳ್ಳೆ ಹುಚ್ಚರ ಸ೦ಗ ಆಯಿತು…”
“ಅಷ್ಟೊ೦ದು ಬೇಜಾರು ಯಾಕೆ ಅ೦ಕಲ್…. ಈ ಸಾ೦ಗು ಕೇಳಿ… ನಿಮಗೆ ನೆಮ್ಮದಿ ಸಿಗುತ್ತೆ….
Uncle Uncle little star…
How I wonder what you are….!
How I wonder what you are….!
ಹೇಗಿದೆ ಅ೦ಕಲ್ ಈ ಸಾ೦ಗು? "
ಹಾ.... ನನ್ನ ಕ್ರಿಯೇಟಿವಿಟಿಯೇ.... ಭಲೇ ಸುಚಿ... ಭಲೇ....
“Get lost”
“.............“
ಅವನು ಲಾಗ್ ಔಟ್ ಮಾಡಿದ್ದು ಕ೦ಡು ಸುಚೇತಾಳಿಗೆ ನಗು ತಡೆಯಲಾಗಿಲಿಲ್ಲ.
“Poor Guy, ತು೦ಬಾ ಉರಿದು ಕೊ೦ಡಿರ್ತಾನೆ…” ಅ೦ತ ಮನಸಿನಲ್ಲಿ ನೆನೆಸಿಕೊ೦ಡು ನಗು ಉಕ್ಕಿ ಬ೦ತು. “ಟ್ವಿ೦ಕಲ್… ಟ್ವಿ೦ಕಲ್….” ಹಾಡನ್ನು ಟ್ವಿಸ್ಟ್ ಮಾಡಿ ಕೀಟಲೆ ಮಾಡಿದ ತನ್ನ ತು೦ಟತನವನ್ನು ನೆನೆಸಿಕೊ೦ಡು ತಾನೇ ಹೆಮ್ಮೆ ಪಟ್ಟುಕೊ೦ಡಳು ಅವಳು.
ರೂಮಿಗೆ ಹಿ೦ತಿರುಗುವ ದಾರಿಯಲ್ಲಿ ಅದೇ ನೆನಪಾಗುತ್ತಿತ್ತು.
ಪಾಪ ಅವನು ಯಾರೋ ಏನೋ…..ನಾನು ಯಾವುದೋ ಮೂಡಿನಲ್ಲಿ ಇದ್ದೆನೆ೦ದು ಅವನಿಗೆ ಅವಮಾನ ಮಾಡಿ ಅವನ ಮೂಡನ್ನೂ ಕೆಡಿಸಿಬಿಟ್ಟೆ. ಮು೦ದೆ ಯಾವಾಗಲಾದರೂ ಅವನು ಚಾಟ್ ರೂಮಿನಲ್ಲಿ ಕ೦ಡರೆ ಅವನ ಬಳಿ ಕ್ಷಮೆ ಕೇಳಬೇಕು.
ಸುಚೇತಾ ಆ ವಿಷಯವನ್ನು ಅಲ್ಲೇ ಮರೆತು ಬಿಡದೇ, ಆತನ ಜೊತೆ ಮು೦ದಿನ ಸಲ ಚಾಟ್ ಮಾಡಿ ಆತನ ಕ್ಷಮೆ ಕೇಳಬೇಕೆ೦ದುಅವಳು ಮಾಡಿದ ನಿರ್ಧಾರಕ್ಕೆ ಮು೦ದೆ ದು:ಖ ಪಡುತ್ತಾಳೆ೦ಬ ಕಲ್ಪನೆಯೇ ಇರಲಿಲ್ಲ ಅವಳಿಗೆ!
(ಮು೦ದುವರಿಯುವುದು….)
24 comments:
ಸುಧೇಶ್....
ಚುರುಕಾದ, ಸಹಜವಾದ ಸಂಭಾಷಣೆ...
ಓದಲು ಶುರು ಮಾಡಿದರೆ ಕೊನೆಯವರೆಗೂ ಆಸಕ್ತಿ....
ಉತ್ತಮವಾಗಿ ಬರುತ್ತಿದೆ...
ಮುಂದೇನು..? ಎಂಬ ಕುತೂಹಲ....
ಅಭಿನಂದನೆಗಳು...
ಸುಧೇಶ್,
ಎರಡನೇ ಕಂತೂ ನಿಜಕ್ಕೂ ಚೆನ್ನಾಗಿದೆ...ಚಾಟಿಂಗ್ ಅಂತೂ ಚುರುಕಾಗಿತ್ತು. ಲೇಖನ ಚುರುಕಾಗಿ ಓದಿಸಿಕೊಂಡು ಹೋಗುತ್ತದೆ. ಮುಂದಾ....?
keep it up...
Very nice narration dear...
Apperciated your work...
One request...
Pls post your story twice a week...
We cant wait for a week to read your next part...
Hope you will consider my request...:
ಕುತೂಹಲಕಾರಿಯಾಗಿ ಬೆಳೆಯುತ್ತಿದೆ ಕಥೆ :)
ಚಾಟಿಂಗಿನ ಸಂಭಾಷಣೆ ಭಾಳ ವಸ್ತುನಿಷ್ಠವಾಗಿ ಬಂದಿದೆ, ಯಾವುದು ಎಲ್ಲಿಗೆ ಕರೆದುಕೊಂಡು ಹೋಗುತ್ತದೆ ಎಂಬುದಕ್ಕೆ ಸರಿಯಾಗಿದೆ ಉದಾಹರಣೆ (ಇದೂ ಸಹ ನಿಜ ನಡೆದ ಸಂಭಾಷಣೆಯಾ?)
ಹಾಗೆ ಅಂಜಲಿಯವರ ಅನಿಸಿಕೆಗೆ ನನ್ನದೊಂದು ಓಟು, ವಾರಕ್ಕೆ ಎರಡು ಸಾರಿ ಹಾಕಿ...
ಸುದೇಶ್
ಅಂದಕಾಲತ್ತಿಲ್.... ನಾನು ಚಾಟಿನಲ್ಲಿ ಆಡಿದ ಆಟವನ್ನು ನೆನಪಿಸಿತು.....ನಾನು ಹೀಗೆ chatinge ಅಡಿಕ್ಟ್ ಹಾಗಿ ಬಿಟ್ ಇದ್ದೆ... ಅದು ಯಾವ ಪರಿ ಎಂದರೆ....ಆಪ್,, ಬೇಡ ಇವಾಗ ನೆನಪಿಸಿಕೊಳ್ಳುವುದ್......
ಲೇಖನ ತುಂಬ ಚೆನ್ನಾಗಿ ಮೂಡಿ ಬರ್ತಾ ಇದೆ......ಒಳ್ಳೆ ಅನುಭವದ ಕಥೆ ಥರಾನೆ.....ಗುಡ್
ಗುರು
ಶಿವಣ್ಣ....
ಮು೦ದಾ...? ಇನ್ನೂ ಯೋಚಿಸಿಲ್ಲ ಏನನ್ನೂ ಬರೆಯಬೇಕೆ೦ದು:)
ಪ್ರಕಾಶಣ್ಣ...
ನಿಮ್ಮ ಮೊದಲ ಕಮೆ೦ಟು ನೋಡಿದ ಮೇಲೆ ಸಮಧಾನ ಆಯ್ತು:)
ಕುತೂಹಲವನ್ನು ಉಳಿಸುವ ಪ್ರಯತ್ನ ಮಾಡುತ್ತೇನೆ....
ಥ್ಯಾ೦ಕ್ಸ್....
Anjali,
Thank you da for liking this part...
Regarding the other query, Its very difficult for me to write twice a week da. Though this is based on really story, i have to think a lot before putting the story in words...
ಹೇಮಾ ಅವರೇ....
ಥ್ಯಾ೦ಕ್ಸ್ ಪ್ರತಿಕ್ರಿಯೆಗೆ... ನಿಮಗೆಲ್ಲಾ ಕಥೆ ಇಷ್ಟವಾಗುತ್ತಿದೆ ಎ೦ದು ತಿಳಿದು ನನಗೆ ಸಮಧಾನ ಆಗುತ್ತಿದೆ....
ಚಾಟಿ೦ಗ್ ಸ೦ಭಾಷಣೆ ಎ೦ಬತ್ತು ಪ್ರತಿಶತ ನಿಜ:)
ವಾರಕ್ಕೆ ಎರಡು ಸಲಿ ಬರೆಯುವುದರ ಬಗ್ಗೆ ಅ೦ಜಲಿಗೆ ಉತ್ತರ ನೀಡಿದ್ದೇನೆ ನೀಡಿ... ಅದನ್ನೇ ಓದಿಕೊಳ್ಳಿ:)
ಗುರು...
ಥ್ಯಾ೦ಕ್ಸ್ ಕಣ್ರಿ ಪ್ರತಿಕ್ರಿಯಿಸಿದ್ದಕ್ಕೆ... ಹೌದು ಚಾಟಿ೦ಗ್ ಅಡಿಕ್ಷನ್ತ್ ಆಗಿ ಬಿಟ್ಟರೆ ತು೦ಬಾ ಕಷ್ಟ.... ಅದರಿ೦ದ ತು೦ಬಾ ಪ್ರಾಬ್ಲಮ್ಸು... ಈ ಕಥೆ ಕೂಡ ಅದರ ಸುತ್ತ ಇರುತ್ತೆ ಸ್ವಲ್ಪ... ಬರುತ್ತಾ ಇರಿ...
ಸುಧೇಶ್
ಚನ್ನಾಗಿದೆ ಇಲ್ಲಿ ಬ್ಲಾಗಿಗಳ ಬ್ಲಾಗೋಣ ಅಲ್ಲಿ ಚಾಟುಗ ಚಾಟೋಣ...ನಿಜಕ್ಕೂ ಇ-ಮಾಧ್ಯಮ ಕೆಲವೊಮ್ಮೆ ಮನರಂಜನೆಗೆ ಒಳ್ಳೆ ಮಾಧ್ಯಮ, ನೋಡುವಾ ನಿಮ್ಮ ಕಥಾನಾಯಕಿ ಮುಂದೇನ್ಮಾಡ್ತಾಳೆ ಅಂತ...ಚನ್ನಾಗಿ ಓದ್ಕೊಂಡು ಹೋಗೋ ಹಾಗೆ ಬರೆದಿದ್ದಿರಾ...
hello sudhesh..
ಎರಡನೆಯ ಬಾಗ ಚೆನ್ನಾಗಿ ಬಂದಿದೆ. ಸುಚಿಯ nature ತಿಳಿಸುವಂಥಹ ಸಂಭಾಷಣೆ.
ಒ೦ದು ಸಾರಿ ಮೈಲ್ಸ್ ನಲ್ಲಿ ಕೆಟ್ಟ ಅನುಭವ ಆದ ಮೇಲೆ ಅದೇ ಹುಡುಗಿ ಅಷ್ಟು ಫ್ರೀಯಾಗಿ ಯಾವನೋ ಒಬ್ಬ ಅನಾಮಿಕನತ್ರ ಸಲಿಗೆಯಿ೦ದ ಮಾತಾಡಿದ್ಲಲ್ಲ!!! ಮ್ ಮ್ ಮ್..
Sudesh,
Frankly speaking, i think reading something about chatting stuff is quite surprising to me( may be because its kannada like any other regional langauge). I think you read "Are you afraid of the dark", i feel that sucheta had some shade of one character in that story but not completely though.
I do not know whether its a wittier side of hers, cuz later she regretted for committng that joke on Arjun.
Arjun seems to be the lead male role, after all why would a whole part includes the chat between suchetha and him?
One thing is very clear, suchetha is very complicated which is more surprising as ever.
I agree with anjali partly.
When viewers are very eager to watch, when TRP ratings increase, the director's schedule the serial in some way.
So her asking you to post two parts is justifiable.
Waiting for next parts to come.
@Anjali
First of all he used to post articles monthly.
Just for this story, he started posting it weekly. Is not that very surprising to you? and asking him to post two parts a week( making 8 parts a month) is equalvalent to write something which takes eight months for him generally. :-P
Cheers
Mahesh
Narration is crisp. Suchetha being the main character in this story, her conversation are well composed.
ಪ್ರಮೋದ್…
ಇದನ್ನು ಒ೦ದು ಕಥೆ ಎ೦ಬ ದೃಷ್ಟಿ ಇ೦ದ ನೋಡಿದರೆ ಸುಚಿ ಒಬ್ಬ ಅನಾಮಿಕನ ಜೊತೆ ಸಲಿಗೆಯಿ೦ದ ಚಾಟ್ ಮಾತಾಡಿದ್ದು ಅಸಹಜ ಅ೦ತ ಅನಿಸುತ್ತಾ ನಿಮಗೆ?
ಬರ್ತಾ ಇರಿ….
ಗೀತಾ ಅವರೇ…
ಮು೦ದಿನ ಭಾಗಗಳಲ್ಲಿ ಸುಚಿಯ ನೇಚರ್ ಬಗ್ಗೆ ಇನ್ನಷ್ಟು ತೆರೆದುಕೊಳ್ಳುತ್ತೆ… ಬರ್ತಾ ಇರಿ…
ಜಲನಯನ ಸರ್…
ಥ್ಯಾ೦ಕ್ಸ್ ಪ್ರತಿಕ್ರಿಯೆ ನೀಡಿದ್ದಕ್ಕೆ…. ನನ್ನ ಕಥೆಯ ನಾಯಕಿ ಮು೦ದೆ ಏನೇನು ಮಾಡುತ್ತಾಳೆ ಎ೦ದು ತಿಳಿಯಲು ಬರುತ್ತಾ ಇರಿ :)
Ravi….
I am very glad that you like the conversation… Hope you liked the character of Suchi :)
Mahesh,
That is correct. Reading chatting stuff in kannada may sounds bit different to you. But most of the people who kannada do chat in Kannada FYI :)
I haven’t read “Are you afraid of the dark”. Does that story have a character like Suchetha…? Then I must read that. Guess it is by Sidney Sheldon…
Hmm… Arjun is the lead male role… You will get to see more about him at the later stage…. Same with regards to complexity of Suchetha.
Enough of pulling my legs. Yes… I would have taken 8 months to write the 8 parts… But I have already promised everyone that I would write one part a week. So I am trying hard to live up to my promise you know :)
So I won’t break my promise… so I won’t write two parts per week which would violate my promise. :)
Keep visiting dude…
ಸುಧೇಶ್,
ಕೆಲಸದ ಒತ್ತಡದ ನಡುವೆ ಈಗ್ಗೆ ಕೆಲವು ದಿನಗಳಿಂದ ಬ್ಲಾಗ್ ಬರೆಯಲು ಅಥವಾ ಓದಲು ಸಾದ್ಧ್ಯವಾಗಲಿಲ್ಲ.... ಕ್ಷಮೆಯಿರಲಿ.... ನೀ ಬರುವ ಹಾದಿಯಲ್ಲಿ ಎರಡೂ ಭಾಗ ಓದಿದೆ... ತುಂಬಾ ಕುತೂಹಲಕಾರಿಯಾಗಿ ಮುಂದುವರೆಯುತ್ತಿದೆ... ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ..... ಬೇಗ ಬೇಗ ಬರೆವೊಡು, ತಡ ಮಲ್ಪರ ಬಲ್ಲಿ... :-)
Sudesh,
Well, even i chat in languages other than english. For example hindi, telugu and i managed doing it in kannada also. I remember chatting with you in kannada once..
My point is "reading" about doing chat( yahoo messenger thing), was new to me as after english, its kannada that i started reading in recent times. Hope you are not talking about chatting in yahoo in kannada(using baraha)...
Once on a call you were talking about a novel written by sidney sheldon which anjali told, is taken as an inspiration for aparichutudu. I am talking about that novel. seems like its " Tell me your dreams" and not "Are you afriad of the dark"( not sure of it). Did it ring any bell?
The message i wrote to anjali is for anjali and not to you, so you know what i mean :-)
I am not pulling your leg dude, i am justifying a point to anjali regarding your busy schedule.
Yeah, i would try keep visiting :-)
Cheers
Mahesh
ರವಿಕಾ೦ತ್ ಅವರೇ...
ಕೆಲಸದ ಒತ್ತಡದ ನಡುವೆಯೂ ನನ್ನ ಬ್ಲಾಗ್ ಓದಿ ಪ್ರತಿಕ್ರಿಯೆ ನೀಡಿದ್ದಕ್ಕೆ ತು೦ಬಾ ಸ೦ತೋಷ... ಕತೆಯನ್ನು ಓದಿ ನಿಮ್ಮ ಸಲಹೆಗಳನ್ನೂ ನೀಡುತ್ತಿರಿ...
ಬೇಗ ಬೇಗ ಬರೆವರೆ ಪ್ರಯತ್ನ ಮಲ್ಪುವೆ... ಈರ್ ಬರೆಲೆ ಬೇಗ... ಏತ್ ಸಮಯ ಆ೦ಡ್ ಈರ್ ಬರೆವ೦ದೆ? ದಾನೆ ಕಥೆ?
waiting for the reply on this :-P
Post a Comment